Tuesday, 6 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 81 - 82

ಇತ್ಯಾದಿಕಲ್ಪೋತ್ಥಿತ ಏಷ ಸರ್ಗೋ ಮಯಾ ಸಮಸ್ತಾಗಮನಿರ್ಣಯಾತ್ಮಕಃ ।
ಸಹಾನುಸರ್ಗಃ ಕಥಿತೋsತ್ರ ಪೂರ್ವೋ ಯೋಯೋ ಗುಣೈರ್ನಿತ್ಯಮಸೌ ವರೋ ಹಿ ॥೩.೮೧॥

ಇತ್ಯಾದಿಯಾಗಿ ಆದಿಕಲ್ಪದಲ್ಲಿ ಆದ ಸೃಷ್ಟಿ,
ಆಗಮ ನಿರ್ಣಯಾನುಸಾರ ಹೇಳಲ್ಪಟ್ಟಿದೆ ಸಮಷ್ಟಿ.
ಯಾರು ಸ್ವರೂಪ ಗುಣಜ್ಯೇಷ್ಠ,
ಅವ ಶ್ರೇಷ್ಠ -ಆಚಾರ್ಯ ವಾಕ್ಯ ಸ್ಪಷ್ಟ.

ಪಾಶ್ಚಾತ್ಯಕಲ್ಪೇಷ್ವಪಿ ಸರ್ಗಭೇದಾಃ ಶ್ರುತೌ ಪುರಾಣೇಷ್ವಪಿಚಾನ್ಯಥೋಕ್ತಾಃ ।
ನೋತ್ಕರ್ಷಹೇತುಃ ಪ್ರಥಮತ್ವಮೇಷು ವಿಶೇಷವಾಕ್ಯೈರವಗಮ್ಯಮೇತತ್ ॥೩.೮೨॥

ನಂತರದ ಮನ್ವಂತರಗಳಲ್ಲಿ ಆದ ಸೃಷ್ಟಿ ರೀತಿ,
ಬೇರೆ ಬೇರೆಯಾಗಿ ಹೇಳಿದ ಆಗಮದ ನೀತಿ.
ಆದರೆ ಆದಿಸೃಷ್ಟಿಯ ಹಿರಿತನ ಕಿರಿತನ ನಿರ್ಣಾಯಕ,
ಮಿಕ್ಕವುಗಳ ವಿಶೇಷ ಪ್ರಮಾಣಗಳಿಂದರಿವುದಾವಶ್ಯಕ.

ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯನಿರ್ಣಯೇ
ಸರ್ಗಾನುಸರ್ಗಲಯಪ್ರಾದುರ್ಭಾವನಿರ್ಣಯೋ ನಾಮ ತೃತೀಯೋsಧ್ಯಾಯಃ ॥

ಶ್ರೀಮದಾನಂದತೀರ್ಥರಿಂದ ವಿರಚಿತವಾದ,
ಮಹಾಭಾರತ ತಾತ್ಪರ್ಯನಿರ್ಣಯವೆಂಬ ವಾದ,
ಸರ್ಗಾನುಸರ್ಗಲಯಪ್ರಾದುರ್ಭಾವ ನಿರ್ಣಯ ಅಧ್ಯಾಯ,
ಮೂರನೇ ಅಧ್ಯಾಯ ರೂಪದಿಂದ ಕೃಷ್ಣಾರ್ಪಣವಾದ ಭಾವ.

[Contributed by Shri Govind Magal]

No comments:

Post a Comment

ಗೋ-ಕುಲ Go-Kula