Sunday, 26 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 76 - 82

‘ಭೂಮ್ನೋ ಜ್ಯಾಯಸ್ತ್ವಮಿ’ತಿ ಹ್ಯುಕ್ತಂ ಸೂತ್ರೇಷು ನಿರ್ಣಯಾತ್ ತೇನ ।
ತತ್ ಪ್ರೀತ್ಯೈವ ಚ ಮೋಕ್ಷಃ ಪ್ರಾಪ್ಯಸ್ತೇನೈವ ನಾನ್ಯೇನ ॥೧.೭೬॥

ಬ್ರಹ್ಮಸೂತ್ರದ ಪರಮ ಪ್ರಮಾಣ,
ಎಲ್ಲರಿಗಿಂತ ಅಧಿಕನವ ನಾರಾಯಣ,
ಪಡೆದಾಗಲೇ ಭಗವದನುಗ್ರಹ-ಪ್ರೀತಿ,
ಆನಂತರವೇ ಮೋಕ್ಷವದು ಪ್ರಾಪ್ತಿ,
ಇದನ್ನೇ ಹೇಳುವ ವೇದವಾಣಿಗಳು ಅನೇಕ,
ಆಚಾರ್ಯರು ವಿಶ್ಲೇಷಿಸಿ ಕೊಟ್ಟ ನಿರ್ಧರಿತ ವಾಕ್ಯ.

‘ನಾಯಮಾತ್ಮಾ ಪ್ರವಚನೇನ ಲಭ್ಯೋ ‘ನ ಮೇಧಯಾ ನ ಬಹುನಾ ಶ್ರುತೇನ ।
‘ಯಮೇವೈಷ ವೃಣುತೇ ತೇನ ಲಭ್ಯ - ಸ್ತಸ್ಯೈಷ ಆತ್ಮಾ ವಿವೃಣುತೇ ತನುಂ ಸ್ವಾಮ್’ ॥೧.೭೭॥

ಪರಮಾತ್ಮ ಪ್ರವಚನಕ್ಕೆ ಅಲಭ್ಯ,
ಸ್ವಾಧ್ಯಾಯ ಬುದ್ಧಿವಂತಿಕೆಗೆ ಅಲಭ್ಯ,
ಶಾಸ್ತ್ರ-ತರ್ಕ-ಸ್ಮರಣಶಕ್ತಿಗೆ ಅಲಭ್ಯ,
ತಾನೇ ಒಲಿದವನಿಗೆ ಮಾತ್ರ ಇವ ಲಭ್ಯ,
ನಿರಹಂಕಾರದ ತನ್ಮಯ ಭಕ್ತಿಗೆ ಒಲಿವ ಸ್ವಾಮಿ,
ಹೃತ್ಕಮಲದಲ್ಲಿ ಒಳಗಣ್ಣಿಗೆ ಕಾಣುವ ಅಂತರ್ಯಾಮಿ.

  
‘ವಿಷ್ಣುರ್ಹಿ ದಾತಾ ಮೋಕ್ಷಸ್ಯ ವಾಯುಶ್ಚ ತದನುಜ್ಞಯಾ ।
‘ಮೋಕ್ಷೋ ಜ್ಞಾನಂ ಚ ಕ್ರಮಶೋ ಮುಕ್ತಿಗೋ ಭೋಗ ಏವಚ ॥೧.೭೮॥
‘ಉತ್ತರೇಷಾಂ ಪ್ರಸಾದೇನ ನೀಚಾನಾಂ ನಾನ್ಯಥಾ ಭವೇತ್ ।
‘ಸರ್ವೇಷಾಂ ಚ ಹರಿರ್ನಿತ್ಯನಿಯನ್ತಾ ತದ್ವಶಾಃ ಪರೇ ॥೧.೭೯॥

‘ತಾರತಮ್ಯಂ ತತೋ ಜ್ಞೇಯಂ ಸರ್ವೋಚ್ಚತ್ವಂ ಹರೇಸ್ತಥಾ ।
‘ಏತದ್ ವಿನಾ ನ ಕಸ್ಯಾಪಿ ವಿಮುಕ್ತಿಃ ಸ್ಯಾತ್ ಕಥಞ್ಚನ ॥೧.೮೦॥

ಎಂದಿಗೂ ಮೋಕ್ಷದಾತನು ಅವನು ನಾರಾಯಣ,
ಅವನಾಜ್ಞೆಯಿಂದ ಮೋಕ್ಷಪ್ರದ-ಮುಖ್ಯಪ್ರಾಣ,
ಮೋಕ್ಷ-ಅದಕ್ಕೆ ಬೇಕಾದ ಜ್ಞಾನ-ಮುಕ್ತಿಯಲ್ಲಿನ ಭೋಗ,
ಬೇಕದಕೆ ಸಾಧನಾಯೋಗ್ಯ ಹಿರಿಯರನುಗ್ರಹದ ಭಾಗ,
ಎಲ್ಲವೂ ಒಂದಕ್ಕೊಂದು ತಾರತಮ್ಯದಿ ಅವಲಂಬಿತ,
ಈ ರೀತಿ ಹಿರಿಯರನುಗ್ರಹ ಆಶೀರ್ವಾದದಿಂದಲೆ ಮೋಕ್ಷ ಪ್ರಾಪ್ತ,
ನಾರಾಯಣನೇ ಎಲ್ಲರ ಅಂತರ್ಯಾಮಿ,
ಅವರವರ "ಸಮ" ಕೊಡುವ ವಿಶ್ವಪ್ರೇಮಿ,
ಹೀಗೆ ತಿಳಿಯಬೇಕಾದ ತಾರತಮ್ಯ ಜ್ಞಾನ,
ಹಾಗೇ ಸಮ-ಮಿಗಿಲಿಲ್ಲದವ ನಾರಾಯಣ.

‘ಪಞ್ಚಭೇದಾಂಶ್ಚ ವಿಜ್ಞಾಯ ವಿಷ್ಣೋಃ ಸ್ವಾಭೇದಮೇವ ಚ ।
‘ನಿರ್ದೋಷತ್ವಂ ಗುಣೋದ್ರೇಕಂ ಜ್ಞಾತ್ವಾ ಮುಕ್ತಿರ್ನಚಾನ್ಯಥಾ ॥೧.೮೧॥

ಬಿಡುಗಡೆಗೆ ಆಗಬೇಕು ಪಂಚಭೇದಗಳ ಜ್ಞಾನ,
ಹರಿಯ ಸಮಸ್ತ ರೂಪಗಳ-ಸ್ವರೂಪದ ಅಭೇದ ಜ್ಞಾನ,
ಅವನಿಗೆ ದೋಷಗಳೇ ಇಲ್ಲವೆಂಬ ಸ್ಪಷ್ಟ ಜ್ಞಾನ,
ಅವನು ಸಮಸ್ತ ಗುಣಗಳ ಗಡಣವೆಂಬ ಜ್ಞಾನ,
ಇವೆಲ್ಲಾ ಸಾಕ್ಷಾತ್ಕಾರವಾದಾಗಲೇ ಮುಕ್ತಿಯೆಂಬ ಫಲ,
ಇನ್ಯಾವ ಬೇರೆ ಬೇರೆ ರೀತಿ-ನೀತಿಗಳೆಲ್ಲಾ --ನಿಷ್ಫಲ.

‘ಅವತಾರಾನ್ ಹರೇರ್ಜ್ಞಾತ್ವಾ ನಾವತಾರಾ ಹರೇಶ್ಚಯೇ ।
‘ತದಾವೇಶಾಂಸ್ತಥಾ ಸಮ್ಯಗ್ ಜ್ಞಾತ್ವಾ ಮುಕ್ತಿರ್ನಚಾನ್ಯಥಾ ॥೧.೮೨॥

ತಿಳಿಯಬೇಕು ಭಗವಂತನ ಅವತಾರಗಳ ಗುಟ್ಟು,
ಆವೇಶಾವತಾರಗಳಲ್ಲಿನ ವಿಚಿತ್ರ ನಡೆಗಳು ರಟ್ಟು,
ಬರಬೇಕು ಭಗವಂತನ ಗುಣೋದ್ರೇಕದ ಅರಿವು,
ಅವನ ಶಕ್ತಿ-ಅದರ ಅಭಿವ್ಯಕ್ತಿ ಇತ್ಯಾದಿಗಳ ತಿಳಿವು,
ಇದೆಲ್ಲಾ ಆದಾಗಲೇ ಸಾಕ್ಷಾತ್ಕಾರ,
ತೆರೆಯುತ್ತದೆ ಮುಕುತಿಯ ದ್ವಾರ.
[Contributed by Shri Govind Magal]

Saturday, 25 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 72 - 75

‘ಕ್ಷಿತಿಪಾ ಮನುಷ್ಯಗನ್ಧರ್ವಾ ದೈವಾಶ್ಚ ಪಿತರಶ್ಚಿರಾಃ ।
‘ಆಜಾನಜಾಃ ಕರ್ಮಜಾಶ್ಚ ದೇವಾ ಇನ್ದ್ರಃ ಪುರನ್ದರಃ ॥೧.೭೨॥

‘ರುದ್ರಃ ಸರಸ್ವತೀ ವಾಯುರ್ಮುಕ್ತಾಃ ಶತಗುಣೋತ್ತರಾಃ ।
‘ಏಕೋ ಬ್ರಹ್ಮಾ ಚ ವಾಯುಶ್ಚ ವೀನ್ದ್ರೋ ರುದ್ರಸಮಸ್ತಥಾ ।
‘ಏಕೋ ರುದ್ರಸ್ತಥಾ ಶೇಷೋ ನ ಕಶ್ಚಿದ್ ವಾಯುನಾ ಸಮಃ ॥೧.೭೩॥

‘ಮುಕ್ತೇಷು ಶ್ರೀಸ್ತಥಾ ವಾಯೋಃ ಸಹಸ್ರಗುಣಿತಾ ಗುಣೈಃ ।
‘ತತೋsನನ್ತಗುಣೋ ವಿಷ್ಣುರ್ನ ಕಶ್ಚಿತ್ ತತ್ಸಮಃ ಸದಾ’ ॥೧.೭೪॥

ಹೇಳಿದೆಯಿಲ್ಲಿ ತಾರತಮ್ಯ ರೀತಿಯ ವಿವರಣೆ,
ಯೋಗ್ಯತಾನುಸಾರ ಸ್ಥಾನ ಮಾನಗಳ ವಿಶ್ಲೇಷಣೆ,
ಚಕ್ರವರ್ತಿಗಳು-ಮನುಷ್ಯ ಗಂಧರ್ವರು -ದೇವ ಗಂಧರ್ವರು,
ಚಿರಪಿತೃಗಳು-ಆಜಾನಜ ದೇವತೆಗಳು-ಕರ್ಮದಿಂದ ದೇವತೆಗಳಾದವರು,
ಇಂದ್ರ -ರುದ್ರ -ಸರಸ್ವತಿ - (ವಾಯು)ಮುಖ್ಯಪ್ರಾಣ,
ಇವರದು ಮುಕ್ತರಾದಮೇಲೂ ಇದೇ ತಾರತಮ್ಯದ ಗಣ,
ಶಾಸ್ತ್ರದಲ್ಲಿ ಏನೆಲ್ಲಾ ಹೇಳಿದೆ ಚತುರ್ಮುಖನ ಸ್ಥಾನ-ಗುಣ,
ಅವೆಲ್ಲವನ್ನೂ ಹೊಂದೇ ಹೊಂದುತ್ತಾನೆ ಅವ ಮುಖ್ಯಪ್ರಾಣ,
ಬ್ರಹ್ಮ-ಮುಖ್ಯಪ್ರಾಣರದು ಸ್ಥಾನ ಮಾನಗಳಲ್ಲಿ ಒಂದೇ ತ್ರಾಣ,
ಅಂತೆಯೇ ಕೆಳಗೆ ಬರುವ ಗರುಡ ರುದ್ರ ಶೇಷ,
ಒಂದೇ ಸ್ಥಾನ ಮಾನದ ದೇವತೆಗಳು ಎಂಬುದಿಲ್ಲಿ ವಿಶೇಷ,
ದೇವತಾಗಣದಲ್ಲಿ ಮುಖ್ಯಪ್ರಾಣನಿಗೆ ಯಾರಿಲ್ಲ ಸಮ,
ಮುಖ್ಯಪ್ರಾಣನಿಗಿಂತ ಸಾವಿರ ಪಟ್ಟು ಅಧಿಕಳು ರಮ,
ರಮೆಗಿಂತ ಅನಂತ ಪಟ್ಟು ಅಧಿಕ ಹರಿ-ಅವನಿಗೆಂದೂ ಯಾರಿಲ್ಲ ಸಮ.

ಇತ್ಯಾದಿ ವೇದವಾಕ್ಯಂ ವಿಷ್ಣೋರುತ್ಕರ್ಷಮೇವ ವಕ್ತ್ಯುಚ್ಚೈಃ ।
ತಾತ್ಪರ್ಯಂ ಮಹದತ್ರೇತ್ಯುಕ್ತಂ ‘ಯೋ ಮಾಮಿ’ತಿ ಸ್ವಯಂ ತೇನ ॥೧.೭೫॥

ಇವೇ ಮೊದಲಾದ ವೇದ ವಾಕ್ಯ,
ಹೇಳುತ್ತವೆ ನಾರಾಯಣನ ಆಧಿಕ್ಯ,
ಇದನ್ನೇ ಹೇಳುತ್ತದೆ ಮಹಾತಾತ್ಪರ್ಯ,

ಕೃಷ್ಣನೇ ಹೇಳಿದ-ತನಗಿಂತ ಅಧಿಕರಿಲ್ಲೆಂಬ ಆಂತರ್ಯ.
[Contributed by Shri Govind Magal] 

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 66 - 71

‘ಪ್ರ ಘಾ ನ್ವಸ್ಯ ಮಹತೋ ಮಹಾನಿ ‘ಸತ್ಯಾ ಸತ್ಯಸ್ಯ ಕರಣಾನಿ ವೋಚಮ್’ ।
‘ಸತ್ಯಮೇನಮನು ವಿಶ್ವೇ ಮದನ್ತಿ ‘ರಾತಿಂ ದೇವಸ್ಯ ಗೃಣತೋ ಮಘೋನಃ’॥೧.೬೬॥

(ಪ್ರ ಘಾ ನ್ವಸ್ಯ ಮಹತೋ..... ಎನ್ನುವ  ಈ ಮಾತು  ಋಗ್ವೇದದ ಎರಡನೇ ಮಂಡಲದ ಹದಿನೈದನೇ ಸೂಕ್ತ (ಗೃತ್ಸಮದ ಮಂಡಲ).)
(ಸತ್ಯಮೇನಮನು... ಎನ್ನುವ ಸಾಲು ಋಗ್ವೇದದಲ್ಲಿ ನಾಲ್ಕನೆಯ ಮಂಡಲದಲ್ಲಿ ಹದಿನೇಳನೆಯ ಸೂಕ್ತದಲ್ಲಿ ಐದನೆಯ ಋಕ್).

ಈ  ನಾರಾಯಣನು ಮಹಾಮಹಿಮ ಸತ್ಯಸ್ಯ ಸತ್ಯ,
ಭಕ್ತಾದಿಗಳ ಸ್ತೋತ್ರವಂದಿತನಾದ ಅವನ ಸೃಷ್ಟಿಯೂ ಸತ್ಯ,
ಇದನ್ನರಿತ ಸಜ್ಜನರಿಗೆ ಲಭ್ಯವಾಗುವ ಫಲವೂ ಸತ್ಯ,
ಇದರಿಂದ ಸ್ಪಷ್ಟವಾಗುತ್ತದೆ ಜಗತ್ತಲ್ಲವೇ ಅಲ್ಲ ಮಿಥ್ಯ.

‘ಯಚ್ಚಿಕೇತ ಸತ್ಯಮಿತ್ ತನ್ನ ಮೋಘಂ ‘ವಸು ಸ್ಪಾರ್ಹಮುತ ಜೇತೋತ ದಾತಾ।
‘ಸತ್ಯಃ ಸೋ ಅಸ್ಯ ಮಹಿಮಾ ಗೃಣೇ ‘ಶವೋ ಯಜ್ಞೇಷು ವಿಪ್ರರಾಜ್ಯೇ’ ॥೧.೬೭॥

(ಯಚ್ಚಿಕೇತ ಸತ್ಯಮಿತ್ ......ಇದು ಋಗ್ವೇದದ ಹತ್ತನೇ ಮಂಡಲದ ೫೫ನೆಯ ಸೂಕ್ತ, ೬ನೆಯ ಋಕ್.)
(ಸತ್ಯಃ ಸೋ ಅಸ್ಯ ಮಹಿಮಾ .....ಋಗ್ವೇದದ ಮೂರನೇ ಮಂಡಲ ೩ನೆಯ ಸೂಕ್ತ ೪ನೆಯ ಋಕ್.)

ಪರಮಾತ್ಮನ ಸೃಷ್ಟಿಯೆಲ್ಲವೂ ಪರಮಸತ್ಯ,
ಅದು ಮಿಥ್ಯವಲ್ಲವಾದ್ದರಿಂದ ಹೇಗಾಗುತ್ತದೆ ವ್ಯರ್ಥ?
ಮೂಲೋಕದ ಸಂಪತ್ತನ್ನು ಬಲಿಯಿಂದ ದಾನ ಪಡೆದದ್ದು ಸತ್ಯ,
ವಾಮನನಾಗಿ ಬಲಿಯ ಗೆದ್ದು ಅದನ್ನು ಪುರಂದರಗಿತ್ತಿದ್ದೂ ಸತ್ಯ,
ಯಜ್ಞಗಳಲ್ಲಿ ಬ್ರಾಹ್ಮಣರು ಹೇಳುವುದು ಭಗವಂತನ ಮಹಿಮೆ,
ಸರ್ವರೀತಿಯಿಂದಲೂ ಸ್ಥಾಪಿತವಾಗಿದೆ ಸತ್ಯಸಂಕಲ್ಪನ ಹಿರಿಮೆ.

‘ಸತ್ಯಾ ವಿಷ್ಣೋರ್ಗುಣಾಃ ಸರ್ವೇ ಸತ್ಯಾ ಜೀವೇಶಯೋರ್ಭಿದಾ ।
‘ಸತ್ಯೋ ಮಿಥೋ ಜೀವಭೇದಃ ಸತ್ಯಂ ಚ ಜಗದೀದೃಶಮ್ ॥೧.೬೮॥

ಭಗವಂತನ ಗುಣಗಳಾಗಿವೆ ಸತ್ಯ,
ಜೀವ ಈಶ್ವರರ ಭೇದವು ನಿತ್ಯ,
ಜೀವರ ಪರಸ್ಪರ ಭೇದವೂ ನಿತ್ಯ,
ಪಂಚಭೂತಗಳಿಂದಾದ ಜಗತ್ತು ಸತ್ಯ.

 ‘ಅಸತ್ಯಃ ಸ್ವಗತೋ ಭೇದೋ ವಿಷ್ಣೋರ್ನಾನ್ಯದಸತ್ಯಕಮ್ ।
‘ಜಗತ್ ಪ್ರವಾಹಃ ಸತ್ಯೋsಯಂ ಪಞ್ಚಭೇದಸಮನ್ವಿತಃ ॥೧.೬೯॥

‘ಜೀವೇಶಯೋರ್ಭಿದಾ ಚೈವ ಜೀವಭೇದಃ ಪರಸ್ಪರಮ್ ।
‘ಜಡೇಶಯೋರ್ಜಡಾನಾಂ ಚ ಜಡಜೀವಭಿದಾ ತಥಾ ॥೧.೭೦॥

‘ಪಞ್ಚಭೇದಾ ಇಮೇ ನಿತ್ಯಾಃ ಸರ್ವಾವಸ್ಥಾಸು ಸರ್ವಶಃ ।
‘ಮುಕ್ತಾನಾಂ ಚ ನ ಹೀಯನ್ತೇ ತಾರತಮ್ಯಂ ಚ ಸರ್ವದಾ ॥೧.೭೧॥

ನಾರಾಯಣನ ರೂಪಗಳಲ್ಲಿರುವ ಭೇದವು ಅಲ್ಲ ಸತ್ಯ,
ಉಳಿದ ಯಾವುದೂ ಮಿಥ್ಯವಲ್ಲ ಸರ್ವವೂ ಸತ್ಯ,
ಪಂಚ ಭೇದಗಳಿಂದ ಕೂಡಿದ ಜಗತ್ತು,
ಸತ್ಯವೇ ಅದು-ಅಂಗೈಯಲ್ಲಿರುವಂತೆ ಮುತ್ತು .

ಜೀವಾತ್ಮ ಪರಮಾತ್ಮರಲ್ಲಿದೆ ಭೇದ,
ಪರಸ್ಪರ ಜೀವರಲ್ಲಿದೆ ಭೇದ,
ಜಡ ಪರಮಾತ್ಮನಲ್ಲಿದೆ ಭೇದ,
ಜಡ ಜಡಗಳಲ್ಲಿದೆ ಭೇದ,
ಜಡ ಜೀವರಲ್ಲಿದೆ ಭೇದ,
ಈ ಪಂಚ ಭೇದಗಳವು ಎಂದೆಂದೂ ನಿತ್ಯ,
ಕಾಲಮಿತಿಯಿರದ ಅನಾದಿ ಅನಂತ ನಿತ್ಯ,

ಮುಕ್ತರಲ್ಲೂ ಪಂಚ ಭೇದ ತಾರತಮ್ಯ ನಿತ್ಯ.
[Contributed by Shri Govind Magal]