Saturday, 10 December 2022

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 227-232

 

ಕೃಷ್ಣಃ ಕ್ರೀಡನ್ ದ್ವಾರವತ್ಯಾಂ ಸುಪೂರ್ಣ್ಣನಿತ್ಯಾನನ್ದಃ ಕ್ವಚಿದಾಹ ಸ್ಮ ಭೈಷ್ಮೀಮ್ ।

ವಿಡಮ್ಬಯನ್ ಗೃಹಿಣಾಮೇವ ಚೇಷ್ಟಾ ನಿತ್ಯಾವಿರೋಧೋSಪಿ ತಯಾ ವಿದೋಷಯಾ ॥೨೨.೨೨೭॥

ಪರಿಪೂರ್ಣವಾದ ನಿತ್ಯಾನಂದವುಳ್ಳವನು ಭಗವಂತ,

ಒಮ್ಮೆ ದ್ವಾರಕೆಯಲ್ಲಿ ಲೋಕನೀತಿಯಂತೆ ಲೀಲೆ ತೋರುತ್ತಾ,

ಸಾಮಾನ್ಯ ಗೃಹಸ್ಥರು ಹೆಂಡಂದಿರೊಡನೆ ಮಾತಾಡುವ ರೀತಿಯಲ್ಲಿ,

ಕೃಷ್ಣ ಕೂಡಾ ಮಾತಿಗಾರಂಭಿಸುತ್ತಾನೆ ಹೆಂಡತಿ ರುಗ್ಮಿಣಿ ಜೊತೆಯಲ್ಲಿ.

 

ತ್ವಯಾ ನ ಕಾರ್ಯ್ಯಂ ಮಮ ಕಿಞ್ಚ ಭದ್ರೇ ಮಯಾSರೀಣಾಂ ಮಾನಭಙ್ಗಾರ್ತ್ಥಮೇವ ।

ಸಮಾಹೃತಾSಸೀತಿ ಸಾ ಚಾವಿಯೋಗಂ ಸದಾ ಕೃಷ್ಣೇನಾSತ್ಮನೋSಪ್ಯೇವ ವೇತ್ರೀ             ॥೨೨.೨೨೮॥

 

ಸ್ತ್ರಿಯಾ ಭೇತವ್ಯಂ ಭರ್ತ್ತುರಿತ್ಯೇವ ಧರ್ಮ್ಮಂ ವಿಜ್ಞಾಪಯನ್ತೀ ದುಃಖಿತೇವಾSಸ ದೇವೀ ।

ತಾಂ ಸಾನ್ತ್ವಯಾಮಾಸ ಗೃಹಸ್ಥಧರ್ಮ್ಮಂ ವಿಜ್ಞಾಪಯನ್ ದೇವದೇವೋSಪ್ಯದುಃಖಾಮ್ ॥೨೨.೨೨೯॥

ಮಂಗಳೆ ರುಗ್ಮಿಣೀ, ನಿನ್ನಿಂದ ನನಗ್ಯಾವ ಪ್ರಯೋಜನವಿಲ್ಲ,

ಜರಾಸಂಧಾದಿಗಳ ಅಹಂ ನಾಶಕ್ಕೆ ನಿನ್ನನ್ನ ಎತ್ತಿತಂದೆನಲ್ಲ.

ಲಕ್ಷ್ಮೀನಾರಾಯಣರಾದ ತಮಗೆ ವಿಯೋಗವಿಲ್ಲ ಎಂದರಿತ ರುಗ್ಮಿಣಿ ವಿಧೇಯ ಹೆಂಡತಿಯಂತೆ,

ಲೋಕನೀತಿಗಾಗಿ ರುಗ್ಮಿಣಿ ತೋರಿಕೊಂಡಳು ತನ್ನನ್ನು ತಾನು ದುಃಖ ಪಡುತ್ತಿರುವವಳಂತೆ.

ತನ್ನ ಹೆಂಡತಿಯನ್ನು ಸಮಾಧಾನ ಪಡಿಸುತ್ತಾನೆ ಕೃಷ್ಣ ಒಬ್ಬ ಜನಸಾಮಾನ್ಯ ಗಂಡನಂತೆ.

 

ಏವಂ ಕ್ರೀಡತ್ಯಬ್ಜನಾಭೇ ರಮಾಯಾಂ ಕೃಷ್ಣಾದಿಷ್ಟೋ ಗೋಕುಲಂ ರೌಹಿಣೇಯಃ ।

ಪ್ರಾಯಾದ್ ದೃಷ್ಟ್ವಾ ತತ್ರ ನನ್ದಂ ಯಶೋದಾಂ ತತ್ಪೂಜಿತಃ ಕೃಷ್ಣವಾರ್ತ್ತಾಂ ಚ ಪೃಷ್ಟಃ ॥೨೨.೨೩೦॥

ಹೀಗೆ ಸಾಗಿತ್ತು ಲಕ್ಷ್ಮೀಸ್ವರೂಪ ರುಗ್ಮಿಣಿಯೊಂದಿಗೆ ಕೃಷ್ಣನ ಕ್ರೀಡೆ,

ಕೃಷ್ಣ ನಿರ್ದೇಶನದಂತೆ ಬಲರಾಮನದು ಗೋಕುಲದತ್ತ ನಡೆ.

ಅಲ್ಲಿ ನಂದಗೋಪ ಯಶೋದೆಯರನ್ನು ಕಂಡ,

ಅವರಿಂದ ಬಲರಾಮ ತಾನು ಸತ್ಕಾರಗೊಂಡ.

ಕೃಷ್ಣನ ಬಗ್ಗೆ ಅವರು ಹೇಳಿದ್ದನ್ನು ಕೇಳುವನಾದ.

 

ಮಾಸೌ ತತ್ರ ನ್ಯವಸದ್ ಗೋಪಿಕಾಭೀ ರೇಮೇ ಕ್ಷೀಬೋ ಯಮುನಾಮಾಹ್ವಯಚ್ಚ ।

ಮತ್ತೋsಯಮಿತ್ಯೇವ ನದೀಮನಾಗತಾಂ ಚಕರ್ಷ ರಾಮೋ ಲಾಙ್ಗಲೇನಾಗ್ರ್ಯವೀರ್ಯ್ಯಃ ॥೨೨.೨೩೧॥

ಬಲರಾಮನದು ನಂದಗೋಕುಲದಲ್ಲಿ ಎರಡು ತಿಂಗಳ ವಾಸ,

ಗೋಪಿಯರೊಡನೆ ಕ್ರೀಡಿಸುತ್ತಾ ಹಾಯಾಗಿದ್ದದ್ದು ಏನು ವಿಶೇಷ!.

ಮದೋನ್ಮತ್ತನಾದ ಬಲರಾಮ ಯಮುನಾತೀರದಿ ನಿಂತು ಯಮುನೆಯ ಕರೆದ,

ಮತ್ತಿನಲ್ಲಿರುವವನ ಮಾತ ಮನ್ನಿಸದ ಯಮುನೆಯ ನೇಗಿಲಿಂದ ತನ್ನೆಡೆಗೆ ಸೆಳೆದ.

 

ಪುನಸ್ತಯಾ ಪ್ರಣತಃ ಸಂಸ್ತುತಶ್ಚ ವ್ಯಸರ್ಜ್ಜಯತ್ ತಾಮಥ ನನ್ದಗೋಪಮ್ ।

ಆಪೃಚ್ಛ್ಯ ಚಾಗಾದ್ ದ್ವಾರಕಾಂ ಕೇಶವಾಯ ನ್ಯವೇದಯನ್ನನ್ದಗೋಪಾದಿಭಕ್ತಿಮ್             ॥೨೨.೨೩೨॥

ಆಗ ನದ್ಯಭಿಮಾನಿ ಯಮುನಾದೇವಿಯಿಂದ ನಮಸ್ಕಾರ,

ಸ್ತುತಿಸಲ್ಪಟ್ಟ ಬಲರಾಮ ಯಮುನೆಯ ಕ್ಷಮಿಸಿದ ವ್ಯಾಪಾರ.

ಆನಂತರ ಬಲರಾಮ ನಂದಗೋಪಗೆ ಹೇಳುತ್ತಾನೆ ವಿದಾಯ,

ದ್ವಾರಕೆಗೆ ಬಂದು ಕೃಷ್ಣಗೆ ಹೇಳಿದ ನಂದಾದಿಗಳ ಭಕ್ತಿ ವಿಷಯ.

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 219-226

 

ನಿಹತ್ಯ ತೌ ಕೇಶವೋ ರೌಗ್ಮಿಣೇಯಂ ಪುನರ್ವೈದರ್ಭ್ಯಾಂ ಜನಯಾಮಾಸ ಸದ್ಯಃ ।

ಸ ಚೈಕಲವ್ಯೋ ರಾಮಜಿತಃ ಶಿವಾಯ ಚಕ್ರೇ ತಪೋSಜೇಯತಾಂ ಚಾSಪ ತಸ್ಮಾತ್ ॥೨೨.೨೧೯॥

ಶ್ರೀಕೃಷ್ಣ : ಪೌಂಡ್ರಕ ವಾಸುದೇವ ಮತ್ತು ಕಾಶೀರಾಜನನ್ನು ಸೋಲಿಸಿ ಕೊಂದ,

ಆನಂತರದಲ್ಲಿ ರುಗ್ಮಿಣಿಯಲ್ಲಿ ಮಗನಾದ ಪ್ರದ್ಯುಮ್ನನನ್ನು ಹುಟ್ಟಿಸಿದ.

ಇತ್ತ ಬಲರಾಮನಿಂದ ಸೋತುಹೋದ ನಂತರ ಏಕಲವ್ಯ,

ಶಿವನ ಕುರಿತು ತಪಸ್ಸಾಚರಿಸಿ ಪಡೆದ ಅಜೇಯತ್ವದ ವರ.

 

ಸ ಶರ್ವದತ್ತೇನ ವರೇಣ ದೃಪ್ತಃ ಪುನರ್ಯೋದ್ಧುಂ ಕೃಷ್ಣಮೇವಾSಸಸಾದ ।

ತಸ್ಯಾಸ್ತ್ರಶಸ್ತ್ರಾಣಿ ನಿವಾರ್ಯ್ಯ ಕೇಶವಶ್ಚಕ್ರೇಣ ಚಕ್ರೇ ತಮಪಾಸ್ತಕನ್ಧರಮ್             ॥೨೨.೨೨೦॥

ರುದ್ರ ಕೊಟ್ಟ ವರದಿಂದಲಾದ ಏಕಲವ್ಯ ದರ್ಪಿತ,

ಮತ್ತೆ ಯುದ್ಧ ಮಾಡೆಲೆಂದು ಬಂದ ಶ್ರೀಕೃಷ್ಣನತ್ತ.

ಶ್ರೀಕೃಷ್ಣ ಅವನ ಶಸ್ತ್ರಾಸ್ತ್ರಗಳ ನಿಗ್ರಹಿಸಿದ,

ಚಕ್ರದಿಂದ ಮಾಡಿದ ಏಕಲವ್ಯನ ಶಿರಚ್ಛೇದ.

 

ಸ ಚಾSಪ ಪಾಪಸ್ತಮ ಏವ ಘೋರಂ ಕೃಷ್ಣದ್ವೇಷಾನ್ನಿತ್ಯದುಃಖಾತ್ಮಕಂ ತತ್ ।

ಏವಂ ಯದೂನಾಮೃಷಭೇಣ ಸೂದಿತೇ ಪೌಣ್ಡ್ರೇ ತಥಾ ಕಾಶಿನೃಪೇ ಚ ಪಾಪೇ             ॥೨೨.೨೨೧॥

 

ಕಾಶೀಶಪುತ್ರಸ್ತು ಸುದಕ್ಷಿಣಾಖ್ಯಸ್ತಪೋSಚರಚ್ಛಙ್ಕರಾಯೋರುಭಕ್ತ್ಯಾ ।

ಪ್ರತ್ಯಕ್ಷಗಂ ತಂ ಶಿವಂ ಪಾಪಬುದ್ಧಿಃ ಕೃಷ್ಣಾಭಾವಂ ಯಾಚತೇ ದುಷ್ಟಚೇತಾಃ             ॥೨೨.೨೨೨॥

ದುಷ್ಟ ಏಕಲವ್ಯನದು ಕೃಷ್ಣನನ್ನು ದ್ವೇಷಿಸಿದ ಪಾಪಿಷ್ಠ ಮನಸ್ಸು,

ಅದರ ಫಲವಾಗಿ ಹೊಂದಿದ ನಿತ್ಯ ದುಃಖವಾದ ಅಂಧಂತಮಸ್ಸು.

ಈ ರೀತಿಯಲ್ಲಿ ಯಾದವಶ್ರೇಷ್ಠನಾದ ಶ್ರೀಕೃಷ್ಣ,

ಪೌಂಡ್ರಕ, ಪಾಪಿಷ್ಠ ಕಾಶೀರಾಜಗಿತ್ತ ಮರಣ.

ಶಿವನ ಕುರಿತು ಭಾರೀ ತಪಸ್ಸು ಮಾಡಿದ್ದ ಕಾಶೀರಾಜನ ಮಗ ಸುದಕ್ಷಿಣ,

ಪ್ರತ್ಯಕ್ಷನಾದ ಶಿವನಲ್ಲಿ ಪಾಪಿ ಕೇಳಿದ್ದು : ನಾಶವಾಗಬೇಕೆಂದು ಶ್ರೀಕೃಷ್ಣ.

 

ಕೃತ್ಯಾಮಸ್ಮೈ ದಕ್ಷಿಣಾಗ್ನೌ ಶಿವೋSಪಿ ದೈತ್ಯಾವೇಶಾದದದಾದಾವೃತಾತ್ಮಾ ।

ಸ ದಕ್ಷಿಣಾಗ್ನಿಶ್ಚಾಸುರಾವೇಶಯುಕ್ತಃ ಸಮ್ಪೂಜಿತಃ ಕಾಶಿರಾಜಾತ್ಮಜೇನ             ॥೨೨.೨೨೩॥

 

ವರಾದುಮೇಶಸ್ಯ ವಿವೃದ್ಧಶಕ್ತಿರ್ಯ್ಯಯೌ ಕೃಷ್ಣೋ ಯತ್ರ ಸಮ್ಪೂರ್ಣ್ಣಶಕ್ತಿಃ ।

ಕೃಷ್ಣಸ್ತಸ್ಯ ಪ್ರತಿಘಾತಾರ್ತ್ಥಮುಗ್ರಂ ಸಮಾದಿಶಚ್ಛಕ್ರಮನನ್ತವೀರ್ಯ್ಯಃ             ॥೨೨.೨೨೪॥

ಸುದಕ್ಷಿಣಗೆ ವರವಿತ್ತ ಶಿವನೊಳಗಾಗಿಬಿಟ್ಟಿದ್ದ  ದೈತ್ಯಾವೇಶ,

ಆಗಲೇ ದಕ್ಷಿಣಾಗ್ನಿಯ ಕೃತ್ಯಾದೇವತೆಯನ್ನು ಕೊಟ್ಟ ವಿಶೇಷ.

ಕೃತ್ಯಾದೇವತೆ ದಕ್ಷಿಣಾಗ್ನಿಗೆ ಅಭಿಮಾನಿ ಆಗಿದ್ದ,

ಅಸುರಾವೇಶದಿಂದ ಕೃಷ್ಣನ ಕೊಲ್ಲಲು ಬಂದಿದ್ದ.

ಸದಾಶಿವನ ವರಬಲದ ಆ ಕೃತ್ಯಾಗ್ನಿಯು ಆಗ,

ಅರಸಿಕೊಂಡು ಹೊರಟಿತು ಕೃಷ್ಣನಿದ್ದ ಜಾಗ.

ಶ್ರೀಕೃಷ್ಣನು ಬಯಸಿ ಅದರ ನಾಶ,

ಸುದರ್ಶನ ಚಕ್ರಕ್ಕೆ ಕೊಟ್ಟ ಆದೇಶ.

 

ಜಾಜ್ವಲ್ಯಮಾನಂ ತದಮೋಘವೀರ್ಯ್ಯಂ ವ್ಯದ್ರಾವಯದ್ ವಹ್ನಿಮಿಮಂ ಸುದೂರಮ್ ।

ಕೃತ್ಯಾತ್ಮಕೋ ವಹ್ನಿರಸೌ ಪ್ರಧಾನವಹ್ನೇಃ ಪುತ್ರಶ್ಚಕ್ರವಿದ್ರಾವಿತೋSಥ ॥೨೨.೨೨೫॥

 

ಸಹಾನುಬನ್ಧಂ ಚ ಸುದಕ್ಷಿಣಂ ತಂ ಭಸ್ಮೀಚಕಾರಾSಶು ಸಪುತ್ರಭಾರ್ಯ್ಯಮ್ ।

ದಗ್ಧ್ವಾ ಪುರೀಂ ವಾರಣಸೀಂ ಸುದರ್ಶನಃ ಪುನಃ ಪಾರ್ಶ್ವಂ ವಾಸುದೇವಸ್ಯ ಚಾSಗಾತ್ ।

ಸುದಕ್ಷಿಣೋSಸೌ ತಮ ಏವ ಜಗ್ಮಿವಾನ್ ಕೃಷ್ಣದ್ವೇಷಾತ್ ಸಾನುಬನ್ಧಃ ಸುಪಾಪಃ ॥೨೨.೨೨೬॥

ಪ್ರಜ್ವಲಿಪ ವ್ಯರ್ಥವಾಗದಂಥ ಪೌರುಷದ ಸುದರ್ಶನ,

ದಕ್ಷಿಣಾಗ್ನಿಗೆ ಮಾಡಿಸಿತು ಬಲುದೂರಕ್ಕೆ ಪಲಾಯನ.

ಆ ಕೃತ್ಯಾಗ್ನಿಯಾಗಿದ್ದ ಪ್ರಧಾನಾಗ್ನಿಯ ಒಬ್ಬ ಪುತ್ರ,

ಅವನಿಗೊದಗಿತ್ತು ಕೃಷ್ಣನಾಶ ಮಾಡುವ ಪಾತ್ರ.

ಸುದರ್ಶನ ಚಕ್ರ ಆ ಕೃತ್ಯಾಗ್ನಿಯ ಬೆನ್ನಟ್ಟಿತ್ತು,

ಸುದಕ್ಷಿಣನನ್ನು ಸಂಸಾರಸಮೇತ ಸುಟ್ಟುಹಾಕಿತ್ತು.

ಕೃತ್ಯಾಗ್ನಿಯನ್ನು ಬೆನ್ನಟ್ಟಿ ಬಂದಿದ್ದ ಸುದರ್ಶನ ಚಕ್ರ,

ವಾರಣಾಸಿಯ ಸುಟ್ಟು ಮರಳಿತ್ತು ಕೃಷ್ಣನ ಹತ್ತಿರ.

ಈರೀತಿಯಾಗಿ ಭಗವದ್ವೇಷಿಯಾದ ಸುದಕ್ಷಿಣ ತಾನು,

ಬಂಧು ಬಾಂಧವರೊಡನೆ ಅಂಧಂತಮಸ್ಸು ಸೇರಿದನು.

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 22: 211-218

 

ರಾಮೋ ವಿಜಿತ್ಯಾತಿಬಲಂ ರಣೇ ರಿಪುಂ ಮುದೈವ ದಾಮೋದರಮಾಸಸಾದ ।

ಪೌಣ್ಡ್ರಸ್ತ್ವವಜ್ಞಾಯ ಶಿನಿಪ್ರವೀರಂ ನಿವಾರ್ಯ್ಯಮಾಣೋSಪಿ ಯಯೌ ಜನಾರ್ದ್ದನಮ್ ॥೨೨.೨೧೧॥

ಬಲರಾಮ ಬಲಿಷ್ಠ ಶತ್ರುವಾದ ಏಕಲವ್ಯನ ಗೆದ್ದ,

ಬಲು ಸಂತೋಷದಿಂದ ಶ್ರೀಕೃಷ್ಣನ ಬಳಿಗೆ ಬಂದ.

ಪೌಂಡ್ರಕ ವಾಸುದೇವಗೆ ಸಾತ್ಯಕಿಯಿಂದ ಆದರೂ ತಡೆ,

ಸಾತ್ಯಕಿಯ ತಿರಸ್ಕರಿಸಿ ಶ್ರೀಕೃಷ್ಣನ ಕಡೆಗೆ ಇತ್ತವನ ನಡೆ.

 

ತಂ ಕೇಶವೋ ವಿರಥಂ ವ್ಯಾಯುಧಂ ಚ ಕ್ಷಣೇನ ಚಕ್ರೇ ಸ ಯಯೌ ನಿಜಾಂ ಪುರೀಮ್ ।

ಪ್ರಸ್ಥಾಪಯಾಮಾಸ ಪುನಶ್ಚ ದೂತಂ ಕೃಷ್ಣಾಯೈಕೋ ವಾಸುದೇವೋSಹಮಸ್ಮಿ ॥೨೨.೨೧೨॥

 

ಮದೀಯಲಿಙ್ಗಾನಿ ವಿಸೃಜ್ಯ ಚಾsಶು ಸಮಾಗಚ್ಛೇಥಾಃ ಶರಣಂ ಮಾಮನನ್ತಮ್ ।

ತದ್ದೂತೋಕ್ತಂ ವಾಕ್ಯಮೇತನ್ನಿಶಮ್ಯ ಯದುಪ್ರವೀರಾ ಉಚ್ಚಕೈಃ ಪ್ರಾಹಸನ್ ಸ್ಮ ॥೨೨.೨೧೩॥

ಕೃಷ್ಣನಿಂದ ಪೌಂಡ್ರಕನಾದ ಕ್ಷಣ ಮಾತ್ರದಲ್ಲಿ ರಥ ಆಯುಧಹೀನ,

ಆಯುಧ ರಥಹೀನನಾದವನು ಹೊರಟ ತನ್ನ ದೇಶದತ್ತ ಪ್ರಯಾಣ.

ತನ್ನೂರಿಗೆ ಹೋದವನು ಕೃಷ್ಣಗೆ ಸಂದೇಶ ಕಳಿಸುತ್ತಾನೆ,

ಅದು ಹೀಗೆ : ನಾನೊಬ್ಬನೇ ವಾಸುದೇವ ಆಗಿರುತ್ತೇನೆ.

ಚಕ್ರ ಶಂಖ ಗದೆ ವಾಹನ ಗರುಡ ಶ್ರಿವತ್ಸ ಎಲ್ಲಾ ನನ್ನವೇ,

ನನ್ನ ಎಲ್ಲಾ ಚಿಹ್ನೆ ವಾಹನಗಳ ನೀನು ಉಪಯೋಗಿಸುತ್ತಿರುವೆ.

ಅವುಗಳನ್ನೆಲ್ಲಾ ಕೂಡಲೇ ನನಗೆ ಬಿಟ್ಟು ಕೊಟ್ಟು ಬಿಡು,

ಸಮವಿರದ ಪರಾಕ್ರಮಿಯಾದ ನನ್ನಲ್ಲಿ ಶರಣು ಹೊಂದು.

ಹೀಗಿತ್ತು ಪೌಂಡ್ರಕ ಕಳುಹಿಸಿದ ಸಂದೇಶದ ಬಗೆ,

ಕೇಳಿದ ಯಾದವರಿಂದ ಬಂತು ಗಟ್ಟಿಯಾದ ನಗೆ.

 

ಕೃಷ್ಣಃ ಪ್ರಹಸ್ಯಾSಹ ತವಾSಯುಧಾನಿ ದಾಸ್ಯಾಮ್ಯಹಂ ಲಿಙ್ಗಭೂತಾನಿ ಚಾSಜೌ ।

ಇತ್ಯುಕ್ತೋSಸೌ ದೂತ ಏತ್ಯಾSಹ ತಸ್ಮೈ ಸ ಚಾಭ್ಯಾಗಾದ್ ಯೋದ್ಧುಕಾಮೋ ಹರಿಶ್ಚ ॥೨೨.೨೧೪॥

ಶ್ರೀಕೃಷ್ಣ ಹೇಳುತ್ತಾನೆ ನಗುವಿನ ಮಧ್ಯದಲ್ಲಿ,

ಆಯುಧಗಳ ಕೊಡುವೆ ನಿನಗೆ ಯುದ್ಧದಲ್ಲಿ.

ಸಂದೇಶ ಹೊತ್ತ ದೂತ ಪೌಂಡ್ರಕನ ತಲುಪಿದ,

ಅವನಿಗೆ ಕೃಷ್ಣ ಹೇಳಿದ್ದೆಲ್ಲವನ್ನೂ ವರದಿಮಾಡಿದ.

ಪೌಂಡ್ರಕ ಕೃಷ್ಣನ ಮೇಲೆ ಯುದ್ಧಕೆ ಬಂದ,

ಕೃಷ್ಣ ಕೂಡಾ ಯುದ್ಧಕೆ ಸಿದ್ಧನಾಗಿ ನಿಂದ.

 

ತಂ ಶಾತಕೌಮ್ಭೇ ಗರುಡೇ ರಥಸ್ಥೇ ಸ್ಥಿತಂ ಚಕ್ರಾದೀನ್ ಕೃತ್ರಿಮಾನ್ ಸನ್ದಧಾನಮ್ ।

ಶ್ರೀವತ್ಸಾರ್ತ್ಥೇ ದಗ್ಧವಕ್ಷಸ್ಥಲಂ ಚ ದೃಷ್ಟ್ವಾ ಕೃಷ್ಣಃ ಪ್ರಾಹಸತ್ ಪಾಪಬುದ್ಧಿಮ್ ॥೨೨.೨೧೫॥

ರಥದ ಮೇಲಿಟ್ಟಿದ್ದ ಕೃತಕ ಬಂಗಾರದ ಗರುಡನ ಮೇಲೇರಿ,

ಕೃತಕ ಚಿಹ್ನೆ ತೋಳುಗಳನ್ನು ಧರಿಸಿದ ಪೌಂಡ್ರಕನ ಸವಾರಿ.

ಶ್ರಿವತ್ಸ ಚಿಹ್ನೆಗಾಗಿ ತನ್ನ ಎದೆ ಸುಟ್ಟುಕೊಂಡಿದ್ದ ಬಗೆ,

ಪಾಪಿಷ್ಠ ಬುದ್ಧಿಯವನ ಕಂಡು ಕೃಷ್ಣಗೆ ಬಂತು ನಗೆ.

 

ತತೋsಸ್ತ್ರಶಸ್ತ್ರಾಣ್ಯಭಿವರ್ಷಮಾಣಂ ವಿಜಿತ್ಯ ತಂ ವಾಸುದೇವೋSರಿಣೈವ ।

ಚಕರ್ತ್ತ ತತ್ಕನ್ಧರಂ ತಸ್ಯ ಚಾನು ಮಾತಾಮಹಸ್ಯಾಚ್ಛಿನತ್ ಸಾಯಕೇನ ॥೨೨.೨೧೬॥

ಅಸ್ತ್ರ ಶಸ್ತ್ರಗಳ ಮಳೆಗರೆಯುತ್ತಿದ್ದ ಪೌಂಡ್ರಕ ವಾಸುದೇವ,

ಅವನ ಗೆದ್ದು ಮತ್ತವನ ತಲೆ ತೆಗೆದ ಶ್ರೀಕೃಷ್ಣ ವಾಸುದೇವ.

ಆನಂತರ ಅವನ ತಾತನ ತಲೆಯನ್ನೂ ತೆಗೆದ ಕೃಷ್ಣದೇವ.

 

ಅಪಾತಯಚ್ಚಾSಶು ಶಿರಃ ಸ ತೇನ ಕಾಶೀಶ್ವರಸ್ಯೇಶ್ವರೋ ವಾರಣಸ್ಯಾಮ್ ।

ಸ ಚ ಬ್ರಹ್ಮಾಹಂ ವಾಸುದೇವೋSಸ್ಮಿ ನಿತ್ಯಮಿತಿ ಜ್ಞಾನಾದಗಮತ್ ತತ್ ತಮೋSನ್ಧಮ್ ॥೨೨.೨೧೭॥

ಶ್ರೀಕೃಷ್ಣ ಕಾಶೀರಾಜನ ತಲೆಯ ಬಾಣದಿಂದ ಹೊಡೆದ,

ಅದು ಹಾರಿ ವಾರಣಾಸಿಯಲ್ಲಿ ಬೀಳುವಂತೆ ಮಾಡಿದ.

ನಾನೇ ಬ್ರಹ್ಮ, ನಾನೇ ವಾಸುದೇವ ಎಂದಿತ್ತು ಅವನ ಪರಿ,

ಅಂಥವನಿಗೆ ಶ್ರೀಕೃಷ್ಣ ತೋರಿದ ಅಂಧಂತಮಸ್ಸಿನ ದಾರಿ.

 

ಸಹಾಯ್ಯಕೃಚ್ಚಾಸ್ಯ ಚ ಕಾಶಿರಾಜೋ ಯಥೈವ ಕಿರ್ಮ್ಮೀರಹಿಡಿಮ್ಬಸಾಲ್ವಾಃ ।

ಅನ್ಯೇ ಚ ದೈತ್ಯಾ ಅಪತಂಸ್ತಮೋSನ್ಧೇ ತಥೈವ ಸೋSಪ್ಯಪತತ್ ಪಾಪಬುದ್ಧಿಃ ॥೨೨.೨೧೮॥

ಹೀಗೆ ಕಿರ್ಮೀರ, ಹಿಡಿಂಬ, ಸಾಲ್ವ ಇತ್ಯಾದಿ ದೈತ್ಯರುಗಳು ಸೇರಿದರು ಅಂಧಂತಮಸ್ಸು,

ದೈವವಿರೋಧಿ ಪೌಂಡ್ರಕಗೆ ಸಹಾಯಕನಾದ ಕಾಶೀರಾಜಗೂ ಅಲ್ಲಿಗೆ ಕಳಿಸಿತ್ತು ದೈವ ಸಲೀಸು.