ಶ್ಲೋಕ ೧೭.
Ślōka 17.
ಹಂತು ನಃ ಕಾಯಜಾನ್ ದೋಷಾನ್ ಅತ್ಮಾತ್ಮೀಯಸಮುದ್ಭವಾನ್ |
ಸರ್ವನಪಿ ಪುಮರ್ಥಾಂಶ್ಚ ದದಾತು ಗುರುರಾತ್ಮವಿತ್ ||೧೭||
हन्तु नः कायजान्दोषान् आत्मात्मीयसमुद्भवान् ।
सर्वानपि पुमर्थांश्च ददातु गुरुरात्मवित् ॥१७॥
Hantu naḥ kāyajān dōṣān atmātmīyasamudbhavān |
sarvanapi pumarthānśca dadātu gururātmavit ||17||
sarvanapi pumarthānśca dadātu gururātmavit ||17||
ಪದಚ್ಛೇದ:
ಹಂತು,
ನಃ, ಕಾಯಜಾನ್, ದೋಷಾನ್, ಅತ್ಮ ಅತ್ಮೀಯ ಸಮುದ್ಭವಾನ್, ಸರ್ವಾನ್, ಅಪಿ, ಪುಮರ್ಥಾನ್,
ಚ, ದದಾತು, ಗುರುಃ, ಆತ್ಮವಿತ್.
padacchēda:
हन्तु नः(hantu,
naḥ) कायजान्(kāyajān) दोषान्(dōṣān), आत्म आत्मीय समुद्भवान्(atma
atmīya samudbhavān), सर्वान्(sarvān) अपि(api) पुमर्थान्(pumarthān), च(ca), ददातु(dadātu), गुरुः(guruḥ), आत्मवित्(ātmavit)
ಶ್ಲೋಕ ೧೮.
Ślōka 18.
ಇತಿ ಕಾಲತ್ರಯೇ ನಿತ್ಯಂ ಪ್ರಾರ್ಥನಾಂ ಯಃ ಕರೋತಿ ಸಃ|
ಇಹಾಮುತ್ರಾಪ್ತಸರ್ವೇಷ್ಟೋ ಮೋದತೇ ನಾತ್ರಸಂಶಯಃ ||೧೮||
इति कालत्रये नित्यं प्रार्थनां यः करोति सः ।
इहामुत्राप्तसर्वेष्टो मोदते नात्र संशयः ॥१८॥
Iti kālatrayē nityaṁ prārthanāṁ yaḥ karōti saḥ|
ihāmutrāptasarvēṣṭō mōdatē nātrasanśayaḥ ||18||
ihāmutrāptasarvēṣṭō mōdatē nātrasanśayaḥ ||18||
ಪದಚ್ಛೇದ:
ಇತಿ, ಕಾಲತ್ರಯೇ, ನಿತ್ಯಂ, ಪ್ರಾರ್ಥನಾಂ, ಯಃ, ಕರೋತಿ,
ಸಃ, ಇಹ, ಅಮುತ್ರ, ಆಪ್ತಸರ್ವೇಷ್ಟಃ, ಮೋದತೇ, ನ, ಅತ್ರ,
ಸಂಶಯಃ.
padacchēda:
इति(iti) कालत्रये(kālatrayē) नित्यं(nityaṁ), प्रार्थनां(prārthanāṁ), यः(yaḥ), करोति(karōti) सः(saḥ)
इति(iti) कालत्रये(kālatrayē) नित्यं(nityaṁ), प्रार्थनां(prārthanāṁ), यः(yaḥ), करोति(karōti) सः(saḥ)
इह(iha) अमुत्र(amutra) आप्तसर्वेष्टः(āptasarvēṣṭaḥ), मोदते(mōdatē), न(na) अत्र(atra) संशयः(sanśayaḥ)
ಅನ್ವಯಾರ್ಥ ಶ್ಲೋಕ ೧೭,೧೮.
ಆತ್ಮವಿತ್ – ಸರ್ವಾಂತರ್ಯಾಮಿಯಾದ ಪರಮಾತ್ಮನನ್ನು ತಿಳಿದ,
ಗುರುಃ – ಗುರುಗಳಾದ ಶ್ರೀರಾಘವೇಂದ್ರರು,
ನಃ – ನಮ್ಮ,
ಕಾಯಜಾನ್ – ದೇಹಕ್ಕೆ ಸಂಬಂಧಪಟ್ಟ,
ಚ – ಮತ್ತು,
ಆತ್ಮ – ನಮ್ಮಲ್ಲಿ ಹುಟ್ಟಿದ,
ಆತ್ಮೀಯ – ಬಾಂಧವರ ದೆಸೆಯಿಂದ,
ಸಮುದ್ಭವಾನ್ – ಉಂಟಾದಂತಃ,
ದೋಷಾನ್ – ದೋಷಗಳನ್ನು,
ಹಂತು – ನಾಶಮಾಡಲಿ, ಸರ್ವಾನ್ – ಎಲ್ಲಾ,
ಪುಮರ್ಥಾನ್ ಅಪಿ – ಪುರುಷಾರ್ಥಗಳನ್ನು ಕೂಡಾ,
ದದಾತು – ನೀಡಲಿ. ಇತಿ – ಈ ರೀತಿಯಾಗಿ,
ಯಃ – ಯಾರು,
ನಿತ್ಯಮ್ – ದಿನವೂ,
ಕಾಲತ್ರಯೇ – ಮೂರುಕಾಲಗಳಲ್ಲಿ,
ಪ್ರಾರ್ಥನಾಮ್ – ಪ್ರಾರ್ಥನೆಯನ್ನು,
ಕರೋತಿ – ಮಾಡುತ್ತಾನೆ,
ಸಃ – ಅವನು,
ಆಪ್ತ ಸರ್ವೇಷ್ಟ – ಎಲ್ಲಾ ಬಯಕೆಗಳನ್ನೂ ಸಿದ್ಧಿಸಿಕೊಂಡು,
ಇಹ – ಇಲ್ಲಿ (ಈ ಸಂಸಾರದಲ್ಲಿ) ಅಮುತ್ರ – ಅಲ್ಲಿ ( ಬೇರೆ ಊರ್ಧ್ವ ಲೋಕಗಳಲ್ಲಿ) ಮೋದತೇ – ಆನಂದಿಸುತ್ತಾನೆ. ಅತ್ರ – ಈ ವಿಷಯದಲ್ಲಿ, ಸಂಶಯಃ ನ – ಅನುಮಾನವಿಲ್ಲ.
Synonyms Ślōkas 17 & 18:
आत्मवित्(ātmavit) – he who has known(realised) the Lord who is सर्वांतर्यामि(sarvāntaryāmi)(the indweller / regulator/ protector of all beings) गुरुः(guruḥ) – Śrī Rāghavēndraru, the guru, नः
(naḥ) – of mine, कायजान्(kāyajān)- to the body, च(ca) – also, आत्म(atma)
– that which is born within us, आत्मीय(atmīya)- from our kins’ side, समुद्भवान्(samudbhavān) – occurring, दोषान्(dōṣān) - disorders, हन्तु (hantu) – may be destroyed, सर्वान्(sarvān) – everything or all, पुमर्थान् अपि(pumarthān
api) –the पुरुषार्थ(Puruṣārtha i.e. any one of the four objects or
aims of existence viz. kāma-the
gratification of desire; artha- acquisition
of wealth; dharma-
righteousness or discharge of duty; mokṣa- final
emancipation) too, ददातु(dadātu) – may grant.
इति(iti) – in this manner, यः(yaḥ) – he who, नित्यं(nityaṁ) -every day, कालत्रये(kālatrayē) – the three nodes of time(primarily at sunrise, noon and
sunset), प्रार्थनां(prārthanāṁ) - worship, करोति(karōti) - performs सः(saḥ) – he/ she, आप्तसर्वेष्टः(āptasarvēṣṭaḥ) – having fulfilled all wishes, इह(iha) – here(in this world), अमुत्र(amutra) – there(in the other, higher worlds), मोदते(mōdatē) – will enjoy blissfulness, अत्र(atra) -in this matter, संशयः न (sanśayaḥ na) – undoubtedly.
ತಾತ್ಪರ್ಯ:
ಈ ಶ್ಲೋಕದಲ್ಲಿ ಗುರುಗಳನ್ನು ಆತ್ಮವಿತ್ ಎಂಬ ವಿಶೇಷಣದಿಂದ ಕರೆಯಲಾಗಿದೆ.
ಆತ್ಮ ವಿತ್ ಎಂದರೆ ತನ್ನ ಸ್ವರೂಪವನ್ನು ತಿಳಿದವನು. ಯಾರು ತನ್ನನ್ನು ತಿಳಿಯಲಾರ,
ಅವನು ಪರಮಾತ್ಮನನ್ನೂ ತಿಳಿಯಲಾರ. ಯಾರು ತನ್ನ ಸ್ವರೂಪವನ್ನು ತಿಳಿದವನೋ ಅವನು ಪರಮಾತ್ಮನನ್ನೂ ತಿಳಿಯಬಲ್ಲ. ಹಾಗಾಗಿ ಆತ್ಮ ವಿತ್ ಅಂದರೆ ಪರಮಾತ್ಮನನ್ನು ತಿಳಿದವನು. ಪರಮ್ಮತ್ಮನನ್ನು ತಿಳಿದರೆ ಎಲ್ಲವನ್ನೂ ತಿಳಿದಂತೆ.
ಹಾಗಾಗಿ ರಾಯರು ನಮ್ಮ ಸ್ವರೂಪಯೋಗ್ಯತೆಯನ್ನು ತಿಳಿದಕಾರಣ ನಮ್ಮ ಯೋಗ್ಯತೆಗನುಗುಣವಾಗಿ ಭಗವತ್ ಸಂಕಲ್ಪದಂತೆ ನಾವು ಬಯಸಿದ್ದನ್ನು ಕೊಡಬಲ್ಲರು. ಉಳ್ಳವರ ಬಳಿ ಕೇಳಿದರೆ ಏನನ್ನಾದರೂ ಕೊಡಬಲ್ಲರು. ಖಾಲಿ ಕೈಯ್ಯವರನ್ನು ಕೇಳಿದರೆ ಏನು ಕೊಟ್ಟಾರು ?
ಮೊದಲು ಕೊಳೆಯನ್ನೆಲ್ಲ ತೊಳೆಯಬೇಕು. ನಂತರ ಶುದ್ಧವಾದದ್ದನ್ನು ತುಂಬಬೇಕು. ಅಂತೆಯೇ ಇಲ್ಲಿ,
ಮೊದಲು ಗುರುಗಳು ನಮ್ಮಲ್ಲಿರುವ ನಾನಾವಿಧವಾದ,
ನಮ್ಮ ಜೀವಸ್ವಭಾವದಂತೆ ಮಾಡಿದ ಕರ್ಮಗಳಿಂದುಂಟಾದ ದೋಷಗಳು,
ಬಾಂಧವ,
ಆತ್ಮೀಯರ ದೆಸೆಯಿಂದ ಉಂಟಾದ ದೋಷಗಳು ಹಾಗೂ ಈ ಪಾಂಚಭೌತಿಕ ಶರೀರದ ದೆಸೆಯಿಂದ ಉಂಟಾದ ಎಲ್ಲಾ ದೋಷಗಳನ್ನೂ ನಾಶ ಮಾಡಲಿ ಎಂದು ಪ್ರಾರ್ಥಿಸಲಾಗಿದೆ. ದೋಶ ಪರಿಹಾರವಾದಮೇಲೆ ಗುರುಗಳು ಎಲ್ಲಾ ಪುರುಷಾರ್ಥಗಳನ್ನು ಕೂಡ ಕೊಡಲಿ ಎಂಬ ಪ್ರಾರ್ಥನೆ ಇಲ್ಲಿದೆ.
ಮೊದಲ ಶ್ಲೋಕದಲ್ಲಿ,
ಹೇಗೆ ಪ್ರಾರ್ಥಿಸಬೇಕೆಂದು ತಿಳಿಸಿ ನಂತರ ಯಾರು ಗುರುಗಳಲ್ಲಿ ಪ್ರತಿನಿತ್ಯವೂ ಮೂರೂಕಾಲಗಳಲ್ಲಿಯೂ ಹೀಗೆ ಪ್ರಾರ್ಥಿಸುತ್ತಾರೆಯೋ ಅವರ ಎಲ್ಲಾ ಬಯಕೆಗಳೂ ಈಡೇರುತ್ತವೆ ಮತ್ತು ಅಂಥವರು ಗುರುಗಳ,
ತನ್ಮೂಲಕ ಭಗವಂತನ ಅನುಗ್ರಹದಿಂದ ಈ ಸಂಸಾರದಲ್ಲೂ ಮತ್ತು ಪರಲೋಕಗಳಲ್ಲೂ ಕೂಡ ಅನಂದದಿಂದ
ಇರುತ್ತಾರೆ ಎಂಬುದಾಗಿ ಗುರುಗಳಲ್ಲಿ ಸರಿಯಾದ ರೀತಿಯಲ್ಲಿ ಪ್ರಾರ್ಥಿಸುವುದರಿಂದ ಸಿಗುವ ಫಲದ ಬಗ್ಗೆ ಮುಂದಿನ ಶ್ಲೋಕದಲ್ಲಿ ಅಪ್ಪಣಾಚಾರ್ಯರು ತಿಳಿಸಿದ್ದಾರೆ.
Tātparya:
In this ślōka, guru Śrī Rāghavēndraru has
been addressed as आत्मवित्(ātmavit).
आत्मवित्(ātmavit) means one who has realised his true inner self or
nature. He who does not know his own self, cannot know the Lord. He who knows
his inner self can know the Lord. Therefore आत्मवित्(ātmavit) means one who knows the Lord. Knowing the Lord means knowing everything
ofcourse, subject to the innate capacity and level of attainment of realisation
as per one’s discriminatory capacity.
Therefore as Rayaru knows our स्वरूप योग्यता(Svarūpayōgyatā
i.e. inherent or innate
nature ordained capacity) he is able to give us
what we desire as per our prayers to the Lord. Is only they that possess
everything, that can give to us anything. If we ask the empty-handed ones, what
can they give us?
First, we need to cleanse ourselves from
all the dirt. Then we need to replenish with all that is pure or clean. As
such, here it is prayed for that may the guru firstly help rid us of the
various defects that fill us based on our karmas (innate nature ordained
actions), or what comes unto us from our links to our near and dear ones or
also, the afflictions that grip us from our bodies that are made up of / shaped
by the five elements (earth, water, fire, air and ether). Once the defects or
afflictions are resolved, may the guru give us all the पुरुषार्थ(Puruṣārtha),
is what is implored in this prayer.
The first Ślōka mentions the process of the prayer and then
in the next Ślōka, it is brought out that whosoever prays to the guru, at the
three time-nodes each day, all their wishes would be granted and that such
people would, through the guru’s and thereon, by the Grace of God, enjoy blissfulness in their lives in this
world as also in their after lives in the next(higher) world. This is what
accrues to one as the fruits, one who prays to Rayaru, in the right manner,
informs Appaṇācāryaru in these Ślōkas.
(Original by Śrī Krishna
B R in Kannada, translation to English / Devanagari by Śrī Prasad B S)
No comments:
Post a Comment
ಗೋ-ಕುಲ Go-Kula