Saturday, 17 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 4: 23 - 29

ತತಸ್ತು ತೇನಷ್ಟಮದಾ ಇತೋ ಗತಾಃ ಸಮಸ್ತಶೋ ಹ್ಯಸ್ತನ ಏವ ಪಾರ್ಥಿವಾಃ
ತತೋ ಮಮಾಯಂ ಪ್ರತಿಪೂರ್ಯ ಮಾನಸಂ ವೃಣೋತು ಕನ್ಯಾಮಯಮೇವ ಮೇsರ್ಥಿತಃ .೨೩

ನಿನ್ನೆಯಷ್ಟೇ ಸೇರಿತ್ತು ಅನೇಕರ ದಂಡು,
ತೆರಳಿದರೆಲ್ಲರೂ ತಮ್ಮ ಭ್ರಾಂತಿಯ ಕಳಕೊಂಡು.
ಬಿಲ್ಲೆತ್ತಲಾಗದೇ ಎಲ್ಲರೂ ಹೇಳಿದ್ದಾರೆ ವಿದಾಯ,
ಶ್ರೀರಾಮ ಅದ ಪೂರೈಸಿ ತೋರಬೇಕೆಮಗೆ ದಯ.
ರಾಮ ನನ್ನ ಪ್ರಾರ್ಥನೆ ಸಾರ್ಥಕಗೊಳಿಸಲಿ,
ಮಗಳು ಸೀತೆಯ ವರಿಸಿ ನನ್ನ ಅಳಿಯನಾಗಲಿ.

ತಥೇತಿ ಚೋಕ್ತೇ ಮುನಿನಾ ಕಿಙ್ಕರೈರನನ್ತಭೋಗೋಪಮಮಾಶ್ವಥಾsನಯತ್
ಸಮೀಕ್ಷ್ಯ ತದ್ ವಾಮಕರೇಣ ರಾಘವಃ ಸಲೀಲಮುದ್ ಧೃತ್ಯ ಹಸನ್ನಪೂರಯತ್ .೨೪

ಹಾಗೆಯೇ ಆಗಲಿ” ಎಂದು ವಿಶ್ವಾಮಿತ್ರರ ಒಪ್ಪಿಗೆ,
ಜನಕ ತರಿಸಿದ ಬೃಹತ್ ಶಿವಧನುಸ್ಸನ್ನು ಸಭೆಗೆ.
ನಗು ನಗುತಾ ಎಡಗೈಯಿಂದ ಎತ್ತಿದ ಶ್ರೀರಾಮ,
ಅದಕೆ ಹೆದೆಯೇರಿಸಲನುವಾದ ವೈಕುಂಠಧಾಮ.

ವಿಕೃಷ್ಯಮಾಣಂ ತದನನ್ತರಾಧಸಾ ಪರೇಣ ನಿಸ್ಸೀಮಬಲೇನ ಲೀಲಯಾ
ಅಭಜ್ಯತಾಸಹ್ಯಮಮುಷ್ಯ ತದ್ ಬಲಂ ಪ್ರಸೋಢುಮೀಶಂ ಕುತ ಏವ ತದ್ ಭವೇತ್ .೨೫

ಇಚ್ಛಾಮಾತ್ರದಿಂದಲೇ ಎಲ್ಲ ನಿಯಂತ್ರಿಸುವ ಶಕ್ತಿಯದು ಅನಂತ,
ಆಶ್ಚರ್ಯವೇನು ಬಿಲ್ಲು ಮುರಿದು ಬಿದ್ದದ್ದು ಕಾಣುತ್ತಾ ಅದರಂತ್ಯ.

ಮಧ್ಯತಸ್ತತ್ ಪ್ರವಿಭಜ್ಯ ಲೀಲಯಾ ಯಥೇಕ್ಷುದಣ್ಡಮ್ ಶತಮನ್ಯುಕುಞ್ಜರಃ
ವಿಲೋಕಯನ್ ವಕ್ತ್ರಮೃಷೇರವಸ್ಥಿತಃ ಸಲಕ್ಷ್ಮಣಃ ಪೂರ್ಣತನುರ್ಯಥಾ ಶಶೀ .೨೬

ಐರಾವತಕ್ಕೆ ಕಬ್ಬಿನ ಜಲ್ಲೆ ಯಾವ ಲೆಕ್ಕ,
ಮುರಿದು ಬಿಸುಟ ರಾಮ ಶಿವಬಿಲ್ಲ ಪಕ್ಕ.
ಲಕ್ಷ್ಮಣಸಮೇತ ವಿಶ್ವಾಮಿತ್ರನ ನೋಡಿದ ರಾಮಚಂದ್ರ,
ಕಂಡ್ಹಾಗೆ ನಿಷ್ಕಳಂಕ ಪರಿಪೂರ್ಣ ಹುಣ್ಣಿಮೆಯ ಚಂದ್ರ.

ತಮಬ್ಜನೇತ್ರಂ ಪೃಥುತುಙ್ಗವಕ್ಷಸಂ ಶ್ಯಾಮಾವದಾತಂ ಚಲಕುಣ್ಡಲೋಜ್ಜ್ವಲಮ್
ಶಶಕ್ಷತೋತ್ಥೋಪಮಚನ್ದನೋಕ್ಷಿತಂ ದದರ್ಶ ವಿದ್ಯುದ್ವಸನಂ ನೃಪಾತ್ಮಜಾ .೨೭॥

ಕಮಲಾಕ್ಷ ವಿಶಾಲವಕ್ಷ ನೀಲವರ್ಣ ಕರ್ಣಕುಂಡಲ ಶೋಭಿತ,
ಹೊಳೆವ ವಸ್ತ್ರಧಾರಿ ಮೊಲದ ರಕ್ತದಂತೆ ಕಾಣುವ ಚಂದನಲೇಪಿತ.
ಇಂಥಾ ತ್ರಿಲೋಕಸುಂದರನ ಮೋಹಕ ಮೈಮಾಟ,
ಅರಳಿದ ಆಸೆಕಂಗಳಿಂದ ಸೀತೆ ಬೀರಿದ ನೋಟ.

ಅಥೋ ಕರಾಭ್ಯಾಂ ಪ್ರತಿಗೃಹ್ಯ ಮಾಲಾಮಮ್ಲಾನಪದ್ಮಾಂ ಜಲಜಾಯತಾಕ್ಷೀ
ಉಪೇತ್ಯ ಮನ್ದಂ ಲಳಿತೈಃ ಪದೈಸ್ತಾಂ ತದಂಸ ಆಸಜ್ಯ ಪಾರ್ಶ್ವತೋsಭವತ್ .೨೮

ಕಮಲಾಕ್ಷಿ ಸೀತೆಯಿಂದ ಇಂಥಾ ರಾಮನ ವೀಕ್ಷಣೆ,
ಶ್ರೀರಾಮನಿಗೆ ಬಾಡದ ತಾವರೆಗಳ ಮಾಲಾರ್ಪಣೆ.
ಶ್ರೀರಾಮನ ಪಕ್ಕದಲ್ಲಿ ನಿಂತಳು ಸೀತೆ,
ಅವನಿಗನುರೂಪಳಾದ ಲೋಕಮಾತೆ.

ತತಃ ಪ್ರಮೋದೋ ನಿತರಾಂ ಜನಾನಾಂ ವಿದೇಹಪುರ್ಯಾಮಭವತ್ ಸಮನ್ತಾತ್
ರಾಮಂ ಸಮಾಲೋಕ್ಯ ನರೇನ್ದ್ರಪುತ್ರ್ಯಾ ಸಮೇತಮಾನನ್ದನಿಧಿಂ ಪರೇಶಮ್ .೨೯

ಜಗದ್ ಮಾತಾ ಪಿತರ ಒಂದಾಗುವಿಕೆಯ ಆಟ,
ವಿದೇಹಿಯನಗರಿಗಳಿಗೆ ಅತ್ಯಾನಂದದ ನೋಟ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula