ಶ್ಲೋಕ ೩೧
yō bhaktyā guru-rāghavēndra-caraṇa-dvandvaṁ smaran yaḥ paṭhēt
stōtraṁ divyamidaṁ sadā nahi bhavēt tasyāśubhaṁ kin̄cana |
kintviṣṭārthasamr̥d'dhirēvakamalānāthaprasādōdayāt
kīrtirdigviditā vibhūtiratulā “sākṣī hayāsyōtra hi” ||31||
(Original by Śrī Krishna B R in Kannada, translation to English / Devanagari by Śrī Prasad B S)
Ślōka 31
ಯೋ ಭಕ್ತ್ಯಾ ಗುರು-ರಾಘವೇಂದ್ರ-ಚರಣ-ದ್ವಂದ್ವಂ ಸ್ಮರನ್ ಯಃ ಪಠೇತ್
ಸ್ತೋತ್ರಂ ದಿವ್ಯಮಿದಂ ಸದಾ ನಹಿ ಭವೇತ್ ತಸ್ಯಾಶುಭಂ ಕಿಂಚನ |
ಕಿಂತ್ವಿಷ್ಟಾರ್ಥಸಮೃದ್ಧಿರೇವಕಮಲಾನಾಥಪ್ರಸಾದೋದಯಾತ್
ಕೀರ್ತಿರ್ದಿಗ್ವಿದಿತಾ ವಿಭೂತಿರತುಲಾ “ಸಾಕ್ಷೀ ಹಯಾಸ್ಯೋऽತ್ರ ಹಿ” ||೩೨||
यो भक्त्या गुरु-राघवेंद्रचरणद्वन्द्वं स्मरन् यः पठेत् ।
स्तोत्रं दिव्यमिदं सदा नहि भवेत्तस्याशुभं किंचन।
किंत्विष्टार्थसमृद्धिरेवकमलानाथप्रसादोदयात् ।
कीर्तिर्दिग्विदिता विभूतिरतुला “साक्षी हयास्योऽत्र हि” ॥ ३१॥
yō bhaktyā guru-rāghavēndra-caraṇa-dvandvaṁ smaran yaḥ paṭhēt
stōtraṁ divyamidaṁ sadā nahi bhavēt tasyāśubhaṁ kin̄cana |
kintviṣṭārthasamr̥d'dhirēvakamalānāthaprasādōdayāt
kīrtirdigviditā vibhūtiratulā “sākṣī hayāsyōtra hi” ||31||
ಪದಚ್ಛೇದ:
ಯಃ, ಭಕ್ತ್ಯಾ, ಗುರುರಾಘವೇಂದ್ರಚರಣದ್ವಂದ್ವಮ್, ಸ್ಮರನ್, ಯಃ, ಪಠೇತ್, ಸ್ತೋತ್ರಮ್, ದಿವ್ಯಮ್, ಇದಮ್, ಸದಾ, ನ, ಹಿ, ಭವೇತ್, ತಸ್ಯ, ಅಶುಭಂ, ಕಿಂಚ, ನ, ಕಿಂತು, ಇಷ್ಟಾರ್ಥಸಮೃದ್ಧಿಃ, ಏವ, ಕಮಲಾನಾಥ-ಪ್ರಸಾದೋದಯಾತ್, ಕೀರ್ತಿಃ, ದಿಗ್ವಿದಿತಾ, ವಿಭೂತಿಃ, ಅತುಲಾ, ಸಾಕ್ಷೀ, ಹಯಾಸ್ಯಃ, ಅತ್ರ, ಹಿ.
padacchēda:
यः(yaḥ), भक्त्या(bhaktyā), गुरुराघवेंद्रचरणद्वन्द्वं(gururāghavēndracaraṇadvandvam), स्मरन् (smaran), यः(yaḥ), पठेत्(paṭhēt), स्तोत्रं(stōtram), दिव्यम्(divyam), इदम्(idam), सदा(sadā), न(na), हि(hi), भवेत्(bhavēt), तस्य(tasya), अशुभम्(aśubhaṁ), किंच(kin̄ca), न(na), किंतु(kintu), इष्टार्थसमृद्धिः(iṣṭārthasamr̥d'dhiḥ), एव(ēva), कमलानाथ-प्रसादोदयात्(kamalānātha-prasādōdayāt), कीर्तिः(kīrtiḥ), दिग्विदिता(digviditā), विभूतिः(vibhūtiḥ), अतुला(atulā), साक्षी(sākṣī), हयास्यः(hayāsyaḥ), अत्र(atra), हि(hi).
यः(yaḥ), भक्त्या(bhaktyā), गुरुराघवेंद्रचरणद्वन्द्वं(gururāghavēndracaraṇadvandvam), स्मरन् (smaran), यः(yaḥ), पठेत्(paṭhēt), स्तोत्रं(stōtram), दिव्यम्(divyam), इदम्(idam), सदा(sadā), न(na), हि(hi), भवेत्(bhavēt), तस्य(tasya), अशुभम्(aśubhaṁ), किंच(kin̄ca), न(na), किंतु(kintu), इष्टार्थसमृद्धिः(iṣṭārthasamr̥d'dhiḥ), एव(ēva), कमलानाथ-प्रसादोदयात्(kamalānātha-prasādōdayāt), कीर्तिः(kīrtiḥ), दिग्विदिता(digviditā), विभूतिः(vibhūtiḥ), अतुला(atulā), साक्षी(sākṣī), हयास्यः(hayāsyaḥ), अत्र(atra), हि(hi).
ಅನ್ವಯಾರ್ಥ:
ಅನ್ವಯಾರ್ಥ:
ಯಃ- ಯಾರು, ಗುರುರಾಘವೇಂದ್ರಚರಣದ್ವಂದ್ವಂ – ಗುರುಗಳಾದ ಶ್ರೀರಾಘವೇಂದ್ರರ
ಜೋಡಿಪಾದಗಳನ್ನು, ಸ್ಮರನ್ – ಮನಸ್ಸಿನಲ್ಲೇ
ಸ್ಮರಿಸುತ್ತಾ, ಇದಂ – ಈ, ದಿವ್ಯಂ – ದಿವ್ಯಮಂಗಳಮಯವಾದ, ಸ್ತೋತ್ರಂ – ಸ್ತೋತ್ರವನ್ನು, ಯಃ – ಜ್ಞಾನಪೂರ್ವಕವಾಗಿ (ರಾಯರ ಮಹಿಮೆಯ ಮತ್ತು ಶ್ಲೋಕದ ಅರ್ಥದ
ಜ್ಞಾನ) ಭಕ್ತ್ಯಾ – ಭಕ್ತಿಯಿಂದ, ಪಠೇತ್ – ಪಠಿಸುತ್ತಾನೆ, ತಸ್ಯ – ಅಂಥವನಿಗೆ, ಅಶುಭಂ
– ಕೇಡು, ಸದಾ – ಯಾವಾಗಲೂ, ಕಿಂಚನ – ಯಾವಕಾರಣದಿಂದಲೂ, ನ ಭವೇತ್ ಹಿ – ಆಗುವುದೇ ಇಲ್ಲವಷ್ಟೇ. (ಹಿ – ಪ್ರಸಿದ್ಧಿ ಸೂಚಕ.)
ಕಿಂತು – ಅಷ್ಟೇ ಅಲ್ಲದೆ, ಕಮಲಾನಾಥಪ್ರಸಾದೋದಯಾತ್ – ಲಕ್ಷ್ಮೀಪತಿಯಾದ ಭಗವಂತನ ಅನುಗ್ರಹವುಂಟಾಗಿ, ಇಷ್ಟಾರ್ಥ ಸಮೃದ್ಧಿಃ – ಬಯಕೆಗಳೆಲ್ಲದರ ಹೇರಳವಾದ ಈಡೇರುವಿಕೆ.
ದಿಗ್ವಿದಿತಾ ಕೀರ್ತಿಃ – ದಿಕ್ಕು ವಿದಿಕ್ಕುಗಳಲ್ಲಿಯೂ ಹಬ್ಬಿದ ಕೀರ್ತಿ, ಅತುಲಾ ವಿಭೂತಿಃ – ಸಾಟಿಯಿಲ್ಲದ ಅಧ್ಯಾತ್ಮಿಕ ಸಂಪತ್ತು, ಭವೇತ್ ಏವ – ಉಂಟಾಗಿಯೇ ಆಗುತ್ತದೆ.
ಅತ್ರ – ಈ ವಿಶಯದಲ್ಲಿ, ಹಯಾಸ್ಯಃ ಹಿ ಸಾಕ್ಷೀ – ಕುದುರೆಮುಖದ ಹಯಗ್ರೀವದೇವರೇ ಸಾಕ್ಷಿ.
Synonyms:
यः(yaḥ)
– He who, गुरुराघवेंद्रचरणद्वन्द्वं(gururāghavēndracaraṇadvandvam) – guru
Rāghavēndra’s pair of feet
of, स्मरन्(smaran) – commemorates in the mind, इदम्(idam) – this,
दिव्यम्(divyam) –
divine and auspicious, स्तोत्रं(stōtram) – this
stōtra, यः(yaḥ) – perceptively
(of guru Rāghavēndra’s greatness as well as the meaning of this stōtra), भक्त्या(bhaktyā) - devotedly, पठेत्(paṭhēt) –
recites, तस्य(tasya) – to
such a person, अशुभम्(aśubhaṁ) –
distress, सदा(sadā) –
always, किंचन(kin̄cana) – for
any reason whatsoever, न भवेत् हि(na
bhavēt hi) – will just not befall [हि(hi) – signifies
well-established], किंतु(kintu) – not
just that, कमलानाथ-प्रसादोदयात्(kamalānātha-prasādōdayāt) – fructifying through the
grace of the Lord, the husband of Lakśmī,
दिग्विदिता कीर्तिः(digviditā kīrtiḥ)
– fame spread across all directions, अतुला विभूतिः(atulā vibhūtiḥ) – incomparable spiritual wealth, भवेत् एव(bhavēt ēva) – will certainly materialise, अत्र(atra) – regarding this, हयास्यः हि साक्षी (hayāsyaḥ
hi sākṣī) – the Lord, Hayagrīva himself, is testimony
ತಾತ್ಪರ್ಯ:
ಈ ಶ್ಲೋಕದಲ್ಲಿ ಎರಡುಬಾರಿ ಯಃ ಎಂದು ಬಂದಿದೆ. ಕೆಲವು ವ್ಯಾಖ್ಯಾನಕಾರರು ಯೋಯಃ ಎಂದು ದ್ವಿರುಕ್ತಿಯನ್ನಾಗಿ ತೆಗೆದುಕೊಂಡಿದ್ದಾರೆ. ಮತ್ತೆ ಕೆಲವರು ಕೇವಲ ಯಃ ಒಂದನ್ನೇ ತೆಗೆದುಕೊಂಡಿದ್ದಾರೆ. ಆದರೆ ನಮ್ಮ ಆಚಾರ್ಯರು ತಮ್ಮ ವ್ಯಾಖ್ಯಾನದಲ್ಲಿ ಒಂದು ಯಃ (ಯಾರು) ಎನ್ನುವುದನ್ನು ಕರ್ತೃ ವಾಚಕವಾಗಿ, ಇನ್ನೊಂದು ಯಃ ಎನ್ನುವುದನ್ನು ಜ್ಞಾನವಾಚಕವನ್ನಾಗಿ ತೆಗೆದುಕೊಂಡಿದ್ದಾರೆ.
ಜ್ಞಾನಿಗಳೂ ರಾಯರ ಅಂತರಂಗಭಕ್ತರೂ ಅದ ಅಪ್ಪಾಣಾಚಾರ್ಯರು ಹಾಗೆ ಸುಮ್ಮನೆ ಪಾದಪೂರಣೆಗಾಗಿ ಅನವಶ್ಯಕವಾದ ದ್ವಿರುಕ್ತಿಯನ್ನು ಬಳಸಿರುವ ಸಾಧ್ಯತೆಯಿಲ್ಲ.
ಏನೇ ಮಾಡಿದರೂ ಅದನ್ನು,
ಏನು ?
ಏಕೆ? ಹೇಗೆ? ಎಂಬ ಈ ಮೂರು ಪ್ರಶ್ನೆಗಳಿಗೂ ಉತ್ತರ ಇಟ್ಟುಕೊಂಡೇ ಮಾಡಬೇಕು. ಯಾವ ಶಬ್ದದ ಅರ್ಥ ನಮಗೆ ಗೊತ್ತಿಲ್ಲವೋ ಅದನ್ನು ಹೇಳುವಾಗ ತಪ್ಪುಗಳಾದರೂ ನಮಗೆ ಅದು ಗೊತ್ತಾಗುವುದೇ ಇಲ್ಲ. ಉದಾಹರಣೆಗೆ ದಿನ ನಿತ್ಯ ಹೇಳುವ ಪೃಥ್ವಿ ತ್ವಯಾ ಧೃತಾ ಲೋಕಾಃ ಎನ್ನುವ ಮಂತ್ರದಲ್ಲಿ
ತ್ವಂ ಚ ಧಾರಯ ಮಾಂ ದೇವಿ ಎಂಬ ವಾಕ್ಯವಿದೆ. ಕೆಲವರು ಅದನ್ನು ತ್ವಂ ಚ ದಾರಯ ಮಾಂ ದೇವಿ ಎಂದೇ ಹೇಳುತ್ತಾರೆ.ಅದರ ಅರ್ಥದ ಬಗ್ಗೆ ಚಿಂತಿಸುವುದೇ ಇಲ್ಲ. ಧಾರಯ ಮಾಂ ಎಂದರೆ ನನ್ನನ್ನು ಚೆನ್ನಾಗಿ ಧಾರಣೆ ಮಾಡು ಎಂದು. ದಾರಯ ಮಾಂ ಎಂದರೆ ನನ್ನನ್ನು ಸೀಳಿಹಾಕು ಎಂದು ಅರ್ಥ. ತಿಳಿಯದವರಿಗೆ ಎರಡೂ ಒಂದೇ. ಆದರೆ
ದೇವಿಯನ್ನು ಕೇಳುವಾಗ ನಮ್ಮನ್ನು ಸೀಳಿಹಾಕುವಂತೆ ಪ್ರಾರ್ಥಿಸಬೇಕೋ ಇಲ್ಲಾ ಧರಿಸಿ ಉದ್ಧರಿಸುವಂತೆ ಪ್ರಾರ್ಥಿಸಬೇಕೋ?
ಹಾಗಾಗಿ,
ಯದೇವ ವಿದ್ಯಯಾ ಕರೋತಿ ಶ್ರದ್ಧಯಾ ಉಪನಿಷದಾ ತದೈವ ವೀರ್ಯವತ್ತರಂ ಭವತಿ ಎನ್ನುವ ಜ್ಞಾನಿಗಳ ಮಾತಿನಂತೆ ಯಾರು ರಾಯರ ಮಹಿಮೆಯನ್ನು ಮತ್ತು ಈ ಸ್ತೋತ್ರದ ಅರ್ಥವನ್ನು ತಿಳಿದು ಅನುಸಂಧಾನಪೂರ್ವಕವಾಗಿ ರಾಯರ ಪಾದಸ್ಮರಣೆಯೊಂದಿಗೆ ಈ ಸ್ತೋತ್ರವನ್ನು ನಿತ್ಯವೂ ಪಠಿಸುತ್ತಾರೆಯೋ ಅಂಥವರ ಎಲ್ಲ ದುಃಖಗಳೂ ನಾಶವಾಗುತ್ತವೆ. ಅಂಥವರಿಗೆ ಯಾವ ಕೇಡುಗಳೂ ಕಾಡುವುದಿಲ್ಲ. ಲಕ್ಷ್ಮೀಪತಿಯಾದ ಭಗವಂತನ ಅನುಗ್ರಹವಾಗುತ್ತದೆ. ಸಾಟಿಯಿಲ್ಲದ ಆತ್ಮೋನ್ನತಿಯುಂಟಾಗುತ್ತದೆ ಮತ್ತು ಅವರ ಕೀರ್ತಿಯು ದಿಕ್ಕು ವಿದಿಕ್ಕುಗಳಲ್ಲಿಯೂ ಹರಡುತ್ತದೆ ಎಂಬುದು ಈ ಶ್ಲೋಕದ ಅಭಿಪ್ರಾಯ.
ಪರಂಪರೆಯ ನಂಬಿಕೆಯ ಪ್ರಕಾರ ಅಪ್ಪಣಾಚಾರ್ಯರು ಈ ಶ್ಲೋಕವನ್ನು ಹೇಳುತ್ತಾ ಬರುವಾಗ ರಾಯರ ವೃಂದಾವನ ಪ್ರವೇಶ ಆಗಿಹೋಗಿತ್ತೆಂದೂ,
ಅವರು ದುಃಖದಿಂದ ಕಂಠ ಉಬ್ಬಿಬಂದು ಒಂದೂ ಅಕ್ಷರ ಹೊರಡದೆ ಸ್ಥಬ್ಧರಾದರೆಂದೂ, ಆಗ ವೃಂದಾವನದಿಂದ “ಸಾಕ್ಷೀ ಹಯಾಸ್ಯೋತ್ರ ಹಿ” ಎಂಬ ಅಶರೀರವಾಣಿ ಮೊಳಗಿತೆಂದೂ ಹೇಳುತ್ತಾರೆ. ಕೆಲವರು ರಾಯರೇ ಈ ಮಾತುಗಳನ್ನು ಹೇಳಿದರೆಂದೂ ಮತ್ತೆ ಕೆಲವರು ವಾಯುದೇವರೇ ಈ ವಾಣಿಯನ್ನು ನುಡಿದರೆಂದೂ ಅಭಿಪ್ರಾಯ ಪಡುತ್ತಾರೆ. ಆದರೆ, ಹೆಚ್ಚಿನ ವಿದ್ವಾಂಸರು ಹೇಳುವಂತೆ, ನಿರಹಂಕಾರಿಗಳೂ ಜ್ಞಾನಿಗಳೂ ಆದ ರಾಯರು ತಮ್ಮ ಸ್ತೋತ್ರಕ್ಕೆ ತಾವೇ ಈ ರೀತಿಯ ಪ್ರಾಮಾಣ್ಯವನ್ನು ಹೇಳಿರಲಾರರು. ಪುರಾಣಗಳಲ್ಲಿ ಹೇಳಿರುವಂತೆ ಅಶರೀರವಾಣಿಯನ್ನು ನುಡಿಸುವುದು ವಾಯುದೇವರೇ. ಅಂತೆಯೇ ಇಲ್ಲಿಯೂ ಈ ವಾಕ್ಯವನ್ನು ವಾಯುದೇವರೇ ನುಡಿಸಿದ್ದಾರೆ ಎನ್ನುವುದೇ ಹೆಚ್ಚು ಸೂಕ್ತ.
ವಿ.ಸೂ:
ಈಗ ಪ್ರಚಲಿತವಿರುವ ಈ ಸ್ತೋತ್ರದ ಶ್ಲೋಕದಲ್ಲಿ “ತಸ್ಯಾಸುಖಂ ಕಿಂಚನ”
ಎಂಬ ಪಾಠಬೇಧವಿದೆ. ಆದರೆ ನಮ್ಮ ಆಚಾರ್ಯರು ಪ್ರಕಟಿಸಿರುವ ಈ ಸ್ತೋತ್ರದ ಶುದ್ಧಪಾಠದಲ್ಲಿ ತಸ್ಯಾಶುಭಂ ಕಿಂಚನ ಎಂದು ಕೊಟ್ಟಿದ್ದಾರೆ. ಹಾಗಾಗಿ ನಾನು ಅರ್ಥಾನುಸಂಧಾನಕ್ಕಾಗಿ ಆ ಪಾಠವನ್ನೇ ಬಳಸಿದ್ದೇನೆ.
Tātparya:
यः(yaḥ) recurs
twice in this ślōka. A few commentators have treated this as a compounded
repetitive योयः(yoyaḥ). Yet others have taken this as only यः(yaḥ). Our Ācāryaru, in his analysis, has however explained one यः(yaḥ)(who) to be subjective, and the other यः(yaḥ)
as signifying knowledge. It is unlikely for Appāṇācāryaru, who was a learned and ardent devotee of Rayaru to use such words
superfluously i.e., as mere fillers, in the verse.
Whatever we
do, we need to seek answers for three questions - ‘what? why? how?’, to do it.
When we do not know the meaning of a word but continue to use it, any mistakes in
its usage, would never dawn on us. For instance, in our daily worship, we chant
this Ślōka – पृथ्वि त्वया धृता लोकाः...(pr̥thvi tvayā dhr̥tā lōkāḥ … )it has this phrase – त्वं च धारय मां देवि...(tvaṁ ca dhāraya māṁ dēvi…). Some
recite it as - tvaṁ ca dāraya māṁ dēvi). Some chant it as त्वं च दारय मां देवि...(tvaṁ ca dāraya māṁ dēvi…), They
do not trouble themselves to know what this means. Here धारय मां(dhāraya māṁ) means
support me well while दारय मां dāraya māṁ means rip me apart. To the ignorant, both
seem identical. However, when we worship the devi, should we pray to be ripped
apart or to be supported?
Therefore, as the learned ones have said – यदेव विद्यया करोति श्रद्धया उपनिषदा तदैव वीर्यवत्तरं भवति(yadēva vidyayā karōti śrad'dhayā upaniṣadā tadaiva
vīryavattaraṁ bhavati), those who understand Rayaru’s greatness and
meaningfully chant this stōtra every day, while devotedly reminiscing at his
feet, will see all their sorrows dwindle away. No evil shall torment them. They
will enjoy the grace of the Lord, the husband of Lakśmī. The purport of this
ślōka is that such people will have incomparable spiritual progression and
their reputation will spread across all directions.
As per traditional
beliefs, it is held that as Appāṇācāryaru returned, chanting this stōtra,
Rayaru had already entered the Vr̥ndāvana; he was left stranded in grief with a
lump in his throat. All words that were
streaming forth from his mouth, dried up at that instant. It was then, that an incorporeal
voice emanated from the Vr̥ndāvana, endorsing, ‘साक्षी हयास्योऽत्र हि(sākṣī hayāsyōtra hi) in
reverberation, as has been said. Some contend that these were Rayaru’s own
words while yet others hold that these words were uttered by Vāyudeva, in their
opinions. However, majority of the
scholars are of the view that Rayaru who was scholarly and not egoistic, would
not have added such an endorsement to a stōtra composed on him. As mentioned in
the purāṇas, incorporeal voices are always the preserve of Vāyudēva. As such,
it is more appropriate to state, that it was Vāyudeva who had uttered these
words.
Note:
In this stōtra ‘तस्यासुखं किंचन(tasyāśukhaṁ kin̄cana) is the term that is currently in
vogue, which differs from the text used here. Our Ācāryaru has used ‘तस्याशुभं किंचन(tasyāśubhaṁ kin̄cana)’ in the version authenticated by him. As
such, for the purpose of a more synchronised meaning, used the same phrase as
given by our Ācāryaru.
(Original by Śrī Krishna B R in Kannada, translation to English / Devanagari by Śrī Prasad B S)
No comments:
Post a Comment
ಗೋ-ಕುಲ Go-Kula