Wednesday, 22 November 2017

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 52 - 55

ಸ್ಕಾನ್ದೇsಪ್ಯುಕ್ತಂ ಶಿವೇನೈವ ಷಣ್ಮುಖಾಯೈವ ಸಾದರಮ್ ।
ಶಿವಶಾಸ್ತ್ರೇsಪಿ ತದ್ ಗ್ರಾಹ್ಯಂ ಭಗವಚ್ಛಾಸ್ತ್ರಯೋಗಿ ಯತ್ ॥೧.೫೨॥

‘ಪರಮೋ ವಿಷ್ಣುರೇವೈಕಸ್ತಜ್ಜ್ಞಾನಂ ಮೋಕ್ಷಸಾಧನಮ್ ।
‘ಶಾಸ್ತ್ರಾಣಾಂ ನಿರ್ಣಯಸ್ತ್ವೇಷ ತದನ್ಯನ್ಮೋಹನಾಯ ಹಿ ॥೧.೫೩॥

‘ಜ್ಞಾನಂ ವಿನಾ ತು ಯಾ ಮುಕ್ತಿಃ ಸಾಮ್ಯಂ ಚ ಮಮ ವಿಷ್ಣುನಾ ।
‘ತೀರ್ಥಾದಿಮಾತ್ರತೋ ಜ್ಞಾನಂ ಮಮಾsಧಿಕ್ಯಂ ಚ ವಿಷ್ಣುತಃ ॥೧.೫೪॥

‘ಅಭೇದಶ್ಚಾಸ್ಮದಾದೀನಾಂ ಮುಕ್ತಾನಾಂ ಹರಿಣಾ ತಥಾ ।
‘ಇತ್ಯಾದಿ ಸರ್ವಂ ಮೋಹಾಯ ಕಥ್ಯತೇ ಪುತ್ರ ನಾನ್ಯಥಾ’ ॥೧.೫೫॥

ಸ್ಕಂದಪುರಾಣದಲ್ಲಿ ಶಿವನಿಂದ ಷಣ್ಮುಖಗೆ ಹೇಳಿದ ವಾಕ್ಯ,
ಆದರದಿಂದ ತಂದೆ ಮಗನಿಗೆ ಹೇಳಿದ್ದೇ-ಆಚಾರ್ಯರಿಂದ ಉಲ್ಲೇಖ,
ಇದು ಪ್ರೀತಿಯ ತಂದೆ ಮಗನ ಮಧ್ಯದ ಸಂಭಾಷಣೆ,
ಇಲ್ಹೇಗೆ ಬಂದೀತು ದಾರಿತಪ್ಪಿಸುವ ಸುಳ್ಳು ಧೋರಣೆ,
ಸ್ಕಂದಪುರಾಣ ಶಿವನನ್ನು ಎತ್ತಿ ಹೇಳುವ ಶಾಸ್ತ್ರ,
ಶಿವನೇ ಮಾಡುತ್ತಾನೆ ಹರಿಸರ್ವೋತ್ತಮತ್ವದ ಸ್ತೋತ್ರ,
ರುದ್ರನೇ ಹೇಳುತ್ತಾನೆ ನಾರಾಯಣನೊಬ್ಬನೇ ಸರ್ವೋತ್ತಮ,
ಆ ಜ್ಞಾನ ಸಾಕಾರವಾದಾಗಲೇ ಲಭ್ಯ ಮೋಕ್ಷದ ಧಾಮ,
ಇದೇ ಶಾಸ್ತ್ರದ ಪರಮ ಪವಿತ್ರವಾದ ಗುಟ್ಟು,
ಉಳಿದುದೆಲ್ಲಾ ಮೋಹನಾರ್ಥ -ವಿಷ್ಣುಪಾರಮ್ಯ ಬಿಟ್ಟು.

ಶಿವ ಕೊಡುತ್ತಾನೆ ಮೋಹನಕ್ಕಾಗಿ ಶಾಸ್ತ್ರದಲ್ಲಿ ಹೇಳಿದ ಪಟ್ಟಿ,
ಜ್ಞಾನವಿಲ್ಲದೇ ಮುಕ್ತಿ ಸಾಧ್ಯವೆಂಬುದು -ಮೋಹಕವದು ಗಟ್ಟಿ,
ಎಲ್ಲಾದರೂ ಹೇಳಿದ್ದರೆ ಶಿವ-ನಾರಾಯಣರಿಗೆ ಸಾಮ್ಯತೆ,
ಅದೂ ಕೂಡಾ ಅಸುರ ಮೋಹನಾರ್ಥ ಹೇಳಿದ ಕತೆ,
ಪುಣ್ಯತೀರ್ಥದ ಸ್ನಾನದಿಂದ ಜ್ಞಾನ,
ಸುಳ್ಳು ಹೇಳಿದ್ದದು -ದೈತ್ಯ ಮೋಹನ,
ನಾನು(ಶಿವ) ಬ್ರಹ್ಮ ವಿಷ್ಣು -ಮೂವರಲ್ಲಿ ಅಭೇದ,
ಅಯೋಗ್ಯರಿಗೆ ಹೇಳಿದ ಪ್ರಭೇದ-ನಂಬಿದರೆ ಪ್ರಮಾದ,
ಶಿವ ಷಣ್ಮುಖನ ಮಗನೇ ಎಂದು ಕರೆದ ರೀತಿ,

ದಾರಿ ತಪ್ಪದಿರಲಿ ಎಂದ್ಹೇಳಿದ ಕಳಕಳಿಯ ನೀತಿ.
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 48 51

‘ಏಷ ಮೋಹಂ ಸೃಜಾಮ್ಯಾಶು ಯೋ ಜನಾನ್ ಮೋಹಯಿಷ್ಯತಿ ।
‘ತ್ವಂ ಚ ರುದ್ರ ಮಹಾಬಾಹೋ ಮೋಹಶಾಸ್ತ್ರಾಣಿಕಾರಯ ॥೧.೪೮॥

‘ಅತಥ್ಯಾನಿ ವಿತಥ್ಯಾನಿ ದರ್ಶಯಸ್ವ ಮಹಾಭುಜ ।
‘ಪ್ರಕಾಶಂ ಕುರು ಚಾsತ್ಮಾನಮಪ್ರಕಾಶಂ ಚ ಮಾಂ ಕುರು’ ॥೧.೪೯॥

ಇತಿ ವಾರಾಹವಚನಂ ಬ್ರಹ್ಮಾಣ್ಡೋಕ್ತಂ ತಥಾsಪರಮ್ ।
‘ಅಮೋಹಾಯ ಗುಣಾ ವಿಷ್ಣೋರಾಕಾರಶ್ಚಿಚ್ಛರೀರತಾ ॥೧.೫೦॥
‘ನಿರ್ದೋಷತ್ವಂ ತಾರತಮ್ಯಂ ಮುಕ್ತಾನಾಮಪಿ ಚೋಚ್ಯತೇ ।
‘ಏತದ್ವಿರುದ್ಧಂ ಯತ್ ಸರ್ವಂ ತನ್ಮೋಹಾಯೇತಿ ನಿರ್ಣಯಃ’ ॥೧.೫೧॥

ಅಯೋಗ್ಯ ಜನರಿಗೆ ಮೋಹ ಸೃಷ್ಟಿಸುವ ಉದ್ದೇಶ,
ತಾತ (ಹರಿ) ನಿಂದ ಮೊಮ್ಮಗಗೆ (ಶಿವ) ಆದೇಶ,
ನಾನು ಮಾಡುತ್ತೇನೆ ಮೋಹಶಾಸ್ತ್ರದ ರಚನೆ,
ನೀನೂ ಮಾಡಿ ಮಾಡಿಸು ಅಂಥದೇ ಪ್ರತಿಪಾದನೆ.

(ಹರಿಯಿಚ್ಛೆಯಂತೆ ಸದಾಶಿವನ ಪ್ರೇರಣೆಯಿಂದ ಪಾಶುಪತಾಗಮನ -ರುದ್ರ ಶಿಷ್ಯ ದಧೀಚಿ ವಾಮದೇವರಿಂದ ಮೋಹ ಶಾಸ್ತ್ರ ಪ್ರಸರಣ)

ಮಹಾಭುಜ ,ನಿಜ ನುಡಿಯದೇ-ಸುಳ್ಳು ದಾರಿಯ ತೋರು,
ನೀನೇ(ಶಿವನೇ)ಸರ್ವೋತ್ತಮನೆಂದು ಇಲ್ಲದ ಗುಣಗಳ ಬೀರು,
ನಿನ್ನನ್ನು ಮೆರೆಸಿಕೊಂಡು ನನ್ನನ್ನು(ವಿಷ್ಣು)ಮರೆಸು,
ವಿಷ್ಣು ನಿರ್ಗುಣನೆಂದು ಗುಣಪೂರ್ಣನಲ್ಲೆಂದು ಸುಳ್ಳ ಮಳೆ ಸುರಿಸು.

ಈ ತರಹದ ಸಂದೇಶ ವರಾಹ ಪುರಾಣದಲ್ಲಿ ಲಭ್ಯ,
ಪದ್ಮಪುರಾಣದ ಉತ್ತರಖಂಡ ಶ್ಲೋಕದಲ್ಲಿ ಶಿವನೇ "ಸಭ್ಯ",
ವಿಷ್ಣುವಿನ ವಿಶೇಷ ಗುಣ ಅದ್ಭುತ ಆಕಾರ,
ಚಿನ್ಮಯ ಶರೀರನೆಂದು ಬ್ರಹ್ಮಾಂಡಪುರಾಣದಲ್ಲಿ ಸಾಕಾರ.

ನಾರಾಯಣ ರೂಪವಂತ ಗುಣವಂತ,
ದೋಷದೂರ ಜ್ಞಾನವೇ ಮೈವೆತ್ತಾತ,
ತಾರತಮ್ಯವದು ಉಂಟು ಮುಕ್ತರಲ್ಲಿ,
ಇದೆಲ್ಲ ಹೇಳಿದೆ ಬ್ರಹ್ಮಾಂಡ ಪುರಾಣದಲ್ಲಿ,
ಪ್ರಬಲವಾಗಿ ಕಾಣುವ ಸ್ಪಷ್ಟ ಯಥಾರ್ಥ ಜ್ಞಾನ,

ವಿರುದ್ಧ ಹೇಳುವ ಅಂಶವೆಲ್ಲವೂ ಅನ್ಯಥಾಜ್ಞಾನ.
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 1: 43 -47

‘ಯಥಾರ್ಥವಚನಾನಾಂ ಚ ಮೋಹಾರ್ಥಾನಾಂ ಚ ಸಂಶಯಮ್ ।
‘ಅಪನೇತುಂ ಹಿ ಭಗವಾನ್ ಬ್ರಹ್ಮಸೂತ್ರಮಚೀಕ್ಲೃಪತ್ ॥೧.೪೩॥

‘ತಸ್ಮಾತ್ ಸೂತ್ರಾರ್ಥಮಾಗೃಹ್ಯ ಕರ್ತವ್ಯಃ ಸರ್ವನಿರ್ಣಯಃ ।
‘ಸರ್ವದೋಷವಿಹೀನತ್ವಂ ಗುಣೈಃ ಸರ್ವೈರುದೀರ್ಣತಾ ॥೧.೪೪॥

‘ಅಭೇದಃ ಸರ್ವರೂಪೇಷು ಜೀವಭೇದಃ ಸದೈವ ಚ ।
‘ವಿಷ್ಣೋರುಕ್ತಾನಿ ಸೂತ್ರೇಷು ಸರ್ವವೇದೇಡ್ಯತಾ ತಥಾ ॥೧.೪೫॥

‘ತಾರತಮ್ಯಂ ಚ ಮುಕ್ತಾನಾಂ ವಿಮುಕ್ತಿರ್ವಿದ್ಯಯಾ ತಥಾ ।
‘ತಸ್ಮಾದೇತದ್ವಿರುದ್ಧಂ ಯನ್ಮೋಹಾಯ ತದುದಾಹೃತಮ್ ॥೧.೪೬॥

‘ತಸ್ಮಾದ್ ಯೇಯೇ ಗುಣಾ ವಿಷ್ಣೋರ್ಗ್ರಾಹ್ಯಾಸ್ತೇ ಸರ್ವ ಏವ ತು ।
ಇತ್ಯಾದ್ಯುಕ್ತಂ ಭಗವತಾ ಭವಿಷ್ಯತ್ಪರ್ವಣಿ ಸ್ಫುಟಮ್ ॥೧.೪೭॥

ಕೆಲ ವೇದದ ಮಾತುಗಳವು ಯಥಾರ್,
ಮತ್ತೆ ಕೆಲವು ಮಾತುಗಳು ಮೋಹನಾರ್ಥ,
ವ್ಯಾಸರು ಕೊಟ್ಟ ಸಂಶಯ ನಿವಾರಕ -ಬ್ರಹ್ಮಸೂತ್ರ,
ಸಮೀಕರಿಸುವುದು ದೋಷದೂರ ಗುಣಪೂರ್ಣನ ಪಾತ್ರ.

ದೇವರು ಯಾವ ದೋಷಗಳೂ ಇರದಾತ,
ಎಲ್ಲಾ ಗುಣಗಳಿಂದಲೇ ಪರಿಪೂರ್ಣನಾತ,
ಅವನೇ ಎಲ್ಲರ ಅಂತರ್ಯಾಮಿಯಾಗಿರುವ,
ಅನಂತ ಅವತಾರಗಳ ಸ್ವಾಮಿ ತಾನಾಗಿರುವ,
ಅಂತರ್ಯಾಮಿತ್ವದಲ್ಲೂ ಅವತಾರದಲ್ಲೂ ಭೇದವಿರದಾತ,
ತನ್ನಾಮ ತದ್ರೂಪಗಳಲ್ಲಿದ್ದರೂ ಅದ್ವಿತೀಯ ತಾನೇ ತಾನಾತ.

ಮುಕ್ತರಲ್ಲೂ ಉಂಟೇ ಉಂಟು ತಾರತಮ್ಯದ ನೀತಿ,
ಸೂತ್ರ ಸಾರುತ್ತದೆ-ಭಗವಂತನ ಅಪರೋಕ್ಷಜ್ಞಾನದಿಂದಲೇ ಮುಕ್ತಿ,
ಇದಕ್ಕೆ ವಿರುದ್ಧವಾಗಿ ಕಾಣುವದೆಲ್ಲಾ ಮೋಹನಾರ್ಥ,
ವೇದ-ಸೂತ್ರಕ್ಕನುಗುಣವಾಗಿರುವುದೆಲ್ಲ ಸ್ವೀಕಾರಾರ್ಹ ಶಾಸ್ತ್ರಾರ್ಥ,
ಹರಿವಂಶದ ಭವಿಷ್ಯತ್ ಪರ್ವದಲ್ಲಿದೆ ಇದರ ಸ್ಪಷ್ಟತೆ,
ಎಲ್ಲಾ ಕೋನಗಳಿಂದ ಸಮೀಕರಿಸಬೇಕವನ ಸಾರ್ವಭೌಮತೆ.
[Contributed by Shri Govind Magal]