ಶ್ಲೋಕ ೩.
Ślōka – 3
ಶ್ರೀ-ರಾಘವೇಂದ್ರಃ ಸಕಲ-ಪ್ರದಾತಾ
ಸ್ವ-ಪಾದ-ಕಂಜ-ದ್ವಯ-ಭಕ್ತಿಮದ್ಭ್ಯಃ |
ಅಘಾದ್ರಿ-ಸಂಭೇದನ-ದೃಷ್ಟಿ-ವಜ್ರಃ
ಕ್ಷಮಾ-ಸುರೇಂದ್ರೋವತು ಮಾಂ ಸದಾಯಮ್ ||೩||
श्री-राघवेन्द्रः सकल-प्रदाता
स्व-पाद-कञ्ज-द्वय-भक्तिमद्भ्यः ।
अघाद्रि-सम्भेदन-दृष्टि-वज्रः
क्षमा-सुरेन्द्रोवतु मां सदायम् ॥ ३॥
śrī-rāghavēndraḥ
sakala-pradātā
sva-pāda-kan̄ja-dvaya-bhaktimadbhyaḥ |
aghādri-sambhēdana-dr̥ṣṭi-vajraḥ
kṣamā-surēndrōvatu māṁ sadāyam ||3||
sva-pāda-kan̄ja-dvaya-bhaktimadbhyaḥ |
aghādri-sambhēdana-dr̥ṣṭi-vajraḥ
kṣamā-surēndrōvatu māṁ sadāyam ||3||
ಪದಚ್ಛೇದ:
ಶ್ರೀರಾಘವೇಂದ್ರಃ, ಸಕಲಪ್ರದಾತಾ,
ಸ್ವಪಾದಕಂಜದ್ವಯಭಕ್ತಿಮದ್ಭ್ಯಃ, ಅಘಾದ್ರಿಸಂಭೇದನದೃಷ್ಟಿವಜ್ರಃ, ಕ್ಷಮಾಸುರೇಂದ್ರಃ, ಅವತು, ಮಾಮ್, ಸದಾ, ಅಯಮ್.
Padacchēda:
श्रीराघवेन्द्रः(śrīrāghavēndraḥ), सकलप्रदाता(sakalapradātā)
स्वपादकञ्जद्वयभक्तिमद्भ्यः(svapādakan̄jadvayabhaktimadbhyaḥ),
अघाद्रिसम्भेदनदृष्टिवज्रः(aghādrisambhēdanadr̥ṣṭivajraḥ),
क्षमासुरेन्द्रः(kṣamāsurēndraḥ), अवतु(avatu), माम्(mām), सदा(sadā), अयम्(ayam).
ಅನ್ವಯಾರ್ಥ:
ಶ್ರೀರಾಘವೇಂದ್ರಃ – ಕಾಂತಿಯುಕ್ತರಾದಂತಃ ಶ್ರೀ ರಾಘವೇಂದ್ರರು, ಸ್ವ ತನ್ನ (ಸ್ವತಂತ್ರನಾದ ಭಗವಂತನ) ಪಾದ ಕಂಜದ್ವಯ – ಪಾದಕಮಲಗಳಲ್ಲಿ, ಭಕ್ತಿಮದ್ಭ್ಯಃ – ಭಕ್ತಿಯುಳ್ಳವರಿಗೆ, ಸಕಲಪ್ರದಾತಾ – ಎಲ್ಲವನ್ನೂ ವಿಶೇಷವಾಗಿ ಕೊಡುವಂಥವರು,
ಅಘಾದ್ರಿ – ಪಾಪಗಳ ಪರ್ವತವನ್ನು – ಸಂಭೇದನ – ಸೀಳಿಬಿಡುವಂತಃ, ದೃಷ್ಟಿ ವಜ್ರಃ – ವಜ್ರಾಯುಧದಂಥ ಕಣ್ಣೋಟ ಉಳ್ಳವರು,
ಅಯಂ – ಅಂತಃ, ಕ್ಷಮಾ ಸುರೇಂದ್ರಃ – ಕ್ಷಮಾ -ಭೂಮಿ, ಕ್ಷಮಾ ಸುರಾಃ – ಭೂಸುರರು -
ಕ್ಷಮಾದಿ ಗುಣಸಂಪನ್ನರಾದ ಬ್ರಾಹ್ಮಣರು,
ಕ್ಷಮಾ ಸುರಾಣಾಂ ಇಂದ್ರಃ – ಕ್ಷಮಾದಿ ಗುಣಸಂಪನ್ನರಾದ ಉತ್ತಮ ಸಾಧಕ ಜೀವಿಗಳಿಗೆಲ್ಲ, ಇಂದ್ರಃ – ನಾಯಕರಾದ, ಅಯಂ - ಈ ಶ್ರೀ ರಾಘವೇಂದ್ರರು, ಸದಾ – ಯಾವಾಗಲೂ, ಮಾಂ – ನನ್ನನ್ನು, ಅವತು – ರಕ್ಷಿಸಲಿ.
Synonyms:
श्रीराघवेन्द्रः(śrīrāghavēndraḥ)
– the resplendent Śrī Rāghavēndra, स्व(sva) – His(i.e., God, the independent One) पादकञ्जद्वय(pādakan̄jadvaya) – in the
lotus feet भक्तिमद्भ्यः(bhaktimadbhyaḥ)
– to the devoted people, सकलप्रदाता(sakalapradātā) – grants everything in a
special way,
अघाद्रि(aghādri)
– the mountain of sins, सम्भेदन(sambhēdana) – capable of
splintering दृष्टिवज्रः(dr̥ṣṭivajraḥ)
– with sight as powerful as the Vajrāyudha(divine weapon (lit.) one that is
made of diamond), अयम्(ayam) – such a one, क्षमासुरेन्द्रः(kṣamāsurēndraḥ) - क्षमा (kṣamā) – bhu (the earth,
earthly), क्षमासुराः(kṣamāsurāḥ) – divine people who inhabit this earth – क्षमा सुराणां इंद्रः(kṣamā
surāṇāṁ indraḥ) – to all those supreme sādhakas(pursuers of the path of the Lord)
who are endowed with compassionate traits, इंद्रः(indraḥ)
– leader, अयम्(ayam) –
this Śrī Rāghavēndra, सदा(sadā) – at all times, माम्(mām) - me, अवतु(avatu) –protect.
ತಾತ್ಪರ್ಯ:
ಮೇಲ್ನೋಟಕ್ಕೆ ಈ ಶ್ಲೋಕದಲ್ಲಿ ರಾಘವೇಂದ್ರರು ತಮ್ಮ ಪಾದಗಳಲ್ಲಿ ಭಕ್ತಿಮಾಡಿದವರಿಗೆ ಎಲ್ಲವನ್ನೂ ಕೊಡುತ್ತಾರೆ ಎಂಬ ಅರ್ಥ ಬರುವಂತಿದೆ. ತಮಗೆ ಮೆಚ್ಚಿಸಲು ಎಲ್ಲಾ ರೀತಿಯ ಸೇವೆ ಮಾಡುವ ಸೇವಕನಿಗೆ ಒಬ್ಬ ಅಧಿಕಾರಿ ಉದ್ಯೋಗದಲ್ಲಿ ಬಡ್ತಿಯೇ ಮೊದಲಾದ ಎಲ್ಲ ಸೌಲಭ್ಯಗಳನ್ನೂ ಕೊಡುವಂತೆಯೇ ಇದೂ ಆಯಿತಲ್ಲವೇ ? ಸ್ವಾರ್ಥಿಯಾದ ಒಬ್ಬ ಮೇಲಧಿಕಾರಿಗೂ ರಾಯರಿಗೂ ಯಾವ ವ್ಯತ್ಯಸ ಉಳಿಯಿತು ? ಎಂಬ ಪ್ರಶ್ನೆ ಕೂಡಾ ಬರಬಹುದು. ಆದರೆ ಅಪ್ಪಣಾಚಾರ್ಯರ ಮಾತಿನ ಆಳಿಕ್ಕಿಳಿದರೆ ಇಂಥ ಪ್ರಶ್ನೆಗಳಿಗೆ ಅಲ್ಲಿಯೇ ಉತ್ತರ ಸಿಗುತ್ತದೆ.
ಸಂಸ್ಕೃತ ಒಡಲಲ್ಲಿ ಹತ್ತು ಹಲವು ಭಿನ್ನ ಅರ್ಥಗಳನ್ನು ತುಂಬಿಕೊಂಡ ಒಂದು ಗರ್ಭಿಣಿ ಭಾಷೆ. ಮತ್ತು ಆಂಗ್ಲಭಾಷೆಗಿಂತಲೂ ಹೆಚ್ಚು ಸಂಕ್ಷಿಪ್ತಾಕ್ಷರಗಳನ್ನುಳ್ಳ ಭಾಷೆ (abbreviation)
ಇಲ್ಲೂ ಅಷ್ಟೆ. ಸ್ವ ಎಂಬುದು ಸ್ವತಂತ್ರನಾದ ಭಗವಂತನನ್ನು ಹೇಳುವ ಶಬ್ದ. ಸ್ವ ಪಾದ ಎಂದರೆ ಸ್ವತಂತ್ರನಾದ ಭಗವಂತನ ಪಾದ ಎಂದರ್ಥ. ಅಂದರೆ, ಯಾರು ಭಗವಂತನ ಪಾದಗಳಲ್ಲಿ ಭಕ್ತಿಮಾಡುತ್ತಾರೆಯೋ ಅವರಿಗೆ ರಾಯರು ಬಯಸಿದ್ದೆಲ್ಲವನ್ನೂ ಸರ್ವಸ್ವವನ್ನೂ ಕೂಡ ಕೊಟ್ಟುಬಿಡುವಂಥವರು.
ನಮ್ಮ ಜನ್ಮ ಜನ್ಮಾಂತರದ ಪಾಪಗಳ ರಾಶಿಯನ್ನು ಕೂಡ ಕೇವಲ ತಮ್ಮ ಕುಡಿಗಣ್ಣೋಟದಿಂದಲೇ ಸೀಳಿ ನಮ್ಮನ್ನು ಪುನೀತರನ್ನಾಗಿಸುವ ತಪಶ್ಶಕ್ತಿಯುಳ್ಳವರು.
ಕ್ಷಮಾದಿ ಉತ್ತಮ ಗುಣ ಸಂಪನ್ನರಾದ ಎಲ್ಲಾ ಉತ್ತಮ ಸಾಧಕ ಜೀವಿಗಳಿಗೆ ಉನ್ನತ ಮಾರ್ಗದರ್ಶಕ ನಾಯಕರಾಗಿರುವವರು. ಅಂತಃ ಶ್ರೀ ರಾಘವೇಂದ್ರರು ಯಾವ ಯೋಗ್ಯತೆಯೂ ಇಲ್ಲದ ನನ್ನನ್ನು ಭಗವಂತನ ಭಕ್ತಿಯ ಪಥದಲ್ಲಿ ಮಾರ್ಗದರ್ಶನ ಮಾಡಿ ಸರ್ವದಾ ರಕ್ಷಿಸಲಿ ಎಂದು ಈ ಶ್ಲೋಕದಲ್ಲಿ ಅನುಸಂಧಾನ ಮಾಡಬೇಕು.
Tātparya:
Apparently,
this ślōka seems to convey that Śrī
Rāghavēndra grants everything to those who express devotion at his feet. In a
way, isn’t that like a boss who grants promotions and all attendant benefits to
those team members who serve to please him? If so, it might beg the question
that would Rayaru be any different from a selfish boss? However, if one delves
deeper into this composition of Appaṇācārya, all such questions get answered at
origin itself.
Sanskr̥t is a pregnant
language carrying tenfold meanings in its womb. In addition, compared to
English, there are more acronyms and compressions built into the word forms.
Here too स्व(sva), for instance, points to the abbreviated
form of स्वतंत्र (svatantra) i.e. God, the independent
reality. Therefore, स्वपाद(svapāda) means the
feet of God, the independent One. Implies that to those who express devotion at
the feet of God, Rayaru grants everything too.
Rayaru has the power from his
penances to purify us with a mere glance from the corner of his eyes; a glance
that suffices to rip apart all sins accumulated by us, across various lives.
He stands as the progressive
leader in guiding all those supreme sādhakas who are endowed with compassionate traits. We
who have no such merits whatsoever, should resolve to seek guidance from such
Śrī Rāghavēndra, to lead us to the path of the Lord and protect us always, as we chant this ślōka.
No comments:
Post a Comment
ಗೋ-ಕುಲ Go-Kula