Sunday 18 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 4: 30 - 31

ಲಕ್ಷ್ಮ್ಯಾ ಸಮೇತೇ ಪ್ರಕಟಂ ರಮೇಶೇ ಸಮ್ಪ್ರೇಷಯಾಮಾಸ ತದಾssಶು ಪಿತ್ರೇ

ವಿದೇಹರಾಜೋ ದಶದಿಗ್ರಥಾಯ ತನ್ನಿಶಮ್ಯಾsಶು ತುತೋಷ ಭೂಮಿಪಃ .೩೦

ಲಕ್ಷ್ಮೀಸಮೇತನಾಗಿ ರಾಮನಾದ ಪ್ರಕಟ ,
ಜಗದ್ ಮಾತಾ ಪಿತರ ಬಗೆ ಬಗೆಯ ಆಟ.
ಅನಾದಿ ದಂಪತಿಗಳಿಗೆ ಎಲ್ಲಿಯ ವಿಯೋಗ,
ಆಗ ಒಂದಾದಂತೆ ತೋರಿಕೆಯ ಪ್ರಯೋಗ.
(ರಾಮ ಸೀತ)ನಾರಾಯಣ ಲಕ್ಷ್ಮಿಯರ ಸಮಾಗಮ,
ಜನಕ ಕಳಿಸಿದ ಸಂದೇಶದಿ ದಶರಥಗಾದ ಸಂಭ್ರಮ.

ಅಥಾsತ್ಮಜಾಭ್ಯಾಂ ಸಹಿತಃ ಸಭಾರ್ಯೋ ಯಯೌ ಗಜಸ್ಯನ್ದನಪತ್ತಿಯುಕ್ತಯಾ
ಸ್ವಸೇನಯಾsಗ್ರೇ ಪ್ರಣಿಧಾಯ ಧಾತೃಜಂ ವಸಿಷ್ಠಮಾಶ್ವೇವ ಯತ್ರ ಮೈಥಿಲಃ .೩೧

ಸಂತಸವಾರ್ತೆಯನ್ನು ಕೇಳಿ ಹರುಷದಿ ದಶರಥ,
ಜನಕರಾಜನ ಪಟ್ಟಣಕ್ಕೆ ಹೊರಟ ಪರಿವಾರ ಸಮೇತ.
ರಾಜ ವೈಭವದೊಂದಿಗೆ ಹೊರಟಿತು ದಶರಥನ ದಂಡು,
ಬ್ರಹ್ಮಪುತ್ರ ಪುರೋಹಿತ ವಸಿಷ್ಠರನ್ನು ಮುಂದಿಟ್ಟುಕೊಂಡು.
[Contributed by Shri Govind Magal]

No comments:

Post a Comment

ಗೋ-ಕುಲ Go-Kula