Friday, 11 August 2017

Śrī Rāghavēndra Stōtra Ślōka -4 ಶ್ರೀ ರಾಘವೇಂದ್ರ ಸ್ತೋತ್ರ ಶ್ಲೋಕ ೪


ಶ್ಲೋಕ



ಶ್ರೀ-ರಾಘವೇಂದ್ರೋ ಹರಿ-ಪಾದ-ಕಂಜ- 

ನಿಷೇವಣಾಲ್ಲಬ್ಧ-ಸಮಸ್ತ-ಸಂಪತ್ |

ದೇವ-ಸ್ವಭಾವೋ ದಿವಿಜ-ದೃಮೋಯ-

ಮಿಷ್ಟಪ್ರದೋ ಮೇ ಸತತಂ ಭೂಯಾತ್ ||||

श्रीराघवेन्द्रो हरि-पाद-कञ्ज-

निषेवणाल्लब्धसमस्तसम्पत्

देव-स्वभावो दिविज-द्रुमोय-

मिष्टप्रदो मे सततं भूयात् ४॥


śrī-rāghavēndrō hari-pāda-kan̄ja-
niṣēvaṇāllabdha-samasta-sampat |
dēva-svabhāvō divija-dr̥mōya-
miṣṭapradō mē satataṁ sa bhūyāt ||4||
ಪದಚ್ಛೇದ :
ಶ್ರೀ ರಾಘವೇಂದ್ರಃ, ಹರಿಪಾದಕಂಜನಿಷೇವಣಾತ್, ಲಬ್ಧ, ಸಮಸ್ತಸಂಪತ್, ದೇವಸ್ವಭಾವಃ, ದಿವಿಜದೃಮಃ, ಅಯಂ, ಇಷ್ಟಪ್ರದಃ, ಮೇ, ಸತತಂ, ಸಃ, ಭೂಯಾತ್.
Padacchēda:

श्री राघवेंद्रः(śrī rāghavēndraḥ) हरिपादकञ्जनिषेवणात्(haripādakan̄janiṣēvaṇāt),ब्ध(labdha), समस्तसम्पत्(samastasampat) देवस्वभावः(dēvasvabhāvaḥ) दिविजद्रुमः(divijadr̥maḥ) यं(ayaṁ)

इष्टप्रदः(iṣṭapradaḥ) मे() सततं(satataṁ) सः(saḥ) भूयात्(bhūyāt).


ಅನ್ವಯಾರ್ಥ:
ಸಃ ಶ್ರೀ ರಾಘವೇಂದ್ರಃಕಾಂತಿಯುಕ್ತರಾದ  ರಾಘವೇಂದ್ರರು, ಹರಿಪಾದಕಂಜಭಗವಂತನ ಪಾದಕಮಲಗಳ,  ನಿಷೇವಣಾತ್ವಿಶೇಷವಾದ ನಿರಂತರ ಸೇವೆಯಿಂದ, ಲಬ್ಧಪಡೆದಂತಃ, ಸಮಸ್ತಸಂಪತ್ಸಕಲ ಸಂಪತ್ತುಗಳನ್ನು ಉಳ್ಳವರು, ದೇವಸ್ವಭಾವಃದೈವಿಕವಾದ ಸ್ವಭಾವ ಉಳ್ಳ,  ದಿವಿಜದೃಮಃ, - ದಿವಿಜದೇವತೆಗಳಿಗೆ ಸಂಬಂಧಪಟ್ಟ, ದೃಮಮರ(ವೃಕ್ಷ). ದೇವಲೋಕದ ಕಲ್ಪವೃಕ್ಷದಂತೆ ಭಕ್ತರು ಬಯಸಿದ್ದನ್ನೆಲ್ಲ ಕೊಡುವವರು. ಅಯಂಅಂತಃ ರಾಘವೇಂದ್ರರು, ಮೇ -ನನಗೆ,  ಸತತಂ- ಯಾವಾಗಲೂ,  ಇಷ್ಟಪ್ರದಃಬಯಸಿದ್ದನ್ನು ಕೊಡುವಂಥವರು,  ಭೂಯಾತ್ಆಗಲಿ.


Synonyms:
सः श्री राघवेंद्रः(saḥ śrī rāghavēndraḥ) – the resplendent Śrī Rāghavēndra, हरिपादकञ्ज (haripādakan̄ja) – the lotus feet of the Lord, निषेवणात्(niṣēvaṇāt) – through a special relentless service, ब्ध(labdha) - received, समस्तसम्पत्(samastasampat) – all wealth, देवस्वभावः(dēvasvabhāvaḥ) – divine natured,  दिविजद्रुमः(divijadr̥maḥ)दिविज((divija) – concerning the divinities, द्रुमः(dr̥maḥ) – tree; like the कल्पवृक्ष(Kalpavr̥kṣa) the eternal tree of the divine world, he grants devotees all that they wish for,  यं(ayaṁ) – such a one, Rayaru, मे() – to me, सततं(satataṁ) – at all times, इष्टप्रदः(iṣṭapradaḥ) – one that would grant all that is sought or longed for, भूयात्(bhūyāt) – be.


ತಾತ್ಪರ್ಯ:
ಹಿಂದಿನ ಶ್ಲೋಕದಲ್ಲಿ ರಾಯರು ಭಗವದ್ಭಕ್ತರಿಗೆ ಬಯಸಿದ್ದೆಲ್ಲವನ್ನೂ ಕೊಡಬಲ್ಲವರು ಎಂದು ಹೇಳಲಾಗಿದೆ. ಅದನ್ನು ನೋಡಿದಾಗ, ನಮಗೆ ಅಷ್ಟೆಲ್ಲಾ ಕೊಡಲು ಅವರಿಗೆ ಹೇಗೆ ಸಿಕ್ಕಿತು ಎಂಬ ಪ್ರಶ್ನೆ ಬರಬಹುದು. ಅದಕ್ಕೆ ಶ್ಲೋಕದಲ್ಲಿ ಉತ್ತರ ಕೊಟ್ಟಿದ್ದಾರೆ. 

ರಾಯರು ನಿರಂತರವಾಗಿ ಅಚಲವಾದ ಭಕ್ತಿಯಿಂದ ಭಗವಂತನ ಪಾದಗಳ ಸೇವೆ ಮಾಡಿ ಭಗವಂತನ ಅನುಗ್ರಹ ಪಡೆದು ಐಹಿಕ ಮತ್ತು ಪಾರಮಾರ್ಥಿಕವಾದ ಸಕಲ ಸಂಪತ್ತನ್ನೂ ಪಡೆದವರು.

ಕಿಮಲಭ್ಯಂ ಭಗವತಿ ಪ್ರಸನ್ನೇ ಶ್ರೀನಿಕೇತನೇಎಂಬ ಜ್ಞಾನಿಗಳ ಮಾತಿನಂತೆ ಸಮಸ್ತ ಸಂಪತ್ತುಗಳ ಒಡತಿಯಾದ ಲಕ್ಷ್ಮೀದೇವಿಗೇ ಆಶ್ರಯನಾದ ಭಗವಂತನ ಅನುಗ್ರಹವೇ ಸಿಕ್ಕಮೇಲೆ ಜಗತ್ತಿನ್ನಲ್ಲಿ ಅಲಭ್ಯವಾದದ್ದಾರೋ ಯಾವುದು ? ಹಾಗಾಗಿ, ರಾಯರು ಸಾಗರದಂತಃ ಭಗವಂತನ ಅನುಗ್ರಹದ ಒಂದು ತುಣುಕನ್ನು ನಮಗೆ ನೀಡಲು ಎಲ್ಲ ರೀತಿಯಲ್ಲಿಯೂ ಸಮರ್ಥರೇ ಆಗಿದ್ದಾರೆ.

ರಾಯರಿಗೆ ಭಕ್ತರು ಬಯಸಿದ್ದನ್ನು ಕೊಡಬೇಕೆಂಬ ಭಾವನೆ ಹೇಗೆ ಬಂತು ಎಂದರೆ ಅವರು ದೇವತೆಗಳಿಗೆ ಸಹಜವಾದಂಥ ಕ್ಷಮಾ, ದಾನಾದಿ ಸ್ವಭಾವದವರು. ವಿಶೇಷವಾಗಿ ದೇವಸ್ವಭಾವವೆಂದರೆ ಸತ್ತ್ವವೇ ಪ್ರಧಾನವಾಗಿ ಉಳ್ಳ ಸ್ವಭಾವ.

ಭಗವಂತನ ಅನುಗ್ರಹದಿಂದ ಎಲ್ಲವನ್ನೂ ಪಡೆದಿರುವುದರಿಂದಲೇ ಭಕ್ತರು ಬಯಸಿದ್ದನ್ನೆಲ್ಲವನ್ನೂ ಕಲ್ಪವೃಕ್ಷದಂತೆ ಕೊಡಬಲ್ಲವರು. ಅಂತಃ ಶ್ರೀ ರಾಘವೇಂದ್ರರು ನನ್ನ ಇಷ್ಟಾರ್ಥಗಳನ್ನು ಯಾವಾಗಲೂ ಈಡೇರಿಸಲಿ ಎಂಬುದು ಶ್ಲೋಕದ ಆಶಯ.

ಇಲ್ಲಿ, ಯಾವಾಗಲೂ ಇಷ್ಟಾರ್ಥಗಳನ್ನು ಈಡೇರಿಸಲಿ ಎಂಬ ಮಾತಿನ ಹಿಂದೆ ಒಂದು ವಿಶೇಷವಿದೆ. ಸಾಮಾನ್ಯವಾಗಿ  ಪದೇ ಪದೇ ಅದು ಬೇಕು ಇದು ಬೇಕು ಎಂದು ಕೇಳುತ್ತಿದ್ದರೆ ಯಾರಿಗಾದರೂ ಕೋಪ ಬಂದೇ ಬರುತ್ತದೆ. ಆದರೆ, ಹೇಗೆ ಒಬ್ಬ ತಾಯಿ ತನ್ನ ಮಗು ಹಸಿವೆಯೆಂದು ಹಾಲಿಗಾಗಿ ಪದೇ ಪದೇ ತನ್ನನ್ನು ಪೀಡಿಸಿದರೆ ತಾಯಿ ಸ್ವಲ್ಪವೂ ಕೋಪವಿಲ್ಲದೇ ಪ್ರೀತಿವಾತ್ಸಲ್ಯದಿಂದ ತನ್ನ ಮಗುವಿನ ಹಸಿವೆಯನ್ನು ನೀಗಿಸುತ್ತಾಳೆಯೋ ಹಾಗೆಯೇ ಮಾತೃಹೃದಯಿಗಳೂ, ದೈವಿಕವಾದ ಕ್ಷಮಾ ಕರುಣಾದಿ ಗುಣಸಂಪನ್ನರೂ ಭಗವಂತನ ಅನುಗ್ರಹದಿಂದ ಸಕಲವನ್ನು ಪಡೆದವರೂ ಆದ ಗುರುರಾಯರು ನಮ್ಮ ಎಲ್ಲ ಅಭೀಷ್ಟಗಳನ್ನು ಪದೇ ಪದೇ ಯಾವುದೇ ಬೇಸರವಿಲ್ಲದೆ ವಾತ್ಸಲ್ಯದಿಂದ ಈಡೇರಿಸಲೆಂದು ಪ್ರಾಥಿಸುವುದು ಮಾತಿನ ಉದ್ದೇಶ.


Tātparya:
In the previous ślōka it was stated that Rayaru is capable of granting everything that is wished for by a devotee of the Lord. A question might then arise, how does he obtain what he grants us. This doubt is set to rest in this ślōka.

Through his relentless, unwavering devoted service, at the Lord’s feet, Rayaru was blessed with God’s grace and with it, he was granted all material and spiritual wealth.

As the wise ones say, “किमलभ्यां भगवति प्रसन्ने श्री निकेतने (Kimalabhyaṁ bhagavati prasannē śrīnikētanē” - what is inaccessible to him that enjoys the grace of The Lord, the One who shelters Lakṣmīdēvi, the divine guardian of all wealth?   As such, Rayaru is capable in all ways to grant us a tad bit from the ocean of grace that he is blessed with by the Lord.

If one wonder how Rayaru has this fondness to grant devotees all that they wish for, it is because he is endowed with those innate traits like compassion, charity etc., which are attributes that are typical in the deities’ nature. In particular, देवस्वभावः(dēvasvabhāvaḥ) means primarily सत्त्व(sattva) (purveyors of the path of light or truth) oriented in nature.    

As he has the Lord’s grace and been blessed with everything, he is capable of granting whatever a devotee seeks, much like the कल्पवृक्ष(Kalpavr̥kṣa). May such a one that he is, Śrī Rāghavēndra, grant me all that I seek, at all times, is this ślōka’s proposition.

There is something special in the ‘may he grant at all times that which is sought’ that is stated here. Generally, when someone continues to seek ‘this and that’ at all times, it might definitely prove annoy anyone. However, just as a mother repeatedly yields to the frequent wails of her hungry baby and satiates its hunger with maternal love, Guru Rayaru too who has a maternal heart, imbued with divinely compassion, empathy etc, has been blessed with everything by the Lord’s grace, may he continue to grant us everything that we seek, affectionately and without disappointment, is the intended thought here.

(Original by Śrī  Krishna B R in Kannada, translation to English / Devanagari by Śrī Prasad B S)

No comments:

Post a Comment

ಗೋ-ಕುಲ Go-Kula