Monday 21 August 2017

Bhava Spandana - 5

ಭಾವ ಸ್ಪಂದನ by “ತ್ರಿವೇಣಿ ತನಯ


ಭಾವುಕತೆಯ ಬೆಲೆ

ಉಕ್ಕದಿರೆ ಜೀವಂತ ಭಾವುಕತೆಯ ಸೆಲೆ,
ಉಂಡು ಮಲಗೇಳುವ ದೇಹಕ್ಕೇನು ಬೆಲೆ,
ಒಳಗೊಂದು ಅದ್ಭುತ ಭಾವನಾ ಪ್ರಪಂಚ ಉಂಟು,
ಬಿಡದೆ ಸಜ್ಜನರೊಂದಿಗೆ ಬಿಚ್ಚು ಒಳಗಿರೋ ಗಂಟು.

ಧರ್ಮ-ಅರ್ಥ-ಕಾಮ-ಮೋಕ್ಷ

ಗೃಹಧರ್ಮಗಳು ಆಗದಿರಲಿ ಸೀಮಿತ,
ಅರ್ಥ ಗಳಿಕೆಗಾಗಿಯೇ ಎಲ್ಲವೂ ಪ್ರೇರಿತ,
ಕಾಮನೆ ಈಡೇರಲು ಭಾರೀ ಸಾಧನೆಯ ತೃಪ್ತಿ,
ಮೂರನ್ನೂ ಬಿಟ್ಟ ಮೋಕ್ಷದ್ದು ಬೇರೆಯೇ ವ್ಯಾಪ್ತಿ.

ಕಂದಾಯ

ಲೋಕದಲ್ಲಿ ಸರಕಾರಕ್ಕೆ ಕಂದಾಯ,
ಪರಲೋಕದಲ್ಲಿ ಸ್ವಕರ್ಮ ಸಂದಾಯ,
ಕರ್ಮಕ್ಕೆ ಬೇಡದಿರು ಎಂದೂ ಪ್ರತಿಫಲ,
ಭಗವತ್ ಪ್ರೀತಿಗಾದರದು ಸರ್ವಸಫಲ.

ಸಾವಿರದ ನಾಮದವ

ಸಾವಿರದ ಸಾಸಿರ ನಾಮದವನ ಸ್ಮರಿಸುತಿರು,
ಭವಸಾಗರ-ಗೋಪಾದ ಕುಳಿಯಲಿ ನಿಂತ ನೀರು,
ನರ ನಾಡಿಗಳಾಗಲಿ ತತ್ವವಾದದ ಬೇರು,
ತತ್ವವನೇ ಮಥಿಸುತ್ತ ಸಹಸ್ರಾರಕ್ಕೆ ಏರು.

ಸಜ್ಜನ -ದುರ್ಜನ

ಯಾರ ಸಂಗದಲಿ ಮನೋಲ್ಲಾಸ ತೃಪ್ತಿ ದೈವಪ್ರಜ್ಞೆಯೋ-ಸಜ್ಜನ,
ಯಾರ ಸಂಗದಲಿ ಮನೋವಿಕಾರ ದ್ವೇಷ ಅಹಂಪ್ರಜ್ಞೆಯೋ-ದುರ್ಜನ,
ಓ ಮನವೇ ಈ ಪ್ರಜ್ಞೆಯಲಿ ಎಚ್ಚತ್ತು ಬಾಳು,
ಜನ್ಮಾಂತರದ ಸಾಧನೆಗೆ ಬೋಧನೆಯಿದು ಕೇಳು.
[Contributed by Shri Govind Magal]

No comments:

Post a Comment

ಗೋ-ಕುಲ Go-Kula