Friday, 24 September 2021

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 98 - 103

 ಶ್ರುತ್ವಾ ಭೌಮಃ ಕೃಷ್ಣಮಾಯಾತಮಾರಾದಕ್ಷೋಹಿಣೀತ್ರಿಂಶಕೇನಾಭ್ಯಯಾತ್ ತಮ್

ಜಘ್ನೇ ಸೇನಾಂ ಗರುಡಃ ಪಕ್ಷಪಾತೈಃ ಪಾದಂ ಶೇಷಾಂ ಕೇಶವಃ ಸಾಯಕೌಘೈಃ ೨೦.೯೮

 ಶ್ರೀಕೃಷ್ಣ ಬಂದಿರುವ ವಿಷಯವನ್ನು ನರಕಾಸುರ ಕೇಳಿ ತಿಳಿದುಕೊಂಡ,

ತನ್ನ ಮೂವತ್ಮೂರು ಅಕ್ಷೋಹಿಣಿ ಸೇನೆ ಜೊತೆ ಕೃಷ್ಣನ ಎದುರುಗೊಂಡ.

ಗರುಡನೇ ತನ್ನ ರೆಕ್ಕೆಯಿಂದ ಅವನ ಕಾಲುಭಾಗ ಸೈನ್ಯವ ಕೊಂದ,

ಕೃಷ್ಣ ತನ್ನ ಬಾಣಗಳಿಂದ ನರಕಾಸುರನ ಉಳಿದ ಸೈನ್ಯವ ತರಿದ.

 

ಅಥಾsಸಸಾದಾsಶು ಭೌಮೋsಚ್ಯುತಂ ತಂ ಮುಞ್ಚಛ್ಞರಾನಸ್ತ್ರಸಮ್ಮನ್ತ್ರಿತಾನ್ ದ್ರಾಕ್ ।

ವಿವ್ಯಾಧ ತಂ ಕೇಶವಃ ಸಾಯಕೌಘೈರ್ಭೌಮಃ ಶತಘ್ನೀಂ ಬ್ರಹ್ಮದತ್ತಾಮಮುಞ್ಚತ್ ॥೨೦.೯೯

ನರಕಾಸುರ ತನ್ನ ಸೈನ್ಯ ನಾಶವಾದ ಕೂಡಲೇ,

ಅಭಿಮಂತ್ರಿತ ಬಾಣಗಳನೆಸೆದ ಕೃಷ್ಣನ ಮೇಲೆ.

ಬಾಣಗಳ ಸಮೂಹದಿಂದ ಅವನನ್ನು ಗಾಯಗೊಳಿಸಿದ ಕೇಶವ,

ನರಕ ಬಳಸಿದನಾಗ ಶತಘ್ನೀ ಎಂಬ ಬ್ರಹ್ಮದತ್ತ ಆಯುಧವ.

 

ಅಚ್ಛೇದ್ಯೋsಭೇದ್ಯೋ ನಿತ್ಯಸಂವಿತ್ಸುಖಾತ್ಮಾ ನಿತ್ಯಾವ್ಯಯಃ ಪೂರ್ಣ್ಣಶಕ್ತಿಃ ಸ ಕೃಷ್ಣಃ ।

ನಿಗೀರ್ಯ್ಯ ತಾಂ ದೇವವರಃ ಶತಘ್ನೀಂ ನಿತ್ಯಾಶ್ರಾನ್ತೋsದರ್ಶಯಚ್ಛ್ರಾನ್ತವಚ್ಚ ॥೨೦.೧೦೦

ಪರಿಪೂರ್ಣಶಕ್ತಿ,ನಾಶವಿರದ , ನಿತ್ಯವಾದ, ಜ್ಞಾನ ಸುಖಗಳ ಗಡಣ,

ಭೇಧಿಸಲಾಗದ,ಛೇದಿಸಲಾಗದ,ದೇವೋತ್ತಮನಾದವ ಶ್ರೀಕೃಷ್ಣ,

ಕೊಂಚವೂ ಶ್ರಮವಿಲ್ಲದೇ ಆ ಶತಘ್ನಿಯ ನುಂಗಿದ,

ಲೋಕಮೋಹಕ್ಕಾಗಿ ಬಳಲಿದವನಂತೆ ತೋರಿಸಿಕೊಂಡ.

 

ಬಹೂನ್ ವರಾನ್ ಬ್ರಹ್ಮಣೋsನ್ಯೇಷ್ವಮೋಘಾನ್ ಮೋಘೀಕೃತಾನ್ ವೀಕ್ಷ್ಯ ಪರಾತ್ಪರೇಶಃ ।

ಭವೇತ್ ಕಥಞ್ಚಿದ್ ಬಹುಮಾನೇನ ಯುಕ್ತ ಇತ್ಯೇವ ಕೃಷ್ಣೋsದರ್ಶಯಚ್ಛ್ರಾನ್ತವತ್ ಸ್ವಮ್ ॥೨೦.೧೦೧

ಇತರರ ವಿಷಯದಲ್ಲಿ ಎಂದೂ ವ್ಯರ್ಥವಾಗದ ವರವ ನೀಡುವ ಬ್ರಹ್ಮನಲ್ಲಿ,

ನರಕಾಸುರಗೆ ಕನಿಷ್ಠ ಭಾವನೆ ಬರಬಾರದೆನ್ನುವ ಕೃಷ್ಣನ ಯುಕ್ತಿ ಇತ್ತಲ್ಲಿ.

ಸರ್ವೋತ್ಕೃಷ್ಟ ಸರ್ವೋತ್ತಮ ಶ್ರೀಕೃಷ್ಣ,

ಬಳಲಿದವನಂತೆ ತೋರಿಕೊಂಡ ಆ ಕ್ಷಣ.

 

ತದಾ ದೃಪ್ತಂ ನರಕಂ ವೀಕ್ಷ್ಯ ದೇವೀ ಸತ್ಯಾssದದೇ ಕಾರ್ಮ್ಮುಕಂ ಶಾರ್ಙ್ಗಸಞ್ಜ್ಞಮ್ ।

ಚಕಾರ ತಂ ಯತಮಾನಂ ಚ ಭೌಮಂ ನಿರಾಯುಧಂ ವಿರಥಂ ಚ ಕ್ಷಣೇನ ॥೨೦.೧೦೨

ದರ್ಪ ಹೊಂದಿದ ನರಕನತ್ತ ಆಗ ಸತ್ಯಭಾಮೆಯ ನೋಟ,

ಶಾರ್ಙ್ಗ ಎನ್ನುವ ಹೆಸರಿನ ಬಿಲ್ಲನ್ನು ಎತ್ತಿಕೊಂಡ ಆ ಆಟ.

ಯುದ್ಧದಲ್ಲಿ ಆಕೆಯ ಸೋಲಿಸಲು ನರಕನಿಂದ ಬಹು ಪ್ರಯತ್ನ,

ಕೆಲಕ್ಷಣಗಳಲ್ಲೇ ಭಾಮೆಯಿಂದ ಅವನಾದ ನಿರಾಯುಧ ರಥಹೀನ.

 

ಆಲಿಙ್ಗ್ಯ ಕೃಷ್ಣಃ ಸತ್ಯಭಾಮಾಂ ಪುನಶ್ಚ ರಥಾನ್ತರೇ ಸಂಸ್ಥಿತಂ ಭೌಮಮುಗ್ರಮ್ ।

ಸೃಜನ್ತಮಸ್ತ್ರಾಣ್ಯರಿಣಾ ನಿಕೃತ್ತಕನ್ಧಂ ಮೃತ್ಯೋರರ್ಪ್ಪಯಾಮಾಸ ಶೀಘ್ರಮ್ ॥೨೦.೧೦೩

ಶ್ರೀಕೃಷ್ಣ ಸತ್ಯಭಾಮಾದೇವಿಗಿತ್ತ ಆಲಿಂಗನದ ಭಾಗ್ಯ,

ಬೇರೊಂದು ರಥದಲ್ಲಿ ಬಾಣ ಬಿಡುತ್ತಾ ಬರುತ್ತಿದ್ದ ನರಕನಾಗ.

ಶ್ರೀಕೃಷ್ಣ ತನ್ನ ಚಕ್ರದಿಂದ ಮಾಡಿದನವನ ಶಿರಚ್ಛೇದನ,

ಮೃತ್ಯುಕೂಪಕ್ಕೆ ದೂಡಿದನವನ ದೇವ ಮಧುಸೂದನ.

[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 88 - 97

ನಿತ್ಯೈವ ಯಾ ಪ್ರಕೃತಿಃ ಸ್ವೇಚ್ಛಯೈವ ಜಗಚ್ಛಿಕ್ಷಾರ್ತ್ಥಂ ದ್ವಾದಶೀಂ ಭೀಮಸಞ್ಜ್ಞಾಮ್ ।

ಉಪೋಷ್ಯ ಬಭ್ರೇ ಕೋಟಿಧಾರಾಜಲಸ್ಯ ವಿಷ್ಣೋಃ ಪ್ರೀತ್ಯರ್ತ್ಥಂ ಸೈವ ಹಿ ಸತ್ಯಭಾಮಾ ॥೨೦.೮೮

ಸತ್ಯಭಾಮೆ ನಿತ್ಯಳಾಗಿರುವ ಮಹಾಲಕ್ಷ್ಮಿಯವಳು  ನಾಶರಹಿತ,

ಲೋಕಶಿಕ್ಷಣ ಹರಿಪ್ರಿತಿಗಾಗಿ ಕೈಗೊಂಡಳು ಭೀಮದ್ವಾದಶಿ ವ್ರತ.

ಮಾಡಿದಳು ಏಕಾದಶಿ ಉಪವಾಸದೊಂದಿಗೆ ಕೋಟಿಧಾರಾ ಜಲವ್ರತ.

 

ತಯಾ ಯುಕ್ತೋ ಗರುಡಸ್ಕನ್ಧಸಂಸ್ಥೋ ದೂರಾನುಯಾತೋ ವಜ್ರಭೃತಾsಪ್ಯನುಜ್ಞಾಮ್ ।

ದತ್ವಾsಮುಷ್ಮೈ ಪ್ರಯಯೌ ವಾಯುಜುಷ್ಟಾಮಾಶಾಂ ಕೃಷ್ಣೋ ಭೌಮವಧೇ ಧೃತಾತ್ಮಾ ॥೨೦.೮೯

ಸತ್ಯಭಾಮೆ ಸಮೇತ ಶ್ರೀಕೃಷ್ಣ ಗರುಡನ ಹೆಗಲೇರಿದ,

ಅನುಸರಿಸಿದ ವಜ್ರಧಾರಿಗೆ ತನ್ನ ಲೋಕ್ಕಕ್ಕೆ ಕಳುಹಿಸಿದ.

ನರಕನ ವಧೆಯ ಸಂಕಲ್ಪದಿ ವಾಯವ್ಯಕ್ಕೆ

ತಾ ತೆರಳಿದ.

 

ಭೌಮೋ ಹ್ಯಾಸೀದ್ ಬ್ರಹ್ಮವರಾದವದ್ಧ್ಯೋ ನ ಶಸ್ತ್ರಭೃಜ್ಜೀಯಸ ಇತ್ಯಮುಷ್ಮೈ ।

ದತ್ತೋ ವರೋ ಬ್ರಹ್ಮಣಾ ತದ್ವದೇವ ತಸ್ಯಾಮಾತ್ಯಾನಾಂ ತದ್ವದವದ್ಧ್ಯತಾ ಚ ॥೨೦.೯೦

ನರಕಾಸುರನಿಗಿತ್ತು ಅವಧ್ಯನಾಗಿರುವ ಬ್ರಹ್ಮ ವರಬಲ,

ಶಸ್ತ್ರಧಾರಿಯಾಗಿ ನಿಂತವಗೆ ಎದುರಾಳಿಗಳಿಂದ ಸೋಲಿಲ್ಲ.

ಅವನ ಮಂತ್ರಿಗಳಿಗೆ ಕೂಡಾ ಇತ್ತು ಅವಧ್ಯತ್ವದ ವರಬಲ.

 

ಭೌಮೇನ ಜಯ್ಯತ್ವಮಪಿ ಹ್ಯಮೀಷಾಂ ದತ್ತಂ ಭೌಮಾಯ ಬ್ರಹ್ಮಣಾ ಕ್ರೋಡರೂಪಾತ್ ।

ವಿಷ್ಣೋರ್ಜ್ಜಾತಾಯಾಸ್ಯ ದುರ್ಗ್ಗಂ ಚ ದತ್ತಂ ಪ್ರಾಗ್ಜ್ಯೋತಿಷಂ ನಾಮ ಪುರಂ ಸಮಸ್ತೈಃ ॥೨೦.೯೧

ಅವನ ಮಂತ್ರಿಗಳಿಗಿದ್ದರೂ ಇತರರಿಂದ ಸೋಲದ ಸಾಯದ ವರ,

ಅವನ ದಾಸರಾಗಿದ್ದರು-ನರಕ ಮಾಡಬಲ್ಲನಾಗಿದ್ದ

ಅವರ ಸಂಹಾರ.

ವರಾಹರೂಪಿಯಾದ ವಿಷ್ಣುವಿನಿಂದ ಹುಟ್ಟಿದ್ದ ಈ ನರಕಾಸುರ,

ಕೊಡಲ್ಪಟ್ಟಿತ್ತವಗೆ ಅನ್ಯರಿಗೆ ದುರ್ಗಮ, ಸಮೃದ್ಧ ಪ್ರಾಗ್ಜ್ಯೋತಿಷಪುರ.

 

ಆಸೀದ್ ಬಾಹ್ಯೇ ಗಿರಿದುರ್ಗ್ಗಂ ತದನ್ತಃ ಪಾನೀಯದುರ್ಗ್ಗಂ ಮೌರವಂ ಪಾಶದುರ್ಗ್ಗಮ್ ।

ತಸ್ಯಾಪ್ಯನ್ತಃ ಕ್ಷುರಧಾರೋಪಮಂ ತತ್ಪಾಶಾಶ್ಚ ತೇ ಷಟ್ಸಹಸ್ರಾಶ್ಚ ಘೋರಾಃ  ೨೦.೯೨

ಆ ಪಟ್ಟಣದ ಹೊರಭಾಗದಲ್ಲಿ ಬೆಟ್ಟಗಳ ಕೋಟೆ,

ಅದರ ಒಳಭಾಗದಲ್ಲಿ (ಜಲದುರ್ಗ )ನೀರಕೋಟೆ.

ತದನಂತರ ಮುರ ನಿರ್ಮಿತವಾದ ಪಾಶಕೋಟೆ,

ಅತಿ ಹರಿತವಾದ ಆರು ಸಾವಿರ ಅಲಗುಕೋಟೆ.

 

ಅಭೇದ್ಯತ್ವಮರಿಭಿರತಾರ್ಯ್ಯತಾ ಚ ದತ್ತಾ ದುರ್ಗ್ಗಾಣಾಂ ಬ್ರಹ್ಮಣಾssರಾಧಿತೇನ

ತಸ್ಯಾಮಾತ್ಯಾಃ ಪೀಠಮುರೌ ನಿಸುಮ್ಭಹಯಗ್ರೀವೌ ಪಞ್ಚಜನಶ್ಚ ಶೂರಾಃ ೨೦.೯೩

ನರಕಾಸುರ ಬ್ರಹ್ಮದೇವನ ಕುರಿತು ಮಾಡಿದ ತಪಸ್ಸಿಗೆ,

ದಾಟಲಸಾಧ್ಯವಾದ ಆ ಅಭೇದ್ಯಕೋಟೆ ಬ್ರಹ್ಮಕೊಡುಗೆ.

ಪೀಠ, ಮುರ, ನಿಸುಂಭ, ಹಯಗ್ರೀವ ಮತ್ತು ಪಂಚಜನ,

ನರಕಾಸುರನ ಮಂತ್ರಿಗಳಾಗಿದ್ದವರು ಇವರು ಐದುಜನ.

 

ಸಙ್ಕಲ್ಪ್ಯ ತಾನ್ ಲೋಕಪಾಲಾನಹಂ ಚ ಬ್ರಹ್ಮೇತ್ಯದ್ಧಾ ಭಾಷಮಾಣಃ ಸ ಆಸ್ತೇ

ಹನ್ತುಂ ಕೃಷ್ಣೋ ನರಕಂ ತತ್ರ ಗತ್ವಾ ಗಿರಿದುರ್ಗ್ಗಂ ಗದಯಾ ನಿರ್ಬಿಭೇದ ೨೦.೯೪

ಆ ಐದುಜನರನ್ನು ನರಕಾಸುರ ಲೋಕಪಾಲಕರು ಎನ್ನುತ್ತಿದ್ದ,

ತನ್ನನ್ನು ತಾನೇ ಬ್ರಹ್ಮನೆಂದು ದರ್ಪದಿಂದ ಹೇಳಿಕೊಳ್ಳುತ್ತಿದ್ದ.

ಇಂತಹ ನರಕನ ಕೊಲ್ಲಲೆಂದೇ ಕೃಷ್ಣ ಅಲ್ಲಿಗೆ ಬಂದ,

ತನ್ನ ಗದೆಯಿಂದ ಬೆಟ್ಟದ ಕೋಟೆಯ ಒಡೆದು ಹಾಕಿದ.

 

ವಾಯವ್ಯಾಸ್ತ್ರೇಣೋದಕಂ ಶೋಷಯಿತ್ವಾ ಚಕರ್ತ್ತ ಖಡ್ಗೇನ ಮುರಸ್ಯ ಪಾಶಾನ್

ಅಥಾಭಿಪೇತುರ್ಮ್ಮುರಪೀಠೌ ನಿಸುಮ್ಭಹಯಗ್ರೀವೌ ಪಞ್ಚಜನಶ್ಚ ದೈತ್ಯಾಃ ೨೦.೯೫

ಜಲಕೋಟೆಯ ಒಣಗಿಸಿತು ಕೃಷ್ಣನ ವಾಯವ್ಯಾಸ್ತ್ರ,

ಮುರನ ಪಾಶಕೋಟೆಯ ಕತ್ತರಿಸಿತು ಖಡ್ಗವೆಂಬ ಅಸ್ತ್ರ.

ಮುರ, ಪೀಠ,ನಿಸುಂಭ, ಹಯಗ್ರೀವ ಮತ್ತು ಪಂಚಜನ,

ಕೃಷ್ಣನ ಮೇಲೆ ಯುದ್ಧಕೆ ಬಂದರು ದೈತ್ಯರಾದ ಆ ಐದು ಜನ.

 

ತಾಞ್ಛೈಲಶಸ್ತ್ರಾಸ್ತ್ರಶಿಲಾಭಿವರ್ಷಿಣಶ್ಚಕ್ರೇ ವ್ಯಸೂಂಶ್ಚಕ್ರನಿಕೃತ್ತಕನ್ಧರಾನ್

ತೇಷಾಂ ಸುತಾಃ ಸಪ್ತಸಪ್ತೋರುವೀರ್ಯ್ಯಾ ವರಾದವದ್ಧ್ಯಾ ಗಿರಿಶಸ್ಯಾಭಿಪೇತುಃ ೨೦.೯೬

ಬೆಟ್ಟ ಬಂಡೆ ಶಸ್ತ್ರಾಸ್ತ್ರಗಳ ಸುರಿಸುತ್ತಾ ಬರುತ್ತಿದ್ದವರ,

ಕತ್ತರಿಸಿ ಪ್ರಾಣ ತೆಗೆಯಿತವರೆಲ್ಲರ ಕೃಷ್ಣ ಬಿಟ್ಟಂಥ ಚಕ್ರ.

ಆ ಐದು ಜನರ ಮಕ್ಕಳಾಗಿದ್ದವರು ಏಳೇಳು ಜನ,

ರುದ್ರವರದಿ ಅವಧ್ಯರಾದವರಿಂದ ಯುದ್ಧಕೆ ಆಗಮನ.

 

ತಾನಸ್ತ್ರಶಸ್ತ್ರಾಭಿಮುಚಃ ಶರೋತ್ತಮೈಃ ಸಮರ್ಪ್ಪಯಾಮಾಸ ಸ ಮೃತ್ಯವೇsಚ್ಯುತಃ

ಹತ್ವಾ ಪಞ್ಚತ್ರಿಂಶತೋ ಮನ್ತ್ರಿಪುತ್ರಾನ್ ಜಗಾಮ ಭೌಮಸ್ಯ ಸಕಾಶಮಾಶು ೨೦.೯೭

ಅಸ್ತ್ರ ಶಸ್ತ್ರ ಎಸೆಯುತ್ತ ಬರುತ್ತಿದ್ದ ಮೂವತ್ತೈದು ಮಂತ್ರಿ ಮಕ್ಕಳನ್ನ,

ಕೊಂದು ಹಾಕಿದ ಕೃಷ್ಣ ಬಿಡುತ್ತಾ ತನ್ನ ಶ್ರೇಷ್ಠವಾದ  ಬಾಣಗಳನ್ನ.

ಅವರನ್ನೆಲ್ಲ ವಧಿಸಿ ನರಕಾಸುರನ ಬಳಿ ವೇಗದಿ ಸಾಗಿದ ಕೃಷ್ಣ.

[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 20: 83 - 87

 ಸಾಕ್ಷಾತ್ ಸತ್ಯಾ ರುಗ್ಮಿಣೀತ್ಯೇಕಸಂವಿದ್ ದ್ವಿಧಾಭೂತಾ ನಾತ್ರ ಭೇದೋsಸ್ತಿ ಕಶ್ಚಿತ್ ।

ತಥಾsಪಿ ಸಾ ಪ್ರಮದಾನಾಂ ಸ್ವಭಾವಪ್ರಕಾಶನಾರ್ತ್ಥಂ ಕುಪಿತೇವಾsಸ ಸತ್ಯಾ॥೨೦.೮೩॥

ಸತ್ಯಭಾಮೆ ಮತ್ತು ರುಗ್ಮಿಣಿಯರು ಇಬ್ಬರೂ ಒಂದೇ,

ಇಬ್ಬರ ಅಭಿಪ್ರಾಯ ಏಕ -ಮೂಲದ ಲಕ್ಷ್ಮೀ ಒಂದೇ.

ಎರಡು ರೂಪಗಳಾಗಿ ಅವತರಿಸಿದ್ದು ಮೂಲ ಲಕ್ಷ್ಮಿಯಿಂದೇ,

ಭಾಮೆಯ ಕೋಪ ಹೆಣ್ಣುಸ್ವಭಾವ ಲೋಕಕೆ ತೋರಲೆಂದೇ.

 

ಸಾಕಂ ರುಗ್ಮಿಣ್ಯಾ ರಾಜಮದ್ಧ್ಯೇ ಪ್ರವೇಶಾತ್ ಸ್ತವಾದೃಷೇಃ ಪುಷ್ಪದಾನಾಚ್ಚ ದೇವೀಮ್ ।

ಕೋಪಾನನಂ ದರ್ಶಯನ್ತೀಮುವಾಚ ವಿಡಮ್ಬಾರ್ತ್ಥಂ ಕಾಮಿಜನಸ್ಯ ಕೃಷ್ಣಃ ॥೨೦.೮೪॥

ದಾತಾಸ್ಮ್ಯಹಂ ಪಾರಿಜಾತಂ ತರುಂ ತ ಇತ್ಯೇವ ತತ್ರಾಥಾsಗಮದ್ ವಾಸವೋsಪಿ ।

ಸರ್ವೈರ್ದ್ದೇವೈರ್ಭೌಮಜಿತೋsಪ್ಯದಿತ್ಯಾಸ್ತೇನೈವಾಥೋ ಕುಣ್ಡಲಾಭ್ಯಾಂ ಹೃತಾಭ್ಯಾಮ್ ॥೨೦.೮೫॥

ರುಗ್ಮಿಣಿಯಿಂದೊಡಗೂಡಿ ಅರಸರ ಮಧ್ಯ ಕೃಷ್ಣ ಮಾಡಿದ ಪ್ರವೇಶ,

ನಾರದ ರುಗ್ಮಿಣಿಯ ಸ್ತುತಿಸುತ್ತಾ ಪಾರಿಜಾತವನ್ನು ಕೊಟ್ಟ ಸನ್ನಿವೇಶ,

ಸತ್ಯಭಾಮೆ ಮುನಿಸಿಕೊಂಡಳು ತುಂಬಿ ಬಂದ ಕೋಪದಿಂದ,

ಕೃಷ್ಣ ಸಂತೈಸಿದ ಪಾರಿಜಾತ ಮರವನ್ನೇ ಕೊಡುವ ಮಾತಿನಿಂದ.

ಕೆಲ ಕಾಲಾನಂತರ ಇಂದ್ರ ಬಂದ ನರಕಾಸುರನಿಂದ ಸೋತು,

ಸಮಸ್ತ ದೇವತೆಗಳ ಜೊತೆಗೆ ಬಂದಿದ್ದ ಸೋತಮುಖ ಹೊತ್ತು.

ಅ ನರಕನಿಂದಲೇ ಅದಿತಿಯ ಕುಂಡಲಗಳ ಅಪಹಾರವಾಗಿತ್ತು.

  

ತದೈವಾsಗುರ್ಮ್ಮುನಯಸ್ತೇನ ತುನ್ನಾ ಬದರ್ಯಾಸ್ತೇ ಸರ್ವ ಏವಾsಶು ಕೃಷ್ಣಮ್ ।

ಯಯಾಚಿರೇ ಭೌಮವಧಾಯ ನತ್ವಾ ಸ್ತುತ್ವಾ ಸ್ತೋತ್ರೈರ್ವೈದಿಕೈಸ್ತಾನ್ತ್ರಿಕೈಶ್ಚ ॥೨೦.೮೬

ನರಕಾಸುರನಿಂದ ಪೀಡಿತರಾಗಿದ್ದ ಮುನಿವೃಂದ,

ಇಂದ್ರಪ್ರೇರಣೆಯಿಂದ ಬಂದಿದ್ದರು ಬದರಿಯಿಂದ.

ಎಲ್ಲರೂ ನಮಸ್ಕರಿಸಿ ವೈದಿಕವಾದ ತಂತ್ರಾದಿ ಸ್ತೋತ್ರ ಮಾಡುತ್ತಾ,

ಬೇಡಿಕೊಂಡರು ಎಲ್ಲಾ ನರಕಾಸುರನ ಸಂಹಾರ ಬಯಸುತ್ತಾ.

 

ಇನ್ದ್ರೇಣ ದೇವೈಃ ಸಹಿತೇನ ಯಾಚಿತೋ ವಿಪ್ರೈಶ್ಚ ಸಸ್ಮಾರ ವಿಹಙ್ಗರಾಜಮ್ ।

ಆಗಮ್ಯ ನತ್ವಾ ಪುರತಃ ಸ್ಥಿತಂ ತಮಾರುಹ್ಯ ಸತ್ಯಾಸಹಿತೋ ಯಯೌ ಹರಿಃ ॥೨೦.೮೭

ಹೀಗೆ ದೇವತೆಗಳೊಡನೆ ಮುನಿಗಳೊಡನೆ ಇಂದ್ರ ಬೇಡಲು,

ಕೃಷ್ಣಸ್ಮರಣೆ ಅನುಸರಿಸಿ ಗರುಡ ಬಂದು ಎದುರು ನಿಲ್ಲಲು,

ಕೃಷ್ಣ ಭಾಮೆಯೊಡನೆ ಗರುಡನೇರಿದ ಅಲ್ಲಿಂದ ಹೊರಡಲು.

[Contributed by Shri Govind Magal]