ಶ್ಲೋಕ ೨೭.
Ślōka 27.
ಸೋಮ-ಸೂರ್ಯೋಪರಾಗೇ ಚ ಪುಷ್ಯಾರ್ಕಾದಿ-ಸಮಾಗಮೇ |
ಯೋऽನುತ್ತಮಮಿದಂ ಸ್ತೋತ್ರಂ ಅಷ್ಟೋತ್ತರಶತಂ ಜಪೇತ್ |
ಭೂತ-ಪ್ರೇತ-ಪಿಶಾಚಾದಿ-ಪೀಡಾ ತಸ್ಯ ನ ಜಾಯತೇ ||೨೭||
सोम-सूर्योपरागे
च पुष्यार्कादि-समागमे ।
योऽनुत्तममिदं
स्तोत्रं अष्टोत्तरशतं जपेत् ।
भूत-प्रेत-पिशाचादि-पीडा
तस्य न जायते ॥२७॥
sōma-sūryōparāgē ca puṣyārkādi-samāgamē |
yōnuttamamidaṁ stōtraṁ aṣṭōttaraśataṁ japēt |
bhūta-prēta-piśācādi-pīḍā tasya na jāyatē ||27||
ಪದಚ್ಛೇದ:
ಸೋಮಸೂರ್ಯೋಪರಾಗೇ, ಚ, ಪುಷ್ಯ
ಅರ್ಕಾದಿ ಸಮಾಗಮೇ, ಯಃ, ಅನುತ್ತಮಮ್, ಇದಮ್, ಸ್ತೋತ್ರಮ್, ಅಷ್ಟೋತ್ತರಶತಮ್, ಜಪೇತ್, ಭೂತಪ್ರೇತಪಿಶಾಚಾದಿಪೀಡಾ, ತಸ್ಯ, ನ, ಜಾಯತೇ.
padacchēda:
सोमसूर्योपरागे(sōmasūryōparāgē), च (ca), पुष्य(puṣya), अर्कादि(arkādi), समागमे(samāgamē), yaḥ, अनुत्तमम्(anuttamam’),इदम्(idam), स्तोत्रं (stōtram), अष्टोत्तरशतम्(aṣṭōttaraśatam), जपेत् (japēt), भूतप्रेतपिशाचादिपीडा(bhūtaprētapiśācādipīḍā), तस्य(tasya), न(na), जायते(jāyatē).
ಅನ್ವಯರ್ಥ:
ಸೋಮಸೂರ್ಯೋಪರಾಗೇ
– ಚಂದ್ರ ಗ್ರಹಣ, ಸುರ್ಯಗ್ರಹಣ ಸಮಯದಲ್ಲಿ, ಪುಷ್ಯ ಅರ್ಕಾದಿ ಸಮಾಗಮೇ – ಪುಷ್ಯ
ನಕ್ಷತ್ರದಲ್ಲಿ ಸೂರ್ಯ ಅಥವಾ ಚಂದ್ರ ಪ್ರವೇಶಿಸುವ ಸಂದರ್ಭದಲ್ಲಿ ಮತ್ತಿತರ ಪರ್ವಕಾಲಗಳಲ್ಲಿ, ಯಃ
– ಯಾರು, ಅನುತ್ತಮಂ
– ಅತ್ಯಂತ ಉತ್ತಮವಾದ, ಇದಂ ಸ್ತೋತ್ರಂ – ಈ ರಾಘವೇಂದ್ರಸ್ತೋತ್ರವನ್ನು , ಅಷ್ಟೋತ್ತರ
ಶತಂ – ನೂರ ಎಂಟು ಬಾರಿ, ಜಪೇತ್ – ಜಪಿಸುತಾನೆಯೋ, ತಸ್ಯ – ಅವನಿಗೆ, ಭೂತ
ಪ್ರೇತ ಪಿಶಾಚಾದಿ – ಭೂತ ಪ್ರೇತ ಪಿಶಾಚಗಳೇ ಮೊದಲಾದ ದುಷ್ಟ ಶಕ್ತಿಗಳ, ಪೀಡಾ
– ಬಾಧೆಯು, ನ
ಜಾಯತೇ – ಉಂಟಾಗುವುದಿಲ್ಲ.
Synonyms:
सोमसूर्योपरागे(sōmasūryōparāgē) – in the interval
of lunar and solar eclipse, पुष्य
अर्कादि समागमे (puṣya arkādi samāgamē) – when the sun
enters puṣya nakṣatra(star) or during similar intervals of time, propitious for
witchcraft, यः(yaḥ) – he who, च (ca), अनुत्तमम्(anuttamam’) – exceedingly excellent, इदम् स्तोत्रं (idam stōtram) – this Śrī Rāghavēndra stōtra, अष्टोत्तर शतम्(aṣṭōttara śatam) – one hundred and eight times, जपेत् (japēt) - chants, तस्य(tasya) – to him, भूत
प्रेत पिशाचादि(bhūta prēta piśācādi) – ghosts, evil
spirits, specters etc., पीडा(pīḍā) – being tormented, न
जायते(na jāyatē) – will not occur.
ತಾತ್ಪರ್ಯ:
ವಾಮಾಚಾರಲೋಕದ
ನಂಬಿಕೆಯ ಪ್ರಕಾರ ಸೂರ್ಯ ಚಂದ್ರರ ಗ್ರಹಣಕಾಲ, ಮತ್ತು ಪುಷ್ಯ ನಕ್ಷತ್ರದಲ್ಲಿ ಸೂರ್ಯ
ಪ್ರವೇಶಿಸುವಕಾಲದಲ, ಅಥವಾ ಭಾನುವಾರದಂದು ಪುಷ್ಯ ನಕ್ಷತ್ರವಿದ್ದಾಗ, ಇಂತಃ
ವಿಶೇಷ ಪರ್ವಕಾಲಗಳಲ್ಲಿ ವಾತಾವರಣದಲ್ಲಿ ಋಣಾತ್ಮಕ ಶಕ್ತಿ ಸಂಚಾರವಾಗುತ್ತದೆ. ಆಗ ದುಷ್ಟ
ಶಕ್ತಿಗಳು ಶಕ್ತಿ ಸಂಚಯಗೊಂಡು ನಿರ್ಬಲರಾದ ಜನರನ್ನು ಪೀಡಿಸುತ್ತವೆ. ಹಾಗಾಗಿ, ಅಂತಃ
ಕಾಲಗಳಲ್ಲಿ ಹೊರಗೆ ಸಂಚರಿಸಬಾರದೆಂದು ಹಿರಿಯರು ತಡೆಯುತ್ತಾರೆ. ಮಕ್ಕಳು ಮತ್ತು ಬಸುರಿ ಹೆಂಗಸರನ್ನಂತೂ
ಹೊರಗೆ ಕಳಿಸುವುದೇ ಇಲ್ಲ. ಅಂತೆಯೇ ಅಂತಃ ಸಂದರ್ಭಗಳಲ್ಲಿ ನಾನಾವಿಧವಾದ ಮಂತ್ರ ಮತ್ತು
ಸ್ತೋತ್ರಗಳನ್ನು ಪಠಿಸುವಂತೆ ತಿಳಿದವರು ಹೇಳುತ್ತಾರೆ. ಇದಕ್ಕೆ ಕಾರಣವೇನೆಂದರೆ, ಈ
ಸ್ತೋತ್ರ ಮಂತ್ರಗಳ ಪ್ರಭಾವದಿಂದ ವಾತಾವರಣದಲ್ಲಿರುವ ಧನಾತ್ಮಕ ಶಕ್ತಿಯನ್ನು ಉದ್ದೀಪನಗೊಳಿಸಿ
ದುಷ್ಟ ಶಕ್ತಿಗಳನ್ನು ನಿಸ್ತೇಜಗೊಳಿಸುವುದೇ ಆಗಿದೆ.
ಇದನ್ನೇ
ಅಪ್ಪಣಾಚಾರ್ಯರು ಈ ಶ್ಲೋಕದಲ್ಲಿ ವಾತಾವರಣದಲ್ಲಿನ ದುಷ್ಟ ಶಕ್ತಿಗಳು ವಿಜೃಂಭಿಸುವ ಗ್ರಹಣಾದಿ
ಪರ್ವಕಾಲಗಳಲ್ಲಿ ಯಾರು ರಾಘವೇಂದ್ರಸ್ವಾಮಿಗಳ ಈ ಸ್ತೋತ್ರವನ್ನು ಪಠಿಸುತ್ತಾರೆಯೋ ಅವರು ಈ
ಸ್ತೊತ್ರದ ಪ್ರಭಾವದಿಂದ ತಮ್ಮ ಧನಾತ್ಮಕ ಶಕ್ತಿಯನ್ನು ಜಾಗ್ರತ ಗೊಳಿಸಿ ದುಷ್ಟ ಶಕ್ತಿಗಳ
ಪೀಡೆಯನ್ನು ನಿವಾರಿಸಿಕೊಳ್ಳುತ್ತಾರೆ ಎಂಬುದಾಗಿ ತಿಳಿಸಿದ್ದಾರೆ.
ರಾಯರ
ಜೀವನ ಚರಿತ್ರೆಯಲ್ಲಿ ಮತ್ತು ರಾಯರ ಮಹಿಮೆಯನ್ನು ತಿಳಿಸುವ ಮತ್ತಿತರ ಗ್ರಂಥಗಳಲ್ಲಿ ಕೇವಲ ರಾಯರ
ಮೃತ್ತಿಕೆ ಮತ್ತು ಅಭಿಮಂತ್ರಿತವಾದ ಮಂತ್ರಾಕ್ಷತೆಗಳ ಪ್ರಭಾವದಿಂದಲೇ ದುಷ್ಟ ಶಕ್ತಿಗಳು
ನಾಶವಾದವೆಂಬ ವಿಷಯವನ್ನು ಇಲ್ಲಿ ನೆನೆಯಬಹುದು.
Tātparya:
As per beliefs in the occult world, during lunar /
solar eclipses and when the sun or moon enters puṣya nakṣatra(star) in the Zodiac, or again if it is Sunday when the puṣya nakṣatra is in the ascendant, at such peculiar time interludes, the
environment is thronged by evil spirits. In these moments, evil spirits get
along to torment vulnerable people. It is thereby that elders prevent us from
venturing externally, in those intervals. Pregnant women and children too,
especially, are discouraged from venturing outside, at such times. Knowledgeable people inform us
that it is best to chant certain mantras and stōtras in those intervals. This is done to propitiate good spirits and to
enervate the evil ones, empowered by such mantras and stōtras.
This is what Appaṇācāryaru tells us in this Ślōka that those who chant this stōtra during such inauspicious times when evil spirits proliferate, awaken
or charge their positive energies and thereby rid themselves of any negative
effects from any evil spirit or energies.
This reminds us that there are similar accounts
covered in other works covering the greatness of Rayaru, where they state that
even the mere मृत्तिके(mr̥ttike – the holy soil from Rayaru’s vr̥ndāvana) or consecrated मंत्राक्षते[mantrākśate – sanctified
grains of rice coated with haridra(turmeric or haldi) and kunkum(Vermilion or
sindur)] suffice to drive away such negative forces or spirits.
(Original by Śrī Krishna
B R in Kannada, translation to English / Devanagari by Śrī Prasad B S)
No comments:
Post a Comment
ಗೋ-ಕುಲ Go-Kula