Wednesday, 16 August 2017

Śrī Rāghavēndra Stōtra Ślōka 22 ಶ್ರೀ ರಾಘವೇಂದ್ರ ಸ್ತೋತ್ರ ಶ್ಲೋಕ ೨೨.

ಶ್ಲೋಕ ೨೨.
Ślōka 22
ಸಂಸಾರೇಕ್ಷಯ-ಸಾಗರೇಪ್ರಕೃತಿತೋಗಾಧೇ ಸದಾ ದುಸ್ತರೇ
ಸರ್ವಾವದ್ಯ-ಜಲಗ್ರಹೈರನುಪಮೇ ಕಾಮಾದಿಭಂಗಾಕುಲೇ |
ನನಾ-ವಿಭ್ರಮ-ದುರ್ಭ್ರಮೇಮಿತ-ಭಯ-ಸ್ತೋಮಾದಿ-ಫೇನೋತ್ಕಟೇ
ದುಃಖೋತ್ಕೃಷ್ಟ-ವಿಷೇ ಸಮುದ್ಧರಗುರೋ ಮಾಂ ಮಗ್ನ-ರೂಪಂ ಸದಾ ||೨೨||
संसारेऽक्षयसागरे प्रकृतितोऽगाधे सदा दुस्तरे
सर्वावद्य-जलग्रहैरनुपमैः कामादि-भंगाकुले |
नाना-विभ्रम-दुर्भ्रमेऽमित-भय-स्तोमादि-फेनोत्कटे
दुःखोत्कृष्ट-विषे समुद्धर गुरो मा मग्न-रूपं सदा ॥२२॥

sansārē̕kṣaya-sāgarēprakr̥titō̕gādhē sadā dustarē
sarvāvadya-jalagrahairanupamē kāmādi- bhaṅgākulē |
nanā-vibhrama-durbhramē̕mita-bhaya-stōmādi-
phēnōtkaṭē
duḥkhōtkr̥ṣṭa-viṣē samud'dharagurō māṁ magna-rūpaṁ sadā ||22||

ಪದಚ್ಛೇದ :
ಸಂಸಾರೇ, ಅಕ್ಷಯಸಾಗರೇ, ಪ್ರಕೃತಿತಃ, ಅಗಾಧೇ, ಸದಾ, ದುಸ್ತರೇ, ಸರ್ವಾವದ್ಯಜಲಗ್ರಹೈಃ, ಅನುಪಮೇ, ಕಾಮಾದಿಭಂಗ ಆಕುಲೇ, ನಾನಾವಿಭ್ರಮದುರ್ಭ್ರಮೇ, ಅಮಿತಭಯಸ್ತೋಮಾದಿಫೇನೋತ್ಕಟೇ, ದುಃಖೋತ್ಕೃಷ್ಟವಿಷೇ, ಸಮುದ್ಧರ, ಗುರೋ, ಮಾಮ್, ಮಗ್ನರೂಪಮ್, ಸದಾ.

padacchēda:
संसारे(Sansārē), अक्षयसागरे(akṣayasāgarē), प्रकृतितः(prakr̥titaḥ), अगाधे(agādhē), सदा(sadā), दुस्तरे(dustarē), सर्वावद्यजलग्रहैः(sarvāvadyajalagrahaiḥ), अनुपमे(anupamē), कामादिभंग आकुले(kāmādibhaṅga ākulē), नानाविभ्रमदुर्भ्रमे(nānāvibhramadurbhramē), मितभयस्तोमादिफेनोत्कटे(amitabhayastōmādiphēnōtkaṭē), दुःखोत्कृष्टविषे (duḥkhōtkr̥ṣṭaviṣē), समुद्धर (samud'dhara), गुरो(gurō), माम्(mām), मग्नरूपम्(magnarūpam), सदा(sadā).

ಅನ್ವಯಾರ್ಥ
ಪ್ರಕೃತಿತಃ ಅಗಾಧೇಸ್ವಾಭಾವಿಕವಾಗಿ ಆಳ ಅಳೆಯಲಾಗದಷ್ಟು ಅಗಾಧವಾದ ( ಸೂಕ್ಷ್ಮಪ್ರಕೃತಿಯ ಅಭಿಮಾನಿಯಾದ ಮಾಯೆಯಿಂದ ಬದ್ಧವಾದ) ಸರ್ವ ಅವದ್ಯಎಲ್ಲರೀತಿಯ ದೋಷಗಳೆಂಬ ಜಲಗ್ರಹೈಃಕ್ರೂರವಾದ ತಿಮಿಂಗಿಲದಂಥ ಜಲಚರಗಳಿಂದ(ಕೂಡಿದ), ಕಾಮಾದಿಭಂಗಾಕುಲೇಕಾಮಾದಿಕಾಮವೇ ಮೊದಲಾದ ಷಡ್ವರ್ಗಗಗಳ, ಭಂಗ ಆಕುಲೇಅಲೆಗಳಿಂದ ಪ್ರಕ್ಷುಬ್ಧಗೊಂಡ, ನಾನಾ ವಿಭ್ರಮ ದುರ್ಭ್ರಮೇನಾನಾರೀತಿಯ ತಪ್ಪುತಿಳುವಳಿಕೆ ಮೊದಲಾದ ಮನೋವಿಕಾರದಿಂದ ಕೂಡಿದ, ಅಮಿತಭಯಸ್ತೋಮಾದಿಘೇನೋತ್ಕಟೇ - ಅಮಿತಅನಂತವಾದ, ಭಯ ಸ್ತೋಮ ಆದಿನಾನಾರೀತಿಯ ಭಯಗಳ ಸಮೂಹವೆಂಬ, ಘೇನ ಉತ್ಕಟೇನೊರೆಬುರುಗುಗಳಿಂದ ಸಾಂದ್ರವಾಗಿ ತುಂಬಿದ, ದುಃಖೋತ್ಕೃಷ್ಟವಿಷೇ -ದುಃಖಸಾಂಸಾರಿಕವಾದ ದುಃಖವೆಂಬ, ಉತ್ಕೃಷ್ಟ ವಿಷೇಉತ್ಕೃಷ್ಟವಾದ ಭಯಾನಕ ವಿಷಯುಕ್ತವಾದ, ಸದಾ ದುಸ್ತರೇಯಾವಾಗಲೂ ದಾಟಲು ಕಷ್ಟಸಾಧ್ಯವಾದಅನುಪಮೇಸಾಟಿಯಿಲ್ಲದಂತಃ, ಸಂಸಾರೇ ಅಕ್ಷಯ ಸಾಗರೇಸಂಸಾರವೆಂಬ ಎಂದೆಂದಿಗೂ ಬತ್ತದ ಸಮುದ್ರದಲ್ಲಿ, ಮಗ್ನರೂಪಂಮುಳುಗಿದಂತಃ, ಮಾಂನನ್ನನ್ನುಗುರೋಗುರುಗಳಾದ ಶ್ರೀ ರಾಘವೇಂದ್ರರೇ, ಸಮುದ್ಧರಮತ್ತೆಂದೂ ಬೀಳದಂತೆ ಮೇಲೆತ್ತಿ
Synonyms:
प्रकृतितः अगाधे(prakr̥titaḥ agādhē) – depth that is unfathomable in the innate nature(governed by māyā, the ruling deity of subtle nature), सर्व अवद्य(sarva avadya) – all types of malaises, जलग्रहैः(jalagrahaiḥ)- cruel aquatic creatures(filled with) such as sharks, कामादिभंगाकुले(kāmādibhaṅgākulē)- कामादि(kāmādi)- the six frailties commencing with kāmā(desires, in particular sensual) etc., भंगाकुले(bhaṅgākulē) – turbulent waves, नानाविभ्रमदुर्भ्रमे(nānāvibhramadurbhramē) – fraught with mental weaknesses such as false beliefs etc., मितभयस्तोमादिफेनोत्कटे(amitabhayastōmādiphēnōtkaṭē)- मित(amita)- infinite, भय स्तोम दि(bhaya stōma ādi) – cluster of varied fears, फेन त्कटे (phēna utkaṭē) – densely foaming and frothing, दुःख(duḥkha) – of the sorrows that are called worldly, त्कृष्ट विषे (utkr̥ṣṭa viṣē) – the exquisite seeming fearful poisons, सदा दुस्तरे(sadā dustarē) – difficult to cross at all times, अनुपमे(anupamē) – incomparable, संसारे अक्षयसागरे(Sansārē akṣayasāgarē) – the ocean called Sansāra that never dries up, मग्नरूपम्(magnarūpam) – appearing to be submerged in, माम्(mām) - me, गुरो(gurō) – O’ Guru Śrī Rāghavēndra, समुद्धर (samud'dhara) – lifted so as to never to fall again.

ತಾತ್ಪರ್ಯ
ಶ್ಲೋಕದಲ್ಲಿ, ನಾವು ಮುಳುಗಿರುವ ಸಂಸಾರವನ್ನು ಸಮುದ್ರಕ್ಕೆ ಸಮೀಕರಿಸಿ ವರ್ಣನೆಯನ್ನು ಮಾಡಿದ್ದಾರೆ.
ಇಲ್ಲಿ ಸಮುದ್ರವನ್ನು ಪ್ರಕೃತಿತಃ ಅಗಾಧ ಎಂದಿದ್ದಾರೆ. ಅಂದರೆ ಪ್ರಕೃತಿಯದೆಸೆಯಿಂದ.
ಯಾವ ಪ್ರಕೃತಿ ? ಪ್ರಕೃತಿ ಎಂದರೆ  ಚಿತ್ ಪ್ರಕೃತಿಯ ಅಭಿಮಾನಿಯಾದ  ಮಾಯಾರೂಪಳಾದ ಲಕ್ಷ್ಮೀ ದೇವಿ
ನಾವು ಸಮುದ್ರದ ಬಂಧನಕ್ಕೆ ಒಳಗಾಗಿದ್ದು ಪ್ರಕೃತಿಯಿಂದಲೇ
ಅದೇ 18 ರಹಸ್ಯ..
ಹದಿನೆಂಟು ಎಂದರೆ 
ಶ್ರದ್ಧೆ, ಮಣ್ಣು, ನೀರು, ಬೆಂಕಿ, ಗಾಳಿ, ಅಕಾಶ, ಇಂದ್ರಿಯಗಳು, ಮನಸ್ಸು, ಅನ್ನ, ವೀರ್ಯ (ಶಕ್ತಿ), ತಪಸ್ಸು, ಮಂತ್ರ, ಕರ್ಮ, ಲೋಕ (ಐಹಿಕ ಸಂಪತ್ತು) ಮತ್ತು ನಾಮ (ಪ್ರಸಿದ್ಧಿ) ಎಂಬ ಹದಿನೈದು ಬೇಲಿಗಳು, ಬೇಲಿಯಲ್ಲಿ ಸಿಲುಕಿದ ಜೀವಿ 16, ಬೇಲಿಯಲ್ಲಿ ಜೀವಿಯನ್ನು ಕಟ್ಟಿಹಾಕಿದ ಪ್ರಕೃತಿ 17, ಮತ್ತು ನಮ್ಮ ನಿಜವಾದ ಗಮ್ಯ ಭಗವಂತ 18. ಹದಿನೆಂಟು ಎಂದರೆ ಜಯ.  
ಹೇಗೆ ನಾವು ನೋಡಿರುವ ಸಮುದ್ರದಲ್ಲಿ ದೊಡ್ಡ ದೊಡ್ಡ, ಇಡೀ ನಗರವನ್ನೇ ಮುಳುಗಿಸಬಲ್ಲ ಅಲೆಗಳು, ದೊಡ್ಡ ದೊಡ್ಡ ತಿಮಿಂಗಿಲಗಳು ಮುಂತಾದ ಜಲಚರಗಳಿರುತ್ತವೆಯೋ ಹಾಗೆ ಸಂಸಾರಸಮುದ್ರದಲ್ಲಿ ಕೂಡ ನಾವು ಮಾಡಿದ ಪಾಪಗಳೆಂಬ ಜಲಚರ ಕ್ರೂರ ಪ್ರಾಣಿಗಳು ಕೂಡ ನಮ್ಮನ್ನು ಸಮುದ್ರದಿಂದ ಹೊರಗೆ ಬರಲುಬಿಡದೆ  ಮತ್ತೆ ಮತ್ತೆ ಸಮುದ್ರದಾಳಕ್ಕೆ ಎಳೆಯುತ್ತವೆ
ಕಾಮ ಕ್ರೋಧಗಳೇ ಮೊದಲಾದ ಅರಿಷಡ್ವರ್ಗಗಳೆಂಬ ದೊಡ್ಡ ಅಲೆಗಳು ನಮಗೆ ನಿಂತಲ್ಲಿ ನೆಲೆಯಿಲ್ಲದಂತೆ ಮಾಡಿ ಜೀವನವನ್ನೇ ಪ್ರಕ್ಷುಬ್ಧಗೊಳಿಸಿಬಿಡುತ್ತವೆ. ನಾನಾ ವಿಧವಾದ ತಪ್ಪು ತಿಳುವಳಿಕೆ, ವಿಪರೀತ ಜ್ಞಾನಗಳು, ನಮ್ಮ ಅಜ್ಞಾನ ಮೂಲವಾದ ಯಾವ ಯಾವುದೋ  ಭಯಗಳೆಂಬ ನೊರೆಬುರುಗುಗಳು ನಮ್ಮನ್ನು ಆವರಿಸಿಕೊಂಡು ಎದುರಿಗಿರುವ ಸತ್ಯವನ್ನು ಕಾಣದಂತೆ ಮಾಡಿಬಿಡುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ದುಃಖವೆಂಬ ಕಾರ್ಕೋಟಕ ವಿಷಮಯವಾದ, ಆಳ ಅಗಲಗಳ ಅಳತೆಸಿಗದಂತೆ ಅಗಾಧವಾದ, ಸಾಟಿಯಿಲ್ಲದ, ಯಾವ ಹೋಲಿಕೆಗೂ ಸಿಗದ ಸಾಮಾನ್ಯ ಪ್ರಯತ್ನದಿಂದ ದಾಟಲಾಗದ ಎಂದೆಂದಿಗೂ ಬತ್ತದ ಸಂಸಾರವೆಂಬ ಸಾಗರದಲ್ಲಿ ಮುಳುಗಿ ಒದ್ದಾಡುತ್ತಿರುವ ನನ್ನನ್ನು ಮೇಲೆತ್ತಿ ಉದ್ಧಾರ ಮಾಡಿ ಎಂಬ ಪ್ರಾರ್ಥನೆ ಶ್ಲೋಕದಲ್ಲಿದೆ.
ಉದ್ಧರ ಮಾಂ ಎಂದಿದ್ದರೂ ಸಾಕಾಗಿತ್ತು. ಸಮ್ ಉಪಸರ್ಗವನ್ನೇಕೆ ಸೇರಿಸಿದರು
ಏಕೆಂದರೆಸಂ ಉದ್ಧರ ಅಂದರೆ ಸಮ್ಯಕ್ ಉದ್ಧರಚೆನ್ನಾಗಿ ವಿಶೇಷ ಆಸ್ಥೆಯಿಂದ ಮೇಲೆತ್ತಿ ಎಂಬ ಬೇಡಿಕೆ. ಸುಮ್ಮನೆ ಕಾಟಾಚಾರಕ್ಕೆ ಹೋಗಲಿ ಪಾಪ ಏನೋ ಕೇಳುತ್ತಿದ್ದಾನೆ ಬದುಕಿಕೊಳ್ಳಲಿ ಎಂದು ಸುಮ್ಮನೆ ದಡಕ್ಕೆ ಎಳೆದುಹಾಕಿದರೆ ಸಂಸಾರದ ಸೆಳೆತಕ್ಕೆ ಸಿಕ್ಕಿ ಮತ್ತೆ ಸಮುದ್ರದಪಾಲಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಒಮ್ಮೆ ಮೇಲೆತ್ತಿದರೆ ಮತ್ತೆಂದಿಗೂ ಸಮುದ್ರದ ಸೆಳೆತಕ್ಕೆ ಸಿಗದಂತೆ ಶಾಶ್ವತವಾಗಿ ಮೇಲೆತ್ತಿ ನಮಗೆ ಮೋಕ್ಷ ಸಾಧನವಾದ ಜ್ಞಾನವನ್ನು ಕೊಟ್ಟು ದಾರಿಯಲ್ಲಿ ನಡೆಸಲಿ ಎಂಬುದು ತಾತ್ಪರ್ಯ.
Tātparya:
In this Ślōka, the संसार(sansāra), in which we are submerged, is compared with, and depicted as, an ocean.
Here the ocean is stated to be प्रकृतितः अगाधे(prakr̥titaḥ agādhē). Which means, it is to be seen in the प्रकृति(prakr̥ti) view point.
Which प्रकृति(prakr̥ti)? प्रकृति(prakr̥ti) means Lakṣmī dēvi, in the form of Māyā, the ruling deity of चित् प्रकृति (cit prakr̥ti) or the principle of subtle consciousness. We are bound to this ocean by this very प्रकृति(prakr̥ti).
That’s the enigma of 18 …
18 here relates to
the fifteen fence elements of śrad'dha(dedication), earth, water, fire, air, ether, इन्द्रिय(indriya - organs of sense and action), मन(mana - mind), अन्न(anna - food), वीर्य(vīrya - śakti or energy), तपस्(tapas’ - penance), मंत्र(mantra - incantation), कर्म(karma - duty, action), लोक(loka – material wealth) and नाम(nāma - prasid'dhi or reputation, fame) and the encircled within this fence is 16 i.e., जीव(Jīva- soul), प्रकृति(prakr̥ti) is 17 that has circumscribed the jīva within the fence and our true destination is Bhagavanta 18. Eighteen means जय(jaya).

In this way, just the same as the ocean that we see, has huge waves that can drown entire cities, inhabited by large aquatic creatures like sharks, this ocean called संसार(sansāra) is populated by sinister marine creatures like the sins committed by us and these repeatedly drag us down to the ocean’s depths.

There are six wave-like frailties such as desire, anger etc., that bring turbulence to our lives and render us unsheltered, right where we stand. Varied false beliefs, contrarian wisdom, various fears rooted in our ignorance, engulf us in their froth and foam, blinding us from the truth.  Above all, I, who am wriggling with this deadly venom named sorrow, drowned in this ocean named संसार(sansāra) which has inestimable dimensions, is matchless, incomparable, pray to be lifted to betterment, as brought out in this Ślōka.
Would it not have sufficed to say उद्धर मां (ud'dhara māṁ)? Why was the सम्(sam’) prefixed in the phrase in the Ślōka i.e. सम् उद्धर मां(sam’ ud'dhara māṁ)?

This is because सम् उद्धर (sam’ ud'dhara) means सम्यक् उद्धर(samyak’ ud'dhara) – a plea to be uplifted in a good way, specially filled with love. If dragged out to the shore, perfunctorily complying with the plea, out of pity, then there is a chance that the one who is so rescued (I) may get attracted or drawn into the same vortex of संसार(sansāra). Therefore, if once uplifted, then the intent here is to seek not to be dragged back to the ocean, and to be granted the knowledge that supports the endeavour for salvation and, to enable us tread that path.   
(Original by Śrī Krishna B R in Kannada, translation to English / Devanagari by Śrī Prasad B S)

No comments:

Post a Comment

ಗೋ-ಕುಲ Go-Kula