Thursday, 23 May 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 07 - 13

ಕದಾಚಿದೀಶ್ವರಃ ಸ್ತನಂ ಪಿಬನ್ ಯಶೋದಯಾ ಪಯಃ ।
ಶೃತಂ ನಿಧಾತುಮುಜ್ಝಿತೋ ಬಭಞ್ಜ ದದ್ಧ್ಯಮತ್ರಕಮ್ ॥೧೩.೦೭॥
ಒಮ್ಮೆ ಸರ್ವಜ್ಞನಾದ ಕೃಷ್ಣಗೆ ತಾಯಿ ಮಾಡಿಸುತ್ತಿದ್ದಾಗ ಸ್ತನಪಾನ,
ಉಕ್ಕುವ ಹಾಲನ್ನು ಇಳಿಸುವುದಕ್ಕೆಂದು ಕೃಷ್ಣನ ಕೆಳಗಿಟ್ಟಾಕ್ಷಣ.
ಆಗ ಅಲ್ಲಿದ್ದ ಮೊಸರ ಪಾತ್ರೆಯನ್ನು ಒಡೆಯುತ್ತಾನೆ ಪುಟ್ಟಕೃಷ್ಣ.

ಸ ಮತ್ಥ್ಯಮಾನದದ್ಧ್ಯುರುಪ್ರಜಾತಮಿನ್ದುಸನ್ನಿಭಮ್ ।
ನವಂ ಹಿ ನೀತಮಾದದೇ ರಹೋ ಜಘಾಸ ಚೇಶಿತಾ ॥೧೩.೦೮॥
ಕಡೆದ ಮೊಸರಲ್ಲಿ ದೊಡ್ಡ ಮುದ್ದೆಯಾಗಿ ಬಂದ,
ಚಂದ್ರನಂತೆ ಬಿಳಿಯಾಗಿ ಕಾಣುವ ಬೆಣ್ಣೆಯ ಚೆಂದ.
ಅದನ್ನೆಲ್ಲ ಎತ್ತಿದ ಕೃಷ್ಣ ಏಕಾಂತದಲ್ಲದನ ತಿಂದ.

ಪ್ರಜಾಯತೇ ಹಿ ಯತ್ಕುಲೇ ಯಥಾಯುಗಂ ಯಥಾವಯಃ ।
ತಥಾ ಪ್ರವರ್ತ್ತನಂ ಭವೇದ್ ದಿವೌಕಸಾಂ ಸಮುದ್ಭವೇ ॥೧೩.೦೯॥
ಇತಿ ಸ್ವಧರ್ಮ್ಮಮುತ್ತಮಂ ದಿವೌಕಸಾಂ ಪ್ರದರ್ಶಯನ್ ।
ಅಧರ್ಮ್ಮಪಾವಕೋsಪಿ ಸನ್ ವಿಡಮ್ಬತೇ ಜನಾರ್ದ್ದನಃ ॥೧೩.೧೦॥
ನೃತಿರ್ಯ್ಯಗಾದಿರೂಪಕಃ ಸ ಬಾಲ್ಯಯೌವನಾದಿ ಯತ್ ।
ಕ್ರಿಯಾಶ್ಚ ತತ್ತದುದ್ಭವಾಃ ಕರೋತಿ ಶಾಶ್ವತೋsಪಿ ಸನ್ ॥೧೩.೧೧॥
ಆದಾಗ ಭೂಮಿಯಲ್ಲಿ ದೇವತೆಗಳ ಅವತಾರ,
ಯಾವ್ಯಾವ ಯುಗದ ಯಾವ ಕುಲದ ದ್ವಾರ,
ನಡೆಯಬೇಕು ಯುಗ ಕುಲ ಧರ್ಮಾನುಸಾರ.
ಕೃಷ್ಣ ಮಾಡಿದ ಅಂಥಾ ಉತ್ಕೃಷ್ಟವಾದ ಧರ್ಮಪಾಲನೆ,
ಅಧರ್ಮಕ್ಕೆ ಅಗ್ನಿಯಾದರೂ ತೋರಿದ ಲೋಕಾನುಕರಣೆ.
ಮನುಷ್ಯ ಪ್ರಾಣಿ ಮುಂತಾದ ರೂಪಗಳಿಂದ ಅವತರಿಸುವ ಹರಿ,
ಆಯಾ ಕಾಲ ಯೋನಿ ಯುಗಗಳ ಅನುಸರಿಸಿ ತೋರಿಸುವ ಪರಿ.
ವಾಸ್ತವಿಕವಾಗಿ ಭಗವಂತ ನಿತ್ಯ -ಒಂದೇ ರೀತಿ,
ಆದರೂ ವಯೋಗುಣ ಚೇಷ್ಟೆ ತೋರುವ ನೀತಿ.

ಸ ವಿಪ್ರರಾಜಗೋಪಕಸ್ವರೂಪಕಸ್ತದುದ್ಭವಾಃ ।
ತದಾತದಾ ವಿಚೇಷ್ಟತೇ ಕ್ರಿಯಾಃ ಸುರಾನ್ ವಿಶಿಕ್ಷಯನ್ ॥೧೩.೧೨॥
ಆಗಿ ಬಂದಾಗ ಅನೇಕ ಬ್ರಾಹ್ಮಣ, ರಾಜ, ಗೋಪಸ್ವರೂಪ,
ವಿವಿಧ ಯೋನಿಗಳ ಕ್ರಿಯೆ ತೋರೋ ದೇವತಾಶಿಕ್ಷಣ ರೂಪ.

ತಥಾsಪ್ಯನನ್ಯದೇವತಾಸಮಂ ನಿಜಂ ಬಲಂ ಪ್ರಭುಃ ।
ಪ್ರಕಾಶಯನ್ ಪುನಃಪುನಃ ಪ್ರದರ್ಶಯತ್ಯಜೋ ಗುಣಾನ್ ॥೧೩.೧೩॥
ಹೀಗೆ ಮಾಡುತ್ತಿದ್ದಾಗಲೂ ಅವನು ಎಲ್ಲಾ ದೇವತೆಗಳಿಗೂ ಮೇಲೆ,
ತನ್ನ ಬಲ ತೋರುತ್ತಾ ಮಾಡಿದ ಅಸಾಮಾನ್ಯ ಗುಣಗಳ ಲೀಲೆ. 

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 04 - 06

ಸ ಕದಾಚಿಚ್ಛಶುಭಾವಂ ಕುರ್ವನ್ತ್ಯಾ ಮಾತುರಾತ್ಮನೋ ಭೂಯಃ ।
ಅಪನೇತುಂ ಪರಮೇಶೋ ಮೃದಂ ಜಘಾಸೇಕ್ಷತಾಂ ವಯಸ್ಯಾನಾಮ್ ॥೧೩.೦೪॥
ಎಲ್ಲರಿಗೂ ಒಡೆಯನಾದವನು ಶ್ರೀಕೃಷ್ಣ - ಅವನೇ ಶ್ರೀಮನ್ನಾರಾಯಣ,
ತಾಯಿಗೆ ಸುತ್ತಿಕೊಂಡಿತ್ತು ಇದು ನನ್ನ ಮಗುವೆಂಬ ಮಮಕಾರದ ಆವರಣ.
ತಾಯಿಯ ಆ ಭಾವನೆ ನಾಶಮಾಡಲು ಕೃಷ್ಣನೆಂಬ ಆ ಕಂದ,
ತನ್ನ ಗೆಳೆಯರೆಲ್ಲ ನೋಡುತ್ತಿರುವಂತೆಯೇ ಮಣ್ಣನ್ನು ತಿಂದ.

ಮಾತ್ರೋಪಾಲಾಬ್ದ ಈಶೋ ಮುಖವಿವೃತಿಮಕರ್ನ್ನಾಮ್ಬ ಮೃದ್ಭಕ್ಷಿತಾsಹಂ ।
ಪಶ್ಯೇತ್ಯಸ್ಯಾನ್ತರೇ ತು ಪ್ರಕೃತಿವಿಕೃತಿಯುಕ್ ಸಾ ಜಗತ್ ಪರ್ಯ್ಯಪಶ್ಯತ್ ।
ಇತ್ಥಂ ದೇವೋsತ್ಯಚಿನ್ತ್ಯಾಮಪರದುರಧಿಗಾಂ ಶಕ್ತಿಮುಚ್ಚಾಂ ಪ್ರದರ್ಶ್ಯ
ಪ್ರಾಯೋ ಜ್ಞಾತಾತ್ಮತತ್ತ್ವಾಂ ಪುನರಪಿ ಭಗವಾನಾವೃಣೋದಾತ್ಮಶಕ್ತ್ಯಾ ॥೧೩.೦೫॥
ಎಲ್ಲೀ ಕೃಷ್ಣಾ ಬಾಯಿತೆರೆ ಎಂದಳು ತಾಯಿ ಯಶೋದೆ,
ನಾ ಮಣ್ತಿನ್ಲಿಲ್ಲಮ್ಮಾ ಎನ್ನುತ್ತಾ ಬಾಯಿತೆರೆದ ಜಗದತಂದೆ.
ಆಗ ಯಶೋದೆಗೆ ಪ್ರಕೃತಿ ವಿಕೃತಿಯಿಂದ ಕೂಡಿದ ಜಗದ ದರ್ಶನ,
ಬೇರಾರೂ ತಿಳಿಯಲಾಗದ ತನ್ನ ಸ್ವರೂಪಶಕ್ತಿಯ  ತೋರಿದಾ ಕ್ಷಣ.
ಹೆಚ್ಚಾಗಿ ತನ್ನ ತಿಳಿದ ಯಶೋದೆಗೆ ಮತ್ತೆ ಮಾಡಿದ ಮೋಹದಾವರಣ.

ಇತಿ ಪ್ರಭುಃ ಸ ಲೀಲಯಾ ಹರಿರ್ಜ್ಜಗದ್ ವಿಡಮ್ಬಯನ್ ।
ಚಚಾರ ಗೋಷ್ಠಮಣ್ಡಲೇsಪ್ಯನನ್ತಸೌಖ್ಯಚಿದ್ಘನಃ ॥೧೩.೦೬॥
ಈರೀತಿಯಾಗಿ ಸರ್ವಸಮರ್ಥನಾದ ಶ್ರೀಕೃಷ್ಣ,
ತನ್ನ ಲೀಲೆಯ ತೋರಿದ್ದು -ಲೋಕಾನುಕರಣ.
ಆ ಗೋವುಗಳ ಗ್ರಾಮದಲ್ಲಿ ಎಣೆಯಿರದ ಸುಖದ ಧಾರ,
ಹರಿಸುತ್ತಾ ಮಾಡಿದ ಜ್ಞಾನಾನಂದದೇಹಿ ತಾನು ಸಂಚಾರ.

Wednesday, 22 May 2019

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 13: 01 - 03


।। ಓಂ ।।
ಕಂಸವಧಃ

ಗರ್ಗ್ಗಃ ಶೂರಸುತೋಕ್ತ್ಯಾ ವ್ರಜಮಾಯಾತ್ ಸಾತ್ವತಾಂ ಪುರೋಧಾಃ ಸಃ ।
ಚಕ್ರೇ ಕ್ಷತ್ರಿಯಯೋಗ್ಯಾನ್ ಸಂಸ್ಕಾರಾನ್ ಕೃಷ್ಣರೋಹಿಣೀಸೂನ್ವೋಃ ॥೧೩.೦೧॥
ಯಾದವರ ಪುರೋಹಿತರಾಗಿರುವ ಹೆಸರಾಂತ ಋಷಿ ಗರ್ಗಾಚಾರ್ಯ,
ವಸುದೇವನ ಮಾತಿನಂತೆ ನಂದಗೋಕುಲಕ್ಕೆ ನಡೆದು  ಬಂದರು ಆರ್ಯ.
ಮಾಡಿದರು ಕೃಷ್ಣಬಲರಾಮರಿಗೆ ಕ್ಷತ್ರಿಯಯೋಗ್ಯ ಜಾತಕರ್ಮಾದಿ ಸಂಸ್ಕಾರ.

ಊಚೇ ನನ್ದ ಸುತೋsಯಂ ತವ ವಿಷ್ಣೋರ್ನ್ನಾವಮೋ ಗುಣೈಃ ಸರ್ವೈಃ ।
ಸರ್ವೇ ಚೈತತ್ರಾತಾಃ ಸುಖಮಾಪ್ಸ್ಯನ್ತ್ಯುನ್ನತಂ ಭವತ್ಪೂರ್ವಾಃ ॥೧೩.೦೨ ॥
ಸಮಸ್ತ ಸಂಸ್ಕಾರಗಳ ಪೂರೈಸಿ ಗರ್ಗಾಚಾರ್ಯ ನಂದಗೆ ಹೇಳುತ್ತಾರೆ ಈ ಮಾತ,
ನಾರಾಯಣನಂತೆ  ಎಲ್ಲಾ ಗುಣಗಳಿಂದಲೂ ಪರಿಪೂರ್ಣ ಈ ನಿನ್ನ ಸುತ.
ನೀನೂ ನಿನ್ನವರೆಲ್ಲರೂ ಹೊಂದುತ್ತೀರಿ ಇವನಿಂದ ರಕ್ಷಣೆ ಸುಖ ಮತ್ತು ಹಿತ.

ಇತ್ಯುಕ್ತಃ ಸ ಮುಮೋದ ಪ್ರಯಯೌ ಗರ್ಗ್ಗೋsಪಿ ಕೇಶವೋsಥಾsಧ್ಯಃ ।
ಸ್ವಪದೈರಗ್ರಜಯುಕ್ತಶ್ಚಕ್ರೇ ಪುಣ್ಯಂ ವ್ರಜನ್ ವ್ರಜೋದ್ದೇಶಮ್ ॥೧೩.೦೩॥
ಹೀಗೆ ಗರ್ಗರಿಂದ ಹೇಳಲ್ಪಟ್ಟ ನಂದ,
ಹೊಂದಿದ ಅತ್ಯಂತವಾದ ಆನಂದ.
ನಂದನ ಅನುಜ್ಞೆ ಪಡೆದ ಗರ್ಗಾಚಾರ್ಯರದು ಅಲ್ಲಿಂದ ನಿರ್ಗಮನ,
ಅಣ್ಣನೊಡಗೂಡಿ ಕೃಷ್ಣ ಆ ಪ್ರಾಂತ್ಯದಲ್ಲಿ ಓಡಾಡಿ ಮಾಡಿದ ಗ್ರಾಮ ಪಾವನ.

[Contributed by Shri Govind Magal]