Saturday, 12 August 2017

Śrī Rāghavēndra Stōtra Ślōka - 8 ಶ್ರೀ ರಾಘವೇಂದ್ರ ಸ್ತೋತ್ರ ಶ್ಲೋಕ ೮

ಶ್ಲೋಕ .
Ślōka 8.
ಯತ್-ಪಾದೋದಕ-ಸಂಚಯಃ ಸುರನದೀ- ಮುಖ್ಯಾಪಗಾಸಾದಿತಾ-
ಸಂಖ್ಯಾನುತ್ತಮ-ಪುಣ್ಯ-ಸಂಘ-ವಿಲಸತ್-ಪ್ರಖ್ಯಾತ-ಪುಣ್ಯಾವಹಃ |
ದುಸ್ತಾಪತ್ರಯ-ನಾಶನೋ- ಭುವಿ  ಮಹಾ-ವಂಧ್ಯಾ-ಸುಪುತ್ರ-ಪ್ರದೋ 
ವ್ಯಂಗ-ಸ್ವಂಗ-ಸಮೃದ್ಧಿ-ದೋ ಗ್ರಹ- ಮಹಾಪಾಪಾಪಹಸ್ತಂ ಶ್ರಯೇ ||
त्-पादोदक-संचयः सुरनदी-मुख्यापगासादिता-
संख्यानुत्तम-पुण्य-संघ-विलसत्-प्रख्या-पुण्यावहः
दुस्तापत्रय-नाशनो-भुवि-महा-वन्ध्या-सुपुत्र-प्रदो
व्यंग-स्वंग-समृद्धि-दो ग्रह-महापापापहस्तं श्रये
Yat-pādōdaka-san̄cayaḥ suranadī- mukhyāpagāsāditā-
saṅkhyānuttama-puṇya-saṅgha-vilasat-prakhyāta-puṇyāvahaḥ |
dustāpatraya-nāśanō
- bhuvi mahā-vandhyā-suputra-pradō
vyaṅga-svaṅga-samr̥d'dhi-dō graha- mahāpāpāpahastaṁ śrayē ||

ಪದಚ್ಛೇದ:
ಯತ್ ಪಾದೋದಕ ಸಂಚಯಃ, ಸುರನದೀ, ಮುಖ್ಯಾಪಗಾ, ಆಸಾದಿತಾ, ಅಸಂಖ್ಯಾ ಅನುತ್ತಮ ಪುಣ್ಯಸಂಘವಿಲಸತ್, ಪ್ರಖ್ಯಾತಪುಣ್ಯಾವಹಃ, ದುಸ್ತಾಪತ್ರಯನಾಶನಃ, ಭುವಿ, ಮಹಾವಂಧ್ಯಾಸುಪುತ್ರಪ್ರದಃ, (ಮಹಾವಂಧ್ಯಾಸು, ಪುತ್ರಪ್ರದಃ) ವ್ಯಂಗ-ವಿ-ಅಂಗ, ಸ್ವಂಗ -ಸು-ಅಂಗ, ಸಮೃದ್ಧಿದಃ, ಗ್ರಹ ಮಹಾಪಾಪಾಪಹಃ, (ಮಹಾ ಪಾಪ ಆಪಹಃ) ತಂ, ಶ್ರಯೇ.

padacchēda:
त् पादोदक संचयः(Yat pādōdaka san̄caya) सुरनदी(suranadī), मुख्यापगा(mukhyāpagā) सादिता(āsāditā), असंख्या(asakhyā), नुत्तम(anuttama), पुण्यसंघविलसत्(puyasaghavilasat) -प्रख्यातपुण्यावहः(prakhyātapuyāvaha), दुस्तापत्रयनाशनः(dustāpatrayanāśana), भुवि(bhuvi) महावन्ध्यासुपुत्रप्रदः[महावन्ध्यासु, पुत्रप्रदः] [mahāvandhyāsuputraprada, (mahāvandhyāsu, putraprada)], व्यंग-[वि-अंग](vyaga-[vi-aga]), स्वंग-[सु-अंग](svaga –[su-aga]), समृद्धिदः(samr̥d'dhida),ग्रह(graha), महापापापहः[महा पाप हः] (mahāpāpāpaha, [mahā pāpa āpaha]), तं(ta), श्रये(śrayē)
ಅನ್ವಯಾರ್ಥ:
ಸುರನದೀ ಮುಖ್ಯ – ಸುರ – ದೇವತೆಗಳಿಗೆ ಸಂಬಂಧಪಟ್ಟ, ನದೀ -ಗಂಗಾ ನದಿಯೇ ಪ್ರಮುಖವಾಗಿ ಉಳ್ಳ (ಇತರ), ಆಪಗಾ – ನದಿಗಳ (ಸ್ನಾನ ಪಾನ ಪ್ರೋಕ್ಷಣಾದಿಗಳಿಂದ) ಆಸಾದಿತಾ- ಪಡೆದಂತಃ, ಅಸಂಖ್ಯ – ಎಣಿಸಲಶಕ್ಯವಾದ, ಪುಣ್ಯ ಸಂಘ – ಪುಣ್ಯದ ರಾಶಿಯು, ಯತ್ – ಯಾವ ಶ್ರೀ ರಾಘವೇಂದ್ರರ, ಪಾದೋದಕ – ಪಾದವನ್ನು ತೊಳೆದ ನೀರು (ಅಸಂಖ್ಯ -ಬಹಳವಾದ) ಪುಣ್ಯಾವಹಃ – ಆವಹಃ -ಕೊಡುವಂತಃ, ಪುಣ್ಯ – ಪುಣ್ಯಕ್ಕಿಂತಲೂ ಅನುತ್ತಮಂ – ಕಡಿಮೆಯೆಂದು, ಪ್ರಖ್ಯಾತ -ಪ್ರಸಿದ್ಧಿ ಪಡೆದು, ವಿಲಸತ್ – ಶೋಭಿಸುತ್ತಿದೆಯೋ, ಮತ್ತು ಭುವಿ – ಈ ಸಂಸಾರದಲ್ಲಿ, ದುಸ್ತಾಪತ್ರಯ - ದುಃ- ಎದುರಿಸಲಸಾಧ್ಯವಾದ, ತಾಪತ್ರಯ – ಅಧಿ ಭೌತಿಕ, ಅಧಿ ದೈವಿಕ ಮತ್ತು ಅಧ್ಯಾತ್ಮಿಕಗಳೆಂಬ ಮೂರುವಿಧದ, ತಾಪ – ಸಂಕಟಗಳನ್ನು, ನಾಶನಃ – ನಾಶ ಮಾಡುವಂಥದ್ದು, ಮಹಾ ವಂಧ್ಯಾ (ವಂಧ್ಯಾಸು) – ಎಲ್ಲಾ ವಿಧದ ವ್ರತ ನೇಮಾನುಷ್ಠಾನಗಳನ್ನು ಮಾಡಿಯೂ ಮಾಕ್ಕಳನ್ನು ಪಡೆಯುವ ಭಾಗ್ಯವಿಲ್ಲದ ಸ್ತ್ರೀಯರಿಗೆ (ವಂಧ್ಯಾಸು – ಮಕ್ಕಳಾಗದ ಸ್ತ್ರೀಯಲ್ಲಿ) ಕೂಡ, (ಸು) ಪುತ್ರ ಪ್ರದಃ- ಉತ್ತಮರಾದ ಮಕ್ಕಳನ್ನು ಅನುಗ್ರಹಿಸುವಂಥದ್ದು. ವ್ಯಂಗ – ವಿ ಅಂಗ – ವಿಕಲವಾದ ಅಂಗ ಉಳ್ಳವರಿಗೆ (ಅಂಗವಿಕಲರಿಗೆ) ಸ್ವಂಗ – ಸು ಅಂಗ ಸಮೃದ್ಧಿ – ಅರೋಗ್ಯಪೂರ್ಣವಾದ ಉತ್ತಮ ಅಂಗಗಳನ್ನು, ದಃ – ಕೊಡುವಂಥದ್ದು, ಗ್ರಹ – ನಾನಾವಿಧವಾದಂತಃ ದುಷ್ಟ ಗ್ರಹಗಳದೆಸೆಯಿಂದ ನಮ್ಮಿಂದ ಆಗುವಂತಃ, ಪಾಪ – ನಾನಾ ವಿಧವಾದಂತಃ ಅನೇಕ ಪಾಪಗಳನ್ನು, ಆಪಹಃ – ಪರಿಹರಿಸುವಂಥದ್ದೆಂದು (ಪ್ರಸಿದ್ಧಃ) ಪ್ರಸಿದ್ಧವಾಗಿದೆಯೋ, ತಂ – ಅಂತಃ ಶ್ರೀ ರಾಘವೇಂದ್ರರನ್ನು, ಶ್ರಯೇ – ಆಶ್ರಯಿಸುತ್ತೇನೆ.

Synonyms: 
सुरनदी मुख्य (Suranadī mukhya) – सुर(sura) – concerning or relating to the deities, नदी(nadī) -primarily rivers like गंगा(gagā) (and so on..), आपगा(āpagā) – rivers (to perform स्नान पान प्रोक्षन [snāna pāna prōkaa] etc) आसादित(āsāditā)- obtained, असंख्य(asakhya) – unlimited, पुण्य संघ (puya sagha) – mounds of puyas or merits, यत्(yat) – of that Śrī Rāghavēndra’s, पादोदक(pādōdaka) – water from washing his feet, असंख्य (asakhya) – a lot, पुण्यावहः(puyāvaha) – आवहः(āvaha) – giving, yielding, पुण्य(puya) – more than such puyas(merits), अनुत्तमं(anuttama) – deemed as less, प्रख्यात(prakhyāta) – reputed, विलसत्(vilasat) – gleaming, and भुवि(bhuvi) – in this world, दुस्तापत्रय(dustāpatraya) – दुः(du)- not faceable, तापत्रय(tāpatraya) – the three classes namely अधि भौतिक (adhi bhautika/ materially manifested), अधि दैविक (adhi daivika/ divinely manifested) and अध्यात्मिक(adhyātmika/ spiritually manifested) difficulties or ailments, ताप(tāpa) – afflictions, नाशनः(nāśana) –  destroyed or rendered infructuous, महा वंध्या[वंध्यासु] (vandhyāsu) – women folk, who despite observances of all types of rituals or penances too (vandhyāsu – infertile or childless women folk), (su) पुत्र प्रदः (putra prada)- graced with good progeny. व्यंग-[वि-अंग](vyaga-[vi-aga]) – those with ill-formed limbs or the differently abled, स्वंग-[सु-अंग](svaga –[su-aga]) समृद्धिदः(samr̥d'dhida) – good and healthy limbs, दः(da) – granted, ग्रह (graha) – what is committed by us due to bad planetary influences, पाप(papa) – various types of sins, आपहः(āpaha) – resolved, प्रसिद्धः(prasid'dha) - reputed, तं (ta) – in such Śrī Rāghavēndra, श्रये(śrayē) – I seek refuge.

ತಾತ್ಪರ್ಯ
ಶ್ಲೋಕದಲ್ಲಿ ರಾಯರ ಪಾದೋದಕವು ಗಂಗೆಗಿಂತಲೂ ಮಿಗಿಲು ಎಂದು ಚಮತ್ಕಾರಿಕವಾಗಿ ತಿಳಿಸಿದ್ದಾರೆ
ರಾಘವೇಂದ್ರ ಸ್ವಾಮಿಗಳ ಪಾದಗಳನ್ನು ತೊಳೆದ ಅಂದರೆ, ಉತ್ತಮಾನಾಂ ಸ್ವರೂಪಂ ತು ಪಾದ ಶಬ್ದೇನ ಭಣ್ಯತೇ ಎನ್ನುವ ಮಾತಿನಂತೆ ರಾಘವೇಂದ್ರರ ಸ್ವರೂಪಭೂತವಾದ, ಬ್ರಹ್ಮಾದಿ ಸಮಸ್ತ ದೇವತೆಗಳ ವೃಂದದೊಂದಿಗೆ ಭಗವಂತನ ನಿತ್ಯ ಸನ್ನಿಧಾನ ಉಳ್ಳದ್ದೆಂದು ಪ್ರಸಿದ್ಧವಾದ ರಾಯರ ವೃಂದಾವನವನ್ನು ತೊಳೆದ ನೀರು, ಭಗವಂತನ ನಿತ್ಯ ಸನ್ನಿಧಾನದ ಸ್ಪರ್ಷ ಉಳ್ಳ ಕಾರಣ ಗಂಗಾ ನದಿಯೇ ಮೊದಲಾದ ಪುಣ್ಯತೀರ್ಥಗಳ ಸ್ನಾನ ಪಾನಾದಿಗಳಿಂದ ಸಿಗುವ ಪುಣ್ಯರಾಶಿಗಿಂತಲೂ ಹೆಚ್ಚಿನ ಪುಣ್ಯ ಕೊಡುವಂಥದ್ದು ಎಂದು ಇದರ ಭಾವ. ಅಷ್ಟೆ ಅಲ್ಲದೆ, ಪುಣ್ಯತಮವಾದ ರಾಯರ ಪಾದೋದಕವು (ಅಧಿದೈವಿಕ)ದೇವತಾಪ್ರಕೋಪಗಳಿಂದ ಉಂಟಾಗುವಂಥ, (ಅಧಿ ಭೌತಿಕ) ಪಂಚಭೂತಗಳ ಮತ್ತು ಬಾಹ್ಯ ಶಕ್ತಿಗಳಿಂದ ಉಂಟಾಗುವಂಥ ಹಾಗೂ (ಅಧ್ಯಾತ್ಮಿಕ) ನಮ್ಮ ಪೂರ್ವಜನ್ಮಾರ್ಜಿತ ಕರ್ಮಗಳಿಂದುಂಟಾಗುವಂಥ ಎಲ್ಲಬಗೆಯ ಸಂಕಟಗಳನ್ನು ನಾಶಮಾಡುವಂಥದ್ದು
ವಂಧ್ಯಾ ಎಂದರೆ ಮಕ್ಕಳಾಗದಂತ ಹೆಣ್ಣು. ಮಹಾ ವಂಧ್ಯಾ ಎಂದರೆ ಯಾವ ವೈದ್ಯಕೀಯ ಪ್ರಯತ್ನಗಳಿಂದಲೂ, ವ್ರತ ಜಪ ತಪಾನುಷ್ಠಾನಗಳಿಂದಲೂ ಕೂಡ ಮಕ್ಕಳಾಗದ ಹೆಣ್ಣು ಎಂದರ್ಥ. ಆದರೆ, ರಾಯರ ಪಾದೋದಕವು ಅಂಥ ಹೆಣ್ಣಿಗೆ ಕೂಡ ಉತ್ತಮ ಮಕ್ಕಳನ್ನು ಕರುಣಿಸುವ ಶಕ್ತಿಯುಳ್ಳದ್ದು
ಅಂಗವಿಕಲರಿಗೆ ಉತ್ತಮವಾದ ಸುದೃಢ ಅಂಗಗಳನ್ನು ಕೊಡುವಂಥದ್ದು. ಮತ್ತು ಗ್ರಹಚಾರದ ದೆಸೆಯಿಂದ ನಮ್ಮಿಂದ ಆಗಬಹುದಾದ ಎಲ್ಲ ಪಾಪಗಳನ್ನು ಕೂಡ ಪರಿಹಾರಮಾಡಬಲ್ಲಂಥದ್ದು. ಆದ್ದರಿಂದ, ಯಾವ ರಾಯರ ಪಾದ/ ವೃಂದಾವನವನ್ನು ತೊಳೆದ ನೀರಿಗೆ ಇಷ್ಟೆಲ್ಲಾ ಶಕ್ತಿಯಿದೆಯೋ ಅಂಥಾ ರಾಘವೇಂದ್ರರನ್ನು ಆಶ್ರಯಿಸುತ್ತೇನೆ (ಆಶ್ರಯಿಸಬೇಕು) ಎಂಬುದು ಶ್ಲೋಕದ ತಾತ್ಪರ್ಯ.

Tātparya:
That Rayaru’s Pādōdaka(water used for washing the feet) is superior to  the Gaga is mystically stated in this Ślōka.
The water washing the feet of Śrī Rāghavēndraswāmi’s feet impliesउत्तमानां स्वरूपं तु पाद शब्दं भण्यते(uttamānā svarūpa tu pāda śabdēna bhayatē)’ i.e., when Rayaru’s vr̥ndāvana, which symbolically represents his self, is washed, it is like the washing a place that is associated with all deities like Brahma etc in the nitya sannidhāna (in eternal proximity or co-presence) of Bhagavan; as such, it is regarded to be more meritorious than the snāna-pānā(bathing, drinking …) etc from auspicious rivers like Gaga etc., that eternally touch Bhagavan, Not just that, the auspicious Pādōdaka of Rayaru extinguishes everything that ails us, arising from divine anger or our linkages with the five material elements i.e., external linkages and also from our actions in the previous births {अधि दैविक (adhi daivika/ divinely manifested)}, अधि भौतिक (adhi bhautika/ materially manifested), and अध्यात्मिक(adhyātmika/ psychologically or spiritually manifested)}.
वंध्या (vandhyā) means a woman who is unfertile. महा वंध्या (mahā vandhyā) means a woman who is unable to conceive despite the best medical interventions or even with ritualistic observances/ meditation etc. Rayaru’s pādōdaka, however, has the power to grant children to such women folk too. It can grant good and strong limbs to the handicapped. It can also ameliorate all problems that confront us due to sinful acts that we may have inadvertently committed from evil planetary influences. 
Thus, if that pādōdaka that comes from washing Rayaru’s feet/ vr̥ndāvana can possess such varied powers, I seek (should seek) refuge in such Rāghavēndraru, is intended in this ślōka.
(Original by Śrī Krishna B R in Kannada, translation to English / Devanagari by Śrī Prasad B S)

No comments:

Post a Comment

ಗೋ-ಕುಲ Go-Kula