Tuesday, 15 August 2017

Śrī Rāghavēndra Stōtra Ślōka 15 ಶ್ರೀ ರಾಘವೇಂದ್ರ ಸ್ತೋತ್ರ ಶ್ಲೋಕ ೧೫

ಶ್ಲೋಕ ೧೫.   
Ślōka 15

ಅಜ್ಞಾನವಿಸ್ಮೃತಿಭ್ರಾಂತಿಸಂಶಯಾಪಸ್ಮೃತಿಕ್ಷಯಾಃ |
ತಂದ್ರಾಕಂಪವಚಃಕೌಂಠ್ಯ ಮುಖಾಯೇಚೇಂದ್ರಿಯೋದ್ಭವಾಃ |
ದೋಷಾಸ್ತೆ ನಾಶಮಾಯಾಂತಿ ರಾಘವೇಂದ್ರ-ಪ್ರಸಾದತಃ ||೧೫||
अज्ञानविस्मृतिभ्रांतिसंशयापस्मृतिक्षयाः ।
तंद्रा कंपवचःकौंठ्य मुखायेचेंद्रियोद्भवाः
दोषास्ते नाशमायांति राघवेंद्र-प्रसादतः ॥

ajñānavismr̥tibhrāntisanśayāpasmr̥tikṣayāḥ |
tandrākampavacaḥkauṇṭhya mukhāyēcēndriyōdbhavāḥ |
dōṣāste nāśamāyānti rāghavēndra-prasādataḥ ||15||

ಪದಚ್ಛೇದ:
ಅಜ್ಞಾನವಿಸ್ಮೃತಿಭ್ರಾಂತಿಸಂಶಯಾಪಸ್ಮೃತಿಕ್ಷಯಾಃ, ತಂದ್ರಾಕಂಪವಚಃಕೌಂಠ್ಯಮುಖಾಃ, ಯೇ, , ಇಂದ್ರಿಯೋದ್ಭವಾಃ, ದೋಷಾಃ, ತೇ, ನಾಶಮ್, ಆಯಾಂತಿ, ರಾಘವೇಂದ್ರಪ್ರಸಾದತಃ.

padacchēda:

अज्ञानविस्मृतिभ्रांतिसंशयापस्मृतिक्षयाः(ajñānavismr̥tibhrāntisanśayāpasmr̥tikṣayāḥ), तंद्राकंपवचःकौंठ्यमुखाः(tandrākampavacaḥkauṇṭhyamukhāḥ), ये(yē), (ca), इंद्रियोद्भवाः(indriyōdbhavāḥ), दोषाः (dōṣāḥ), ते(te), नाशम्(nāśam’),आयांति(āyānti), राघवेंद्रप्रसादतः(rāghavēndraprasādataḥ)

ಅನ್ವಯಾರ್ಥ:

ಅಜ್ಞಾನವಿಸ್ಮೃತಿಭ್ರಾಂತಿಸಂಶಯಾಪಸ್ಮೃತಿಕ್ಷಯಾಃ = ಅಜ್ಞಾನ- ತಿಳಿಗೇಡುತನ, ವಿಸ್ಮೃತಿ – ಮರೆವು, ಭ್ರಾಂತಿ – ಅನ್ಯಥಾ ಜ್ಞಾನ, ಸಂಶಯ: ಅನುಮಾನ, ಅಪಸ್ಮೃತಿ – ಮೂರ್ಚೆ ರೋಗ, ಕ್ಷಯಾಃ- ಕ್ಷಯವೇ ಮೊದಲಾದ ರೋಗಗಳು,
ತಂದ್ರಾಕಂಪವಚಃಕೌಂಠ್ಯಮುಖಾಃ ತಂದ್ರಾ – ಕೈ ಕಾಲುಗಳಲ್ಲಿ ಬಲಹೀನತೆ, ಕಂಪ – ಮೈ ನಡುಕ, ವಚಃಕೌಂಠ್ಯ ಮುಖಾಃ– ಮಾತಿನಲ್ಲಿ ಉಗ್ಗು, ತೊದಲು ಮೊದಲಾದ, ಯೇ – ಯಾವುವುಇಂದ್ರಿಯೋದ್ಭವಾಃ, ಇಂದ್ರಿಯಗಳಲ್ಲಿ ಉಂಟಾಗುವಂತಃ ದೋಶಾಃ – ದೋಶಗಳಿವೆಯೋ, ತೇ ಚ – ಅವುಗಳೆಲ್ಲವೂ ಕೂಡ, ರಾಘವೇಂದ್ರಪ್ರಸಾದತಃ – ರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದ, ನಾಶಮ್-  ನಾಶವನ್ನುಆಯಾಂತಿ -ಹೊಂದೇಹೊಂದುತ್ತವೆ.  

Synonyms:

अज्ञानविस्मृतिभ्रांतिसंशयापस्मृतिक्षयाः(ajñānavismr̥tibhrāntisanśayāpasmr̥tikṣayāḥ) – अज्ञान(ajñāna) - idiocy, विस्मृति(vismr̥ti) – forgetfulness, भ्रांति(bhrānti) – delusion, संशयः(sanśayaḥ) – suspicion, अपस्मृति(apasmr̥ti) – loss of consciousness, क्षयाः(kṣayāḥ) – diseases like tuberculosis,  तंद्राकंपवचःकौंठ्यमुखाः(tandrākampavacaḥkauṇṭhyamukhāḥ)- तंद्रा(tandrā) – weakness in the hands and legs, कंप(kampa) – a trembling body, वचःकौंठ्य मुखाः(vacaḥkauṇṭhya mukhāḥ) – stutter, stammer in speech, ये(yē)- that which,  इंद्रियोद्भवाः(indriyōdbhavāḥ) – occurring in the limbs, दोषाः(dōṣāḥ)- defects that exist, ते (te ca) – all those too, राघवेंद्रप्रसादतः(rāghavēndraprasādataḥ) – by the grace of Śrī Rāghavēndraswamigalu नाशम्(nāśam’) – are destroyed, यांति(āyānti) – with certainty.

ತಾತ್ಪರ್ಯ:

ಏನೂ ತಿಳಿಯದ ತಿಳಿಗೇಡಿತನ, ಎಷ್ಟೇ ಪ್ರಯತ್ನಪಟ್ಟರೂ ಯಾವುದೂ ನೆನಪಿನಲ್ಲಿ ಉಳಿಯದಂಥ ಮರೆಗುಳಿತನ, ನಾನಾ ವಿಧವಾದ ಭ್ರಮೆಗಳು, ತಪ್ಪು ತಿಳುವಳಿಕೆಗಳು, ಎಷ್ಟೇ ಚೆನ್ನಾಗಿ ವಿವರಿಸಿದರೂ ಯಥಾರ್ಥವಾದ ಜ್ಞಾನದ ಬಗ್ಗೆ ಬಗೆಹರಿಯದ ಸಂಶಯಗಳು ಮೊದಲಾದ ಮಾನಸಿಕವಾದ ದೋಷಗಳು. ಪ್ರಜ್ಞೆ ತಪ್ಪುವುದುಕ್ಷಯ ಮೊದಲಾದ ಪ್ರಾಣಾಂತಿಕವಾದ ರೋಗಗಳು, ಕೈಕಾಲುಗಳಲ್ಲಿ ನಿಃಶಕ್ತಿ, ಮೈಯೆಲ್ಲ ನಡುಗುವುದು, ಮಾತನಾಡುವಾಗ ತೊದಲುವುದು, ಉಗ್ಗು ಇವೇ ಮೊದಲಾದ ಜ್ಞಾನೇಂದ್ರಿಯ ಮತ್ತು ಕರ್ಮೇಂದ್ರಿಯಗಳಿಗೆ ಸಂಬಂಧಪಟ್ಟ ಎಲ್ಲ ರೀತಿಯ ದೋಷಗಳು ರಾಘವೇಂದ್ರಸ್ವಾಮಿಗಳ ಅನುಗ್ರಹದಿಂದ ನಾಶವಾಗೇ ಆಗುತ್ತವೆ. ಅಂದರೆ, ಶಪಾನುಗ್ರಹ ಸಮರ್ಥರಾದ ರಾಯರ ಅನುಗ್ರಹ ಯಾರಮೇಲಿದೆಯೋ ಅವರನ್ನು  ಯಾವ ದೋಷಗಳು ಕೂಡ ಬಾಧಿಸಲಾರವು ಎಂಬುದು ಈ ಶ್ಲೋಕದ ಅಭಿಪ್ರಾಯ.
Tātparya:


Utter idiocy, despite sustained efforts inability to recall or retain anything in memory, various delusions, misconceived notions, continuing to be doubtful on the right knowledge or truth despite being explained with clarity and all such defects, loss of consciousness, fatal diseases like tuberculosis etc., weakness in the limbs, speech defects like stammer and stutter etc., all defects in the organs of sense and action get destroyed with certainty with the grace of Śrī Rāghavēndraswamigalu. This ślōka opines that those who enjoy Rayaru’s grace will not be tormented by any malaises whatsoever, as he himself is शापनुग्रह(śāpānugraha) i.e., has the Lord’s grace to be insulated from curses. 

(Original by Śrī Krishna B R in Kannada, translation to English / Devanagari by Śrī Prasad B S)

No comments:

Post a Comment

ಗೋ-ಕುಲ Go-Kula