Tuesday, 15 August 2017

Śrī Rāghavēndra Stōtra Ślōkas 10-11 ಶ್ರೀ ರಾಘವೇಂದ್ರ ಸ್ತೋತ್ರ ಶ್ಲೋಕ ೧೦ -೧೧.

ಶ್ಲೋಕ ೧೦.೧೧.
Ślōka  10.11.

ಸರ್ವತಂತ್ರಸ್ವತಂತ್ರೋಸೌ ಶ್ರೀಮಧ್ವಮತವರ್ಧನಃ |
ವಿಜಯೀಂದ್ರಕರಾಬ್ಜೋತ್ಥ ಸುಧೀಂದ್ರವರಪುತ್ರಕಃ ||೧೦||
ಶ್ರೀರಾಘವೇಂದ್ರೋ ಯತಿರಾಡ್-ಗುರುರ್ಮೇ ಸ್ಯಾದ್-ಭಯಾಪಹಃ |                                
ಜ್ಞಾನ-ಭಕ್ತಿ-ಸುಪುತ್ರಾಯುರ್ಯಶಃ ಶ್ರೀ ಪುಣ್ಯ ವರ್ಧನಃ ||೧೧||

सर्वतन्त्रस्वतन्त्रोऽसौ श्रीमध्वमतवर्धनः ।
विजयीन्द्रकराब्जोत्थ सुधीन्द्रवरपुत्रकः ॥ १०॥
श्रीराघवेन्द्रो यतिराड्-गुरुर्मे स्याद्-यापहः
ज्ञान-भक्ति-सुपुत्रायुर्यशः श्री पुण्य वर्धनः ॥ ११॥

sarvatantrasvatantrōsau śrīmadhvamatavardhanaḥ |
vijayīndrakarābjōt'tha sudhīndravaraputrakaḥ ||10||
śrīrāghavēndrō yatirāḍ-gururmē syād-bhayāpahaḥ |
jñāna-bhakti-suputrāyuryaśaḥ śrī puṇya vardhanaḥ ||11||

ಪದಚ್ಛೇದ:

ಸರ್ವತಂತ್ರಸ್ವತಂತ್ರಃ, ಅಸೌ, ಶ್ರೀಮಧ್ವಮತವರ್ಧನಃ, ವಿಜಯೀಂದ್ರಕರಾಬ್ಜೋತ್ಥ ಸುಧೀಂದ್ರವರಪುತ್ರಕಃ, ಶ್ರೀ ರಾಘವೇಂದ್ರಃ, ಯತಿರಾಟ್, ಗುರುಃ, ಮೇ, ಸ್ಯಾತ್, ಭಯಾಪಹಃ, ಜ್ಞಾನಭಕ್ತಿಸುಪುತ್ರಾಯುರ್ಯಶಃ ಶ್ರೀಪುಣ್ಯವರ್ಧನಃ

padacchēda:

सर्वतन्त्रस्वतंत्रः(sarvatantrasvatantraḥ), असौ(asau), श्रीमध्वमतवर्धनः(śrīmadhvamatavardhanaḥ), विजयीन्द्रकराब्जोत्थ(vijayīndrakarābjōt'tha) सुधीन्द्रवरपुत्रकः(sudhīndravaraputrakaḥ), श्री राघवेंद्रः(śrī rāghavēndraḥ), यतिराट्(yatirāṭ), गुरुः(guruḥ), मे(), स्यात्(syāt), भयापहः(bhayāpahaḥ), ज्ञानभक्तिसुपुत्रायुर्यशः (jñānabhaktisuputrāyuryaśaḥ), श्रीपुण्यवर्धनः(śrīpuṇyavardhanaḥ).

ಅನ್ವಯಾರ್ಥ: 

ಸರ್ವತಂತ್ರ ತಂತ್ರಾಗಮಾದಿ ಎಲ್ಲಾ ಶಾಸ್ತ್ರಗಳಲ್ಲಿ, ಸ್ವತಂತ್ರಃ ಗುರುಗಳ ಅಪೇಕ್ಷೆಯಿಲ್ಲದೆ ಸ್ವಯಂ ಪ್ರತಿಭೆಯಿಂದಲೇ ಪಾಂಡಿತ್ಯವನ್ನು ಗಳಿಸಿದಂತಃ, ಶ್ರೀ ಮಧ್ವಮತ ಶ್ರೀಮನ್ಮಮಧ್ವಾಚಾರ್ಯರ ಸತ್ಸಿದ್ಧಾಂತವನ್ನು, ವರ್ಧನಃ- ಬೆಳೆಸಿದಂತಃ, ವಿಜಯೀಂದ್ರಕರಾಬ್ಜೋತ್ಥ ವಿಜಯೀಂದ್ರತೀರ್ಥರ ಕರಕಮಲಗಳಲ್ಲಿ ಬೆಳೆದ, ಸುಧೀಂದ್ರ ವರಪುತ್ರಕಃ- ಸುಧೀಂದ್ರತೀರ್ಥರ ಶ್ರೇಷ್ಠ ಶಿಷ್ಯರಾದ, ಜ್ಞಾನ- ಭಗವಂತನ ಜ್ಞಾನ, ಭಕ್ತಿ- ಭಗವಂತನಲ್ಲಿ ಶುದ್ಧವಾದ ಭಕ್ತಿಸುಪುತ್ರ ಉತ್ತಮರಾದ ಮಕ್ಕಳು/ಶಿಷ್ಯರು, ಆಯುಃ- ಆರೋಗ್ಯಪೂರ್ಣವಾದ ದೀರ್ಘಾಯುಸ್ಸು, ಯಶಃ ಲೋಕ ಲೋಕಗಳಲ್ಲೂ ಹರಡಿದಂತಃ ಕೀರ್ತಿಶ್ರೀ ಭೌತಿಕ ಮತ್ತು ಆಧ್ಯಾತ್ಮಿಕವಾದ ಸಂಪತ್ತು ಮತ್ತು, ಪುಣ್ಯವರ್ಧನಃ ಪುಣ್ಯಾದಿಗಳನ್ನು ಬೆಳೆಸುವಂತಃ
ಯತಿರಾಟ್ ಯತಿಗಳಿಗೆಲ್ಲಾ ರಾಜರಂತಿರುವ, ಗುರುಃ ಗುರುಗಳಾದ, ಅಸೌ ಶ್ರೀರಾಘವೇಂದ್ರಃ ರಾಘವೇಂದ್ರರು, ಮೇ ನನ್ನ, ಭಯ- ಭಯಗಳನ್ನು, ಆಪಹಃ ಹೋಗಲಾಡಿಸುವಂಥವರು, ಸ್ಯಾತ್- ಆಗಲಿ.

Synonyms:

सर्वतन्त्र(sarvatantra) – encompassing the tantra(incantations concerned primarily with spells, mysticism  etc) and āgama(traditional doctrines and precept) scriptures,  स्वतंत्रः(svatantraḥ) – of such scholarship attained without inputs from his gurus and of his own merits,  श्रीमध्वमत(śrīmadhvamata) – of the sat’siddhanta or philosophy of Ācārya Madhva, वर्धनः(vardhanaḥ) - progression, विजयीन्द्रकराब्जोत्थ(vijayīndrakarābjōt'tha) – grown from the lotus-like palms of Śrī Vijayīndrararu,  सुधीन्द्र वरपुत्रकः(sudhīndravaraputrakaḥ) – the best pupil of Śrī Sudhīndra Tīrtharu, ज्ञान (jñāna)- knowledge of the Lord, भक्ति (bhakti) – of pure devotion in the Lord, सुपुत्र (suputra) – of good children/ pupils, आयुः(āyuḥ) – long and healthy life, यशः(yaśaḥ) – fame spread across all the worlds,   श्री(śrī) – material and spiritual wealth and, पुण्यवर्धनः(puṇyavardhanaḥ) – that which augments merits etc., यतिराट्(yatirāṭ) – King like to all the ascetics,  गुरुः(guruḥ) – the one who is the guru, असौ श्रीराघवेंद्रः(asau śrīrāghavēndraḥ) – this Śrī Rāghavēndra, मे() - mine, भय (bhaya) – fears,  आपहः(āpahaḥ) – drive away, स्यात्(syāt) – may it be so.

ತಾತ್ಪರ್ಯ:

ಶ್ಲೋಕದಲ್ಲಿ ರಾಘವೇಂದ್ರಸ್ವಾಮಿಗಳ ಸ್ವಯಮ್ ಪ್ರತಿಭೆಯ ಬಗ್ಗೆ ಹೇಳಿದ್ದಾರೆ.. 
ರಾಘವೇಂದ್ರ ಸ್ವಾಮಿಗಳು ವಿಜಯೀಂದ್ರ ತೀರ್ಥರ ಶಿಷ್ಯರಾದ ಸುಧೀಂದ್ರ ತೀರ್ಥರಲ್ಲಿ ಶಿಷ್ಯತ್ವವನ್ನು ಮಾಡಿದ್ದರೂ ಕೂಡ ಸಕಲ ಶಾಸ್ತ್ರಗಳಲ್ಲಿ ಸ್ವಯಮ್ ಪ್ರತಿಭೆಯಿಂದಲೇ  ಪಾಂಡಿತ್ಯವನ್ನು ಗಳಿಸಿದವರು ಹಾಗಾಗಿ ಯಾರ ಸಹಾಯವೂ ಇಲ್ಲದೆಯೇ ಸಕಲ ಶಾಸ್ತ್ರಗ್ರಂಥಗಳಲ್ಲಿ ಸ್ವಚ್ಛಂದವಾಗಿ ವಿಹರಿಸಬಲಂಥವರು. ಮಗುವಾಗಿದ್ದಾಗ ವಿಜಯೀಂದ್ರರ ಕೈಯ್ಯಲ್ಲಿ ಆಡಿಬೆಳೆದವರು. ಮೇಲಾಗಿ ಸುಧೀಂದ್ರ ತೀರ್ಥರು ಇಂಥಾ ಅತ್ಯುತ್ತಮ ಶಿಷ್ಯನನ್ನು ಪಡೆಯುವ ಬಯಕೆಯಿಂದ ಹಂಬಲಿಸಿ ಹಂಬಲಿಸಿ ಭಗವಂತನನ್ನು ಬೇಡಿ ಭಗವಂತನನುಗ್ರಹದಿಂದಲೇ ಪಡೆದಂತಃ ವರಪುತ್ರರು. ವರಪುತ್ರ ಸುಧೀಂದ್ರರು ಮಗನಂತೆ ಪ್ರೀತಿಸಿದಂತಃ ಸರ್ವಶ್ರೇಷ್ಠ ಶಿಷ್ಯ ನಮ್ಮ ಶ್ರೀ ರಾಘವೇಂದ್ರಸ್ವಾಮಿಗಳು
ತಮ್ಮ ಅದ್ಭುತವಾದ ಪಾಂಡಿತ್ಯದಿಂದಲೇ ಎಲ್ಲಾ ಪ್ರತಿವಾದಿಗಳನ್ನು ನಿಗ್ರಹಿಸಿ ಆಚಾರ್ಯ ಮಧ್ವರ ಸತ್ ಸಿದ್ಧಾಂತವನ್ನು ಅನಿತರಸಾಧಾರಣವಾಗಿ ಬೆಳೆಸಿದಂತಃ ಮಹಾಮಹಿಮರು
ಇಂತಃ ರಾಘವೇಂದ್ರ ಸ್ವಾಮಿಗಳು ನನ್ನ ಎಲ್ಲ ರೀತಿಯ ಭಯಗಳನ್ನು ಹೋಗಲಾಡಿಸಲಿ ಎಂಬುದು ಶ್ಲೋಕದ ಅನುಸಂಧಾನ.

Tātparya:

This ślōka covers the self-reputation of Rāghavēndraswami.

Though Rāghavēndra swami was a pupil of Śrī Sudhīndra Tīrtharu who in turn, was the disciple of Śrī Vijayīndra Tīrtharu, his meritorious scholarship in all branches of the scriptures, was self-built.  As such, he could engage in the analyses of the scriptural texts with total freedom, unaided by any external support. As a child he played and grew in the hands of Śrī Vijayīndra Tīrtharu. Above all, Śrī Sudhīndra Tīrtharu had longed for and prayed to the Lord for an exemplary pupil such as Rāghavēndraru. वरपुत्र(varaputra) – an exemplary pupil who was loved much like a son by Śrī Sudhīndra Tīrtharu, was our Śrī Rāghavēndrasvāmigaḷu.

His had great reputation, prevailing over all his opponents with felicity, through his brilliant exposition and exquisite scholarship in the sat’ sid'dhānta of Ācārya Madhva.
May such Śrī Rāghavēndrasvāmigaḷu help me rid all my fears is the contention of this Ślōka.

 (Original by Śrī Krishna B R in Kannada, translation to English / Devanagari by Śrī Prasad B S)

No comments:

Post a Comment

ಗೋ-ಕುಲ Go-Kula