Friday, 7 December 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 111 - 115

ಸ್ಥೂಣಾಕರ್ಣ್ಣಾಭಿಧೇಯಸ್ತಾಮಪಶ್ಯದ್ ದೃಢಕರ್ಣ್ಣತಃ ।
ಸ ತಸ್ಯಾ ಅಖಿಲಂ ಶ್ರುತ್ವಾ ಕೃಪಾಂ ಚಕ್ರೇ ಮಹಾಮನಾಃ  ॥೧೧.೧೧೧॥

ಗಟ್ಟಿ ಕಿವಿಯುಳ್ಳವನಾದ್ದರಿಂದ ಸ್ಥೂಣಾಕರ್ಣಾ ಎಂಬ್ಹೆಸರಿನ ಆ ತುಂಬುರು ಗಂಧರ್ವ,
ಶಿಖಂಡಿನೀ ಬರುವುದ ಕಂಡು ಎಲ್ಲ ಕೇಳಿ ತಿಳಿದು ತೋರಿದ ಅವಳಿಗೆಂದೇ ಕರುಣೆ ಔದಾರ್ಯ.

ಸ ತಸ್ಯೈ ಸ್ವಂ ವಪುಃ ಪ್ರಾದಾತ್ ತದೀಯಂ ಜಗೃಹೇ ತಥಾ ।
ಅಂಶೇನ ಪುಂಸ್ವಭಾವಾರ್ತ್ಥಂ ಪೂರ್ವದೇಹೇ ಸಮಾಸ್ಥಿತಃ  ॥೧೧.೧೧೨॥
ಪುಂಸಾಂ ಸ್ತ್ರೀತ್ವಂ ಭವೇತ್ ಕ್ವಾಪಿ ತಥಾsಪ್ಯನ್ತೇ ಪುಮಾನ್ ಭವೇತ್ ।
ಸ್ತ್ರೀಣಾಂ ನೈವ ಹಿ ಪುಂಸ್ತ್ವಂ ಸ್ಯಾದ್ ಬಲವತ್ಕಾರಣೈರಪಿ  ॥೧೧.೧೧೩॥
ಅತಃ ಶಿವವರೇsಪ್ಯೇಷಾ ಜಜ್ಞೇ ಯೋಷೈವ ನಾನ್ಯಥಾ ।
ಪಶ್ಚಾತ್ ಪುಂದೇಹಮಪಿ ಸಾ ಪ್ರವಿವೇಶೈವ ಪುಂಯುತಮ್ ॥೧೧.೧೧೪॥
ನಾಸ್ಯಾ ದೇಹಃ ಪುಂಸ್ತ್ವಮಾಪ ನಚ ಪುಂಸಾsನಧಿಷ್ಠಿತೇ ।
ಪುಂದೇಹೇ ನ್ಯವಸತ್ ಸಾsಥ ಗನ್ಧರ್ವೇಣ ತ್ವಧಿಷ್ಠಿತಮ್  ॥೧೧.೧೧೫॥

ತುಂಬುರು ಶಿಖಂಡಿನೀಗೆ ತನ್ನ ದೇಹ ಕೊಟ್ಟ,
ಶಿಖಂಡಿನೀಯ ದೇಹವನ್ನು ತಾನೇ ತೊಟ್ಟ.
ಆದೇಹದ ಪುಂಸ್ವಭಾವಕ್ಕೆ ಅಲ್ಲಿ ತನ್ನೊಂದಂಶ ಇಟ್ಟ.
ಏಕೆ ತುಂಬುರು ಆದೇಹದಿ ಅಧಿಷ್ಠಿತನಾದನೆಂಬುದಕ್ಕೆ ಆಚಾರ್ಯರಿಂದ ವಿವರಣೆ,
ಗಂಡಿಗೆ ಸ್ತ್ರೀತ್ವ ಬಂದೀತು;ಮುಕ್ತಿಕಾಲದಲ್ಲವ ಗಂಡೇ, ಇಲ್ಲ ಹೆಣ್ಣು ಗಂಡಾದುದಾಹರಣೆ.
ಹೀಗಾಗಿ ಶಿವನ ವರವಿದ್ದರೂ ಹೆಣ್ಣೇ ಆದಳವಳು  ಶಿಖಂಡಿನೀ,
ತುಂಬುರು ಒಂದಂಶದಿಂದ ಇದ್ದ ದೇಹವ ಹೊಕ್ಕಳು ಶಿಖಂಡಿನೀ.
ಅವಳ ದೇಹದಲ್ಲಿ ಆಗಲಿಲ್ಲ ಗಂಡಾಗುವ ಪರಿವರ್ತನೆ,
ಗಂಡು ಅಧಿಷ್ಠಿತವಿರದ ಗಂಡುದೇಹದಲ್ಲಿರಲು ನಿರ್ಬಂಧನೆ.
ಗಂಡುದೇಹದಿ ಗಂಡಧಿಷ್ಠಿತ ದೇಹವಾಯ್ತು ಅವಳಮನೆ.
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 103 - 110

ಏತಸ್ಮಿನ್ನೇವ ಕಾಲೇ ತು ಸುತಾರ್ತ್ಥಂ ದ್ರುಪದಸ್ತಪಃ ।
ಚಕಾರ ಶಮ್ಭವೇ ಚೈನಂ ಸೋsಬ್ರವೀತ್ ಕನ್ಯಕಾ ತವ    ॥೧೧.೧೦೩॥
ಭೂತ್ವಾ ಭವಿಷ್ಯತಿ ಪುಮಾನಿತಿ ಸಾsಮ್ಬಾ ತತೋsಜನಿ ।
ನಾಮ್ನಾ ಶಿಖಣ್ಡಿನೀ ತಸ್ಯಾಃ ಪುಂವತ್ ಕರ್ಮ್ಮಾಣಿ ಚಾಕರೋತ್ ॥೧೧.೧೦೪॥

ದ್ರುಪದರಾಜ ಮಕ್ಕಳ ಬಯಸಿ ರುದ್ರದೇವನ ಕುರಿತು ತಪೋನಿರತನಾಗಿದ್ದ,
ರುದ್ರ-ದ್ರುಪದಗೆ ಹೆಣ್ಣಾಗಿ ಹುಟ್ಟಿ ಗಂಡಾಗುತ್ತಾಳೆಂದು ವರವ ತಾನು ನೀಡಿದ್ದ.
ಶಿವನ ವರದಂತೆ ಅಂಬೆಯೇ ಶಿಖಂಡಿನೀಯಾಗಿ ದ್ರುಪದನಲ್ಲಿ ಹುಟ್ಟು,
ಪಾಂಚಾಲರಾಜ ಆಕೆಗೆ ಗಂಡುಮಗುವಿನಂತೆ ಸಂಸ್ಕಾರವಿತ್ತು ಸಾಕಿದ ಗುಟ್ಟು. 

ತಸ್ಯೈ ಪಾಞ್ಚಾಲರಾಜಃ ಸ ದಶಾರ್ಣ್ಣಾಧಿಪತೇಃ ಸುತಾಮ್ ।
ಉದ್ವಾಹಯಾಮಾಸ ಸಾ ತಾಂ ಪುಂವೇಷೇಣೈವ ಗೂಹಿತಾಮ್   ॥೧೧.೧೦೫॥

ಗಂಡಿನವೇಷದಿಂದ ಮುಚ್ಚಲ್ಪಟ್ಟ ಶಿಖಂಡಿನೀಗೆ ರಾಜ  ದ್ರುಪದ,
ದಶಾರ್ಣರಾಜ ಹಿರಣ್ಯವರ್ಮನ ಮಗಳೊಂದಿಗೆ ಮದುವೆ ಮಾಡಿದ.

ಅನ್ಯತ್ರ ಮಾತಾಪಿತ್ರೋಸ್ತು ನ ವಿಜ್ಞಾತಾಂ ಬುಬೋಧ ಹ ।
ಧಾತ್ರ್ಯೈನ್ಯವೇದಯತ್ ಸಾsಥ ತತ್ಪಿತ್ರೇ ಸಾ ನ್ಯವೇದಯತ್   ॥೧೧.೧೦೬॥

ತಂದೆ ತಾಯಿಯರಿಗೆ ಮಾತ್ರ ತಿಳಿದಿತ್ತು ಶಿಖಂಡಿನೀ ಹೆಣ್ಣೆಂಬ ಗುಟ್ಟು,
ಮದುವೆನಂತರ ದಶಾರ್ಣರಾಜನ ಮಗಳಿಗಾಗುತ್ತದೆ ವಿಷಯ ರಟ್ಟು.
ಅವಳಿಂದ ತನ್ನ ಸಾಕುತಾಯಿಗೆ ಆಗುತ್ತದೆ ವಿಷಯ ರವಾನೆ,
ಸ್ವಲ್ಪಕಾಲಾನಂತರ ಸಾಕುತಾಯಿಂದ ರಾಜಗಾಗುತ್ತದೆ ಸ್ಪಷ್ಟನೆ.

ಸ ಕ್ರುದ್ಧಃ ಪ್ರೇಷಯಾಮಾಸ ನಿಹನ್ಮಿ ತ್ವಾಂ ಸಬಾನ್ಧವಮ್ ।
ಇತಿ ಪಾಞ್ಚಾಲರಾಜಾಯ ನಿರ್ಜ್ಜಗಾಮ ಚ ಸೇನಯಾ   ॥೧೧.೧೦೭॥

ವಿಷಯ ತಿಳಿದ ಹಿರಣ್ಯವರ್ಮರಾಜ ತಾನು  ಕೋಪದಿಂದ,
ನಿನ್ನ ಬಂಧುಗಳ ಸಹಿತ ಕೊಲ್ಲುವೆನೆಂಬ ಸಂದೇಶ ಕಳಿಸಿದ.
ಸೇನೆಯೊಡಗೂಡಿ ಯುದ್ಧಕ್ಕೆ ಸಿದ್ಧನಾಗಿ ಹೊರಡುವವನಾದ.

ವಿಶ್ವಸ್ಯ ವಾಕ್ಯಂ ರುದ್ರಸ್ಯ ಪುಮಾನೇವೇತಿ ಪಾರ್ಷತಃ ।
ಪ್ರೇಷಯಾಮಾಸ ಧಿಗ್ ಬುದ್ಧಿರ್ಭಿನ್ನಾ ತೇ ಬಾಲವಾಕ್ಯತಃ  ॥೧೧.೧೦೮॥
ಅಪರೀಕ್ಷಕಸ್ಯ ತೇ ರಾಷ್ಟ್ರಂ ಕಥಮಿತ್ಯೇವ ನರ್ಮ್ಮಕೃತ್ ।
ಅಥ ಭಾರ್ಯ್ಯಾಸಮೇತಂ ತಂ ಪಿತರಂ ಚಿನ್ತಯಾssಕುಲಮ್ ॥೧೧.೧೦೯॥
ದೃಷ್ಟ್ವಾ ಶಿಖಣ್ಡಿನೀ ದುಃಖಾನ್ಮನ್ನಿಮಿತ್ತಾನ್ನ ನಶ್ಯತು ।
ಇತಿ ಮತ್ವಾ ವನಾಯೈವ ಯಯೌ ತತ್ರ ಚ ತುಮ್ಬುರುಃ   ॥೧೧.೧೧೦॥

ನಿನ್ನ ಮಗಳು ಗಂಡಾಗುತ್ತಾಳೆಂದ ಶಿವನ ಮಾತನ್ನು ಪೂರ್ಣ ನಂಬಿದ್ದ ದ್ರುಪದ,
ದೂತನನ್ನು ಹಿಂದೆ ಕಳಿಸಿಕೊಡುತ್ತಾ ಮಾಡಿದ್ದ ಶಿಖಂಡಿನೀ ಗಂಡೇ ಎಂಬ ವಾದ.
ನಿನ್ನ ಬುದ್ಧಿ ಅಪ್ರಬುದ್ಧರ ಮಾತಿನಿಂದ ಹಿಡಿದಿದೆ ತಪ್ಪುದಾರಿ,
ಸರಿವಿಷಯ ಗ್ರಹಿಕೆ ಮಾಡದೇ ಎಂಥದದು ರಾಜ್ಯಭಾರದ ಪರಿ.
ಇತ್ಯಾದಿ ಹಾಸ್ಯ ಮಾತುಗಳಿಂದ ದೂತನನ್ನೇನೊ ಕಳಿಸಿದ,
ನಂತರ ಪತ್ನೀಸಮೇತನಾಗಿ ತೀವ್ರವಾದ ಚಿಂತೆಗೆ ಒಳಗಾದ.
[Contributed by Shri Govind Magal] 

Monday, 3 December 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 97 - 102

ಯಶೋ ಭೀಷ್ಮಸ್ಯ ದತ್ವಾ ತು ಸೋsಮ್ಬಾಂ ಚ ಶರಣಾಗತಾಮ್ ।
ಉನ್ಮುಚ್ಯ ಭರ್ತ್ತೃದ್ವೇಷೋತ್ಥಾತ್ ಪಾಪಾತ್ ತೇನಾsಶ್ವಯೋಜಯತ್ ॥೧೧.೯೭॥
ಅನನ್ತರಂ ಶಿಖಣ್ಡಿತ್ವಾತ್ ತದಾ ಸಾ ಶಾಙ್ಕರಂ ತಪಃ ।
ಭೀಷ್ಮಸ್ಯ ನಿಧನಾರ್ತ್ಥಾಯ ಪುಂಸ್ತ್ವಾರ್ತ್ಥಂ ಚ ಚಕಾರ ಹ ॥೧೧.೯೮॥
ಭೀಷ್ಮೋ ಯಥಾ ತ್ವಾಂ ಗೃಹ್ಣೀಯಾತ್ ತಥಾ ಕುರ್ಯ್ಯಾಮಿತೀರಿತಮ್ ।
ರಾಮೇಣ ಸತ್ಯಂ ತಚ್ಚಕ್ರೇ ಭೀಷ್ಮೇ ದೇಹಾನ್ತರಂ ಗತೇ ॥೧೧.೯೯॥

ಪರಶುರಾಮ ದೇವರು ಮಾಡಿದರು ಭೀಷ್ಮನಿಗೆ ಯಶಸ್ಸು ಪ್ರದಾನ,
ಶರಣಾದ ಅಂಬೆಗೆ ಗಂಡನ ದ್ವೇಷ ಮಾಡಿದ ಪಾಪ ವಿಮೋಚನ.
ಭೀಷ್ಮ ನಿನ್ನನ್ನು ಪರಿಗ್ರಹಿಸುವಂತೆ ಮಾಡುತ್ತೇನೆಂದಿದ್ದ ಕೊಡಲಿ ರಾಮ,
ಅದರಂತೆಯೇ ಕೊನೆಗೆ ನಡೆಸಿಕೊಟ್ಟದ್ದು ಸತ್ಯಸಂಕಲ್ಪನ ನೇಮ.
ಅಂಬೆ ಭೀಷ್ಮರ ಸೇರಲಾಗದ್ದು ಅವಳು ಗಂಡನ ದ್ವೇಷ ಮಾಡಿದ ಪಾಪ,
ಆನಂತರ ಭೀಷ್ಮರ ಹೊಂದಲಾಗದ್ದು ಅವಳು ಶಿಖಂಡಿಯಾದ ರೂಪ.
ಮುಂದೆ ಭೀಷ್ಮರು ತನ್ನ ದೇಹ ಬಿಟ್ಟು ತಮ್ಮ ಮೂಲರೂಪ ಹೊಂದಿದ ಸಮಯ,
ತನ್ನನುಗ್ರಹದಿಂದ ಅಂಬೆಯ ಪಾಪ ಕಳಚಿ ಮೂಲ ರೂಪದಿ ಗಂಡನ ಸೇರಿಸಿದ ಕರುಣಾಮಯ.
ಅಂಬೆ ಭೀಷ್ಮರಿಂದ ವಂಚಿತಳಾದಾಗ,
ಶಂಕರನ ಕುರಿತು ತಪಸ್ಸಾಚರಿಸುತ್ತಾಳಾಗ.
ಭೀಷ್ಮಾಚಾರ್ಯರಿಗೆ ಬರಬೇಕು ಮರಣ,
ಗಂಡಾಗಿ ತಾ ಹುಟ್ಟಬೇಕೆಂದವಳ ತಪದ ಕಾರಣ.

ರುದ್ರಸ್ತು ತಸ್ಯಾಸ್ತಪಸಾ ತುಷ್ಟಃ ಪ್ರಾದಾದ್ ವರಂ ತದಾ ।
ಭೀಷ್ಮಸ್ಯ ಮೃತಿಹೇತುತ್ವಂ ಕಾಲಾತ್ ಪುಂದೇಹಸಮ್ಭವಮ್ ॥೧೧.೧೦೦॥
ಮಾಲಾಂ ಚ ಯ ಇಮಾಂ ಮಾಲಾಂ ಗೃಹ್ಣೀಯಾತ್ ಸ ಹನಿಷ್ಯತಿ ।
ಭೀಷ್ಮಮಿತ್ಯೇವ ತಾಂ ಮಾಲಾಂ ಗೃಹೀತ್ವಾ ಸಾ ನೃಪಾನ್ ಯಯೌ ॥೧೧.೧೦೧॥
ತಾಂ ನ ಭೀಷ್ಮಭಯಾತ್ ಕೇsಪಿ ಜಗೃಹುಸ್ತಾಂ ಹಿ ಸಾ ತತಃ ।
ದ್ರುಪದಸ್ಯ ಗೃಹದ್ವಾರಿ ನ್ಯಸ್ಯ ಯೋಗಾತ್ ತನುಂ ಜಹೌ ॥೧೧.೧೦೨॥

ಅಂಬೆಯ ತಪಸ್ಸಿಗೊಲಿದ ರುದ್ರನಿಂದ ಅವಳಿಗೆ ವರಪ್ರದಾನ,
ಭೀಷ್ಮನ ಸಾವಿಗಾಗುವೆ ನೀ ಕಾರಣ ಗಂಡುದೇಹ ಪ್ರಾಪ್ತಿ ಕಾಲಕ್ರಮೇಣ.
ರುದ್ರದೇವ ವರದೊಂದಿಗೆ ಕೊಡುತ್ತಾನೆ ಆಕೆಗೆ ಒಂದು ಮಾಲೆ,
ಮಾಲೆ ಸ್ವೀಕರಿಸಿದವನೇ ಭೀಷ್ಮರ ಕೊಲ್ಲುವ ಎಂದ್ಹೇಳಿದ ಲೀಲೆ.
ನಂತರ ಅಂಬೆ ಆ ಮಾಲೆಯೊಂದಿಗೆ ರಾಜರುಗಳ ಬಳಿ ಹೋಗುವಿಕೆ,
ಭೀಷ್ಮರ ಮೇಲಿನ ಭಯದಿಂದ ಯಾರೂ ಅದನ್ನ ಸ್ವೀಕರಿಸದಿರುವಿಕೆ.
ಆನಂತರ ಅಂಬೆ ಆ ಮಾಲೆಯ ದ್ರುಪದನ ಮನೆಯ ಬಾಗಿಲಲ್ಲಿಟ್ಟು,
ಯೋಗಶಕ್ತಿಯಿಂದ ಏರುತ್ತಾಳೆ ಮೇಲೆ ತನ್ನ ದೇಹವ ಭುವಿಯಲಿ ಬಿಟ್ಟು.
[Contributed by Shri Govind Magal]