Wednesday, 30 August 2017

Bhava Spandana - 10

ಭಾವ ಸ್ಪಂದನ by “ತ್ರಿವೇಣಿ ತನಯ
ದೇವಹೂತಿಯ ಅನುಭಾವ

ಆಲದ ಎಲೆಯ ಮೇಲೆ ನಿನ್ನ ಶಯನ,
ಬ್ರಹ್ಮಾಂಡವಿರದಾಗ ನೀ ವೇದಾಸೀನ,
ಜಗವ ಹೊತ್ತ ನಿನ್ನನ್ನ ನಾನು ಹೊತ್ತೆ,
ಏನು ಕರುಣೆ ಎಂಥಾ ಸೌಭಾಗ್ಯವಿತ್ತೆ.

ಬಿಂಬ -ಯಾರಲ್ಲಿ ಉಂಬ?

ಬಂದ ಕೃಷ್ಣ ರಾಯಭಾರಿಯಾಗಿ ಸಂಧಾನಕ್ಕೆ,
ಯಾರಲ್ಲಿಯೂ ಒಪ್ಪಿ ನಿಲ್ಲಲಿಲ್ಲವ ಊಟಕ್ಕೆ,
ಎಲ್ಲರಿಗಿಂತ ವಿದುರ ಆರ್ದ್ರ --ಜ್ಞಾನಿ,
ಅವನಲ್ಲಿ ತಂಗಿ ಸವಿದ ಆತಿಥ್ಯ ವಿಜ್ಞಾನಿ.

ಸಾಧಕನ ಮಾತು-ಅಮೂಲ್ಯ ಮುತ್ತು

ಯಾರ ಮನದ ಸದಿಚ್ಛೆಯ ಮಾತು,
ಹೊಮ್ಮುವುದದಾಗಿ ಅಮೂಲ್ಯ ಮುತ್ತು,
ನುಡಿದಂತೆ ನಡೆವವ ಅವನು ಸಾಧು,
ಹರಿಯಾಜ್ಞೆಯಂತೆ ನಡೆವ ಎಲ್ಲರ ಬಂಧು.

ಆತ್ಮಾವಲೋಕನ

ತತ್ವಜ್ಞಾನವದು ಪ್ರಸಾರ ಪ್ರಚಾರಕ್ಕಲ್ಲ,
ಕಾಣಸಿಗುವುದೀಗ ಪಾಠಒಪ್ಪಿಸೋ ಪರಿಯೆಲ್ಲ,
ಅನುಭಾವಿ ಸಾಧಕನಿಂದ ಹರಿಯಬೇಕು,
ಕೇಳುವ ಮನ ಅನುಭವಿಸಿ ತಿಳಿಯಬೇಕು.

ಸಾಧನೆ -ಬೇಡ ವೇದನೆ

ಸಾಧನೆ ಶ್ರವಣ ಮನನ ಕಾರ್ಯಕ್ರಮವಲ್ಲ,
ಪ್ರತಿಯುಸಿರ ನಡೆಯ ನಡವಳಿಕೆಯೇ ಎಲ್ಲ,
ದೃಢವಾಗಲು ಈ ಜ್ಞಾನ-ನಾನು ಏನೂ ಅಲ್ಲ,

ಕಣ್ರೆಪ್ಪೆಯಂತೆ ಕಾಯುವ ಅವ ಲಕುಮೀನಲ್ಲ.

[Contributed by Shri Govind Magal]

Monday, 28 August 2017

Bhava Spandana - 9

ಭಾವ ಸ್ಪಂದನ by “ತ್ರಿವೇಣಿ ತನಯ

ಅರ್ಹತೆ -ಅನರ್ಹತೆ

ದುಷ್ಟ ಅಹಂ ದುರಾಚಾರಿ ಧರ್ಮಧ್ವಜರಿಗೆ ಹೇಳಬೇಡ,
ಲಂಪಟ ಡಂಭ ಗೃಹಾಸಕ್ತ ಭಕ್ತರಲ್ಲದ ದ್ವೇಷಿಗಳಿಗೂ ಬೇಡ,
ಶ್ರದ್ಧೆ ವಿನಯ ದಯಾಪರ ವಿಷಯ ಅನಾಸಕ್ತ ಶುದ್ಧಚಿತ್ತ,
ಅಂಥವರಿಗೆ ಮಾತ್ರ ತಿಳಿವ ಉಪದೇಶ ಸಾತ್ವಿಕಪರ ಹರಿಚಿತ್ತ.

ಹಸಿದವಗಿತ್ತ ಅನ್ನ -ನೈಜ ಬ್ರಹ್ಮಯಜ್ಞ

ಕಾದ ಭೂಮಿಯಲಿ ಸುರಿದ ಮಳೆ,
ಆನಂದದಿಂದ ಅರಳುವುದು ಇಳೆ,
ಹಸಿದವರಿಗೆ ಸಮಯಕ್ಕಿತ್ತ ಅನ್ನ,
ನಿಜಾರ್ಥದಲ್ಲಿ ಅದುವೆ ಬ್ರಹ್ಮಯಜ್ಞ.

ಬೋಧನೆ -ಸಾಧನೆ -ಅವಲಂಬನೆ

ಅಧ್ಯಾತ್ಮ ಉಪದೇಶವದು ಮೇಲ್ನೋಟಕ್ಕೆ ಸರಳ,
ನಾನು ಮಾಡುವೆನೆನಲು ಕೈಗೆ ಸಿಗದ ವಿಸ್ತಾರ-ಆಳ,
ಸತತ ಬಿಂಬಾನುಸಂಧಾನವಿತ್ತು ಮಾಡಿಸಬೇಕು ಭಗವಂತ,
ಹರಿ-ಪ್ರಾಣರಾಣತಿಯಂತೆ ತತ್ವಾಭಿಮಾನಿಗಳು ನಿರತ.

ಶರಣಾಗತಿ

ನಾನು ನಾನೆಂದರೆ ಏನೇನೂ ಇಲ್ಲ,
ನಾನಲ್ಲ ನೀನೆಂದರೆ ನಡೆದೀತು ಎಲ್ಲ,
ಪ್ರಾಮಾಣಿಕ ಶರಣಾಗತಿ ಒಂದೇ ದಾರಿ,
ಅಸ್ವತಂತ್ರಜೀವಕ್ಕಾಸರೆ ಸ್ವತಂತ್ರ ಹರಿ.

ದೇವರ ನಾಮ

ದೇವರ ನಾಮವೇ ಹವನ ಹೋಮ,
ಪ್ರಾಮಾಣಿಕ ಪಠಣ ತಪವದು ನೇಮ,
ಎಲ್ಲ ಪಾಪ ಕಾರ್ಯಗಳೂ ನಿರ್ನಾಮ,
ಬಿಡುಗಡೆಯನೀವ ವಿಷ್ಣುಸಹಸ್ರನಾಮ.
[Contributed by Shri Govind Magal]

Saturday, 26 August 2017

Bhava Spandana - 8

ಭಾವ ಸ್ಪಂದನ by “ತ್ರಿವೇಣಿ ತನಯ

ಮನ ನಿಲ್ಲದ ಹೋಮ-ಶಾರಣ್ಯವೇ ನೇಮ

ನಿಯಂತ್ರಣವಿಲ್ಲದ ಕ್ರೋಧ ಸ್ವಚ್ಛಂದ ಕಾಮ,
ಕೆಲಸಕ್ಕೆ ಬಾರವು ಎಷ್ಟು ಮಾಡಿದರೂ ಹೋಮ,
ಶರಣಾಗುತ ಮನವಾಗಲಿ ಹರಿಪಾದದಲಿ ಲಗ್ನ,
ತಕರಾರಿಲ್ಲದ ತಾಳ್ಮೆಯಿರಲಿ ಪಾಪಗಳೆಲ್ಲ ಭಗ್ನ.

ಕರ್ಮ ಸಿದ್ಧಾಂತ

ಎಲ್ಲ ಘಟನೆಗಳೂ ಪೂರ್ವನಿಯೋಜಿತ,
ತಕ್ಕಂತೆ ನಿಯೋಜಿಸುವನು ಅವ ಅಜಿತ,
ಅವರಿವರ ದೂಷಣೆ ಪೋಷಣೆ ಸಲ್ಲ,
ನಾವು ಮಾಡಿದ್ದೇ ಫಲ ಬೇವು ಇಲ್ಲ ಬೆಲ್ಲ.

ಚಕ್ರಭ್ರಮಣ

ಪಾಪ ಕರ್ಮದಿಂದ ಚಿತ್ತ ಭ್ರಮಣೆ,
ಚಿತ್ತ ಭ್ರಮಣೆಯಿಂದ ಪಾಪ ಸಂಗ್ರಹಣೆ,
ಇದೊಂದು ರೀತಿಯ ಚಕ್ರ ಭ್ರಮಣ,
ಪಾರುಮಾಡುವುದು ಹರಿಸ್ಮರಣ-ಕರುಣ.

ವಿವಿಧ ದಾರಿ -ಒಬ್ಬನೇ ಹರಿ

ಜ್ಞಾನಯೋಗ ಭಕ್ತಿಯೋಗ ಯಜ್ಞಯಾಗ,
ಅಧ್ಯಯನ -ತಪ -ನಿಗ್ರಹ -ಕರ್ಮತ್ಯಾಗ,
ನಿವೃತ್ತಿ ಪ್ರವೃತ್ತಿ ದೃಢವೈರಾಗ್ಯ ಅನೇಕಮಾರ್ಗ,
ಅನೇಕ ಪ್ರಕಾರಗಳಿಂದ ಭಗವದ್ ಜ್ಞಾನಯೋಗ.

ಗುಣಸ್ವಭಾವ-ತಕ್ಕ ಅನುಭಾವ

ಸಾತ್ವಿಕ ರಾಜಸ ತಾಮಸ ನಿರ್ಗುಣಭಕ್ತಿ ಯೋಗ,
ಅವರವರ ಯೋಗ್ಯತಾನುಸಾರ ಅನುಭಾವ ಭಾಗ್ಯ,
ಭಗವಂತನ ಪೂರ್ಣಾನುಭವವದು ಅಸಂಭವ,
ಕುರುಡರು ಆನೆಯ ಕಂಡಂತೆ ತೆರ ತೆರ ಅನುಭವ.
[Contributed by Shri Govind Magal]

Thursday, 24 August 2017

Bhava Spandana - 7

ಭಾವ ಸ್ಪಂದನ by “ತ್ರಿವೇಣಿ ತನಯ

ಹುಡುಗಾಟ -ಹುಡುಕಾಟ

ಇರದಿರೆ ಹೃತ್ಕಮಲದಲಿ ಪ್ರಾಮಾಣಿಕ ಹುಡುಕಾಟ,
ಹೊರ ಆಚರಣೆಗಳೆಲ್ಲ ಬೂಟಾಟಿಕೆಯ ಹುಡುಗಾಟ,
ತೊಳೆ ಮನದ ಕೊಳೆ ಹರಿಸು ನೈಜಭಕ್ತಿಯ ಹೊಳೆ,
ಆತ್ಮಸಾಕ್ಷಾತ್ಕಾರದ ಎಳೆ- ಭಗವತ್ಸಾಕ್ಷಾತ್ಕಾರದ ಬೆಳೆ.

ಬೆಳಗು -ಬೆರಗು

ಕರುಣಿಸಿದ ಭಗವಂತ ಮತ್ತೊಂದು ಬೆಳಗು,
ಸಾಕ್ಷಿಯಾಗಲುಂಟು ವಿಸ್ಮಯಗಳ ಬೆರಗು,
ಸಾಕ್ಷಿಯಾದಾಗಲಷ್ಟೇ ತೆರೆದೀತು ಅದು ತೆರೆ,
ಅಹಂ ಮಮಗಳಲಿ ಬಿದ್ದು ಬೀಳದಿರಲಿ ಬರೆ.

ಹೆಂಡತಿ -ಅವರವರ ಗತಿ

ಸಾಧನೆಗೆ ಸಹಕರಿಸುವ ಹೆಂಡತಿ,
ಸ್ವರ್ಗವೇ ಅದು ಧರೆಗಿಳಿದ ರೀತಿ,
ಸಹಕಾರವೀಯದ ಅಸಹಜ ಸತಿ,
ನರಕ ತಂದಿಟ್ಟ ಅಸಹನೀಯ ವಿಕೃತಿ.

ಪಿಂಡ -ದಂಡ

ಬೇಡ ಹುಚ್ಚು ಅಂಧಾನುಕರಣೆ,
ಅರಿತು ಮಾಡುವುದು ಆಚರಣೆ,
ಗೊತ್ತಿಲ್ಲದೇ ಹಾಕುವ -ಪಿಂಡ,
ಅರ್ಥವಿಲ್ಲದಿರೆ ಆಯ್ತು-ದಂಡ.

ಶ್ರಾದ್ಧ -ಬೇಡಿಕೆಗಷ್ಟೇ ಬದ್ಧ

ಅವರವರ ಪುಣ್ಯ ಪಾಪದಿಂದ ಅವರವರ ಗತಿ,
ನೀನು ಹಾಕುವ ಪಿಂಡ ಬದಲಿಸಲಾರದು ಸ್ಥಿತಿ,
ಊರ್ಧ್ವ ಪಯಣದಲಿ ಏನಾದರೂ ಇದ್ರೆ ತಡೆ,
ಪ್ರಾರ್ಥನೆಯದುವೇ ಶ್ರಾದ್ಧ-ಬೇಡುತ್ತಾ ಬಿಡುಗಡೆ.
[Contributed by Shri Govind Magal]

Tuesday, 22 August 2017

Bhava Spandana - 6

ಭಾವ ಸ್ಪಂದನ by “ತ್ರಿವೇಣಿ ತನಯ

ತುತ್ತು ಇತ್ತವನ ಅರಿವು

ತುತ್ತು ಎತ್ತುವ ಮುನ್ನ ಇತ್ತು ತಿನ್ನು,
ಇತ್ತದ್ದು ಸಿಕ್ಕ ಮಹಾ ಸೌಭಾಗ್ಯವೆನ್ನು,
ಆಗಲಿ ಇತ್ತವನು ಅವನೆಂಬ ಅರಿವು,
ಆ ಅರಿವೇ ಆಗುವುದು ಮೋಕ್ಷದಾ ಹರಿವು.

ಪ್ರವೃತ್ತಿ-ನಿವೃತ್ತಿ-ಬಂಧಕ-ಮೋಚಕ

ಅವಿವೇಕಿಗೆ ಪ್ರವೃತ್ತಕರ್ಮ -ವಿವೇಕಿಗೆ ನಿವೃತ್ತ ಕರ್ಮ,
ಸಕಾಮ ಗೃಹಸ್ಥ ಧರ್ಮ-ನಿಷ್ಕಾಮ ಹರಿಪ್ರೀತಿ ಸ್ವಧರ್ಮ,
ಮೊದಲ ವರ್ಗ ಚಂದ್ರಲೋಕ-ಎರಡನೇದು ಸೂರ್ಯಲೋಕ,
ಧೂಮಮಾರ್ಗವದು ಬಂಧಕ-ಪ್ರೇಮ ಮಾರ್ಗವದು ಮೋಚಕ.

ಆಯಸ್ಕಾಂತ

ಸಹಾನುಭೂತಿಯೊಂದಿಗೆ ಮಂದಸ್ಮಿತ,
ಆಡುವವರು ಸದಾ ಒಳ್ಳೆಯ ಮಾತ,
ಚಾಚುವವರು ಸದಾ ಸಹಾಯ ಹಸ್ತ,
ಎಲ್ಲರನೂ ಸೆಳೆಯುವ ಆಯಸ್ಕಾಂತ.

ಕತ್ತಲು -ಬೆತ್ತಲು

ಲೋಕದಿ ದೇಹವಾಗಬಾರದು ಬೆತ್ತಲೆ,
ಮನ ಬೆತ್ತಲಾಗದಿರೆ ನೀಗದು ಕತ್ತಲೆ,
ದೇಹವ ಚೆಂದ ವಸ್ತ್ರಗಳಿಂದ ಮುಚ್ಚು,
ತತ್ವ ಶಾಸ್ತ್ರಕ್ಕಾಗಿ ಮುದದಿ ಮನವ ಬಿಚ್ಚು.

ಸ್ಮರಣ -ಅನುಕ್ಷಣ

ಮುಳುಗುತಿಹ --ಸೂರ್ಯ,
ನೆನಪಿಸುತಿಹ ಸಾಯಂಕಾರ್ಯ,
ಎಷ್ಟು ವಿಧದಲ್ಲಿ ವ್ಯಕ್ತ ಅವನ ಕರುಣೆ,
ತಪ್ಪದಿರಲಿ ಅನುಕ್ಷಣ ಅವನ ಸ್ಮರಣೆ.
[Contributed by Shri Govind Magal]

Monday, 21 August 2017

Śrī Rāghavēndra Stōtra: pūjyāya rāghavēndrāya- ಪೂಜ್ಯಾಯ ರಾಘವೇಂದ್ರಾಯ -

ನಮ್ಮ ಗುರುಗಳಾದ ಬನ್ನಂಜೆ ಗೋವಿಂದಾಚಾರ್ಯರು ತಮ್ಮ ನಾಲ್ಕು ಹಾಡುಗಳು ಎಂಬ ಪುಸ್ತಕದಲ್ಲಿ ಪ್ರಕಟಿಸಿರುವ ಶುದ್ಧಪಾಠದ ಪ್ರಕಾರ ಅಪ್ಪಣಾಚಾರ್ಯರ  ಶ್ರೀರಾಘವೇಂದ್ರ ಸ್ತೋತ್ರವುಶ್ರೀಮದ್ಭಿರ್ಹ್ಯಪ್ಪಣಾಭಿಧೈಃಎಂಬ ವಾಕ್ಯದೊಂದಿಗೆ ಮುಕ್ತಾಯವಾಗುತ್ತದೆ.
ಈಗ ಪ್ರಚಲಿತವಿರುವ, ಸ್ತೋತ್ರದ ಕೊನೆಯಲ್ಲಿ ಹೇಳುವ ಪೂಜ್ಯಾಯ ರಾಘವೇಂದ್ರಾಯ ಮತ್ತು ದುರ್ವಾದಿಧ್ವಾಂತರವಯೇ ಎಂಬ ಶ್ಲೋಕಗಳ ಮೂಲದಬಗ್ಗೆ ನನಗೆ ಹೆಚ್ಚು ವಿವರ ತಿಳಿದಿಲ್ಲ. ಆದರೆ, ನಮ್ಮ ನಿತ್ಯದ ಅನುಸಂಧಾನಕ್ಕಾಗಿ ಶ್ಲೋಕಗಳಿಗೂ ಅರ್ಥಚಿಂತನೆ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ
ಕೆಲವರು ಕೇವಲ ಪೂಜ್ಯಾಯ ರಾಘವೇಂದ್ರಾಯ ಎಂಬ ಶ್ಲೋಕದೊಂದಿಗೆ ಸ್ತೋತ್ರಪಾರಾಯಣವನ್ನು ಮುಗಿಸುತ್ತಾರೆ. ಆದರೆ ಶ್ಲೋಕದಲ್ಲಿ ಕರ್ತೃವಿನ ಮತ್ತು ಕ್ರಿಯಾಪದಗಳ ಉಲ್ಲೇಖವೇ ಇಲ್ಲದ ಕಾರಣ ಅಪೂರ್ಣವಾದ ಶ್ಲೋಕವನ್ನು ಹೇಳಿದಂತಾಗುತ್ತದೆ.
ಒಂದು ವಾಕ್ಯವು ಪೂರ್ಣವಾಗಿ ಅರ್ಥವಾಗಬೇಕಾಗಿದ್ದರೆ ಅದರಲ್ಲಿ ಕರ್ತೃ ಕರ್ಮ ಮತ್ತು ಕ್ರಿಯಾಪದಗಳು ಇರಲೇ ಬೇಕು. ಇಲ್ಲದಿದ್ದರೆ ಅದು ಅಪೂರ್ಣವಾಗುತ್ತದೆ.
 ಹಾಗಾಗಿ ಶ್ಲೋಕವನ್ನು ಹಲವೆಡೆ ಪ್ರಚಲಿತವಿರುವಂತೆ ದುರ್ವಾದಿಧ್ವಾಂತರವಯೇ ಎಂಬ ಶ್ಲೋಕದೊಂದಿಗೆ ಹೇಳಿದರೆ ಮಾತ್ರ ಅದು ಅರ್ಥಪೂರ್ಣವಾಗುತ್ತದೆ ಎಂಬುದಾಗಿ ನಮ್ಮ ಅಚಾರ್ಯರು ತಮ್ಮ ಪ್ರವಚನದಲ್ಲಿ ತಿಳಿಸಿಕೊಟ್ಟಿದ್ದಾರೆ.
*****
As per the text contained in our Pujya Bannanje Gōvindācāryaru’s book ‘Nālku Hāḍugaḷu’, Appaṇācārya’s Śrī Rāghavēndra stōtra ends with “śrīmadbhir'hyappaṇābhidhaiḥ” in the 32 ślōka.

As is currently in vogue, it is customary to chant two Ślōkas , at the end of the Rayara stōtra, it is not clear as to who is the composer of these two adjunct verses. However, it is also a practice to popularly chant these, in our daily prayers too. It is as such I have made an attempt to bring out their meanings here.

Many chant only the first ślōka of the two i.e. the one that starts with पूज्याय राघवेंद्राय (pūjyāya rāghavēndrāya) … However this first ślōka, by itself, does not have a verb (action) assigned to the subject (the one who is praying) i.e. pleader and his plea are unclear, to make the first Ślōka in isolation, a fully formed prayer.

As such, if the prayer has to be meaningful, both the Ślōkas have to be chanted in combination. This particular issue has been emphasised many times by our Ācāryaru in his talks, whenever these Ślōkas have come up for discussion.

ಪೂಜ್ಯಾಯ ರಾಘವೇಂದ್ರಾಯ ಸತ್ಯ-ಧರ್ಮ-ರತಾಯ
ಭಜತಾಂ ಕಲ್ಪವೃಕ್ಷಾಯ    ನಮತಾಂ ಕಾಮಧೇನವೇ ||
ದುರ್ವಾದಿ-ಧ್ವಾಂತ-ರವಯೇ ಸಜ್ಜನೇಂದೀವರೇಂದವೇ |
ಶ್ರೀ ರಾಘವೇಂದ್ರಗುರವೇ ನಮಃ ಕಾರುಣ್ಯಸಿಂಧವೇ ||

पूज्याय राघवेंद्राय सत्य-धर्म-रताय |
भजतां कल्पवृक्षाय नमतां कामधेनवे ||
दुर्वादि-ध्वांत-रवये, सज्जनेंदीवरेंदवे |
श्री राघवेंद्रगुरवे नमः कारुण्यसिंधवे ||

pūjyāya rāghavēndrāya satya-dharma-ratāya ca |
bhajatāṁ kalpavr̥kṣāya namatāṁ kāmadhēnavē ||
durvādi-dhvānta-ravayē sajjanēndīvarēndavē |
śrī rāghavēndraguravē namaḥ kāruṇyasindhavē ||

ಪದಚ್ಛೇದ: 
ಪೂಜ್ಯಾಯ, ರಾಘವೇಂದ್ರಾಯ, ಸತ್ಯಧರ್ಮರತಾಯ, , ಭಜತಾಮ್, ಕಲ್ಪವೃಕ್ಷಾಯ,    ನಮತಾಮ್, ಕಾಮಧೇನವೇ, ದುರ್ವಾದಿಧ್ವಾಂತರವಯೇ, ಸಜ್ಜನೇಂದೀವರೇಂದವೇ,            ಶ್ರೀರಾಘವೇಂದ್ರಗುರವೇ,       ನಮಃ, ಕಾರುಣ್ಯಸಿಂಧವೇ.  

Padacchēda: 
पूज्याय(pūjyāya), राघवेंद्राय(rāghavēndrāya) सत्यधर्मरताय(satyadharmaratāya) (ca), भजताम्(bhajatām), कल्पवृक्षाय(kalpavr̥kṣāya), नमताम्(namatām) कामधेनवे(kāmadhēnavē)
दुर्वादिध्वांतरवये(durvādidhvāntaravayē), सज्जनेंदीवरेंदवे(sajjanēndīvarēndavē), श्री राघवेंद्रगुरवे(śrīrāghavēndraguravē), नमः(namaḥ), कारुण्यसिंधवे(kāruṇyasindhavē).

ಅನ್ವಯಾರ್ಥ
ಪೂಜ್ಯಾಯಪೂಜ್ಯರಾದ, ಸತ್ಯಧರ್ಮರತಾಯಸತ್ಯವಾಕ್ಯ ಪಾಲನೆ ಮತ್ತು ಶುದ್ಧ ಧರ್ಮಾಚರಣೆಯಲ್ಲಿಯೇ ಆಸಕ್ತರಾದ, ಭಜತಾಂಸ್ತುತಿಸುವವರಿಗೆ, ಕಲ್ಪವೃಕ್ಷಾಯಕಲ್ಪವೃಕ್ಷದಂತೆ ಕೇಳಿದ್ದನ್ನು ಕೊಡುವ, ನಮತಾಂನಮಸ್ಕರಿಸುವವರಿಗೆ, ಕಾಮಧೇನವೇಕಾಮಧೇನುವಿನಂತೆ ಬಯಸಿದ್ದನ್ನು ಕೊಡುವ, ದುರ್ವಾದಿವೈದಿಕವಾದ ಸತ್ ಸಿದ್ಧಾಂತವನ್ನು ವಿರೋಧಿಸುವ ದುಷ್ಟವಾದಿಗಳೆಂಬ, ಧ್ವಾಂತಕತ್ತಲೆಗೆ, ರವಯೇಸೂರ್ಯನಂತಿರುವ, ಸಜ್ಜನೇಂದೀವರೇಂದವೇಸಜ್ಜನ ಇಂದೀವರಸಾಧುಸ್ವಭಾವದಜನರೆಂಬ ನೈದಿಲೆಗಳಿಗೆ, ಇಂದವೇಚಂದಿರನಂತೆ ಇರುವ ( ಆನಂದ ಕೊಡುವ) ಕಾರುಣ್ಯ ಸಿಂಧವೇಕರುಣೆಯ ಸಮುದ್ರದಂತಿರುವ, ರಾಘವೇಂದ್ರಾಯರಘುವಂಶ ಶ್ರೇಷ್ಠನಾದ ಶ್ರೀರಾಮನಿಗೆ, ರಾಘವೇಂದ್ರ ಗುರವೇ ಮತ್ತು ಶ್ರೀ ರಾಘವೇಂದ್ರ ಗುರುಗಳಿಗೆ, ನಮಃನಮಸ್ಕಾರವು

Synonyms:
पूज्याय(pūjyāya) – Revered one, सत्यधर्मरताय(satyadharmaratāya) – one who is a votary of truth and verily enthused to perform righteous activities, भजताम्(bhajatām) – to those who worship, कल्पवृक्षाय(kalpavr̥kṣāya) – grants everything that is sought like the kalpavr̥kṣa(tree of paradise) does, नमताम्(namatām) – to those who bow in reverence, कामधेनवे(kāmadhēnavē) – provides everything that is wished for like the Kāmadhēnu(divine cow) does, दुर्वादि (durvādi) – those  wicked antagonists of the path of sat(truth or knowledge) i.e., Vēdic philosophy, ध्वांत(dhvānta) – unto darkness, रवये(ravayē) – like the sun, सज्जनेंदीवरेंदवे(sajjanēndīvarēndavē) – सज्जन इंदीवर (sajjana indīvara) – to the lillies who are called good natured people, इंदवे(indave) – moon-like(blissful), कारुण्यसिंधवे(kāruṇya sindhavē) – like an ocean of compassion, राघवेंद्राय(rāghavēndrāya) – to the Lord Śrī Rāma, the supreme one in the Raghu clan, राघवेंद्र गुरवे (rāghavēndraguravē ca) – and to the guru Śrī Rāghavēndra, नमः(namaḥ) – my namaskāras(deference).

ತಾತ್ಪರ್ಯ:
ಎರಡೂ ಶ್ಲೋಕಗಳನ್ನು ಕೂಡಿಸದಿದ್ದರೆ ಅದು ಅಪೂರ್ಣವಾಗುತ್ತದೆ. ಕೂಡಿಸಿದರೆ ರಾಘವೇಂದ್ರಾಯ ಮತ್ತು ರಾಘವೇಂದ್ರ ಗುರವೇ ಎಂಬ ಎರಡು ಬೇರೆ ಬೇರೆ ಉಪಮೇಯಗಳು ಉಳಿಯುತ್ತವೆ.
ಗೊಂದಲವನ್ನು ಪರಿಹರಿಸುವ ಯಾವುದೇ ವಿವರಣೆಗಳು ನನಗೆ ಸಿಕ್ಕಿಲ್ಲವಾದ ಕಾರಣ ಎರಡೂ ಶ್ಲೋಕಗಳನ್ನು ರಾಯರು ಮತ್ತು ರಾಯರ ಉಪಾಸ್ಯಮೂರ್ತಿಯಾದ ಶ್ರೀ ರಾಮದೇವರು ಇಬ್ಬರಿಗೂ ಅನ್ವಯಿಸಿ ರಾಘವೇಂದ್ರಾಯ ರಾಘವೇಂದ್ರಗುರವೇ ಎಂಬುದಾಗಿ ಬಿಡಿಸಿ ಅರ್ಥಾನುಸಂಧಾನ ಮಾಡಲು ಪ್ರಯತ್ನಿಸಿದ್ದೇನೆ
ಜಾತಿ ಮತ ಧರ್ಮಗಳ ಹೇದವಿಲ್ಲದೇ ಎಲ್ಲರಿಂದಲೂ ಪೂಜ್ಯರಾದ, ಯಾವಾಗಲೂ ಸತ್ಯವಾಕ್ಯ ಪರಿಪಾಲನೆ ಮತ್ತು ಶುದ್ಧ ಧರ್ಮಾಚರಣೆಗಳಲ್ಲಿಯೇ ಆಸಕ್ತರಾದ, ಕಲ್ಪವೃಕ್ಷದಂತೆ ಒಂದೆಡೆ ಮೂಲವೃಂದಾವನದಲ್ಲಿದ್ದು ತಮ್ಮ ದರ್ಶನ ಮಾಡುವ ಭಕ್ತರು ಬಯಸಿದ್ದನ್ನು ಕೊಡುವ ಮತ್ತು ಕಾಮಧೇನುವಿನಂತೆ ತಮ್ಮನ್ನು ನಮಿಸುವ ಭಕ್ತರು ಕರೆದಲ್ಲಿಗೆ ಬಂದು ಅವರ ಮನೋಭೀಷ್ಟಗಳನ್ನು ದಯಪಾಲಿಸುವ, ಅವೈದಿಕ ಪ್ರಚಾರಗಳನ್ನು ಮಾಡಿ ಶುದ್ಧ ವೈದಿಕ ವಿಚಾರಗಳನ್ನು ಖಂಡಿಸುವ ದುರ್ವಾದಿಗಳೆಂಬ ಕತ್ತಲೆಗೆ ಸೂರ್ಯನಂತಿರುವ, ಸಜ್ಜನರೆಂಬ ನೈದಿಲೆಗಳಿಗೆ ಚಂದ್ರನಂತೆ ಆನಂದ ನೀಡುವ, (ಕಮಲವು ಸೂರ್ಯೋದಯದಿಂದ ಅರಳುವಂತೆ ನೈದಿಲೆಯು ಚಂದ್ರೋದಯದಿಂದ ಅರಳುತ್ತದೆ)
ಕರುಣೆಯ ಸಮುದ್ರದಂತಿರುವ ಶ್ರೀರಾಘವೇಂದ್ರಗುರುಗಳಿಗೆ ನಮಸ್ಕರಿಸುತ್ತೇನೆ ಎಂಬುದು ಎರಡು ಶ್ಲೋಕಗಳ ತಾತ್ಪರ್ಯ.

ವಿ.ಸೂ.
ಇಲ್ಲಿ ಕೂಡ  ಪ್ರಚಲಿತ ಪಾಠದಂತೆ 
ದುರ್ವಾದಿ-ಧ್ವಾಂತ-ರವಯೇ ವೈಷ್ಣವೇಂದೀವರೇಂದವೇ |       
ಶ್ರೀ ರಾಘವೇಂದ್ರಗುರವೇ ನಮೋತ್ಯಂತದಯಾಳವೇ || 
ಎಂಬ ಪಾಠಭೇದವಿದೆ. ಆದರೆ, ರಾಯರ ಭವ್ಯವಾದ ವೈಷ್ವಿಕ ವ್ಯಕ್ತಿತ್ವದ ಅಭಿವ್ಯಕ್ತಿಗೆ ಸಕಲ ಸಜ್ಜನರಿಗೂ ಪೂಜ್ಯರು ಮತ್ತು ಎಲ್ಲ ಉತ್ತಮ ಜೀವಿಗಳಿಗೂ ಕಷ್ಟ ಪರಿಹಾರ ಮಾಡಿ ಆನಂದ ನೀಡುವಂಥವರು ಎಂಬರ್ಥದ ಸಜ್ಜನೇಂದೀವರೇಂದವೇ ಎಂಬ ಪಾಠವೇ ಹೆಚ್ಚು ಸೂಕ್ತ..  
ಮತ್ತು ಅತ್ಯಂತ ದಯಾಳು ಅನ್ನುವುದಕ್ಕಿಂತ ಕರುಣೆಯ ಕಡಲು ಎನ್ನುವುದು ಹೆಚ್ಚು ಪ್ರಭಾವಶಾಲಿಯಾದ, ಒಳ್ಳೆಯ ಭಾವನೆಯನ್ನು ಉಂಟುಮಾಡುವ ಶಬ್ದ. ಹಾಗಾಗಿ ನಮ್ಮ ಆಚಾರ್ಯರು ಪ್ರಕಟಿಸಿರುವ ಹಾಗು ಹಲವಾರು ಪ್ರವಚನಗಳಲ್ಲಿ ಉಲ್ಲೇಖಿಸಿರುವ ಶ್ಲೋಕವನ್ನೇ ನಮ್ಮ ಅರ್ಥಾನುಸಂಧಾನಕ್ಕಾಗಿ ಬಳಸಿಕೊಂಡಿದ್ದೇನೆ.

Tātparya:
As mentioned before, when these two Ślōkas are not combined, the intent is incomplete. When both Ślōkas are used in conjunction, we would have two discrete similar sounding subjects -  राघवेंद्राय(rāghavēndrāya) and राघवेंद्रगुरवे (rāghavēndraguravē). 
This leads to some degree of confusion and to resolve this, as I did find any explanations elsewhere that could settle this satisfactorily, I have applied both these terms to Rayaru and Rayaru’s revered form of the Lord, namely Śrī Rāma. With this delineation, I have tried to bring out the meanings of the ślōkas.
One who never differentiated between caste or religion, one who is revered by all, one who at all times has been a votary of truth and an enthusiastic follower of pure righteous activities, like the kalpavr̥kṣa, he who grants everything that is sought, seated in the Mūlavr̥ndāvana (the original vr̥ndāvana at Mantrālaya), to those devotees who seek his darśana, and like the kāmadhēnu he comes over to wherever his devotees call him and grants them all that they wish for, in contrast to the darkness in the form those  wicked antagonists of the path of sat(truth or knowledge) he stands like the sun, spreading light in the form of vēdic philosophy, to the lily like good natured people he gives bliss like the moon(like the lotus blooms at sunrise, the water lily blooms at moonrise).
To the one who is like an ocean of compassion, Śrī Rāghavēndraguru I pay my deference, is the purport of these two ślōkas.

Note:
As per the extent texts of these two ślōkas, there is a slight difference in the second Ślōka as included in our discussion here. The one here is as per the text published by our Ācāryaru in his book. The second Ślōka in the versions in vogue is as under –
दुर्वादिध्वांतरवये वैष्णवेंदी वरेंदवे|
श्री राहावेंद्र गुरवे नमोत्यंतदयालवे||
durvādi-dhvānta-ravayē vaiṣṇavēndīvarēndavē |
śrī rāghavēndraguravē namōtyantadayāḷavē ||

Rayaru’s personality was a magnificent one, that appealed to all good people i.e. a sage with a universal appeal cutting across religious, caste, race, gender etc As such, the terms used in our Ācāryaru’s text reflect these qualities in a very apt manner is our take. Also, instead of दयालु(dayāḷu) – kindness, it would be more appropriate as per Rayaru’s persona to visualise him as compassionate or कारुण्य (kāruṇya), as per the version we have adopted here. By and large there is no significant deviation in the meanings of the verses, however.