Thursday, 29 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11:93 - 96

ಭೀಷ್ಮಾಯ ತು ಯಶೋ ದಾತುಂ ಯುಯುಧೇ ತೇನ ಭಾರ್ಗ್ಗವಃ ।
ಅನನ್ತಶಕ್ತಿತರಪಿ ಸ ನ ಭೀಷ್ಮಂ ನಿಜಘಾನ ಹ ।
ನಚಾಮ್ಬಾಂ ಗ್ರಾಹಯಾಮಾಸ ಭೀಷ್ಮಕಾರುಣ್ಯಯನ್ತ್ರಿತಃ ॥೧೧.೯೩॥

ಭೀಷ್ಮಗೆ ಯಶಸ್ಸು ಕೊಡಲೆಂದೇ ಪರಶುರಾಮ ಅವನೊಂದಿಗೆ ಮಾಡಿದ ಯುದ್ಧ,
ಎಣೆಯಿರದ ಶಕ್ತಿಯುಳ್ಳವನಾದರೂ ಪರಶುರಾಮ ಭೀಷ್ಮನ ಕೊಲ್ಲದೇ ಬಿಟ್ಟು ಬಿಟ್ಟಿದ್ದ.
ಭೀಷ್ಮನ ಮೇಲಿನ ಕಾರುಣ್ಯದಿಂದ ಪರಶುರಾಮ,
ಅಂಬೆಯೊಂದಿಗೆ ನಡೆಸುವುದಿಲ್ಲ ಮದುವೆ ನೇಮ.

ಅನನ್ತಶಕ್ತಿಃ ಸಕಲಾನ್ತರಾತ್ಮಾ ಯಃ ಸರ್ವವಿತ್ ಸರ್ವವಶೀ ಚ ಸರ್ವಜಿತ್ ।
ನ ಯತ್ಸಮೋsನ್ಯೋsಸ್ತಿ ಕಥಞ್ಚ ಕುತ್ರಚಿತ್ ಕಥಂ ಹ್ಯಶಕ್ತಿಃ ಪರಮಸ್ಯ ತಸ್ಯ’॥೧೧.೯೪॥

ಭೀಷ್ಮಂ ಸ್ವಭಕ್ತಂ ಯಶಸಾsಭಿಪೂರಯನ್ ವಿಮೋಹಯನ್ನಾಸುರಾಂಶ್ಚೈವ ರಾಮಃ ।
ಜಿತ್ವೈವ ಭೀಷ್ಮಂ ನ ಜಘಾನ ದೇವೋ ವಾಚಂ ಚ ಸತ್ಯಾಮಕರೋತ್ ಸ ತಸ್ಯ’ ॥೧೧.೯೫॥

ವಿದ್ಧವನ್ಮುಗ್ಧವಚ್ಛೈವ ಕೇಶವೋ ವೇದನಾರ್ತ್ತವತ್ ।
ದರ್ಶಯನ್ನಪಿ ಮೋಹಾಯ ನೈವ ವಿಷ್ಣುಸ್ತಥಾ ಭವೇತ್’ ।
ಏವಮಾದಿಪುರಾಣೋತ್ಥವಾಕ್ಯಾದ್ ರಾಮಃ ಸದಾ ಜಯೀ ॥೧೧.೯೬॥

ಯಾರು ಎಣೆಯಿರದ ಶಕ್ತಿ ಇರುವಾತ,
ಎಲ್ಲರ ಒಳಗೂ ತುಂಬಿ ಇರುವಾತ.
ಎಲ್ಲರ ಎಲ್ಲವನ್ನೂ ಬಲ್ಲವನಾತ,
ಎಲ್ಲವನ್ನು ವಶದಲ್ಲಿಟ್ಟುಕೊಂಡಾತ.
ಅವನಿಗೆಣೆಯಾದವರೇ ಇರದಂಥಾತ,
ಅಂಥ ಪರಶುರಾಮ ಶಕ್ತ್ಯಾಭಾವರಹಿತ.
ಪರಶುರಾಮ ತನ್ನ ಭಕ್ತ ಭೀಷ್ಮನ ಕೀರ್ತಿಯಿಂದ ಮೆರೆಸಲು,
ಅಸುರರನ್ನು ಅಸುರಸಂಬಂಧಿಗಳನ್ನು ಮೋಹಕ್ಕೆ ಒಳಗಾಗಿಸಲು,
ತಾನು ಭೀಷ್ಮನ ಗೆದ್ದಿದ್ದರೂ ಬಯಸಲಿಲ್ಲ ಅವನ ಕೊಲ್ಲಲು.
ಭೀಷ್ಮರ ಪ್ರತಿಜ್ಞೆಯಿತ್ತು ಮದುವೆಯಾಗಲಾರೆನೆಂದು,
ಆ ಪ್ರತಿಜ್ಞೆಯ ಸತ್ಯ ಮಾಡಿಸಿದ ತಾನು ಭಕ್ತಬಂಧು.
ಕೇಶವ ಕಾಣಿಸಿಕೊಂಡ ಗಾಯಗೊಂಡವನಂತೆ,
ಮೂರ್ಛೆ ಹೋದವನಂತೆ --ನೊಂದವನಂತೆ.
ಹಾಗೆ ತೋರಿಸಿಕೊಂಡರೂ ಮೂಲತಃ ಹಾಗಾಗಲಾರ,
ಪುರಾಣೋಕ್ತಿಯಂತೆ ಅವ ಸೋಲಿಲ್ಲದ  ಸರದಾರ.
[Contributed by Shri Govind Magal] 

Tuesday, 27 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 87 - 92

ವಿಚಿತ್ರವೀರ್ಯ್ಯಂ ರಾಜಾನಂ ಕೃತ್ವಾ ಭೀಷ್ಮೋsನ್ವಪಾಲಯತ್ ।
ಅಥ ಕಾಶಿಸುತಾಸ್ತಿಸ್ರಸ್ತದರ್ತ್ಥಂ ಭೀಷ್ಮ ಆಹರತ್ ॥೧೧.೮೭॥

ಮಹಾರಾಜ ಚಿತ್ರಾಂಗದನಿಗೆ ಮದುವೆಗೆ ಮುಂಚೆ ಬಂದ ಮರಣ,
ಯುವರಾಜ ವಿಚಿತ್ರವೀರ್ಯನ ಭೀಷ್ಮರು ರಾಜನ ಮಾಡಿದ ಕಾರಣ.
ಅವನ ಪರವಾಗಿ ಭೀಷ್ಮರೇ ಹೊತ್ತರು ರಾಜ್ಯಭಾರದ ಜವಾಬ್ದಾರಿ,
ವಿಚಿತ್ರವೀರ್ಯನಿಗಾಗಿ ಕಾಳೀರಾಜನ ಮೂರು ಮಕ್ಕಳ ತಂದ ಪರಿ.

ಅಮ್ಬಾಮಪ್ಯಮ್ಭಿಕಾನಾಮ್ನೀಂ ತಥೈವಾಮ್ಬಾಲಿಕಾಂ ಪರಾಮ್ ।
ಪಾಣಿಗ್ರಹಣಕಾಲೇ ತು ಬ್ರಹ್ಮದತ್ತಸ್ಯ ವೀರ್ಯ್ಯವಾನ್ ॥೧೧.೮೮॥

ಸಾಲ್ವ ರಾಜ ಬ್ರಹ್ಮದತ್ತ ಮದುವೆಯಾಗಬೇಕಿದ್ದ ಸಮಯ,
ಬಲಿಷ್ಠ ಭೀಷ್ಮರು ಸಾಧಿಸಿದರು ಕ್ಷತ್ರಿಯರ ಮೇಲೆ ವಿಜಯ.
ಕಾಶೀರಾಜನ ಮೂರು ಮಕ್ಕಳು ಅಂಬೆ ಅಂಬಿಕೆ ಅಂಬಾಲಿಕೆ,
ಭೀಷ್ಮ ಗೆದ್ದು ತಂದರವರ ವಿಚಿತ್ರವೀರ್ಯನಿಗಾಗಿ ವಧುಕಾಣಿಕೆ.

ವಿಜಿತ್ಯ ತಂ ಸಾಲ್ವರಾಜಂ ಸಮೇತಾನ್ ಕ್ಷತ್ರಿಯಾನಪಿ ।
ಅಮ್ಬಿಕಾಮ್ಬಾಲಿಕೇ ತತ್ರ ಸಂವಾದಂ ಚಕ್ರತುಃ ಶುಭೇ ॥೧೧.೮೯॥
ಅಮ್ಬಾ ಸಾ ಭೀಷ್ಮಭಾರ್ಯ್ಯೈವ ಪೂರ್ವದೇಹೇ ತು ನೈಚ್ಛತ ।
ಶಾಪಾದ್ಧಿರಣ್ಯಗರ್ಭಸ್ಯ ಸಾಲ್ವಕಾಮಾsಹಮಿತ್ಯಪಿ ॥೧೧.೯೦॥

ಬ್ರಹ್ಮದತ್ತನ ಗೆದ್ದು ನೆರೆದ ರಾಜರನ್ನೂ ಗೆದ್ದು ಭೀಷ್ಮರು
ತಂದ ಕನ್ಯೆಯರು ಮೂವರು,
ಉತ್ತಮರಾದ ಅಂಬಿಕೆ ಅಂಬಾಲಿಕೆಯರು  ವಿಚಿತ್ರವೀರ್ಯನ ವರಿಸಲು ಒಪ್ಪಿದರು.
ಆದರೆ ಅಂಬೆ ಹಿಂದಿನ ಜನ್ಮದಲ್ಲಿ ಭೀಷ್ಮರ ಹೆಂಡತಿ,
ಕೊಡಲಿಲ್ಲವಳು ವಿಚಿತ್ರವೀರ್ಯನ ವರಿಸಲು ಸಮ್ಮತಿ.
ಬ್ರಹ್ಮದೇವನ ಶಾಪದ ಫಲದ ಪ್ರಭೆ,
ಸಾಲ್ವನ ಬಯಸುವೆನೆಂದಳು ಅಂಬೆ.

ಉವಾಚ ತಾಂ ಸ ತತ್ಯಾಜ ಸಾsಗಮತ್ ಸಾಲ್ವಮೇವ ಚ ।
ತೇನಾಪಿ ಸಮ್ಪರಿತ್ಯಕ್ತಾ ಪರಾಮೃಷ್ಟೇತಿ ಸಾ ಪುನಃ ॥೧೧.೯೧॥

ಸಾಲ್ವನ ಬಯಸಿದ ಅಂಬೆಗೆ ಭೀಷ್ಮರು ಕೊಟ್ಟರು ಬಿಡುಗಡೆ,
ಅಂಬೆ ಹೊರಟು ಬರುತ್ತಾಳಾಗ ಸಾಲ್ವರಾಜನಿರುವ ಕಡೆ.
ಅಪಹರಿಸಿ ಬಿಟ್ಟವಳಾದ್ದಕ್ಕೆ ಸಾಲ್ವನಿಂದ ತಿರಸ್ಕೃತ ನಡೆ.

ಭೀಷ್ಮಮಾಪ ಸ ನಾಗೃಹ್ಣಾತ್ ಪ್ರಯಯೌ ಸಾsಪಿ ಭಾರ್ಗ್ಗವಮ್।
ಭ್ರಾತುರ್ವಿವಾಹಯಾಮಾಸ ಸೋsಮ್ಬಿಕಾಮ್ಬಾಲಿಕೇ ತತಃ ॥೧೧.೯೨ ॥

ಆಗ ಆಕೆ ಮತ್ತೆ ಭೀಷ್ಮರ ಬಳಿ ಬರುವಿಕೆ,
ಅವರೂ ಆಕೆಯನ್ನು ಸ್ವೀಕರಿಸದಿರುವಿಕೆ.
ಕೊನೆಗೆ ಆದದ್ದು ಅಂಬೆ ಪರಶುರಾಮರ ಬಳಿ ಹೋಗುವ ಕಾರ್ಯ,
ಭೀಷ್ಮರಿಚ್ಛೆಯಂತೆ ಅಂಬಿಕೆ ಅಂಬಾಲಿಕೆಯರ ವರಿಸಿದ ವಿಚಿತ್ರವೀರ್ಯ.
[Contributed by Shri Govind Magal]

Thursday, 22 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 81 - 86

ಸ್ವಚ್ಛನ್ದಮೃತ್ಯುತ್ವವರಂ ಪ್ರದಾಯ ತಥಾsಪ್ಯಜೇಯತ್ವಮಧೃಷ್ಯತಾಂ ಚ ।
ಯುದ್ಧೇಷು ಭೀಷ್ಮಸ್ಯ ನೃಪೋತ್ತಮಃ ಸ ರೇಮೇ ತಯೈವಾಬ್ದಗಣಾನ್ ಬಹೂಂಶ್ಚ  ॥೧೧.೮೧॥

ಸಂತುಷ್ಟನಾದ ಶಂತನು ಭೀಷ್ಮಾಚಾರ್ಯರಿಗೆ ಕೊಟ್ಟ ವರ ಇಚ್ಛಾಮರಣ,
ಯುದ್ಧದಲ್ಲಿ ಇತರರಿಂದ ಗೆಲ್ಲಲಾಗದಂಥ ಯಾರಿಗೂ ಸೋಲದಂಥ ತ್ರಾಣ.
ಮುಂದೆ ಪತ್ನಿ ಸತ್ಯವತಿಯೊಂದಿಗೆ ನಡೆಸಿದ ಸುಖದ ದಾಂಪತ್ಯ ಜೀವನ.

ಲೇಭೇ ಸ ಚಿತ್ರಾಙ್ಗದಮತ್ರ ಪುತ್ರಂ ತಥಾ ದ್ವಿತೀಯಂ ಚ ವಿಚಿತ್ರವೀರ್ಯ್ಯಮ್ ।
ತಯೋಶ್ಚ ಬಾಲ್ಯೇ ವ್ಯಧುನೋಚ್ಛರೀರಂ ಜೀರ್ಣ್ಣೇನ ದೇಹೇನ ಹಿ ಕಿಂ ಮಮೇತಿ ॥೧೧.೮೨॥

ಶಂತನು ಸತ್ಯವತಿಯಲ್ಲಿ ಆದ ಇಬ್ಬರು ಮಕ್ಕಳು ಚಿತ್ರಾಂಗದ-ವಿಚಿತ್ರವೀರ್ಯ,
ಮಕ್ಕಳು ಚಿಕ್ಕವರಿರುವಾಗಲೇ ಅವ ಮಾಡಿದ ತನ್ನ ಜೀರ್ಣದೇಹ ತ್ಯಾಗ ಕಾರ್ಯ.

ಸ್ವೇಚ್ಛಯಾ ವರುಣತ್ವಂ ಸ ಪ್ರಾಪ ನಾನಿಚ್ಛಯಾ ತನುಃ ।
ತಸ್ಮಿನ್ ಕಾಲೇ ತ್ಯಜ್ಯತೇ ಹಿ ಬಲವದ್ಭಿರ್ವಧಂ ವಿನಾ ॥೧೧.೮೩॥

ಅತಿಸಕ್ತಾಸ್ತಪೋಹೀನಾಃ ಕಥಞ್ಚಿನ್ಮೃತಿಮಾಪ್ನುಯುಃ ।
ಅನಿಚ್ಛಯಾsಪಿ ಹಿ ಯಥಾ ಮೃತಶ್ಚಿತ್ರಾಙ್ಗದಾನುಜಃ ॥೧೧.೮೪॥

ಶಂತನು ಸ್ವೇಚ್ಛೆಯಿಂದ ದೇಹತ್ಯಾಗ ಮಾಡಿ ವರುಣತ್ವ ಪಡೆದ ಕಾಲ,
ಅಂಥ ಕಾಲದಲ್ಲಿ ಇಚ್ಛೆ ಇಲ್ಲದೇ ದೇಹ ಬಿಡುವವರೇ ಬಲು ವಿರಳ.
ಒಂದೋ ತಮಗಿಂತ ತಪೋಬಲ ಶ್ರೇಷ್ಠರಿಂದ ಸಾವು,
ಅಥವಾ ವಿಷಯಾಸಕ್ತ ತಪೋಹೀನರಾಗಿ ಸಾವಿನ ನೋವು.

ಅಥೌರ್ಧ್ವದೈಹಿಕಂ ಕೃತ್ವಾ ಪಿತುರ್ಭೀಷ್ಮೋsಭ್ಯಷೇಚಯತ್।
ರಾಜ್ಯೇ ಚಿತ್ರಾಙ್ಗದಂ ವೀರಂ ಯೌವರಾಜ್ಯೇsಸ್ಯ ಚಾನುಜಮ್ ॥೧೧.೮೫॥

ಶಂತನುವಿನ ಮರಣಾನಂತರ ಭೀಷ್ಮಾಚಾಚಾರ್ಯ,
ಪೂರೈಸಿದರೆಲ್ಲ ಔರ್ಧ್ವದೈಹಿಕ ಶಾಸ್ತ್ರೋಕ್ತ ಕಾರ್ಯ.
ಮಾಡಿದರು ಬಲಿಷ್ಠ ಚಿತ್ರಾಂಗದನ ರಾಜ,
ವಿಚಿತ್ರವೀರ್ಯನನ್ನಾಗಿಸಿದರು ಯುವರಾಜ.

ಚಿತ್ರಾಙ್ಗದೇನೇ ನಿಹತೋ ನಾಮ ಸ್ವಂ ತ್ವಪರಿತ್ಯಜನ್ ।
ಚಿತ್ರಾಙ್ಗದೋsಕೃತೋದ್ವಾಹೋ ಗನ್ಧರ್ವೇಣ ಮಹಾರಣೇ ॥೧೧.೮೬॥

ಎಚ್ಚರಿಸಿದರೂ ಚಿತ್ರಾಂಗದ ತನ್ನ ಹೆಸರನ್ನು ಪರಿತ್ಯಾಗ ಮಾಡದ ಕಾರಣ,
ಅದೇ ಹೆಸರಿನ ಗಂಧರ್ವನಿಂದ ಮಹಾಯುದ್ಧಲ್ಲಿ ಆಯಿತವನ ಮರಣ.
[Contributed by Shri Govind Magal]

Sunday, 18 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 73 - 80

ತತಃ ಕದಾಚಿನ್ಮೃಗಯಾಂ ಗತಃ ಸ ದದರ್ಶ ಕನ್ಯಾಪ್ರವರಾಂ ತು ಶನ್ತನುಃ ।
ಯಾ ಪೂರ್ವಸರ್ಗ್ಗೇ ಪಿತೃಪುತ್ರಿಕಾ ಸತೀ ಚಚಾರ ವಿಷ್ಣೋಸ್ತಪ ಉತ್ತಮಂ 
ಚಿರಮ್  ॥೧೧.೭೩॥

ದೇವವ್ರತಗೆ ಯುವರಾಜ ಪದವಿಯ ಪಟ್ಟಾಭಿಷೇಕ ಆದಮೇಲೆ,
ಬೇಟೆಗೆ ಹೋದ ಶಂತನುವಿಗೆ ಕಂಡಳೊಬ್ಬ ಶ್ರೇಷ್ಠ (ಕನ್ಯೆ)ಬಾಲೆ.
ಪೂರ್ವಜನ್ಮದಲ್ಲಿ ಅವಳು ಪಿತೃಗಳ ಪುತ್ರಿಯಾಗಿ ಇದ್ದವಳು,
ವಿಷ್ಣು ಕುರಿತು ಬಹುಕಾಲ ಉತ್ತಮ ತಪಸ್ಸನ್ನು ಮಾಡಿದ್ದಳು.

ಯಸ್ಯೈ ವರಂ ವಿಷ್ಣುರದಾತ್ ಪುರಾsಹಂ ಸುತಸ್ತವ ಸ್ಯಾಮಿತಿ ಯಾ ವಸೋಃ ಸುತಾ ।
ಜಾತಾ ಪುನರ್ದ್ದಾಶಗೃಹೇ ವಿವರ್ದ್ಧಿತಾ ವ್ಯಾಸಾತ್ಮನಾ ವಿಷ್ಣುರಭೂಚ್ಚ 
ಯಸ್ಯಾಮ್ ॥೧೧.೭೪॥

ಯಾರಿಗಿತ್ತೋ ನಾರಾಯಣನಿಂದ ಮುಂದಿನ ಜನ್ಮದಲ್ಲಿ ನಿನ್ನ ಮಗನಾಗುತ್ತೇನೆಂದು ವರ,
ಅವಳೇ ವಸುಪುತ್ರಿಯಾಗಿ ಹುಟ್ಟಿ ಆ ನಂತರ ದಾಶರಾಜನ ಮನೆಯಲ್ಲಿ ಬೆಳೆದ ವ್ಯಾಪಾರ.
ಯಾರಲ್ಲಿ ನಾರಾಯಣ ವ್ಯಾಸರಾಗಿ ಹುಟ್ಟಿದ,
ಅದೇ ಸತ್ಯವತಿಯನ್ನು ಶಂತನು ತಾ ನೋಡಿದ.

ತದ್ದರ್ಶನಾನ್ನೃಪತಿರ್ಜ್ಜಾತಹೃಚ್ಛ್ರಯೋ ವವ್ರೇ ಪ್ರದಾನಾಯ ಚ ದಾಶರಾಜಮ್ ।
ಋತೇ ಸ ತಸ್ಯಾಸ್ತನಯಸ್ಯ ರಾಜ್ಯಂ ನೈಚ್ಛದ್ ದಾತುಂ ತಾಮಥಾsಯಾದ್ ಗೃಹಂ ಸ್ವಮ್ ॥೧೧.೭೫॥

ಅವಳ ನೋಡಿದೊಡನೆ ಮೇಲೆದ್ದ ಶಂತನುವಿನ ಸುಪ್ತಕಾಮ,
ಸತ್ಯವತಿಯ ತನಗೆ ಕೊಡುವಂತೆ ದಾಶರಾಜನ ಕೇಳಿದ ನೇಮ.
ಮುಂದೆ ಸತ್ಯವತಿಯ ಮಗನಿಗೆ ಸಾಮ್ರಾಜ್ಯ ಸಿಗುವುದಿಲ್ಲೆಂದು,
ದಾಶರಾಜ ಹೇಳಿದ ಮಗಳನ್ನು ಕೊಡಲು ಬಯಸುವುದಿಲ್ಲೆಂದು.
ದಾಶರಾಜನ ನಿರಾಕರಣೆಯ ನಂತರ ಶಂತನು ವಾಪಸಾದ ನೊಂದು.


ತಚ್ಚಿನ್ತಯಾ ಗ್ಲಾನಮುಖಂ ಜನಿತ್ರಂ ದೃಷ್ಟ್ವೈವ ದೇವವ್ರತ ಆಶ್ವಪೃಚ್ಛತ್ ।
ತತ್ಕಾರಣಂ ಸಾರಥಿಮಸ್ಯ ತಸ್ಮಾಚ್ಛ್ರುತ್ವಾsಖಿಲಂ ದಾಶಗೃಹಂ 
ಜಗಾಮ ॥೧೧.೭೬॥

ತಂದೆ ಕಳೆಗುಂದಿದ್ದನ್ನು ಗಮನಿಸಿದ ದೇವವ್ರತ,
ವಿಚಾರಿಸಲು ಏನೂ ಉತ್ತರ ಸಿಗದವನಾದನಾತ.
ಶಂತನುವಿನ ಸಾರಥಿಯಿಂದ ವಿಷಯ ತಿಳಿದ ದೇವವ್ರತ,
ಹೊರಟ ತಾನು ಅಂಬಿಗ ರಾಜ ದಾಶರಾಜನ ಮನೆಯತ್ತ.

ಸ ತಸ್ಯ ವಿಶ್ವಾಸಕೃತೇ ಪ್ರತಿಜ್ಞಾಂ ಚಕಾರ ನಾಹಂ ಕರವಾಣಿ ರಾಜ್ಯಮ್ ।
ತಥೈವ ಮೇ ಸನ್ತತಿತೋ ಭಯಂ ತೇ ವ್ಯೈತೂರ್ಧ್ವರೇತಾಃ ಸತತಂ 
ಭವಾನಿ ॥೧೧.೭೭॥

ಅಂಬಿಗನಿಗೆ ವಿಶ್ವಾಸ ಹುಟ್ಟಿಸಲು ಪ್ರತಿಜ್ಞೆ ಮಾಡುತ್ತಾನೆ ದೇವವ್ರತ,
ನಾ ರಾಜ್ಯ ಹೊಂದುವುದಿಲ್ಲ; ನನ್ನ ಸಂತತಿಯದೂ ನಿಂಗೆ ಭಯವಿಲ್ಲಾಂತ.
ನನ್ನದಾಗಿರುತ್ತದೆ ಊರ್ಧ್ವರೇತಸ್ಕ ಕಠಿಣ ವ್ರತ ನಿರಂತರ ಮತ್ತದು ಅನವರತ.

ಭೀಮವ್ರತತ್ವಾದ್ಧಿ ತದಾsಸ್ಯ ನಾಮ ಕೃತ್ವಾ ದೇವಾ ಭೀಷ್ಮ ಇತಿ 
ಹ್ಯಚೀಕ್ಲ್ಪನ್ ।
ಪ್ರಸೂನವೃಷ್ಟಿಂ ಸ ಚ ದಾಶದತ್ತಾಂ ಕಾಳೀಂ ಸಮಾದಾಯ ಪಿತುಃ 
ಸಮರ್ಪ್ಪಯತ್ ॥೧೧.೭೮॥

ಈ ಭಯಂಕರ ವ್ರತವುಳ್ಳವನಾದ ದೇವವ್ರತ ದೇವತೆಗಳಿಂದ ಭೀಷ್ಮನೆಂದು ಕರೆಯಲ್ಪಟ್ಟ,
ಹೂಮಳೆಗರೆಸಿಕೊಂಡ ದೇವವ್ರತ ಕಾಳೀ ವಸುಕನ್ಯೆಯ ಕೊಂಡೊಯ್ದು ತಂದೆಗೆ ಕೊಟ್ಟ.

ಜ್ಞಾತ್ವಾ ತು ತಾಂ ರಾಜಪುತ್ರೀಂ ಗುಣಾಢ್ಯಾಂ ಸತ್ಯಸ್ಯ ವಿಷ್ಣೋರ್ಮ್ಮಾತರಂ 
ನಾಮತಸ್ತತ್ ।
ಲೋಕೇ ಪ್ರಸಿದ್ಧಾಂ ಸತ್ಯವತೀತ್ಯುದಾರಾಂ ವಿವಾಹಯಾಮಾಸ ಪಿತುಃ ಸ 
ಭೀಷ್ಮಃ ॥೧೧.೭೯॥

ದಾಶರಾಜನಿಂದ ಕೊಡಲ್ಪಟ್ಟ ಕಾಳೀಯನ್ನು ರಾಜಪುತ್ರಿಯೆಂದೂ,
ಅಂಬಿಗನಲ್ಲಿ ಬೆಳೆದರೂ ಮೂಲತಃ ಅವಳು ವಸುರಾಜಪುತ್ರಿಯೆಂದೂ,
ಸತ್ಯನಾಮಕ ದೈವ ನಾರಾಯಣನ ತಾಯಿಯಾಗಿ ಬಂದವಳೆಂದೂ,
ಆಕೆಯೇ ಸತ್ಯವತೀ ಎಂದು ಲೋಕಪ್ರಸಿದ್ಧಳಾಗಿ ಇರುವವಳೆಂದೂ,
ಇವೆಲ್ಲವ ತಿಳಿದೇ ಭೀಷ್ಮ ಅವಳನ್ನು ತನ್ನ ತಂದೆಗೆ ಮದುವೆ ಮಾಡಿದನಂದು.

ಪ್ರಾಯಃ ಸತಾಂ ನ ಮನಃ ಪಾಪಮಾರ್ಗ್ಗೇ ಗಚ್ಛೇದಿತಿ ಹ್ಯಾತ್ಮಮನಶ್ಚ ಸಕ್ತಮ್ ।
ಜ್ಞಾತ್ವಾsಪಿ ತಾಂ ದಾಶಗೃಹೇ ವಿವರ್ದ್ಧಿತಾಂ ಜಗ್ರಾಹ ಸದ್ಧರ್ಮರತಶ್ಚ 
ಶನ್ತನುಃ ॥೧೧.೮೦॥

ಸಜ್ಜನರ ಮನಸ್ಸು ಪಾಪದ ಕಡೆಗೆ ಹೋಗುವುದಿಲ್ಲ,
ಅವಳಲ್ಲಿ ಅನುರಕ್ತನಾಗಿರುವುದಧರ್ಮವಿರಲಿಕ್ಕಿಲ್ಲ.
ಹೀಗೆ ಯೋಚಿಸಿದ ಶಂತನು ಮಹಾರಾಜ ತಾನು,
ಅಂಬಿಗಕನ್ಯೆಯಂದು ತಿಳಿದೇ ಅವಳ ಸ್ವೀಕರಿಸಿದನು.
ಇದು ಎತ್ತರದ ಜೀವಿಗಳ ಅಂತರಂಗದ ಅರಿವು,
ಏನಾದರೂ ದೈವೀಸಂಕಲ್ಪವೆಂಬ ದೃಢ ನಿಲುವು.
[Contributed by Shri Govind Magal]

Saturday, 17 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 66 -72

ದ್ರೋಣೇತಿನಾಮಾಸ್ಯ ಚಕಾರ ತಾತೋ ಮುನಿರ್ಭರದ್ವಾಜ ಉತಾಸ್ಯ ವೇದಾನ್ ।
ಅಧ್ಯಾಪಯಾಮಾಸ ಸಶಾಸ್ತ್ರಸಙ್ಘಾನ್ ಸರ್ವಜ್ಞತಾಮಾಪ ಚ ಸೋsಚಿರೇಣ   ॥೧೧.೬೬॥

ಈರೀತಿ ಅವತರಿಸಿದ ಬೃಹಸ್ಪತಿಗೆ ಭರದ್ವಾಜರಿಟ್ಟ ಹೆಸರು ದ್ರೋಣ,
ಭರದ್ವಾಜ ತೊಡಿಸಿದರು ದ್ರೋಣಗೆ ಸರ್ವ ವೇದ ಶಾಸ್ತ್ರಗಳಾಭರಣ.
ಅತಿಶೀಘ್ರದಿ ಎಲ್ಲ ಕಲಿತ ದ್ರೋಣನಾದ ಸರ್ವ ವಿದ್ಯಾಪ್ರವೀಣ.

ಕಾಲೇ ಚ ತಸ್ಮಿನ್ ಪೃಷತೋsನಪತ್ಯೋ ವನೇ ತು ಪಾಞ್ಚಾಲಪತಿಶ್ಚಚಾರ ।
ತಪೋ ಮಹತ್ ತಸ್ಯ ತಥಾ ವರಾಪ್ಸರಾವಲೋಕನಾತ್ ಸ್ಕನ್ದಿತಮಾಶು ರೇತಃ ॥೧೧.೬೭॥

ದ್ರೋಣಾಚಾರ್ಯರು ಹುಟ್ಟಿಬಂದ ಆ ಕಾಲ,
ಪೃಶತನೆನ್ನುವ ರಾಜ-ದೇಶ ಅವನದು ಪಾಂಚಾಲ.
ಆ ರಾಜ ಮಕ್ಕಳಿಗಾಗಿ ಕಾಡಿನಲ್ಲಿ ಮಾಡುತ್ತಿದ್ದ ಮಹಾ ತಪಸ್ಸು,
ಊರ್ವಶಿಯನ್ನು ಕಂಡ ಪರಿಣಾಮ ಜಾರಿಬಿತ್ತವನ ರೇತಸ್ಸು.

ಸ ತದ್ ವಿಲಜ್ಜಾವಶತಃ ಪದೇನ ಸಮಾಕ್ರಮತ್ ತಸ್ಯ ಬಭೂವ ಸೂನುಃ ।
ಹಹೂ ತು ನಾಮ್ನಾ ಸ ವಿರಿಞ್ಚಗಾಯಕೋ ನಾಮ್ನಾssವಹೋ ಯೋ ಮರುತಾಂ ತದಂಶಯುಕ್ ॥೧೧.೬೮॥

ಪೃಶತ ರಾಜ ವಿಶೇಷವಾದ ನಾಚಿಕೆಯಿಂದ,
ಜಾರಿದ ರೇತಸ್ಸ ಮುಚ್ಚಿದ ತನ್ನ ಪಾದದಿಂದ.
ಆ ರೇತಸ್ಸಿನಿಂದ ಹಹೂ ಹೆಸರಿನ ಬ್ರಹ್ಮದೇವರ ಗಂಧರ್ವಗಾಯಕನ ಹುಟ್ಟು,
ಆತ ಆವಹನೆಂಬ ಮರುತ್ ದೇವತೆಯ ಅಂಶ ಉಳ್ಳವನೆಂಬುದು ಗುಟ್ಟು.

ಸ ದ್ರೋಣತಾತಾತ್ ಸಮವಾಪ ವೇದಾನಸ್ತ್ರಾಣಿ ವಿದ್ಯಾಶ್ಚ ತಥಾ ಸಮಸ್ತಾಃ ।
ದ್ರೋಣೇನ ಯುಕ್ತಃ ಸ ತದಾ ಗುರೋಃ ಸುತಂ ಸಹೈವ ನೌ ರಾಜ್ಯಮಿತಿ ಹ್ಯವಾದೀತ್ ॥೧೧.೬೯॥

ಹೀಗೆ ಹುಟ್ಟಿದ ಪೃಷತ್ ನ ಮಗ ;ದ್ರೋಣರಪ್ಪ ಭರದ್ವಾಜರಿಂದ,
ದ್ರೋಣನೊಡಗೂಡಿ ವೇದ ಅಸ್ತ್ರ ಸಮಸ್ತ ವಿದ್ಯೆಗಳ ಹೊಂದಿದ.
ವಿದ್ಯಾಭ್ಯಾಸ ಕಾಲದಲ್ಲಿ ಗುರುಪುತ್ರ ದ್ರೋಣರೊಂದಿಗೆ ಸಖ್ಯ ಒಡನಾಟ,
ರಾಜ್ಯದ ಭೋಗಭಾಗ್ಯವೆಲ್ಲ ನಮ್ಮಿಬ್ಬರಿಗೂ ಸಮಪಾಲು ಎಂದಿದ್ದನಾತ.

ಪದೇ ದ್ರುತತ್ವಾದ್ ದ್ರುಪದಾಭಿಧೇಯಃ ಸ ರಾಜ್ಯಮಾಪಾಥ ನಿಜಾಂ ಕೃಪೀಂ ಸಃ ।
ದ್ರೋಣೋsಪಿ ಭಾರ್ಯ್ಯಾಂ ಸಮವಾಪ್ಯ ಸರ್ವಪ್ರತಿಗ್ರಹೋಜ್ಝಶ್ಚ ಪುರೇsವಸತ್ ಸುಖೀ ॥೧೧.೭೦॥

ಪಾದದಿಂದ ಮುಚ್ಚಿದ್ದರಿಂದ ಪೃಶತ್ ನ ಮಗನ ಹೆಸರಾಯ್ತು ದ್ರುಪದ,
ತನ್ನ ತಂದೆಯ ಕಾಲದ ನಂತರ ಪಾಂಚಾಲ ದೇಶಕ್ಕಾತ ರಾಜನಾದ.
ದ್ರೋಣರು ತನ್ನವಳೇ ಆದ ಕೃಪಾಚಾರ್ಯರ ತಂಗಿಯನ್ನು ಮಾಡಿಕೊಂಡರು ಹೆಂಡತಿ,
ಪ್ರತಿಗ್ರಹ ವಿರಹಿತರಾಗಿ ಸುಖವಾಗಿ ನೆಮ್ಮದಿಯಲಿ  ವಾಸಿಸಿದ್ದ ನಗರವದು ಹಸ್ತಿನಾವತಿ.

ಸಿಲೋಞ್ಚವೃತ್ತ್ಯೈವ ಹಿ ವರ್ತ್ತಯನ್ ಸ ಧರ್ಮ್ಮಂ ಮಹಾನ್ತಂ ವಿರಜಂ ಜುಷಾಣಃ ।
ಉವಾಸ ನಾಗಾಖ್ಯಪುರೇ ಸಖಾ ಸ ದೇವವ್ರತಸ್ಯಾಥ ಕೃಪಸ್ಯ ಚೈವ  ॥೧೧.೭೧॥

ದ್ರೋಣಾಚಾರ್ಯರು ಆಯ್ಕೆ ಮಾಡಿಕೊಂಡದ್ದು ಸಿಲೋಂಛ ಧರ್ಮ,
ಅದರನುಗುಣ ಸಾಗುವ ಜೀವನಕ್ಕೆ ರಜೋಗುಣದ ಸ್ಪರ್ಶವಿರದ ಮರ್ಮ.
ಭಗವಂತಗೆ ಪ್ರಿಯವಾದ ಧರ್ಮಾಚರಣೆಯಿಂದ ಹಸ್ತಿನಾವತಿಯಲ್ಲಿ ವಾಸ,
ರಾಜಕುಮಾರ ದೇವವ್ರತ ಕೃಪಾಚಾರ್ಯರ ಗೆಳೆತನ ಮತ್ತು ಸಹವಾಸ.

ತೇಷಾಂ ಸಮಾನೋ ವಯಸಾ ವಿರಾಟಸ್ತ್ವಭೂದ್ಧಹಾ ನಾಮ ವಿಧಾತೃಗಾಯಕಃ ।
ಮರುತ್ಸು ಯೋ ವಿವಹೋ ನಾಮ ತಸ್ಯಾಪ್ಯಂಶೇನ ಯುಕ್ತೋ ನಿಜಧರ್ಮ್ಮವರ್ತ್ತೀ  ॥೧೧.೭೨॥

ದೇವವ್ರತ, ಕೃಪ, ದ್ರೋಣ ಮತ್ತು ದ್ರುಪದ,
ವಿರಾಟರಾಜ ಸಮನಾಗಿದ್ದವರಿಗೆ ವಯಸ್ಸಿನಿಂದ.
ಮೂಲದಲ್ಲಿ ಆತ ಬ್ರಹ್ಮದೇವರ ಹಾಡುಗಾರ ಹಹಾ ಗಂಧರ್ವ,
ವಿರಾಟನಲ್ಲಿ ವಿವಹ ಮರುತ್ ದೇವತೆಯ ಆವೇಶದ ಆಂತರ್ಯ.
ವಿರಾಟ ತನ್ನ ಧರ್ಮದಲ್ಲಿ ತೊಡಗಿ ನಡೆಸಿದ್ದ ತನ್ನ ರಾಜ್ಯಭಾರ.
[Contributed by Shri Govind Magal]

Friday, 16 November 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 11: 64 - 66

ಯದಾ ಹಿ ಜಾತಃ ಸ ಕೃಪಸ್ತದೈವ ಬೃಹಸ್ಪತೇಃ ಸೂನುರಗಾಚ್ಚ ಗಙ್ಗಾಮ್ ।
ಸ್ನಾತುಂ ಘೃತಾಚೀಂ ಸ ದದರ್ಶ ತತ್ರ ಶ್ಲಥದ್ದುಕೂಲಾಂ 
ಸುರವರ್ಯ್ಯಕಾಮಿನೀಮ್    ॥೧೧.೬೪॥
ಯಾವಾಗ ಆಯಿತೋ ಕೃಪಾಚಾರ್ಯರ ಜನನ,
ಬೃಹಸ್ಪತಿಪುತ್ರ ಭರದ್ವಾಜ ಹೊರಟ ಮಾಡಲು ಗಂಗಾಸ್ನಾನ.
ಅಲ್ಲಿತ್ತು ದೇವತೆಗಳ ಅಪ್ಸರೆಯಾದ ಘೃತಾಚೀಯ ಉಪಸ್ಥಿತಿ,
ಭರದ್ವಾಜ ಘೃತಾಚೀಯ ಕಂಡಾಗವಳದು ಬಟ್ಟೆ ಜಾರಿದ ಸ್ಥಿತಿ.

ತದ್ದರ್ಶನಾತ್ ಸ್ಕನ್ನಮಥೇನ್ದ್ರಿಯಂ ಸ ದ್ರೋಣೇ ದಧಾರಾsಶು ತತೋsಭವತ್ ಸ್ವಯಮ್ ।
ಅಮ್ಭೋಜಜಾವೇಶಯುತೋ ಬೃಹಸ್ಪತಿಃ ಕರ್ತ್ತುಂ ಹರೇಃ ಕರ್ಮ್ಮ 
ಬುವೋ ಭರೋದ್ಧೃತೌ   ॥೧೧.೬೫॥

ಘೃತಾಚೀಯ ನೋಡಿದ್ದರಿಂದ ಜಾರಿದ ರೇತಸ್ಸನ್ನು ಭರದ್ವಾಜರು ಕೊಳಗದಲ್ಲಿ ಹಿಡಿದಿಡುವಿಕೆ,
ಅದಾಯಿತು ಬ್ರಹ್ಮನ ಆವೇಶದಿಂದ ಕೂಡಿದ ಬೃಹಸ್ಪತಿ ಹುಟ್ಟಿ ಬರುವ ಪ್ರಥಮ ವೇದಿಕೆ.
ಭೂಭಾರ ಹನನ ಕಾರ್ಯದಲ್ಲಿ ಭಗವತ್ ಸೇವೆಗಾಗಿ ಬೃಹಸ್ಪತಿ ತಾನೇ ಜನ್ಮ ತಾಳಿ ಬರುವಿಕೆ.

ದ್ರೋಣೇತಿನಾಮಾಸ್ಯ ಚಕಾರ ತಾತೋ ಮುನಿರ್ಭರದ್ವಾಜ ಉತಾಸ್ಯ ವೇದಾನ್ ।
ಅಧ್ಯಾಪಯಾಮಾಸ ಸಶಾಸ್ತ್ರಸಙ್ಘಾನ್ ಸರ್ವಜ್ಞತಾಮಾಪ ಚ 
ಸೋsಚಿರೇಣ   ॥೧೧.೬೬॥

ಈರೀತಿ ಅವತರಿಸಿದ ಬೃಹಸ್ಪತಿಗೆ ಭರದ್ವಾಜರಿಟ್ಟ ಹೆಸರು ದ್ರೋಣ,
ಭರದ್ವಾಜ ತೊಡಿಸಿದರು ದ್ರೋಣಗೆ ಸರ್ವ ವೇದ ಶಾಸ್ತ್ರಗಳಾಭರಣ.
ಅತಿಶೀಘ್ರದಿ ಎಲ್ಲ ಕಲಿತ ದ್ರೋಣನಾದ ಸರ್ವ ವಿದ್ಯಾಪ್ರವೀಣ.
[Contributed by Shri Govind Magal]