Monday, 12 March 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 4: 09 - 10

ತದಾ ವಿದೇಹೇನ ಸುತಾಸ್ವಯಮ್ಬರೋ ವಿಘೋಷಿತೋ ದಿಕ್ಷು ವಿದಿಕ್ಷು ಸರ್ವಶಃ
ನಿಧಾರ್ಯ ತದ್ ಗಾಧಿಸುತಾನುಯಾಯೀ ಯಯೌ ವಿದೇಹಾನನುಜಾನುಯಾತಃ .೦೯

ಜನಕರಾಜನಿಂದ ಘೋಷಣೆಯಾಯ್ತು ಸೀತಾಸ್ವಯಂವರ,
ವಿಶ್ವಾಮಿತ್ರರೊಡನೆ ರಾಮಲಕ್ಷ್ಮಣರು ಹೊರಟರು ವಿದೇಹನಗರ.

ಅಥೋ ಅಹಲ್ಯಾಂ ಪತಿನಾsಭಿಶಪ್ತಾಂ ಪ್ರಧರ್ಷಣಾದಿನ್ದ್ರಕೃತಾಚ್ಛಿಲೀಕೃತಾಮ್
ಸ್ವದರ್ಶನಾನ್ಮಾನುಷತಾಮುಪೇತಾಂ ಸುಯೋಜಯಾಮಾಸ ಗೌತಮೇನ .೧೦

ಇಂದ್ರಸಮಾಗಮದ ನಂತರ ಅಹಲ್ಯೆಗೆ ಗೌತಮರ ಶಾಪ,
ಮಾನುಷದೇಹ ಕಳೆದುಕೊಂಡು ಕಲ್ಲಂತಾಗಿ ಬಿದ್ದಂಥ ತಾಪ.
ವಿದೇಹದಾರಿಯಲ್ಲಿ ರಾಮ ಮಾಡಿದ ಅಹಲ್ಯೆಯ ಉದ್ಧಾರ,
ರಾಮದರ್ಶನದಿಂದ ಅಹಲ್ಯೆಗೆ ಮನುಷ್ಯದೇಹ ಸಾಕಾರ.
ಒಂದು ಮಾಡಿದ ಅಹಲ್ಯೆ ಗೌತಮರ ಬೇರೆಯಾದ ಸಂಸಾರ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula