Friday 11 August 2017

Śrī Rāghavēndra Stōtra - Ślōkas ||1-2|| ಶ್ರೀ ರಾಘವೇಂದ್ರ ಸ್ತೋತ್ರ ಶ್ಲೋಕ ||1-2||

||ರಾಘವೇಂದ್ರ ಸ್ತೋತ್ರ||
ಮೊದಲ ಎರಡು ಶ್ಲೋಕಗಳಲ್ಲಿ ರಾಯರ ವಾಕ್ಪ್ರವಾಹವನ್ನು ಗಂಗಾಪ್ರವಾಹಕ್ಕೆ ಹೋಲಿಸಿದ್ದಾರೆ.
ಮತ್ತು ಎರಡೂ ಅರ್ಥಗಳನ್ನು ಒಂದೇ ಶ್ಲೋಕದಲ್ಲಿ ಶ್ಲೇಶಪೂರ್ವಕವಾಗಿ ಕೂಡಿಸಿರುವುದು ಶ್ಲೋಕದ ವಿಶೇಷ.


||Rāghavēndra Stōtra||
Rayaru’s eloquence is compared with Ganga’s flow, in the first two ślōkas. A special feature here is the dual intent woven into the same verse.
ಶ್ಲೋಕ ||1-2||
Ślōkas ||1-2||


ಶ್ರೀಪೂರ್ಣಬೋಧ-ಗುರು-ತೀರ್ಥ-ಪಯೋಬ್ಧಿ-ಪಾರಾ 
ಕಾಮಾರಿ-ಮಾಕ್ಷ -ವಿಷಮಾಕ್ಷ-ಶಿರಃ  ಸ್ಪೃಶಂತೀ |
ಪೂರ್ವೋತ್ತರಾಮಿತ-ತರಂಗ-ಚರತ್- ಸು-ಹಂಸಾ
ದೇವಾಲಿ-ಸೇವಿತ-ಪರಾಂಘ್ರಿ-ಪಯೋಜ-ಲಗ್ನಾ ||||
ಜೀವೇಶ-ಭೇದ-ಗುಣ-ಪೂರ್ತಿಜಗತ್-ಸುಸತ್ತ್ವ
ನೀಚೋಚ್ಚ-ಭಾವ-ಮುಖ-ನಕ್ರ-ಗಣೈಃ-ಸಮೇತಾ |
ದುರ್ವಾದ್ಯಜಾ-ಪತಿ-ಗಿಲೈರ್ಗುರು-ರಾಘವೇಂದ್ರ- 
ವಾಗ್-ದೇವತಾ-ಸರಿದಮುಂ ವಿಮಲೀಕರೋತು ||||


श्रीपूर्णबोध-गुरु-तीर्थ-पयोब्धि-पारा
कामारि-माक्ष-विषमाक्ष-शिरः स्पृशन्ती
पूर्वोत्तरामित-तरंग-चरत्सुहंसा
देवालि-सेवित-परांघ्रि-पयोज-लग्ना॥ १॥


जीवेश-भेद-गुण-पूर्ति-जगत्-सुसत्त्व
नीचोच्च-भाव-मुख-नक्र-गणैः-समेता
दुर्वाद्यजा-पति-गिलैर्गुरु-राघवेन्द्र-
वाग्-देवता-सरिदमुं विमलीकरोतु २॥




śrīpūrṇabōdha-guru-tīrtha-payōbdhi-pārā
kāmāri-mākṣa-viṣamākṣa-śiraḥ spr̥śantī
pūrvōttarāmita-taraṅga-caratsuhansā
dēvāli-sēvita-parāṅghri-payōja-lagnā 1
jīvēśa-bhēda-guṇa-pūrti-jagat-susattva
nīcōcca-bhāva-mukha-nakra-gaṇaiḥ-samētā
durvādyajā-pati-giḷairguru-rāghavēndra
vāg-dēvatā-saridamuṁ vimalīkarōtu 2


ಪದಚ್ಛೇದ :
ಶ್ರೀಪೂರ್ಣಬೋಧಗುರುತೀರ್ಥಪಯೋಬ್ಧಿಪಾರಾ, ಕಾಮಾರಿಮಾಕ್ಷವಿಷಮಾಕ್ಷಶಿರಸ್ಸ್ಪೃಶಂತೀ, ಪೂರ್ವೋತ್ತರಾಮಿತತರಂಗಚರತ್ಸುಹಂಸಾಃ, ದೇವಾಲಿಸೇವಿತಪರಾಂಘ್ರಿಪಯೋಜಲಗ್ನಾ, ಜೀವೇಶಭೇದ, ಗುಣಪೂರ್ತಿ, ಜಗತ್, ಸುಸತ್ತ್ವಾ, ನೀಚೋಚ್ಚಭಾವಮುಖನಕ್ರಗಣೈಃ, ಸಮೇತಾ, ದುರ್ವಾದಿ, ಅಜಾಪತಿಗಿಲೈಃ,ರುರಾಘವೇಂದ್ರವಾಗ್ದೇವತಾಸರಿತ್, ಅಮುಮ್, ವಿಮಲೀಕರೋತು,


Padacchēda:
श्रीपूर्णबोधगुरुतीर्थपयोब्धिपारा(śrīpūrṇabōdhagurutirthapayōbdhipārā), कामारिमाक्षविषमाक्षशिरस्स्पृशन्ती(kāmarimākṣaviṣamākṣaśiras'spr̥śanti),
पूर्वोत्तरामिततरंगरत्सुहंसाः(pūrvōttarāmitataraṅgacaratsuhaṅsāha), 
देवालिसेवितपरांघ्रिपयोजलग्ना(dēvālisēvitaparāṅghripayōjalagnā), जीवेशभेद(jīvēśabhēda), गुणपूर्ति(guṇapūrti), जगत्(jagat’), सुसत्त्व(susattva), नीचोच्चभावमुखनक्रगणैः(nīcōccabhāvamukhanakragaṇaihi) समेता,(samētā), दुर्वादि(durvādi) अजापतिगिलैः(ajāpatigilaihi),  र्गुरुराघवेन्द्रवाग्देवतासरित्(gururāghavēndravāgdēvatāsarit’), अमुम्(amum’), विमलीकरोतु(vimalīkarotu)


ಅನ್ವಯಾರ್ಥ :
ಮೊದಲಿಗೆ ಗಂಗಾಪ್ರವಾಹದ ಪರವಾಗಿ ಅರ್ಥ ನೋಡೋಣ.

ಶ್ರೀಪೂರ್ಣಬೋಧಗುರು - ಲಕ್ಷ್ಮೀಸಹಿತನಾದ, ಸರ್ವಜ್ಞನಾದ,  ಜಗದ್ಗುರುವಾದ ಭಗವಂತನ, ತೀರ್ಥಪಯೋಬ್ಧಿಪಾರಾ, = ತೀರ್ಥ- ಪಾದೋದಕಗಳಾದ ನದಿಗಳಿಂದ ಕೂಡಿದ, ಪಯೋಬ್ಧಿ -ಸಮುದ್ರವನ್ನು, ಪಾರಾ – ಲಕ್ಷ್ಯವಾಗಿ ಉಳ್ಳಂತಃ, ಕಾಮಾರಿಮಾಕ್ಷವಿಷಮಾಕ್ಷಶಿರಸ್ಸ್ಪೃಶಂತೀ, = ಕಾಮಾರಿ - ಕಾಮನ ಶತೃವಾದ, ಮಾಕ್ಷ ವಿಷಮಾಕ್ಷ – ಜ್ಞಾನಾಕ್ಷವೆಂಬ ಮೂರನೆಯ ಕಣ್ಣುಳ್ಳ ರುದ್ರದೇವರ, ಶಿರಸ್ಪೃಶಂತೀ – ತಲೆಯನ್ನು ಸ್ಪರ್ಷಿಸಿದಂತಃ, ಪೂರ್ವೋತ್ತರಾಮಿತತರಂಗಚರತ್ಸುಹಂಸಾಃ, = ಪೂರ್ವ ಉತ್ತರ ಅಮಿತತರಂಗ –  ಉತ್ತರ ದಿಕ್ಕಿನಿಂದ ಪೂರ್ವ ದಿಕ್ಕಿನೆಡೆಗೆ ಅಮಿತವಾದ ಅಲೆಗಳನ್ನೆಬ್ಬಿಸುತ್ತಾ ಭೋರ್ಗರೆದು ಅನ್ಯಾದೃಶವಾಗಿ ಹರಿಯುತ್ತಿರುವ, ತರಂಗ ಚರತ್ ಸು ಹಂಸಾಃ – ಅಲೆಗಳಮೇಲೆ ಚಲಿಸುತ್ತಿರುವ, ಸು ಹಂಸಾ – ಉನ್ನತ ತಳಿಯ ಹಂಸಗಳಿಂದ ಕೂಡಿದ, ದೇವಾಲಿಸೇವಿತಪರಾಂಘ್ರಿಪಯೋಜಲಗ್ನಾ, - ದೇವಾಲಿಸೇವಿತ – ದೇವಾಧಿದೇವತೆಗಳ ಸಮೂಹದಿಂದ, ದೇವ ಅಲಿ – ದೇವತೆಗಳೆಂಬ ದುಂಬಿಗಳಿಂದ ಸೇವಿಸಲ್ಪಡುವ, ಪರಾಂಘ್ರಿಪಯೋಜ ಲಗ್ನಾ -ಸರ್ವೋತ್ಕೃಷ್ಟವಾದ ಪಾದಕಮಲಗಳ ಸಂಬಂಧವುಳ್ಳ, ಜೀವೇಶಭೇದ, ಗುಣಪೂರ್ತಿ, ಜಗತ್ ಸುಸತ್ತ್ವಾ = ಜೀವೇಶ - ಪ್ರಾಣಿಗಳಲ್ಲೇ ಅತ್ಯಂತ ಸಮರ್ಥವಾದ ಆನೆಯನ್ನುಕೂಡ – ಭೇದ ಗುಣಪೂರ್ತಿ – ಸೀಳಬಲ್ಲಗುಣವುಳ್ಳ, ಜಗತ್ ಸು ಸತ್ವಾಃ – ಜಗತ್ತಿನಲ್ಲೇ ಅತ್ಯಂತ ಸಾಮರ್ಥ್ಯಶಾಲಿಗಳಾದ, ನೀಚೋಚ್ಚಭಾವಮುಖ – ಉಬ್ಬುತಗ್ಗಿನ ಮುಖವುಳ್ಳ, ದುರ್ವಾದಿ ಅಜಾಪತಿಗಿಲೈಃ – ದುರ್ವಾದಿ - ಪ್ರಾಣಭಯದಿಂದ ಕೂಗುತ್ತಿರುವ, ಅಜಾಪತಿ ಗಿಲೈಃ – ಅಜ ಪತಿ – ಆಡುಗಳಸಮೂಹದ ನಾಯಕನಂತಿರುವ ಬಲಿಷ್ಠವಾದ ಆಡನ್ನು ಕೂಡ, ಗಿಲೈಃ – ಒಂದೇ ಏಟಿಗೆ ನುಂಗಿಬಿಡುವ, ನಕ್ರಗಣೈಃ ಸಮೇತಾ- ಮೊಸಳೆಗಳ ಸಮೂಹದಿಂದ ಕೂಡಿದ, ದೇವತಾಸರಿತ್, ದೇವನದಿಯಾದ ಗಂಗೆ, ಅಮುಂ – ಇವನನ್ನು, ವಿಮಲೀಕರೋತು – ಪಾವನಗೊಳಿಸಲಿ.




Synonyms (First, as seen in line with the comparison with Ganga’s flow):
श्रीपूर्णबोधगुरु ((śrīpūrṇabōdhaguru)= One co-present with Lakshmi, omniscient, of the Lord who is the universe’s Guru; तीर्थपयोब्धिपारा(tirthapayōbdhipārā) = तीर्थ(tirtha) – combination of rivers that flow to wash the feet, पयोब्धि(payōbdhi) – the ocean, पारा(pārā) – as their destination;   कामारिमाक्षविषमाक्षशिरस्स्पृशन्ती(kāmarimākṣaviṣamākṣaśiras'spr̥śanti) = कामारि(kāmari)  – Kāma’s foe माक्ष विषमाक्ष(mākṣa viṣamākṣa) – the deity Rudra who has ज्ञानाक्ष(Jñānākṣa(lit.) eye of knowledge) as his third eye, शिरस्स्पृशन्ती(śiras'spr̥śanti) – touching the crown of the head, पूर्वोत्तरामिततरंगरत्सुहंसाः (pūrvōttarāmitataraṅgacaratsuhaṅsāha) = पूर्व उत्तर अमिततरंग (pūrva uttara amitataraṅga) – from the northern to the eastern direction, arousing unlimited boisterous waves that flow incomparably, रंग चरत् (taraṅga carat)riding the waves सु  हंसाः(su haṅsāha) – abounding the highest pedigree swans
देवालिसेवितपराङ्घ्रिपयोजलग्ना(dēvālisēvitaparāṅghripayōjalagnā) = देवालिसेवित(dēvālisēvita) – the group of divine deities, देव लि(dēva ali) – served by the bees known as deities,  पराङ्घ्रिपयोज लग्ना (parāṅghripayōja lagnā) – connected with the best lotus feet, जीवेशभेद, गुणपूर्ति, जगत् सुसत्त्व(jīvēśabhēda, guṇapūrti, jagat’ susattva) जीवेश (jīvēśa) – even the elephant too, the most capable one amongst animals, भेद गुणपूर्ति (bhēda guṇapūrti) – fully naturally endowed to tear or slit, जगत् सुसत्त्व(jagat’ susattva) – the most capable one in this world, नीचोच्चभावमुख (nīcōccabhāvamukha) – possessing a face with protrusions and troughs,  नक्रगणैः(nakragaṇaihi), समेता( samētā) दुर्वादि(durvādi) – wailing, out of fear of death, अजापतिगिलैः(ajāpatigilaihi) = अज पति (aja pati) – one who resembles the leader of a tribe of goats, even a strong goat, गिलैः (gilaihi) – devoured in a single strike, नक्रगणैः समेता (nakragaṇaihi samētā) – filled with a bask of crocodiles  देवतासरित्(dēvatāsarit’) – the divine river Gaga, अमुम्(amum’) – all these, विमलीकरोतु(vimalīkarotu) – render pure.
ರಾಯರ ವಾಕ್ಪ್ರವಾಹದ ಪರವಾಗಿ.

ಶ್ರೀಪೂರ್ಣಬೋಧಗುರುತೀರ್ಥಪಯೋಬ್ಧಿ  -  ಶ್ರೀ - ವೇದಗಳೆಂಬ, ಪಯೋಬ್ಧಿ – (ಪಯಸಃ ಅಬ್ಧಿ) ಹಾಲಿನ ಸಮುದ್ರವನ್ನು, 

ಪೂರ್ಣಬೋಧಗುರುಸರ್ವಜ್ಞರೂ ಜಗದ್ಗುರುಗಳೂ ಆದ ವ್ಯಾಸರ, ತೀರ್ಥಬ್ರಹ್ಮಸೂತ್ರ, ಇತಿಹಾಸ ಪುರಾಣಾದಿ ಶಾಸ್ತ್ರಗಳೆಂಬ, ಪಯೋಬ್ಧಿ – (ಪಯಸಃ ಅಬ್ಧಿ) ಹಾಲಿನ ಸಮುದ್ರವನ್ನು, ಶ್ರೀ ಪೂರ್ಣಬೊಧಗುರು -  ಕಾಂತಿಯುಕ್ತರಾದ ಜಗದ್ಗುರುಗಳಾದ ಆಚಾರ್ಯಮಧ್ವರ, ತೀರ್ಥಸರ್ವಮೂಲಗ್ರಂಥಗಳಮೂಲಕ ಜಗತ್ತಿಗೆ ಕೊಟ್ಟ ಶಾಸ್ತ್ರಗಳೆಂಬ, ಪಯೋಬ್ಧಿ – (ಪಯಸಃ ಅಬ್ಧಿ) ಹಾಲಿನ ಸಮುದ್ರವನ್ನು, ಶ್ರೀ ಪೂರ್ಣಬೋಧಗುರು ತೀರ್ಥಆಚಾರ್ಯಮಧ್ವರನ್ನು ಗುರುವಾಗಿವುಳ್ಳ ಜಯತೀರ್ಥರೇ ಮೊದಲಾದ ಯತಿವರೇಣ್ಯರ ಟೀಕೆ ವ್ಯಾಖ್ಯಾನಗಳೆಂಬ ಶಾಸ್ತ್ರಗ್ರಂಥಗಳ ಪಯೋಬ್ಧಿ – (ಪಯಸಃ ಅಬ್ಧಿ) ಹಾಲಿನ ಸಮುದ್ರವನ್ನು, ಪಾರಾಲಕ್ಷ್ಯವಾಗಿ ಉಳ್ಳಂತಃ, ಕಾಮಾರಿಮಾಕ್ಷವಿಷಮಾಕ್ಷಶಿರಸ್ಸ್ಪೃಶಂತೀ, ಕಾಮಾರಿಇಂದ್ರಿಯ ಮತ್ತು ಕಾಮಾದಿಗಳನ್ನು ಜಯಿಸಿದ, ಮಾಕ್ಷ ವಿಷಮಾಕ್ಷಜ್ಞಾನಾಕ್ಷವೆಂಬ ಮೂರನೆಯ ಕಣ್ಣುತೆರೆದ ಅಪರೋಕ್ಷಜ್ಞಾನಿಗಳು ಕೂಡ, ಶಿರಸ್ಪೃಷಂತೀ  ಶಿರಸಾವಹಿಸುವ,  ಪೂರ್ವೋತ್ತರಾಮಿತತರಂಗಚರತ್ಸುಹಂಸಾಃ, ಪೂರ್ವ ಉತ್ತರ ಅಮಿತತರಂಗ ಪೂರ್ವ ಮೀಮಾಂಸೆ ಮತ್ತು ಉತ್ತರಮೀಮಾಂಸೆಗಳೆಂಬ ಅಲೆಗಳೊಡನೆ,  ಅಮಿತ ತರಂತಡೆಯಿಲ್ಲದಂತೆ ಮುನ್ನುಗ್ಗುತ್ತಿರುವಂಥ, ತರಂಗ ಚರತ್ ಸು ಹಂಸಾಃಪ್ರವಚನದ ಲಹರಿಯಲ್ಲಿ ಮೈಮರೆತು ತೇಲಾಡುತ್ತಿರುವ, ಸು ಹಂಸಾಃ = ಸು - ಉತ್ತಮರಾದ, ಹಂಸಾಃಯತಿ ಶ್ರೇಷ್ಠರನ್ನುಳ್ಳ, ದೇವಾಲಿಸೇವಿತಪರಾಂಘ್ರಿಪಯೋಜಲಗ್ನಾ, - ದೇವಾಲಿಸೇವಿತ = ದೇವಾಲಿ - ದೇವಾಧಿದೇವತೆಗಳ ಸಮೂಹದಿಂದದೇವ ಅಲಿದೇವತೆಗಳೆಂಬ ದುಂಬಿಗಳಿ ಸೇವಿಸಲ್ಪಡುವ, ಪರಾಂಘ್ರಿಪಯೋಜ ಲಗ್ನಾ -ಸರ್ವೋತ್ಕೃಷ್ಟವಾದ ಪಾದಕಮಲಗಳಲ್ಲೇ ನೆಟ್ಟ ಮನಸ್ಸುಳ್ಳ, ಜೀವೇಶಭೇದ, ಗುಣಪೂರ್ತಿ, ಜಗತ್ ಸುಸತ್ತ್ವಾ = ಜೀವೇಶಭೇದಜೀವ ಈಶ -ಜೀವಾತ್ಮಾ ಮತ್ತು ಪರಮಾತ್ಮನ ನಡುವಿನ ಭೇದ (ಪಂಚಭೇದ), ಗುಣಪೂರ್ತಿಭಗವಂತ ಗುಣಪೂರ್ಣ, ಜಗತ್ ಸುಸತ್ವಜಗತ್ತು ಅಸ್ತಿತ್ವವುಳ್ಳದ್ದು ಮತ್ತು ಸತ್ಯವಾದದ್ದುನೀಚೋಚ್ಚಭಾವ ಮುಖಜೀವ ಯೋಗ್ಯತೆಯಲ್ಲಿ ಉಚ್ಚ ನೀಚ ಸ್ವಭಾವ ಇವೇ ಮೊದಲಾದ, ದುರ್ವಾದಿಅವೈದಿಕವಾದ ಅಪ ವ್ಯಾಖ್ಯಾನಗಳನ್ನು ಮಾಡುವ ವಾದಿಗಳೆಂಬ,  ಅಜಾಪತಿ ಗಿಲೈಃಗಂಡಾಡುಗಳನ್ನು ನುಂಗಬಲ್ಲ, ನಕ್ರಗಣೈಃ ಅಚಾರ್ಯಮಧ್ವರ ತತ್ವವಾದದ ಪ್ರಮೇಯಗಳೆಂಬ ಮೊಸಳೆಗಳ ಸಮೂಹದಿಂದ ಕೂಡಿದ, ಗುರುರಾಘವೇಂದ್ರಗುರುಗಳಾದ ರಾಘವೇಂದ್ರರ, ವಾಕ್ - ಮಾತುಗಳೆಂಬ, ದೇವತಾ ಸರಿತ್ - ದೇವಲೋಕದ ನದಿಯು (ಗಂಗೆಯು) ಅಮುಮ್ಇವನನ್ನು ( ಸ್ತೋತ್ರಪಠನ ಮಾಡುವವನನ್ನು, ವಿಮಲೀ ಕರೋತುಕಾಯಿಕ ವಾಚಿಕ ಮತ್ತು ಮಾನಸಿಕವಾದ ಎಲ್ಲ ಕೊಳೆಗಳನ್ನು ತೊಳೆದು ಪವಿತ್ರೀಕರಿಸಲಿ.




Synonyms (In line with Rayaru’s eloquence):
श्रीपूर्णबोधगुरुतीर्थपयोब्धि (śrīpūrṇabōdhagurutirthapayōbdhi) – श्री(śrī) – That which are known as the Vēdas, पयोब्धि(payōbdhi)(पयसःअब्धि) – of the ocean of milk, श्री पूर्णबोधगुरु(śrī pūrṇabōdhaguru) – Ācārya Madhva, the resplendent Guru of this world, तीर्थ(tirtha) – one who through all the original texts gave the scriptures to the world, पयोब्धि(payōbdhi)(पयसःअब्धि) – of the ocean of milk, श्री पूर्णबोधगुरु तीर्थ(śrīpūrṇabōdhaguru tirtha) – the commentaries and treatises of the supreme ascetics starting with Jayatīrtha, a direct disciple of Ācārya Madhva, पयोब्धि(payōbdhi)(पयसःअब्धि) – of the ocean of milk, पारा (pārā) – having the destination as, कामारिमाक्षविषमाक्षशिरस्स्पृशन्ती(kāmarimākṣaviṣamākṣaśiras'spr̥śanti) = कामारि(kāmari) – having prevailed over the sense organs and desires, माक्ष विषमाक्ष(mākṣa viṣamākṣa) – even those realized souls with an activated third eye i.e., ज्ञानाक्ष(Jñānākṣa), शिरस्स्पृशन्ती(śiras'spr̥śanti) – touches the crown, पूर्वोत्तरामिततरंगचरत्सुहंसाः(pūrvōttarāmitataraṅgacaratsuhaṅsāha) ­ पूर्व उत्तर अमिततरंग (pūrva uttara amitataraṅga) – with the waves called pūrva mīmānsa and uttara mīmānsa अमिततरंग (amitataraṅga) – relentlessly seeming to be pushing forward, तरंगचरत्सुहंसाः(taraṅgacaratsuhaṅsāha) – losing their selves while sailing in the symphony of pravacanas(spiritual talks) सु  हंसाः(su haṅsāha) – सु(su) – being the best हंसाः(haṅsāha) – consisting of the best of ascetics, देवालिसेवितपराङ्घ्रिपयोजलग्ना(dēvālisēvitaparāṅghripayōjalagnā) = देवालिसेवित(dēvālisēvita) – the group of divine deities, देवालि(dēvāli) – served by the bees known as deities, पराङ्घ्रिपयोज लग्ना (parāṅghripayōja lagnā) – with a mind in communion with the supreme lotus feet, जीवेशभेद, गुणपूर्ति, जगत् सुसत्त्व(jīvēśabhēda, guṇapūrti, jagat’ susattva)जीव ईश(jīva īśa) – of the jīvātma(lit. soul) and Paramātma (lit. the supreme soul), the differentiation between them(panca bhēda or five types of differentiation), गुणपूर्ति(guṇapūrti) – the one with all complete attributes, जगत् सुसत्त्व(jagat’ susattva) -this world is real and true, नीचोच्चभाव मुख (nīcōccabhāva mukha) – commencing with gradation from lower to higher capacities among souls, दुर्वादि(durvādi) – purveyors of un-Vēdic misleading commentaries,  समेता,(samētā), अजापतिगिलैः(ajāpatigilaihi) – capable of devouring billies(male goats), नक्रगणैः(nakragaṇaihi) – filled with a bask of crocodiles consisting of the tenets of Ācārya Madhva’s tattvavāda   र्गुरुराघवेन्द्र (gururāghavēndra) – the Guru, rāghavēndra, वाक्(vāk’) – of his talks, देवतासरित्(dēvatāsarit’) the river of the divine world(Gaṅga), अमुम्(amum’) – all those (who chant this stotra), विमलीकरोतु(vimalīkarotu)- purify all impurities stemming from action, speech and mind.  
ತಾತ್ಪರ್ಯ:

ಅಪ್ಪಣಾಚಾರ್ಯರು ತಮ್ಮ ರಾಘವೇಂದ್ರಸ್ತೋತ್ರದ ಮೊದಲೆರಡು ಶ್ಲೋಕಗಳಲ್ಲಿ ರಾಯರ ವಾಕ್ಪ್ರವಾಹವನ್ನು ಗಂಗಾ ಪ್ರವಾಹಕ್ಕೆ ಹೋಲಿಸಿದ್ದಾರೆ. ಹೇಗೆ ಗಂಗೆಯು ನಮ್ಮೆಲ್ಲರ ಪಾಪಗಳನ್ನು ತೊಳೆಯುತ್ತಾಳೆಯೋ ಹಾಗೆಯೇ ರಾಯರ ಪವಿತ್ರವಾದ ಮಾತುಗಳು ನಮ್ಮನ್ನು ಪವಿತ್ರಗೊಳಿಸಲಿ ಎಂಬುದು ಇದರ ಉದ್ದೇಶ.

ಗಂಗೆಯು ಉತ್ತರದ ಹಿಮಾಲಯದಿಂದ ಹರಿದುಬಂದು ಪೂರ್ವದ ಕಡಲಲ್ಲಿ ಲೀನವಾಗುವ ಮುನ್ನ ಬೆಟ್ಟಗುಡ್ಡಗಳಲ್ಲಿ ನದಿಕಾಡುಗಳಲ್ಲಿ ವಿಸ್ತಾರವಾದ ಪ್ರದೇಶಗಳಲ್ಲಿ ಹರಿಯುವಾಗ ಇತರ ಉಪನದಿಗಳೊಂದಿಗೆ ಕೂಡಿಕೊಂಡು ಭೋರ್ಗರೆಯುತ್ತಾ ದೊಡ್ಡ ದೊಡ್ಡ ಅಲೆಗಳೊಂದಿಗೆ ದಡಕ್ಕೆ ಅಪ್ಪಳಿಸುತ್ತಾ ಸಾಗುತ್ತದೆ. ಅದು ಹುಟ್ಟಿದ್ದು ಭಗವಂತನ ಪಾದಗಳಲ್ಲಿ. ಹಾಗಾಗಿ ಅದಕ್ಕೆ ಭಗವಂತನ ಪಾದಗಳ ಸಂಪರ್ಕ ಉಂಟು. ಅದನ್ನು ತಲೆಯಲ್ಲಿ ಧರಿಸಿದ್ದು ಕಾಮನನ್ನು ಸುಟ್ಟ ಮುಕ್ಕಣ್ಣ ರುದ್ರದೇವರು. ಮೂರನೆಯ ಕಣ್ಣನ್ನು ಇಲ್ಲಿ ಮಾಕ್ಷ ಎಂದು ಕರೆದಿದ್ದಾರೆ. ಎಂದರೆ ಜ್ಞಾನ. ಅಕ್ಷ ಎಂದರೆ ಕಣ್ಣು. ರುದ್ರದೇವರು ಕಾಮನನ್ನು ಸುಟ್ಟದ್ದು ಕ್ರೋಧದಿಂದಲ್ಲ ಬದಲಿಗೆ ಜ್ಞಾದಿಂದ ಎಂಬುದು ಪುರಾಣಗಳ ರಹಸ್ಯ. ಅಂತೆಯೇ ರುದ್ರದೇವರ ಪ್ರಳಯ ಕಾರ್ಯವೆಂದರೆ ಅದು ಕ್ರೋಧಮೂಲವಲ್ಲ ಬದಲಿಗೆ ಅದು ಜ್ಞಾನಪೂರ್ವಕ ಕ್ರಿಯೆ. 

ಯಾರಿಗೆ ಭಗವಂತನ ಜ್ಞಾನ ಉಂಟಾಗಿದೆಯೋ ಅವರು ಕಾಮವನ್ನು ಮತ್ತು ಅದರ ಮೂಲಕ ಬರುವ ಎಲ್ಲ ದೋಷಗಳನ್ನು ಸುಡಬಲ್ಲರು ಎಂಬುದು ತಾತ್ಪರ್ಯ. 

ಪ್ರಪಂಚದಲ್ಲೇ ಅತ್ಯಂತ ಶಕ್ತಿಶಾಲಿಯಾದ ಅನೆಯನ್ನೂ ಸೀಳಬಲ್ಲ, ದೊಡ್ಡ ದೊಡ್ಡ ಟಗರುಗಳನ್ನೂ ನುಂಗಬಲ್ಲ ಅತ್ಯಂತ ಕ್ರೂರಸ್ವಭಾವದ, ಉಬ್ಬುತಗ್ಗಿನ ಮೈಯ್ಯ ಮೊಸಳೆಗಳು ಗಂಗಾನದಿಯಲ್ಲಿರುತ್ತವೆ. 

ಅದೇರೀತಿ ರಾಯರ ಮಾತಿನ ಪ್ರವಾಹ ಕೂಡ ಭಗವಂತನನ್ನು ಹೇಳುವ ವೇದಗಳು, ಇತಿಹಾಸ ಪುರಾಣಗಳು, ಆಚಾರ್ಯಮಧ್ವರ ತತ್ತ್ವವಾದ ಸಾರುವ ಸರ್ವಮೂಲಗ್ರಂಥಗಳು, ಇತರ ಯತಿ ವರೇಣ್ಯರ ವ್ಯಾಖ್ಯಾನಗಳೆಂಬ ಉಪನದಿಗಳೊಂದಿಗೆ ವಿಸ್ತಾರಗೊಂಡು, ನ್ಯಾಯ, ವೈಶೇಷಿಕ, ಪೂರ್ವ ಮೀಮಾಂಸ ಮತ್ತು ಉತ್ತರಮೀಮಾಂಸ ಮೊದಲಾದ ಅಲೆಗಳೊಂದಿಗೆ ದುರ್ವಾದಗಳನ್ನು ಅಪ್ಪಳಿಸಿಕೊಂಡು ಮುನ್ನುಗ್ಗುತ್ತದೆ. ದೊಡ್ಡ ಜ್ಞಾನಿಗಳು ಕೂಡ ತಲೆದೂಗುವಂತಿರುವ ಅವರ ಮಾತಿನ ಪ್ರವಾಹದಲ್ಲಿ ಕೂಡ ದುರ್ವಾದಿಗಳನ್ನು ನುಂಗಿಬಿಡುವ ಮೊಸಳೆಗಳಿವೆ. ಅವೇ ಆಚಾರ್ಯಮಧ್ವರ ತತ್ತ್ವವಾದದ ಪ್ರಮೇಯಗಳೆಂಬ ಮೊಸಳೆಗಳು.


ಪಂಚಭೇದಜೀವ ಈಶ ಭೇದ, ಜೀವ ಜೀವ ಭೇದ, ಜೀವ ಜಡ ಭೇದ, ಜಡ ಜಡ ಭೇದ, ಮತ್ತು ಜಡ ಈಶ ಭೇದ.  ಗುಣಪೂರ್ತಿ : ಭಗಃ ಅಸ್ಯ ಅಸ್ತೀತಿ ಭಗವಾನ್, (ಐಶ್ವರ್ಯಶ್ಚ ಸಮಗ್ರಸ್ಯ ವೀರ್ಯಶ್ಚ ಯಶಸಃ ಶ್ರಿಯಃ ಜ್ಞಾನ ವೈರಾಗ್ಯಯೋಶ್ಚೈವ ಷಣ್ಣಾಂ ಭಗ ಇತೀರಣ)
ಭಗ ಎಂದರೆ ಎಲ್ಲದರ ಒಡೆತನ, ಎಲ್ಲ ಶಕ್ತಿಗಳ ಸಾರ, ಎಲ್ಲರೂ ಕೊಂಡಾಡುವಂಥ ಯಶಸ್ಸು, ಸಮಸ್ತ ಸಂಪತ್ತಿನ ಒಡೆತನ, ಸಕಲ ಸದ್ಗುಣಗಳ ಸಾರ, ಮತ್ತು ಎಲ್ಲದರ ಒಡೆತನವಿದ್ದರೂ ಎಲ್ಲರಿಂದ ಹೊಗಳಿಸಿಕೊಂಡರೂ ಯಾವುದನ್ನೂ ಅಂಟಿಸಿಕೊಳ್ಳದ ವೈರಾಗ್ಯ ಇವೇ ಮೊದಲಾದ ಸಮಸ್ತ ಗುಣಗಳ ಆಗರ.
ಜಗತ್ ಸು ಸತ್ತ್ವ : ಪ್ರಪಂಚ ಸತ್ಯ ಸಂಕಲ್ಪನಾದ ಭಗವಂತನ ಸಂಕಲ್ಪದಿಂದಲೇ ಸೃಷ್ಟವಾದದ್ದರಿಂದ ಸತ್ಯ. ಇದಕ್ಕೆ ತನ್ನದೇ ಆದ ಅಸ್ತಿತ್ತ್ವವಿದೆ. ಮತ್ತು ಅದು ಕೇವಲ ಭ್ರಮೆಯಲ್ಲ.
ನೀಚೋಚ್ಚಭಾವ: ಸಮಸ್ತ ಜೀವಗಣಗಳು ಸ್ವರೂಪಯೋಗ್ಯತೆಯಲ್ಲಿ ಒಂದಕ್ಕಿಂತ ಇನ್ನೊಂದು ಭಿನ್ನವಾಗಿವೆ. ಅವರವರ ಜೀವ ಯೋಗ್ಯತೆಯಂತೆ ಅವರವರ ಸಾಧನೆ‌.  ಸಾಧನೆಗೆ ತಕ್ಕಂತೆ ಫಲ. ಇಲ್ಲಿ ಎಲ್ಲಿಯೂ ಸಮಾನತೆಯಿಲ್ಲ. ಎಲ್ಲರ ಸಾಧನೆಯೂ
ಭಿನ್ನ ಮತ್ತು ತಲುಪುವ ಎತ್ತರವೂ ಭಿನ್ನ.
ರಾಯರ ಮಾತಿನ ವಿಷಯವೂ ಭಗವಂತ ಮತ್ತು ಅವರ ಮಾತುಗಳ ಗಮ್ಯವೂ ಭಗವಂತ.
ತತ್ತ್ವವಾದದ ಪ್ರಮೇಯಗಳಿಗೆ ಮೊಸಳೆಯ ಹೋಲಿಕೆ ಯೇಕೆ? ಇದನ್ನು ತಿಳಿಯಲು ಗಜೇಂದ್ರ ಮೋಕ್ಷದ ಕಥಯ ಸಾರ ತಿಳಿಯಬೇಕು. ತನ್ನ ಸಂಸಾರದ ಜಂಜಾಟದಲ್ಲೇ ಮುಳುಗಿದ್ದ ಆನೆಯ ಕಾಲನ್ನು ಮೊಸಳೆಹಿಡಿದಾಗ ಮೊದಲಿಗೆ ಅದು ತನ್ನವರ ಸಹಾಯ ಕೇಳಿತು. ಅವರಿಂದ ರಕ್ಷಿಸಲು ಆಗದಿದ್ದಾಗ ಕೊನೆಗೆ ಭಗವಂತನ ನೆನಪು ಬಂತು. ಭಕ್ತಿಯಿಂದ ಸ್ತುತಿಸಿದಾಗ ಭಗವಂತನೇ ಬಂದ. ಅಂತೆಯೇ ತತ್ತ್ವವಾದದ ಒಂದೊಂದು ಪ್ರಮೇಯಗಳೂ ಕೂಡ ಗಜೇಂದ್ರನಿಗೆ ಭಗವಂತನ ನೆನಪು ಮೂಡಿಸಿ ಅದರ ಮೂಲಕ ಸಾಧನೆಯ ಹಾದಿ ತೋರಿಸಿ ಭಗವಂತನನ್ನೇ ತೋರಿಸುವ ಅತ್ಯಂತ ಸಮರ್ಥವಾದ ಮೊಸಳೆಗಳು. ನಮಗೆ ಸ್ವತಃ ಅದನ್ನು ಹಿಡಿಯುವ ಯೋಗ್ಯತೆ ಇಲ್ಲದ್ದರಿಂದ ಅವುಗಳೇ ನಮ್ಮನ್ನು ಹಿಡಿಯಬೇಕು. ಅದಕ್ಕಾಗಿ ನಾವು ರಾಯರ ವಾಕ್ ಪ್ರವಾಹದಲ್ಲಿ ಇಳಿಯಬೇಕು. ಅದಕ್ಕೆ ನಮ್ಮ ಮಲಿನವಾದ ಮನಸ್ಸನ್ನು ಶುದ್ಧ ಮಾಡಿ ರಾಯರೇ ನಮ್ಮನ್ನು ತಮ್ಮ ವಾಕ್ ಪ್ರವಾಹಕ್ಕೆ ಸೆಳೆದುಕೊಳ್ಳಬೇಕು. ಅದಕ್ಕಾಗಿ ರಾಯರ ಪ್ರೀತಿಯನ್ನು ಅನುಕಂಪೆಯನ್ನು ಗಳಿಸಲು ಸ್ತೋತ್ರ.
Tātparya:

Rayaru’s eloquence has been compared to the flowing Gaṅga in the first two ślōkas by Appaṇācāryaru. The intent here is that just as Gaṅga washes away our sins, may Rayaru’s holy utterances, purify us.
Gaṅga streams in from the northern Himālayās and before mingling with the eastern seas, she meanders through rocks, hills and forest expanses. En route, several tributaries merge, boisterously riding large waves, lapping the banks as they flow on. Her birth was at the Lord’s feet. As such, she is connected to the Lord’s feet. She adorns the crown of the one who reduced Kāma to ashes, the three-eyed Rudradēva. The third-eye is referred to here as ‘माक्ष(mākśa)’. ‘(ma)’ meansज्ञान(Jñāna).  अक्ष(akśa) means eye. The cryptic interpretation of the Puraic story, wherein Rudradēva had reduced Kama to cinders, is that it was not out of anger, but, from knowledge that the incineration occurred. As such, annihilation when it ensues from Rudradēva, would be a knowledgeable and not a furious act.
The interpretation here is that those who have been blessed with Bhagavanta’s Jñāna (knowledge or realisation of the Lord) can burn out all doṣās(maladies) that arise from Kāma(desire). 
Elephants which are among the mightiest of animals, can been ripped apart, and, large sized rams can be devoured, by the undulating bodied crocodiles that inhabit the Gaṅga. Likewise, Rayaru’s articulations too, bring to fore the Vēdas that describe Bhagavanta(God), like the Itihāsas and Puraas, the Sarvamūlagranthas (root or original scriptures)  that are elucidated by Ācārya Madhva’s ‘Tattva Vāda’, the treatises and commentaries by the prime ascetics which come in to the expanse, just as the tributaries mentioned earlier do, along with the waves called n'yāya, vaiśēṣika, pūrva mīmānsa and uttaramīmānsa (schools of philosophical thought in Sanātana Dharma) to submerge durvāda (misinterpreted or misleading discourses) in its progression. Even the biggest of scholars or realized souls bow to the brilliance in his utterances and in this flowing stream are found crocodiles that can gulp all the durvādis i.e. those who wantonly mislead or misinterpret the scriptures. The crocodiles are verily the prameyas (tenets) of Ācārya Madva’s Tattva Vāda.
Pan̄cabhēda(five layers or types of differentiation) – jīva īśa bhēda (differentiation between the soul and the Lord), jīva jīva bhēda(differentiation between soul and soul), jīva jaḍa bhēda((differentiation between soul and matter), jaḍa jaḍa bhēda(differentiation between matter and matter), and jaḍa īśa bhēda(differentiation between matter and the Lord).
गुणपूर्ति(guṇapūrti): भगः अस्य अस्तीति  भगवान, (ऐश्वर्यश्च समग्रस्य वीर्यश्च यशसः श्रियः ज्ञान वैराग्ययोश्चैव षण्णां भग इतीरण(bhagaḥ asya astīti bhagavān, (aiśvaryaśca samagrasya vīryaśca yaśasaḥ śriyaḥ jñāna vairāgyayōścaiva ṣaṇṇāṁ bhaga itīraṇa)Bhaga means the lordship of everything, the quintessence of all powers, glory that is eulogised by all, the lordship of all wealth, the quintessence of all good traits and despite Lordship over everything and being praised by all, His being detached from everything stems the embodiment of all traits.
जगत् सु सत्त्व(jagat’ su sattva) – this world is real as it is a creation of the Lord, whose reality dawns on those who resolve to seek the truth. It has its own tangible existence and is not merely illusory.
नीचोच्चभाव(nīcōccabhāva): All living beings or souls are differentiated based on their innate capacities or capabilities. Their sādhanas(endeavours or quests) are based on the natural (nature of the soul) capabilities. Results are consonant with the sadhana. There is no such thing as ‘equal’ here. The sadhana of each differs, and, the destination scaled is different too.
The subject of Rayaru’s utterances is Bhagavanta and, the object of his utterances too is Bhagavanta.
Why are the prameyas of Tattva Vāda compared to the crocodiles? To understand this one should contemplate on the quintessence of the story of Gajēndra Mōkṣa(a Puraṇic story). The elephant which was inundated in worldly affairs of its own, at first sought the help of its kinsfolk, when the crocodile grasped its foot. When they proved helpless in saving it, it remembered Bhagavanta. When it prayed to the Lord with devotion, Bhagavan appeared. In the same way, the prameyas of Tattva Vāda are the adept crocodiles that turn our endeavours towards Bhagavanta, as the elephant did, when they clasped its foot. As we are incapable of getting on to this path, it is the tenets that bring us over by training our focus, to the path of Bhagavanta. For this we need to step in and be flooded by Rayaru’s utterances. Towards this end, to win over Rayaru’s affection, his compassion, we have this Stōtra.


(Original by Śrī  Krishna B R in Kannada, translation to English / Devanagari by Śrī Prasad B S)

No comments:

Post a Comment

ಗೋ-ಕುಲ Go-Kula