Tuesday 22 August 2017

Bhava Spandana - 6

ಭಾವ ಸ್ಪಂದನ by “ತ್ರಿವೇಣಿ ತನಯ

ತುತ್ತು ಇತ್ತವನ ಅರಿವು

ತುತ್ತು ಎತ್ತುವ ಮುನ್ನ ಇತ್ತು ತಿನ್ನು,
ಇತ್ತದ್ದು ಸಿಕ್ಕ ಮಹಾ ಸೌಭಾಗ್ಯವೆನ್ನು,
ಆಗಲಿ ಇತ್ತವನು ಅವನೆಂಬ ಅರಿವು,
ಆ ಅರಿವೇ ಆಗುವುದು ಮೋಕ್ಷದಾ ಹರಿವು.

ಪ್ರವೃತ್ತಿ-ನಿವೃತ್ತಿ-ಬಂಧಕ-ಮೋಚಕ

ಅವಿವೇಕಿಗೆ ಪ್ರವೃತ್ತಕರ್ಮ -ವಿವೇಕಿಗೆ ನಿವೃತ್ತ ಕರ್ಮ,
ಸಕಾಮ ಗೃಹಸ್ಥ ಧರ್ಮ-ನಿಷ್ಕಾಮ ಹರಿಪ್ರೀತಿ ಸ್ವಧರ್ಮ,
ಮೊದಲ ವರ್ಗ ಚಂದ್ರಲೋಕ-ಎರಡನೇದು ಸೂರ್ಯಲೋಕ,
ಧೂಮಮಾರ್ಗವದು ಬಂಧಕ-ಪ್ರೇಮ ಮಾರ್ಗವದು ಮೋಚಕ.

ಆಯಸ್ಕಾಂತ

ಸಹಾನುಭೂತಿಯೊಂದಿಗೆ ಮಂದಸ್ಮಿತ,
ಆಡುವವರು ಸದಾ ಒಳ್ಳೆಯ ಮಾತ,
ಚಾಚುವವರು ಸದಾ ಸಹಾಯ ಹಸ್ತ,
ಎಲ್ಲರನೂ ಸೆಳೆಯುವ ಆಯಸ್ಕಾಂತ.

ಕತ್ತಲು -ಬೆತ್ತಲು

ಲೋಕದಿ ದೇಹವಾಗಬಾರದು ಬೆತ್ತಲೆ,
ಮನ ಬೆತ್ತಲಾಗದಿರೆ ನೀಗದು ಕತ್ತಲೆ,
ದೇಹವ ಚೆಂದ ವಸ್ತ್ರಗಳಿಂದ ಮುಚ್ಚು,
ತತ್ವ ಶಾಸ್ತ್ರಕ್ಕಾಗಿ ಮುದದಿ ಮನವ ಬಿಚ್ಚು.

ಸ್ಮರಣ -ಅನುಕ್ಷಣ

ಮುಳುಗುತಿಹ --ಸೂರ್ಯ,
ನೆನಪಿಸುತಿಹ ಸಾಯಂಕಾರ್ಯ,
ಎಷ್ಟು ವಿಧದಲ್ಲಿ ವ್ಯಕ್ತ ಅವನ ಕರುಣೆ,
ತಪ್ಪದಿರಲಿ ಅನುಕ್ಷಣ ಅವನ ಸ್ಮರಣೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula