Friday, 24 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 61 - 65

‘ಅಸ್ಯ ದೇವಸ್ಯ ಮೀಳ್ಢುಷೋ ವಯಾ ‘ವಿಷ್ಣೋರೇಷಸ್ಯ ಪ್ರಭೃಥೇ ಹವಿರ್ಭಿಃ ।
‘ವಿದೇ ಹಿ ರುದ್ರೋ ರುದ್ರೀಯಂ ಮಹಿತ್ವಂ ‘ಯಾಸಿಷ್ಟಂ ವರ್ತಿರಶ್ವಿನಾವಿರಾವತ್’ ॥೧.೬೧॥

(ಇದು ಋಗ್ವೇದದ ೭ನೇ ಮಂಡಲದ ೪೭ನೆಯ ಸೂಕ್ತದ ಐದನೆಯ ಋಕ್).

ಬೇಡಿದ್ದನ್ನು ನೀಡುವ ಎಲ್ಲರಂತರ್ಯಾಮಿ,
ಎಲ್ಲರ ಇಷ್ಟದೈವ ಅವ ನಾರಾಯಣ ಸ್ವಾಮಿ,
ಅವನನ್ನು ಹವಿಸ್ಸಿನೊಡಗೂಡಿ ಪೂಜಿಸಿದ ರುದ್ರ,
ಹರಿ ಅನುಗ್ರಹದಿಂದ ಅವನ ಪದವಿಯಾಯ್ತು ಭದ್ರ,
ಅಶ್ವಿದೇವತೆಗಳೂ ಅದನ್ನೇ ಅನುಸರಿಸಿದರು,
ಅನುಗುಣವಾದ ಸ್ಥಾನ ಮಾನ ಪಡೆದರು .

‘ಸ್ತುಹಿ ಶ್ರುತಂ ಗರ್ತಸದಂ ಯುವಾನಂ ‘ಮೃಗಂ ನ ಭೀಮಮುಪಹತ್ನುಮುಗ್ರಮ್’ ।
‘ಯಂ ಕಾಮಯೇ ತನ್ತಮುಗ್ರಂ ಕೃಣೋಮಿ ‘ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಮ್’ ॥೧.೬೨॥

(ಸ್ತುಹಿ ಶ್ರುತಂ ಗರ್ತಸದಂ ...ಎನ್ನುವುದು ಋಗ್ವೇದದ ಎರಡನೇ ಮಂಡಲದ, ೩೩ನೆಯ ಸೂಕ್ತದ, ೧೧ನೆಯ ಋಕ್).

ಇದು ರುದ್ರಾಂತರ್ಯಾಮಿ ನೃಸಿಂಹನ ಸ್ತೋತ್ರ ಮಂತ್ರ,
ಅಂತಹ ನೃಸಿಂಹನ ಭಜಿಸು ಎಂದು ರುದ್ರ ಹೇಳಿಕೊಂಡ ತಂತ್ರ,
ವೇದವೇದ್ಯ ಚಿರಯುವಕ ರುದ್ರಾಂತರ್ಯಾಮಿ,
ಪ್ರಳಯಕಾಲದಿ ಎಲ್ಲ ಸಂಹರಿಪ ಸಿಂಹಮುಖದ ಸ್ವಾಮಿ,
ಅವನನ್ನೇ ಭಜಿಸು ಎಂದು ರುದ್ರದೇವರ ಸ್ವಗತ,
ಶಿವನ ಭಕ್ತಿ ಶಕ್ತಿ -ಹರಿಸರ್ವೋತ್ತಮತ್ವ ಸ್ಥಾಪಿತ.

(ಯಂ ಕಾಮಯೇ... ಎನ್ನುವುದು ಅಂಭೃಣೀ ಸೂಕ್ತ(೫). ಋಗ್ವೇದದಲ್ಲಿ ಹತ್ತನೇ ಮಂಡಲ, ೧೨೫ನೆಯ ಸೂಕ್ತ, ೫ನೆಯ ಋಕ್. ಅಥರ್ವವೇದದಲ್ಲಿ ನಾಲ್ಕನೆಯ ಕಾಂಡ, ೩೦ನೆಯ ಸೂಕ್ತ, ೩ನೆಯ ಋಕ್).

ಮಾತೆ ಲಕ್ಷ್ಮೀದೇವಿ ಹೇಳಿಕೊಳ್ಳುತ್ತಾಳಾಕೆ,
ನಾನೇನು ಬಯಸುತ್ತೇನೋ ಹಾಗೇ ಮಾಡುವಾಕೆ,
ಬಯಸಿದವನನ್ನು ರುದ್ರನನ್ನಾಗಿ ಮಾಡುತ್ತೇನೆ,
ಬಯಸಿದವನನ್ನು ಬ್ರಹ್ಮನನ್ನಾಗಿ ಮಾಡುತ್ತೇನೆ,
ಬಯಸಿದವನನ್ನು ಋಷಿಯನ್ನಾಗಿ ಮಾಡುತ್ತೇನೆ,
ಬಯಸಿದವನನ್ನು ಜ್ಞಾನಿಯನ್ನಾಗಿ ಮಾಡುತ್ತೇನೆ,
ಇದರಿಂದ ಸ್ಪಷ್ಟ -ನಡೆಯುತ್ತದೆ ಅವಳ ಇಷ್ಟ,
ಬ್ರಹ್ಮ ರುದ್ರಾದಿ ಸಮಸ್ತ ಜೀವರಿಗಿಂತ ಅವಳು ಶ್ರೇಷ್ಠ.

‘ಏಕೋ ನಾರಾಯಣ ಆಸೀನ್ನ ಬ್ರಹ್ಮಾ ನಚ ಶಙ್ಕರಃ’ ।
‘ವಾಸುದೇವೋ ವಾ ಇದಮಗ್ರ ಆಸೀನ್ನ ಬ್ರಹ್ಮಾ ನಚ ಶಙ್ಕರಃ’ ॥೧.೬೩॥

ಇದು ಒಂದು ವೇದವಾಕ್ಯದ ಹೂರಣ,
ಒಬ್ಬನೇ ಒಬ್ಬನಿದ್ದನವ ನಾರಾಯಣ,
ಆಗಿರಲಿಲ್ಲ ಬ್ರಹ್ಮ ರುದ್ರರ ಅನಾವರಣ,
ಇನ್ನೊಂದು ವೇದವಾಣಿಯ ಸ್ಪಷ್ಟ ಭಾವ,
ಆದಿಯಲ್ಲಿ ಮೊದಲಿದ್ದವ ವಾಸುದೇವ,
ಬ್ರಹ್ಮ ರುದ್ರರು ಇರಲಿಲ್ಲ ಎಂಬ ಭಾವ.

‘ಯದಾ ಪಶ್ಯಃ ಪಶ್ಯತೇ ರುಗ್ಮವರ್ಣಂ ‘ಕರ್ತಾರಮೀಶಂ ಪುರುಷಂ ಬ್ರಹ್ಮಯೋನಿಮ್ ।
‘ತದಾ ವಿದ್ವಾನ್ ಪುಣ್ಯಪಾಪೇ ವಿಧೂಯ ‘ನಿರಞ್ಜನಃ ಪರಮಂ ಸಾಮ್ಯಮುಪೈತಿ’ ॥೧.೬೪॥

ಅಥರ್ವಣ ಉಪನಿಷತ್ತು ಹೇಳುವ ಮಾತು,
ಜ್ಞಾನಿಗಾಗುವ ಭಗವದ್ದರ್ಶನದ ಕುರಿತು,
ಸ್ವರ್ಣ ವರ್ಣ ಈ ಜಗದ ನೃಪ,
ಅಂತರ್ಯಾಮಿ ಸಮರ್ಥ ಭೂಪ,
ಜ್ಞಾನಿಗೆಂದಾಗುವುದೋ ವೇದವೇದ್ಯನ ದರ್ಶನ,
ಆಗುವುದವನಿಗೆ ಅನಿಷ್ಟ ಪುಣ್ಯ ಪಾಪದ ನಾಶನ,
ಹೀಗೆ ಸಾಕ್ಷಾತ್ಕಾರವಾಗಲು ಪರಬ್ರಹ್ಮ,
ದೊರೆವುದವನಿಗೆ ಭಗವಂತನ ಸಾಮ್ಯ .

‘ಯೋ ವೇದ ನಿಹಿತಂ ಗುಹಾಯಾಂ ಪರಮೇ ವ್ಯೋಮನ್।
‘ಸೋsಶ್ನುತೇ ಸರ್ವಾನ್ ಕಾಮಾನ್ ಸಹ ಬ್ರಹ್ಮಣಾ ವಿಪಶ್ಚಿತಾ’ ॥೧.೬೫॥

ಇದು ತೈತ್ತಿರೀಯ ಉಪನಿಷತ್ತಿನ ಸ್ಪಷ್ಟ ಉಲ್ಲೇಖ,
ಯಾರ ಒಳಗಣ್ಣಿಗೆ ಕಾಣುವನೋ ಹೃತ್ಕಮಲದ ಆತ್ಮಸಖ,
ಮುಕ್ತನಾಗಿ ಪಡೆಯುವನು ಪರಬ್ರಹ್ಮನ ಸಖ್ಯ,

ಲಭ್ಯವವನಿಗೆ ತಾರತಮ್ಯೋಕ್ತ ಸಕಲ ಸೌಖ್ಯ.
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 56 -60

ಉಕ್ತಂ ಪಾದ್ಮಪುರಾಣೇ ಚ ಶೈವ ಏವ ಶಿವೇನ ತು ।
ಯದುಕ್ತಂ ಹರಿಣಾ ಪೂರ್ವಮುಮಾಯೈ ಪ್ರಾಹ ತದ್ಧರಃ ॥೧.೫೬॥

  ‘ತ್ವಾಮಾರಾಧ್ಯ ತಥಾ ಶಮ್ಭೋ ಗ್ರಹೀಷ್ಯಾಮಿ ವರಂ ಸದಾ ।
‘ದ್ವಾಪರಾದೌ ಯುಗೇ ಭೂತ್ವಾ ಕಲಯಾ ಮಾನುಷಾದಿಷು ॥೧.೫೭॥

‘ಸ್ವಾಗಮೈಃ ಕಲ್ಪಿತೈಸ್ತ್ವಂ ಚ ಜನಾನ್ ಮದ್ವಿಮುಖಾನ್ ಕುರು ।
‘ಮಾಂ ಚ ಗೋಪಾಯ ಯೇನ ಸ್ಯಾತ್ ಸೃಷ್ಟಿರೇಷೋತ್ತರಾಧರಾ’ ॥೧.೫೮॥

ಸದಾಶಿವನನ್ನು ಪ್ರತಿಪಾದಿಸುವುದು ಪದ್ಮ ಪುರಾಣ,
ಶಿವ ಉಪದೇಶಿಸುತ್ತಾನೆ ಸತಿಗೆ-ಸರ್ವೋತ್ತಮ ನಾರಾಯಣ,
ನಾರಾಯಣ ಹೇಳುತ್ತಾನೆ ರುದ್ರನಿಗೆ ಹೀಗೆ,
ತೋರುವೆ ದ್ವಾಪರದಲ್ಲಿ ನಿನ್ನಿಂದ ವರ ಪಡೆದ ಹಾಗೆ,
ಅಯೋಗ್ಯರಿಗೆ ದಾರಿತಪ್ಪಿಸಿ ವಿಮುಖರನ್ನಾಗಿ ಮಾಡು,
ತಮೋಯೋಗ್ಯರು ಹಿಡಿಯಲಿ ತಮಸ್ಸಿನ ಜಾಡು,
ಇದು ಉಮಾ ಮಹೇಶ್ವರರ ಪ್ರಿಯ ಸಂವಾದ,
ಪದ್ಮ ಪುರಾಣ ತೆರೆದಿಟ್ಟ -ವಿಷ್ಣು ಪಾರಮ್ಯ ವಾದ.

ನಚ ವೈಷ್ಣವಶಾಸ್ತ್ರೇಷು ವೇದೇಷ್ವಪಿ ಹರೇಃ ಪರಃ ।
ಕ್ವಚಿದುಕ್ತೋsನ್ಯಶಾಸ್ತ್ರೇಷು ಪರಮೋ ವಿಷ್ಣುರೀರಿತಃ ॥೧.೫೯॥
ವೈಷ್ಣವ ಪುರಾಣ ಪಂಚರಾತ್ರ,
ಇರಲಿ ಚಾರ್ವಾಕ,ಬ್ರಹ್ಮ ,ಶಿವಶಾಸ್ತ್ರ,
ಶಕ್ತಿ ಉಪಾಸನೆಯ ಶಾಕ್ತ ಶಾಸ್ತ್ರ,
ನಾರಾಯಣನೇ ಸರ್ವೋತ್ತಮ ಸರ್ವತ್ರ .

ನಿರ್ದೋಷತ್ವಾಚ್ಚ ವೇದಾನಾಂ ವೇದೋಕ್ತಂ ಗ್ರಾಹ್ಯಮೇವ ಹಿ ।
ವೇದೇಷು ಚ ಪರೋ ವಿಷ್ಣುಃ ಸರ್ವಸ್ಮಾದುಚ್ಯತೇ ಸದಾ ॥೧.೬೦॥

ವೇದಗಳಲ್ಲಿದೆ ನಿರ್ದುಷ್ಟವಾದ ಪ್ರಮೇಯ,
ದೋಷವಿರುವುದಿಲ್ಲ ಅಲ್ಲಿ ಅದು ಅಪೌರುಷೇಯ,

ಎಲ್ಲೆಲ್ಲಿಯೂ ನಿರ್ಧರಿತ-ಸರ್ವೋತ್ತಮ ಅಪ್ರಮೇಯ.
[Contributed by Shri Govind Magal]

Wednesday, 22 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 52 - 55

ಸ್ಕಾನ್ದೇsಪ್ಯುಕ್ತಂ ಶಿವೇನೈವ ಷಣ್ಮುಖಾಯೈವ ಸಾದರಮ್ ।
ಶಿವಶಾಸ್ತ್ರೇsಪಿ ತದ್ ಗ್ರಾಹ್ಯಂ ಭಗವಚ್ಛಾಸ್ತ್ರಯೋಗಿ ಯತ್ ॥೧.೫೨॥

‘ಪರಮೋ ವಿಷ್ಣುರೇವೈಕಸ್ತಜ್ಜ್ಞಾನಂ ಮೋಕ್ಷಸಾಧನಮ್ ।
‘ಶಾಸ್ತ್ರಾಣಾಂ ನಿರ್ಣಯಸ್ತ್ವೇಷ ತದನ್ಯನ್ಮೋಹನಾಯ ಹಿ ॥೧.೫೩॥

‘ಜ್ಞಾನಂ ವಿನಾ ತು ಯಾ ಮುಕ್ತಿಃ ಸಾಮ್ಯಂ ಚ ಮಮ ವಿಷ್ಣುನಾ ।
‘ತೀರ್ಥಾದಿಮಾತ್ರತೋ ಜ್ಞಾನಂ ಮಮಾsಧಿಕ್ಯಂ ಚ ವಿಷ್ಣುತಃ ॥೧.೫೪॥

‘ಅಭೇದಶ್ಚಾಸ್ಮದಾದೀನಾಂ ಮುಕ್ತಾನಾಂ ಹರಿಣಾ ತಥಾ ।
‘ಇತ್ಯಾದಿ ಸರ್ವಂ ಮೋಹಾಯ ಕಥ್ಯತೇ ಪುತ್ರ ನಾನ್ಯಥಾ’ ॥೧.೫೫॥

ಸ್ಕಂದಪುರಾಣದಲ್ಲಿ ಶಿವನಿಂದ ಷಣ್ಮುಖಗೆ ಹೇಳಿದ ವಾಕ್ಯ,
ಆದರದಿಂದ ತಂದೆ ಮಗನಿಗೆ ಹೇಳಿದ್ದೇ-ಆಚಾರ್ಯರಿಂದ ಉಲ್ಲೇಖ,
ಇದು ಪ್ರೀತಿಯ ತಂದೆ ಮಗನ ಮಧ್ಯದ ಸಂಭಾಷಣೆ,
ಇಲ್ಹೇಗೆ ಬಂದೀತು ದಾರಿತಪ್ಪಿಸುವ ಸುಳ್ಳು ಧೋರಣೆ,
ಸ್ಕಂದಪುರಾಣ ಶಿವನನ್ನು ಎತ್ತಿ ಹೇಳುವ ಶಾಸ್ತ್ರ,
ಶಿವನೇ ಮಾಡುತ್ತಾನೆ ಹರಿಸರ್ವೋತ್ತಮತ್ವದ ಸ್ತೋತ್ರ,
ರುದ್ರನೇ ಹೇಳುತ್ತಾನೆ ನಾರಾಯಣನೊಬ್ಬನೇ ಸರ್ವೋತ್ತಮ,
ಆ ಜ್ಞಾನ ಸಾಕಾರವಾದಾಗಲೇ ಲಭ್ಯ ಮೋಕ್ಷದ ಧಾಮ,
ಇದೇ ಶಾಸ್ತ್ರದ ಪರಮ ಪವಿತ್ರವಾದ ಗುಟ್ಟು,
ಉಳಿದುದೆಲ್ಲಾ ಮೋಹನಾರ್ಥ -ವಿಷ್ಣುಪಾರಮ್ಯ ಬಿಟ್ಟು.

ಶಿವ ಕೊಡುತ್ತಾನೆ ಮೋಹನಕ್ಕಾಗಿ ಶಾಸ್ತ್ರದಲ್ಲಿ ಹೇಳಿದ ಪಟ್ಟಿ,
ಜ್ಞಾನವಿಲ್ಲದೇ ಮುಕ್ತಿ ಸಾಧ್ಯವೆಂಬುದು -ಮೋಹಕವದು ಗಟ್ಟಿ,
ಎಲ್ಲಾದರೂ ಹೇಳಿದ್ದರೆ ಶಿವ-ನಾರಾಯಣರಿಗೆ ಸಾಮ್ಯತೆ,
ಅದೂ ಕೂಡಾ ಅಸುರ ಮೋಹನಾರ್ಥ ಹೇಳಿದ ಕತೆ,
ಪುಣ್ಯತೀರ್ಥದ ಸ್ನಾನದಿಂದ ಜ್ಞಾನ,
ಸುಳ್ಳು ಹೇಳಿದ್ದದು -ದೈತ್ಯ ಮೋಹನ,
ನಾನು(ಶಿವ) ಬ್ರಹ್ಮ ವಿಷ್ಣು -ಮೂವರಲ್ಲಿ ಅಭೇದ,
ಅಯೋಗ್ಯರಿಗೆ ಹೇಳಿದ ಪ್ರಭೇದ-ನಂಬಿದರೆ ಪ್ರಮಾದ,
ಶಿವ ಷಣ್ಮುಖನ ಮಗನೇ ಎಂದು ಕರೆದ ರೀತಿ,

ದಾರಿ ತಪ್ಪದಿರಲಿ ಎಂದ್ಹೇಳಿದ ಕಳಕಳಿಯ ನೀತಿ.
[Contributed by Shri Govind Magal]