Wednesday, 16 August 2017

Śrī Rāghavēndra Stōtra Ślōkas 28-29 ಶ್ರೀ ರಾಘವೇಂದ್ರ ಸ್ತೋತ್ರ ಶ್ಲೋಕ ೨೮-೨೯

ಶ್ಲೋಕ -೨೮.   
Ślōka 28:

ಏತತ್ ಸ್ತೋತ್ರಂ ಸಮುಚ್ಚಾರ್ಯ ಗುರು-ವೃಂದಾವನಾಂತಿಕೇ
ದೀಪ-ಸಂಯೋಜನಾಜ್ಜ್ಞಾನಂ ಪುತ್ರ-ಲಾಭೋ ಭವೇದ್ ಧ್ರುವಮ್ ||೨೮||

एतत्स्तोत्रं समुच्चार्य गुरु-वृंदानांतिके
दीपसंयोजनाज्ञ्ज्ञानं पुत्र-लाभो भवेद्- ध्रुवम् ॥२८॥

ētat stōtraṁ samuccārya guru-vr̥ndāvanāntikē |
dīpa-sanyōjanājjñānaṁ putra-lābhō bhavēd dhruvam ||28||

ಪದಚ್ಛೇದ:
ಏತತ್, ಸ್ತೋತ್ರಮ್, ಸಮುಚ್ಚಾರ್ಯ, ಗುರುವೃಂದಾವನಾಂತಿಕೇ, ದೀಪಸಂಯೋಜನಾತ್, ಜ್ಞಾನಮ್, ಪುತ್ರಲಾಭಃ, ಭವೇತ್, ಧ್ರುವಮ್.

padacchēda:
एतत्(Ētat), स्तोत्रम्(stōtram), समुच्चार्य(samuccārya), गुरुवृंदानांतिके(guruvr̥ndāvanāntikē), दीपसंयोजनात्(dīpasanyōjanāt’), ज्ञानं(jñānam), पुत्रलाभः(putralābhaḥ), भवेत्(bhavēt), ध्रुवम्(dhruvam)
.
ಶ್ಲೋಕ -೨೯.
Ślōka 29:

ಪರ-ವಾದಿ-ಜಯೋ ದಿವ್ಯ-ಜ್ಞಾನ-ಭಕ್ತ್ಯಾದಿ-ವರ್ಧನಮ್|
ಸರ್ವಾಭೀಷ್ಟಾರ್ಥ-ಸಿದ್ಧಿಃ  ಸ್ಯಾನ್ನಾತ್ರ ಕರ್ಯಾ ವಿಚಾರಣಾ||೨೯||

पर-वादि-जयो दिव्य-ज्ञान-भक्त्यादि-वर्धनम्
सर्वाभीष्टार्थ-सिद्धिः स्यान्नत्र कार्या विचारणा ॥२९॥

para-vādi-jayō divya-jñāna-bhaktyādi-vardhanam |
sarvābhīṣṭārtha-sid'dhiḥ syānnātra karyā vicāraṇā ||29||
ಪದಚ್ಛೇದ:
ಪರವಾದಿಜಯಃ, ದಿವ್ಯಜ್ಞಾನಭಕ್ತ್ಯಾದಿವರ್ಧನಮ್, ಸರ್ವಾಭೀಷ್ಟಾರ್ಥಸಿದ್ಧಿಃ, ಸ್ಯಾತ್, , ಅತ್ರ, ಕಾರ್ಯಾ, ವಿಚಾರಣಾ.

padacchēda:
परवादिजयः(paravādijayaḥ), दिव्यज्ञानभक्त्यादिवर्धनम् (divyajñānabhaktyādivardhanam), सर्वाभीष्टार्थसिद्धिः(sarvābhīṣṭārthasid'dhiḥ), स्यात्(syāt), न(na), अत्र(atra), कार्या(kāryā), विचारणा(vicāraṇā).

ಅನ್ವಯಾರ್ಥ ಶ್ಲೋಕ ೨೮.೨೯.
ಏತತ್ ಸ್ತೋತ್ರಂ- ರಾಘವೇಂದ್ರ ಸ್ತೋತ್ರವನ್ನು, ಸಮುಚ್ಚಾರ್ಯ  ಹೇಳುತ್ತಾ, ಗುರುವೃಂದಾವನಾಂತಿಕೇಗುರುಗಳಾದ ಶ್ರೀರಾಘವೇಂದ್ರರ ವೃಂದಾವನದಬಳಿ, ದೀಪ ಸಂಯೋಜನಾತ್ದೀಪ ಹಚ್ಚುವುದರಿಂದ, ಜ್ಞಾನಂಭಗವಂತನ ಜ್ಞಾನವೂ, ಪುತ್ರಲಾಭಃಉತ್ತಮ ಮಕ್ಕಳ (ಶಿಷ್ಯರ) ಪ್ರಾಪ್ತಿಯು, ಧ್ರುವಂ ಭವೇತ್ಖಂಡಿತವಾಗಿಯೂ ಅದೀತು. ಪರವಾದಿ ಜಯಃಸತ್ ಶಾಸ್ತ್ರ ವಿರೋಧಿಗಳಾದ, ವೇದ ವಿರೋಧಿಗಳಾದ ಪ್ರತಿವಾದಿಗಳ ವಿರುದ್ಧ ಜಯವೂ, ದಿವ್ಯದೈವಿಕವಾದ, ಜ್ಞಾನಜ್ಞಾನ, ಭಕ್ತಿ ಆದಿಭಕ್ತಿಯೇ ಮೊದಲಾದವುಗಳ, ವರ್ಧನಂಅಭಿವೃದ್ಧಿಯು, ಸರ್ವಾಭೀಷ್ಟಾರ್ಥ ಸಿದ್ಧಿಃ ಸ್ಯಾತ್ಸರ್ವ- ಎಲ್ಲಬಗೆಯ, ಅಭೀಷ್ಟಾರ್ಥಬಯಕೆಗಳು, ಸಿದ್ಧಿಃ ಸ್ಯಾತ್ಈಡೇರಿಯಾವು. ಅತ್ರ ವಿಷಯದಲ್ಲಿ, ವಿಚಾರಣಾಸಂಶಯವು, ಕಾರ್ಯಾಮಾಡತಕ್ಕುದಲ್ಲ

Synonyms : Ślōkas 28-29
एतत् स्तोत्रम्(ētat stōtram) – this Rāghavēndra stōtra, समुच्चार्य(samuccārya) - reciting, गुरुवृंदानांतिके(guruvr̥ndāvanāntikē) – in the proximity of the Rayaru’s vr̥ndāvana, दीपसंयोजनात्(dīpasanyōjanāt’) – by lighting lamps, ज्ञानं(ānam) – the knowledge of the Lord, पुत्रलाभः(putralābha) – shall beget good progeny(pupils), ध्रुवम् भवेत्(dhruvam bhavēt) – will happen with certainty,  परवादिजयः(paravādijaya) – prevalence over the foes of sat’ (the path of truth) philosophy or even those who oppose the Vēdas, दिव्य(divya) – divine, ज्ञान(jñāna) – knowledge, भक्ति आदि (bhakti ādi)devotion etc, वर्धनम्(vardhanam) – towards accretion,  सर्वाभीष्टार्थ सिद्धिः स्यात्(sarvābhīṣṭārtha sid'dhi syāt)- सर्व(Sarva) – all types, भीष्टार्थ(abhīṣṭārtha) wishes, सिद्धिः स्यात् sid'dhi syāt) – will fructify, अत्र(atra)- in this matter, विचारणा(vicāraṇā) – doubts,  कार्या(na kāryā) – do not arise.

ತಾತ್ಪರ್ಯ ಶ್ಲೋಕ ೨೮.೨೯
ರಾಘವೇಂದ್ರಗುರುಗಳ ಸ್ತೋತ್ರವನ್ನು ಪಠಿಸುತ್ತಾ ರಾಯರ ವೃಂದಾವನದ ಹತ್ತಿರ ದೀಪ ಹಚ್ಚುವುದರಿಂದ ಉತ್ತಮರಾದ ಮಕ್ಕಳ ಪ್ರಾಪ್ತಿಯಾಗುತ್ತದೆ. ಜ್ಞಾನ ಭಕ್ತಿಗಳು ಬೆಳೆಯುತ್ತವೆ. ಉತ್ತಮ ವಾಕ್ ಶಕ್ತಿ ಗಳಿಸಿ ದುಷ್ಟ ದುರ್ವಾದಿಗಳನ್ನು ಸೋಲಿಸಿ ಶಾಸ್ತ್ರ ರಕ್ಷಣೆ ಮಾಡುವ ಶಕ್ತಿಬರುತ್ತದೆ. ಎಲ್ಲಾ ಬಯಕೆಗಳು ಈಡೇರುತ್ತವೆ ಎಂದು ಶ್ಲೋಕದಲ್ಲಿ ಹೇಳಿದ್ದಾರೆ
ಆದರೆ ನಾವು ಹಚ್ಚಿದ ದೀಪದಿಂದ ರಾಯರಿಗೆ ಯಾವ ಲಾಭವಿದೆ ? ಅವರಿಗೆ ಕತ್ತಲನ್ನು ಕಳೆದುಕೊಳ್ಳಲು ನಾವು ಹಚ್ಚುವ ಹಣತೆಯ ಅವಶ್ಯಕತೆಯಿದೆಯೇ ? ಯಾರ ಹೆಸರು ಸ್ಮರಿಸಿದರೆ ಮನದ ಕತ್ತಲೆಲ್ಲವೂ ಮರೆಯಾಗಿ ಜ್ಞಾನದ ದೀಪ ಹತ್ತುತ್ತದೆಯೋ ಅಂತಃ ರಾಯರಿಗೆ ನಾವು ಹಚ್ಚುವ ದೀಪದಿಂದ ಆಗಬೇಕಾದದ್ದಾರೋ ಏನು ? ಮತ್ತೇಕೆ ದೀಪ ?
ಪ್ರಶ್ನೆಗೆ ಒಮ್ಮೆ ಪರಮ ಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಬೇರೆ ಯಾರೋ ಕೃಷ್ಣನಿಗೆ ಮಾಡುವ ನಾನಾವಿಧ ಅಲಂಕಾರದ ಬಗ್ಗೆ ಕೇವಲವಾಗಿ ಮಾತನಾಡಿದಾಗ ಉತ್ತರವಾಗಿ ಹೀಗೆ ಹೇಳಿದ್ದರು.
ಜೀವ ಎಂದರೆ ಅದು ಒಂದು ಪ್ರತಿಬಿಂಬ. ಮತ್ತು ಭಗವಂತ ಬಿಂಬ. ಕನ್ನಡಿಗೆ ಎಷ್ಟೇ ಅಲಂಕಾರ ಮಾಡಿದರೂ ಅದರಿಂದ ಬಿಂಬದಲ್ಲಿ ಯಾವ ವ್ಯತ್ಯಾಸವೂ ಬರುವುದಿಲ್ಲ. ಆದರೆ, ಬಿಂಬಕ್ಕೆ ಯಾವ ಅಲಂಕಾರ ಮಾಡಿದರೂ ಅದು ಪ್ರತಿಬಿಂಬದಲ್ಲಿ ಪ್ರತಿಫಲಿಸುತ್ತದೆ. ಅಂದರೆ ನಾವು ಭಗವಂತನಿಗೆ ಏನನ್ನೇ ನೀಡಿದರೂ ಅದು ನಮ್ಮಲ್ಲೇ ಫಲಿಸುತ್ತದೆ
ಆಭಾಸಕೋಸ್ಯ ಪವನಃ ಪವನಸ್ಯ ರುದ್ರಃ ಶೇಷಾತ್ಮಕೋ ಗರುಡ ಏವ ಶಕ್ರ ಕಾಮೌ |
ವೀಂದ್ರೇಶಯೋಸ್ತದಪರೇ ತ್ವನಯೋಶ್ಚ ತೇಷಾಮೃಷ್ಯಾದಯಃ ಕ್ರಮಶ ಊನಗುಣಾಃ ಶತಾಂಶಾಃ ||
.ಭಾ.ತಾ.ನಿ. -೧೪ ಆಚಾರ್ಯಮಧ್ವರು ಹೇಳುವಂತೆ ಭಗವಂತನಿಗೆ ವಾಯುದೇವರು ಪ್ರತ್ಯಕ್ಷ ಆಭಾಸ. ಅಂದರೆ ವಾಯುದೇವರು ಭಗವಂತನ ಸಾಕ್ಷಾತ್ ಪ್ರತಿಬಿಂಬ. ಅವರ ಪ್ರತಿಬಿಂಬ ಗರುಡ ಶೇಷ ರುದ್ರರು. ಅವರಿಗೆ ಇಂದ್ರ ಕಾಮರು ಅವರಿಗೆ ಋಷಿಗಳು ಅವರಿಗೆ ಇತರ ದೇವತೆಗಳು ಮತ್ತು ದೈವಾಂಶ ಸಂಭೂತರಾದ ಗುರುಗಳು ಹೀಗೆ ಒಬ್ಬರಿಗೊಬ್ಬರು ಪ್ರತಿಬಿಂಬಗಳು
ಹಾಗಾಗಿ, ಭಗವಂತನ ದೂರದ ಪ್ರಬಿಂಬವೂ ನಮಗೆ ಬಿಂಬವೂ ಆಗಿರುವಂತಃ ರಾಘವೇಂದ್ರ ಗುರ್ವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ರಾಮದೇವರಿಗೆ ರಾಯರ ಮೂಲಕ ನಾವು ಏನನ್ನು ಅರ್ಪಿಸಿದರೂ ಅದು ಅನಂತ ಪಟ್ಟು ವೃದ್ಧಿಸಿ ಮತ್ತೆ ಅದು ನಮ್ಮಲ್ಲಿಗೇ ಬಂದು ತಲುಪುತ್ತದೆ. ಕೊಟ್ಟದ್ದನ್ನೆಲ್ಲಾ ಸಹಸ್ರಪಟ್ಟು ವೃದ್ಧಿಸಿ ಹಿಂದಿರುಗಿಸುವುದೇ ದೈವ ಸ್ವಭಾವ. ಹಿಂದಿನ ಶ್ಲೋಕಗಳಲ್ಲಿ ನೋಡಿದಂತೆ ದೇವಸ್ವಭಾವರಾದ ರಾಯರಿಗೆ ನಾವು ಏನನ್ನೇ ಅರ್ಪಿಸಿದರೂ, ಹೇಗೆ ಬೆಳಕಿನ ಒಂದು ಸಣ್ಣ ಕಣ ಸಾವಿರಾರು ಕನ್ನಡಿಗಳ ಮೂಲಕ ಹಾಯ್ದಾಗ ದೊಡ್ಡ ಬೆಳಕಿನ ಪುಂಜವಾಗಿ ಪ್ರತಿಫಲಿಸುತ್ತದೆಯೋ ಹಾಗೆಯೇ ರಾಯರ ಬಿಂಬದಂತಿರುವ ಋಷಿಗಳು ಅವರ ಮೇಲಿನ ದೇವತೆಗಳು ಎಲ್ಲರನ್ನೂ ಹಾಯ್ದು ಭಗವಂತನನ್ನು ಮುಟ್ಟಿ ಸಹಸ್ರಪಟ್ಟು ಬೆಳೆಯುತ್ತದೆ
ಹಾಗಾಗಿ ರಾಯರ ಮುಂದೆ ಹಚ್ಚಿದ ಒಂದು ಬೆಳಕಿನ ಹಣತೆ ಅನಂತವಾಗಿ ಬೆಳೆದು ನಮ್ಮಮೇಲೆ ಪ್ರತಿಫಲಿಸಿ ನಮ್ಮ ಮನದ ಅಜ್ಞಾನವೆಂಬ ಕತ್ತಲೆಯನ್ನೆಲ್ಲಾ ತೊಡೆದು ನಮ್ಮ ಮನದಲ್ಲಿ ಜ್ಞಾನವೆಂಬ ಬೆಳಕಿನ ರಾಶಿಯನ್ನೇ ತುಂಬುತ್ತದೆ. ರಾಯರ ಕಾರುಣ್ಯದಿಂದ ನಮಗೆ ನಮ್ಮ ಜ್ಞಾನವನ್ನು ಜಗತ್ತಿನೆಲ್ಲೆಡೆ ಹಬ್ಬಿಸುವ ಮಕ್ಕಳು ಶಿಷ್ಯರು, ಭಗವದ್ಭಕ್ತಿ ದುರ್ವಾದಿಗಳ ವಿರುದ್ಧ ವಿಜಯ ಎಲ್ಲವೂ ಲಭಿಸುತ್ತದೆ ಇದರಲ್ಲಿ ಯಾವ ಸಂಶಯಕ್ಕೂ ಎಡೆಯಿಲ್ಲ ಎನ್ನುವುದು ಶ್ಲೋಕದ ತಾತ್ಪರ್ಯ.

ವಿ.ಸೂ:
ಶ್ಲೋಕದಲ್ಲಿ ಗುರೋರ್ವೃಂದಾವನಾಂತಿಕೇ ಮತ್ತು ಸರ್ವಾಭೀಷ್ಟಪ್ರವೃದ್ಧಿಃಸ್ಯಾತ್ ಎನ್ನುವ ಪಾಠಬೇಧಗಳಿವೆ. ಅದನ್ನೇ ನಾನು ಬಾಲ್ಯದಿಂದ ಕಲಿತಿದ್ದೆ. ಆದರೆ ಆಚಾರ್ಯರ ಪುಸ್ತಕದಲ್ಲಿ ಗುರುವೃಂದಾವನಾಂತಿಕೇ ಮತ್ತು ಸರ್ವಾಭೀಷ್ಟಾರ್ಥ-ಸಿದ್ಧಿಃ ಸ್ಯಾತ್ ಎಂದೇ ಇದೆ. ಅದನ್ನೇ ನಾನೂ ಉಪಯೋಗಿಸಿದ್ದೇನೆ.
ಗುರುವೃಂದಾವನಂ ಎಂಬ ಸಮಸ್ತಪದವನ್ನು ಬಿಡಿಸಿದಾಗ ಗುರೋಃ ವೃಂದಾವನಂ (ಷಷ್ಟೀ ತತ್ಪುರುಷ ಸಮಾಸ) ಎಂದಾಗುತ್ತದೆ. ಆಚಾರ್ಯರು ವಿಗ್ರಹವಾಕ್ಯವನ್ನು ಬಳಸಿದ್ದಾರೆ ಮತ್ತು ಇತರರು ವಿಗ್ರಹವಾಕ್ಯವನ್ನು ಬಿಡಿಸಿ ಬರೆದಿದ್ದಾರೆ.
ಅಭೀಷ್ಟ ಪ್ರವೃದ್ಧಿ ಎಂದರೆ ಅಭೀಷ್ಟಗಳ ವೃದ್ಧಿ ಎಂದಾಗುತ್ತದೆ. ಅಭೀಷ್ಟಾರ್ಥ ಸಿದ್ಧಿ ಎಂದರೆ ಎಲ್ಲಾ ಬಯಕೆಗಳ ಈಡೇರುವಿಕೆ ಎಂದಾಗುತ್ತದೆ ಮತ್ತು ಹೆಚ್ಚು ಸೂಕ್ತವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಆಚಾರ್ಯರು ಪ್ರಕಟಿಸಿದ ಶುದ್ಧ ಪಾಠ ಎಂಬುದಕ್ಕಿಂತ ಬೇರೆ ಯಾವ ಆಧಾರ ಬೇಕು ನಮಗೆ ?

Tātparya Ślōkas 28-29:
Reciting this stōtra of Śrī Rāghavēndra, if one lights a lamp at Rayaru’s vr̥ndāvana, one will be blessed with good progeny. There would be increase in knowledge and devotion too. It would also grant one the faculty of good speech to prevail over those who oppose the scriptures, and be empowered to protect them. All that is wished for would materialize, states this ślōka.
How would Rayaru stand to gain from the lamp lit by us? Does he need the light from the lamp lit by us to rid himself of darkness? Taking whose very name dispels all our darkness, to such a one, how would our lighting the lamp be of any utility? So why the lamp?
To answer this question, we might find a clue in the response of parama pūjya Śrī Viśvēśatīrtha Śrīpādaru to someone who had unjustly deprecated the decorations made by another person, to Kṛṣṇa; this is what was his response –
This soul is a pratibimba (image/ reflection). The Lord is the bimba(form). Whatever be the extent of decoration on the mirror, it makes no difference to the Bimba. However, if the bimba is decorated, it would show on the pratibimba too. Which means, whatever is offered by us to the Lord, that would verily turn productive on us.
आभासकोस्य पवनः पवनस्य रुद्रः शेषात्मको गरुड़ एव च शक्र  कामौ  |
वींद्रेशयोस्तदपरे त्वनयोश्च तेषामृष्यादयः क्रमश नगुणाः शतांशाः ||
ābhāsakōsya pavanaḥ pavanasya rudraḥ śēṣātmakō garuḍa ēva ca śakra kāmau |
vīndrēśayōstadaparē tvanayōśca tēṣāmr̥ṣyādayaḥ kramaśa ūnaguṇāḥ śatānśāḥ ||
(Ma.Bhā.Tā.Ni. 1-14)
As stated by Ācārya Madhva, to the Lord, Vāyudēva (the wind deity) is प्रत्यक्ष आभास(Pratyakṣa ābhāsa). Which implies that Vāyudēva is the virtual image of the Lord. His pratibimba in turn, are Garuḍa, Śēṣā and Rudra. To them, it is Indra and Kāma to whom it is the r̥ṣis(sages) and other deities. In this way all the divine Gurus are the pratibimbas of each other, going down the hierarchy of deities.
As such, to the one who is a distant pratibimba of the Lord, who in turn is like a bimba for us too, namely guru Rāghavēndra, his अन्तर्गत(antargata - indweller) भारतीरमण मुख्यप्राणांतर्गत(Bhāratīramaṇa Mukhyaprāṇāntargata) Lord Rāma, to whom, if we offer anything through guru Rāghavēndra, it would revert to us adding up in manifold terms. Returning everything that is given to them, multiplied many times over, is truly divine nature. When a small ray of light, if reflected through several mirrors results in a bigger beam of light. Likewise, as brought out in the earlier ślōkas, whatever we offer to the divine natured Rayaru, comes back to us, multiplied manifold as it reflects through him to the sages who are like his bimbas, and in turn to the higher deities and flowing through them to the Lord.
Therefore, a lamp lighted in the presence of Rayaru grows infinitely and beams fruitfully upon us to dispel the darkness of ignorance in our minds, and flood it with the light of knowledge.
Through the compassion of such Rayaru we would beget children (or pupils) who would help us in the dissemination of knowledge and also, in prevailing over the foes of the Lord’s devotion. There need be no doubt whatsoever that all these benefits would accrue to us, is the intent of this Ślōka.

Note:
In this Ślōka there are texts that have गुरोर्वृन्दावनांतिके(gurorvr̥ndāvanāntikē) and सर्वाभीष्टप्रवृद्धिः(sarvābhīṣṭapravr̥d'dhiḥ), as even recited by me from my childhood, in lieu of what is shown by me in this Ślōka. However, in the book on this Ślōka by our pujya Ācāryaru, he has used गुरुवृंदानांतिके(guruvr̥ndāvanāntikē) and    
सर्वाभीष्टार्थ सिद्धिः स्यात्(sarvābhīṣṭārtha sid'dhiḥ syāt). My usage here, is in line with what is shown by our Ācāryaru.
When the compound word गुरुवृंदानम्(guruvr̥ndāvanam) is dilineated, we get गुरोः वृंदानम्(guroḥ vr̥ndāvanam) {grammatically in sanskrit it is षष्टी तत्पुरुष समास(Ṣaṣṭī tatpuruṣa samāsa)}. In short, it is one and the same, represented in two ways.

भीष्टप्रवृद्धिः(abhīṣṭapravr̥d'dhiḥ) means a progressive build-up of wishes; भीष्टार्थ सिद्धिः would mean fulfilment of all wishes and this seems more appropriate. More than anything, we can rely on the fact that these are terms that are authenticated by our Ācāryaru, what more validation do we need for these?
(Original by Śrī Krishna B R in Kannada, translation to English / Devanagari by Śrī Prasad B S)

No comments:

Post a Comment

ಗೋ-ಕುಲ Go-Kula