Friday, 11 August 2017

Śrī Rāghavēndra Stōtra - Invocation ಶ್ರೀ ರಾಘವೇಂದ್ರ ಸ್ತೋತ್ರ - ಮಂಗಳಾಚರಣೆ


ಮಂಗಳಾಚರಣೆ:

ಮೊದಲಿಗೆ ಸ್ತೋತ್ರದಿಂದ ಸ್ತುತ್ಯರಾದ ಶ್ರೀರಾಘವೇಂದ್ರರ ಒಂದು ಸಣ್ಣ ಸ್ತೋತ್ರದೊಂದಿಗೆ ಮಂಗಳಾಚರಣೆ.

ರಾಘವೇಂದ್ರಗುರುಂ ವಂದೇ ರಘುರಾಮಾಂಘ್ರಿಪೂಜಕಮ್| ಮಧ್ವಸಿದ್ಧಾಂತತತ್ತ್ವಜ್ಞಂ ಸುಜ್ಞಾನಾಬ್ಧಿಹಿಮಾಕರಮ್ ||

Invocation:

We shall start with succinct invocation dedicated to Śrī Rāghavēndra, the one whose incantation is the stōtra.

राघवेंद्रगुरुं वंदे रघुरामांघ्रिपूजकम् | मध्वसिद्धांततत्त्वज्ञं सुज्ञानाब्धिहिमाकरम् ||

Rāghavēndraguruṁ vandē raghurāmāṅghripūjakam| madhvasid'dhāntatattvajñaṁ sujñānābdhihimākaram ||

 

ಅನ್ವಯಾರ್ಥ:

ರಘುರಾಮಾಂಘ್ರಿಪೂಜಕಮ್ರಘುವಂಶಕ್ಕೆ ಆನಂದನೀಡಿದ ರಾಮಚಂದ್ರನ ಪಾದಪೂಜಕರಾದ, ಮಧ್ವಸಿದ್ಧಾಂತತತ್ತ್ವಜ್ಞಂಆಚಾರ್ಯ ಮಧ್ವರ ತತ್ತ್ವವಾದವೆಂಬ ಸಿದ್ಧಾಂತದ ರಹಸ್ಯವನ್ನು ಬಲ್ಲ, ಸುಜ್ಞಾನಾಬ್ಧಿಹಿಮಾಕರಮ್ಸು ಜ್ಞಾನಉತ್ತಮವಾದ ಜ್ಞಾನವೆಂಬ ಅಬ್ಧಿ - ಸಮುದ್ರಕ್ಕೆ, ಹಿಮಾಕರಂಚಂದ್ರನಂತಿರುವ, ರಾಘವೇಂದ್ರಗುರುಂ- ರಾಘವೇಂದ್ರರೆಂಬ ಗುರುಗಳನ್ನು, ವಂದೇ- ನಮಿಸುತ್ತೇನೆ. 

Synonyms:

रघुरामांघ्रिपूजकम् (raghurāmāṅghripūjakam) – he who worshipped the feet of Śrī Rāmachandra the one who brought blissfulness to the lineage of Raghu,  मध्वसिद्धांततत्त्वज्ञं(madhvasid'dhāntatattvajñaṁ) – he who comprehended the cryptic esse of Acharya Madhva’s philosophy known as Tattva Vāda, सुज्ञानाब्धिहिमाकरम् (sujñānābdhihimākaram) – सु ज्ञान(su jñāna) – the supreme knowledge, ब्धि ocean, हिमाकरम् (himākaram) – moon like, राघवेंद्रगुरुं(Rāghavēndraguruṁ) – to the guru known as Rāghavēndra, वंदे (vandē) – I pray to.

ಸ್ತೋತ್ರದ ಅರ್ಥಚಿಂತನೆಯ ಉದ್ದೇಶ:

ಜ್ಞಾನಭಕ್ತ್ಯಾದಿ ಸಿದ್ಧ್ಯರ್ಥಂ ಗುರ್ವನುಗ್ರಹಕಾರಣಮ್ | ಸದ್ಗುರೋರಸ್ಯ ಸ್ತೋತ್ರಸ್ಯ   ಕರ್ತವ್ಯಂ ಅರ್ಥಚಿಂತನಮ್ ||

The intent behind this contemplation attempted on the stōtra:

ज्ञानभक्त्यादि सिद्ध्यर्थं गुर्वनुग्रहकारणम् | सद्गुरोरस्य स्तोत्रस्य कर्तव्यं  अर्थचिंतनम् ||

 jñānabhaktyādi sid'dhyarthaṁ gurvanugrahakāraṇam | sadgurōrasya stōtrasya kartavyaṁ arthacintanam ||

 

 

ಅನ್ವಯಾರ್ಥ:

ಜ್ಞಾನಭಕ್ತ್ಯಾದಿಜ್ಞಾನ ಭಕ್ತಿ ಇವುಗಳೇ ಮೊದಲಾದ ಉತ್ತಮ ಗುಣಗಳ,(ಗುಣಗಳನ್ನು) ಸಿದ್ಧ್ಯರ್ಥಂಸಿದ್ಧಿಗಾಗಿ (ಪಡೆಯುವುದಕ್ಕೋಸ್ಕರ),  ಗುರ್ವನುಗ್ರಹಕಾರಣಮ್ -ಗುರುಗಳ ಅನುಗ್ರಹಕ್ಕೆ ಕಾರಣವಾದ, ಸದ್ಗುರೋಃಉತ್ತಮಗುರುಗಳಾದ, ಅಸ್ಯ ಶ್ರೀರಾಘವೇಂದ್ರರ, ಸ್ತೋತ್ರಸ್ಯಸ್ತೋತ್ರದ, ಅರ್ಥಚಿಂತನಂಅರ್ಥದ ಚಿಂತನೆಯು (ಜಿಜ್ಞಾಸೆಯು) ಕರ್ತವ್ಯಮ್ಮಾಡಲೇಬೇಕಾದದ್ದು. 

Synonyms:

ज्ञानभक्त्यादि(jñānabhaktyādi) with supreme qualities beginning with devotion and knowledge सिद्ध्यर्थं(sid'dhyarthaṁ) – realisation of(to obtain), गुर्वनुग्रहकारणम्(gurvanugrahakāraṇam) – that which is the cause for the guru’s grace, सद्गुरोः (Sadgurōḥ) – the supreme guru, स्य(asya)Śrī Rāghavēndra’s, स्तोत्रस्य(stōtrasya) – verse or stōtra अर्थचिंतनम्(arthacintanam) – contemplation of its meaning, कर्तव्यं(kartavyaṁ) – that which has to be done.

 

ಸ್ತೋತ್ರದ ಅರ್ಥ ಚಿಂತನೆಗೂ ಮುನ್ನ ಸ್ತೋತ್ರರತ್ನವನ್ನು ನಮಗೆ ಕರುಣಿಸಿದ  ಅಪ್ಪಣಾಚಾರ್ಯರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

 

ರಾಘವೇಂದ್ರ ಸ್ತೋತ್ರವನ್ನು ರಚಿಸಿದ ಅಪ್ಪಣಾಚಾರ್ಯರು ಇಂದಿನ ರಾಯಚೂರು ಜಿಲ್ಲೆಯ ಬಿಚ್ಚಾಲೆ ಗ್ರಾಮದವರು. ಹುಟ್ಟಿದ್ದು ಆತ್ರೇಯ ಗೋತ್ರದ ಮಾಧ್ವ ಬ್ರಾಹ್ಮಣ ಮನೆತನದಲ್ಲಿ. ಅವರ ತಂದೆ ಪರಮ ವೈದಿಕರೂ, ಸ್ವತಃ ಉತ್ತಮ ಜ್ಞಾನಿಗಳೂ ಆದ ರಾಮಸುಬ್ಬಣಾಚಾರ್ಯರು. ಅವರಲ್ಲಿಯೇ ಎಲ್ಲಾ ಶಾಸ್ತ್ರಗಳ ವ್ಯಾಸಂಗವೂ ನಡೆಯಿತು. ಹೊರಗೆ ನೂರಾರು ಎಕರೆ ಜಮೀನಿನ ಒಡೆತನ. ಇಪ್ಪತ್ತೆಂಟು ಗ್ರಾಮಗಳ ಜಾಹಗೀರುದರಿಕೆ. ಒಳಗೆ ತುಂಬಿ ತುಳುಕುವ ಜ್ಞಾನ. ಇವರ ಜ್ಞಾನ ಪಾಂಡಿತ್ಯವನ್ನು ತಿಳಿದು ದೇಶದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಇವರಲ್ಲಿ ವಿದ್ಯಾಭ್ಯಾಸಕ್ಕೆ ಬರುತ್ತಿದ್ದರು.

ಇಂತಃ ಸಮೃದ್ಧ ಜೀವನ ನಡೆಸುತ್ತಿದ್ದ ಅಪ್ಪಣಾಚಾರ್ಯರು ಒಮ್ಮೆ ತಮ್ಮ ಊರಿಗೆ ಬಂದ ರಾಘವೇಂದ್ರ ಸ್ವಾಮಿಗಳ ದರ್ಶನವಾಗಿ, ಅವರ ವಿದ್ವತ್ತು, ತೇಜಸ್ಸು ಮತ್ತು ಮಹಿಮೆಗಳನ್ನು ಕಂಡು ಮಾರುಹೋಗಿ ಅವರಲ್ಲಿ ನಿರಂತರ ಶಿಷ್ಯವೃತ್ತಿಯನ್ನು ಕೈಗೊಂಡರು. ರಾಯರೂ ಕೂಡ ಅಪ್ಪಣಾಚಾರ್ಯರ ಪಾಂಡಿತ್ಯ, ವಿದ್ಯೆ ವಿನಯ ಭಕ್ತಿಗಳನ್ನು ಕಂಡು ತನ್ನ ಅಂತರಂಗದ ಶಿಷ್ಯನನ್ನಾಗಿ ಸ್ವೀಕರಿಸಿದರು. 

 

ಇಂತಃ ಅಪ್ಪಣಾಚಾರ್ಯರಿಗೆ ರ್ಕೃತಜ್ಞತಾಪೂರ್ವಕವಾಗಿ ಮತ್ತು ಸ್ತೋತ್ರವನ್ನು ರಚಿಸಿದ ಅವರೇ ಇದರ ಅರ್ಥವನ್ನೂ ಹೊಳೆಸಲೆಂಬ ಉದ್ದೇಶದಿಂದ ಒಂದು ಸಣ್ಣ ಶ್ಲೋಕರೂಪದ ಪ್ರಾರ್ಥನೆ.

Before we begin in all earnestness to contemplate on the meaning of this stōtra, let us learn a little about its composer Appaṇṇācāryaru, who gave us this gem of a stōtra.

Appaṇṇācāryaru was from Biccāle village which is in the present Raichur district of Karnataka. He was born into the Ātrēya gōtra in a Madhva brāhmaṇa family. His father, Rāmasubbaṇācārya, was a supreme vaidika (scholar and follower of Vedic traditions) and himself a learned scholar. Under his tutelage, he was taught all the scriptures. In the external world, he owned hundreds of acres of land. In addition he had the Jāhagīr(regally gifted ownership) of 28 villages. Internally, he was chock- full of knowledge. His knowledge and scholarship attracted pupils from all corners of the country for pursuit of education.

 

Leading such a prosperous and progressive life, Appaṇṇācārya, once had the darshana (occasion to call upon in attendance) of Rāghavēndra Swamy who had come to his town, and was immediately impressed with his scholarship, persona and the mystic lore surrounding him. As such he sought to be his disciple for life. Rayaru too was taken in by Appaṇṇācārya’s scholarship, humility and devotion and accepted him as one of his affectionate disciples.

It is to such Appaṇṇācārya that I dedicate this brief verse in gratitude and prayer and seek his guidance in getting the insightful intent of the stōtra.

ಅಪ್ಪಣ್ಣಾರ್ಯಮಹಂ ವಂದೇ

ಏತತ್-ಸ್ತೋತ್ರಾರ್ಥ-ಸಿದ್ಧಯೇ |

ಶ್ರೀರಾಘವೇಂದ್ರ-ಪಾದಾಬ್ಜ-

ಭೃಂಗರಾಜಂ ಮಹಾಮತಿಮ್ ||

अप्पण्णारयमहं  वंदे

त्-स्तोत्रार्थ -सिद्धये  |

श्री राघवेंद्र -पादाब्ज -

भृंगराजं महामतिम् ||

 

Appaṇṇāryamahaṁ vandē
ētat-stōtrārtha-sid'dhayē |
śrīrāghavēndra-pādābja-
bhr̥ṅgarājaṁ mahāmatim ||

 

ಏತತ್ - ಈಗ ಚಿಂತನೆಮಾಡಲು ಉಪಕ್ರಮಿಸಿರುವಂತಃ, ಸ್ತೋತ್ರಾರ್ಥಸಿದ್ಧಯೇ - ಸ್ತೋತ್ರದ ಅರ್ಥದ ಸಿದ್ಧಿಗೋಸ್ಕರ, ಮಹಾಮತಿಮ್ - ಮಹಾ ಜ್ಞಾನಿಯಾದ, ಶ್ರೀರಾಘವೇಂದ್ರಪಾದಾಬ್ಜ-ಭೃಂಗರಾಜಂ - ಶ್ರೀರಾಘವೇಂದ್ರ ಸ್ವಾಮಿಗಳ ಪಾದಕಮಲಗಳಲ್ಲಿ ಮುಗಿಬಿದ್ದಿರುವ ದುಂಬಿಗಳ ರಾಜನಂತಿರುವ, ಅಪ್ಪಣ್ಣಾರ್ಯಂ - ಅಪ್ಪಣ್ಣ ಎಂಬ ಹಿರಿಯ()ರನ್ನು, ಅಹಂ - ನಾನು, ವಂದೇ - ನಮಸ್ಕರಿಸುತ್ತೇನೆ.

त्(ētat) – the contemplation of which is commenced now, स्तोत्रार्थसिद्धये(stōtrārtha-sid'dhayē) – to realise the meaning of the stotra, महामतिम्(mahāmatim) – the great seer, श्रीराघवेंद्रपादाब्जभृंगराजं(śrīrāghavēndrapādābjabhr̥ṅgarājaṁ) – like the royal bee that lies prayerfully at the lotus feet of Śrī Rāghavēndra swamy, अप्पण्णारयं(Appaṇṇāryam) – the venerable one named Appaṇṇā, अहं(ahaṁ) – I,   वंदे vandē – pay my obeisance.
(By Śrī  Krishna B R  in Kannada/ translation to English / Devanagari by Śrī Prasad B S)

No comments:

Post a Comment

ಗೋ-ಕುಲ Go-Kula