ಹನುಮಂತನ ಬಗೆಗೆ, ತಾಯಿ ಸೀತಾದೇವಿಯ ಅಭಿಪ್ರಾಯ :
ಈಗ್ಗೆ ಕೆಲವು ದಿನಗಳ ಹಿಂದೆಯಷ್ಟೇ, ರಾಮಾಯಣದ ಕಿಷ್ಕಿಂದಾಕಾಂಡದ ಒಂದು ಪ್ರಸಂಗದಲ್ಲಿ ಪ್ರಭು ರಾಮಚಂದ್ರ, ಹನುಮಂತನ "ಸಂವಹನ ಕೌಶಲ್ಯದ ಬಗೆಗೆ" ಕೊಂಡಾಡಿದ್ದನ್ನು ನಾವೆಲ್ಲ ನೋಡಿದ್ದೇವೆ. ಇದೀಗ, ಮತ್ತೊಂದು ಮುಖದಿಂದ ಸುಂದರಕಾಂಡದ ಪ್ರಸಂಗವನ್ನೊಮ್ಮೆ ನೋಡೋಣ ... ಇಲ್ಲಿ ಹನುಮಂತನನ್ನು ಎದುರಾಗುವ ದೇಶ-ಕಾಲಗಳು ಬೇರೆ ಬೇರೆ, ಸಂಪರ್ಕಿಸಿದ ಪ್ರಸಂಗ ಹಾಗು ವ್ಯಕ್ತಿಗಳು ಕೂಡ ಬೇರೆ ಬೇರೆ, ಆದರೆ ಹನುಮಂತನ ಬಗೆಗಿನ ಅಭಿಪ್ರಾಯ ಮಾತ್ರ ಬೇರೆಯಲ್ಲ.
ತ್ವಾಂ ದೃಷ್ಟ್ವಾ ಪ್ರಿಯವಕ್ತಾರಂ ಸಂಪ್ರಹೃಷ್ಯಾಮಿ ವಾನರ ।
ಅರ್ಧಸಂಜಾತಸ್ಯೇವ ವೃಷ್ಟಿಂ ಪ್ರಾಪ್ಯ ವಸುಂಧರಾ ॥ ೫-೪೦-೨ ॥
ವಾನರ = ಓ ಹನುಮಂತನೇ !
ತ್ವಾಂ ದೃಷ್ಟ್ವಾ = ನಿನ್ನನ್ನು ನೋಡಿ ;
ಪ್ರಿಯವಕ್ತಾರಂ = ನಿನ್ನ ಆಪ್ಯಾಯಮಾನವಾದ ಮಾತುಗಳನ್ನು ಕೇಳಿ ;
ಸಂಪ್ರಹೃಷ್ಯಾಮಿ = ನಾನು ಆನಂದ ಪರವಶಳಾಗಿದ್ದೇನೆ ;
ಅರ್ಧಸಂಜಾತಸ್ಯೇವ = ಆಗಷ್ಟೇ ಬೀಜ ಮೊಳಕೆಯೊಡೆದು ಭೂಮಿಯಿಂದ ಟಿಸಿಲೊಡೆದು ಬಂದಂಥ ಎಳೆ ಬೆಳೆಗೆ ;
ವೃಷ್ಟಿಂ ಪ್ರಾಪ್ಯ ವಸುಂಧರಾ = ಧರೆಗಿಳಿದ ಮಳೆ ಸಂತಸವನ್ನೀಯುವಂತೆ (ನಿನ್ನ ಮಾತು ಆನಂದ ತಂದಿದೆ)....
ಸೀತೆ ಹೇಳಿದ ಮಾತಿದು :
"ಓ ಹನುಮಂತನೇ! ನಿನ್ನನ್ನು ಕಂಡು, ನಿನ್ನ ಮಧುರವಾದ ಮಾತುಗಳನ್ನು ಕೇಳಿ, ನನ್ನಲ್ಲಿ ಹೇಳಲಾರದಷ್ಟು ಸಂತೋಷ ಉಕ್ಕಿಬರುತ್ತಿದೆ ... ಅದು ಮಳೆಯ ಸಿಂಚನದಿಂದ, ಅರ್ಧ ಮೊಳಕೆಯೊಡೆದ ಚಿಗುರಿನ ಮೇಲೆ ಮೂಡಿಬರುವ ಸಂತೋಷದ ಅಲೆಗಳ ಹಾಗೆ ....”
* * *
Sometime back, we discussed the communication skills of Hanumān, as expressed by Lord Śrī Rāma in Kiśkindha Kāṅḍa. Here’s a view from Sundara Kāṅḍa. The countries are different, scenario is different, Hanumān’s viewers (judges) are different, but the opinion is undivided!
त्वां दृष्ट्वा प्रियवक्तारं संप्रहृष्यामि वानर |
अर्ध सम्जात सस्य इव वृष्टिं प्राप्य वसुंधरा || ५-४०-२ ||
Tvāṁ dr̥ṣṭvā priyavaktāraṁ saṁprahr̥ṣyāmi vānara |
ardha samjāta sasya iva vr̥ṣṭiṁ prāpya vasuṁdharā || 5-40-2 ||
वानर (vānara) = O Hanumān!;
दृष्ट्वा (dr̥ṣṭvā) = seeing;
त्वां (tvāṁ) = you;
प्रियवक्तारं (priyavaktāraṁ) = utter pleasant words;
संप्रहृष्यामि (saṁprahr̥ṣyāmi) = I am overjoyed;
वसुंधरा इव (vasuṁdharā iva) = as a field;
अर्ध सम्जात सस्य (ardha samjāta sasya) = with half-sprouted crop of grain; (is over-joyed);
प्राप्य इव (prāpyēva) = on receiving;
वृष्टिं (vr̥ṣṭiṁ) = a shower of rain.
"O Hanumān! Seeing you, and listening to your pleasant words, I am as unbounded with joy as a field jostling with half-sprouted crop of grain, that is exhilarated on receiving a shower of rain."
(Contributors: Shri Harish B S Kannada/ Shri Prasad B S English/ Devanagari)