ಶ್ಲೋಕ ೨೬.
Ślōka 26:
ಯದ್ವೃಂದಾವನಮಾಸಾದ್ಯ ಪಂಗುಃಕಂಜೋऽಪಿ ವಾ ಜನಃ |
ಸ್ತೋತ್ರೇಣಾನೇನ ಯಃ ಕುರ್ಯಾತ್ ಪ್ರದಕ್ಷಿಣ ನಮಸ್ಕೃತೀ |
ಸಜಂಘಾಲೋ ಭವೇದೇವ ಗುರುರಾಜಪ್ರಸಾದತಃ ||೨೬||
यद्वृंदावनमासाद्य पंगुः खंजोऽपि वा जनः ।
स्तोत्रेणानेन यः कुर्यात् प्रदक्षिणनमस्कृती ।
स जङ्घालो भवेदेव गुरुराजप्रसादतः ॥२६॥
yadvr̥ndāvanamāsādya paṅguḥkan̄jōpi vā janaḥ |
stōtrēṇānēna yaḥ kuryāt pradakṣiṇa namaskr̥tī |
sajaṅghālō bhavēdēva gururājaprasādataḥ ||26||
stōtrēṇānēna yaḥ kuryāt pradakṣiṇa namaskr̥tī |
sajaṅghālō bhavēdēva gururājaprasādataḥ ||26||
ಪದಚ್ಛೇದ:
ಯತ್, ವೃಂದಾವನಮ್, ಆಸಾದ್ಯ, ಪಂಗುಃ, ಕಂಜಃ, ಅಪಿ, ವಾ,
ಜನಃ, ಸ್ತೋತ್ರೇಣ, ಅನೇನ, ಯಃ, ಕುರ್ಯಾತ್,
ಪ್ರದಕ್ಷಿಣನಮಸ್ಕೃತೀಃ,
ಸಃ, ಜಂಘಾಲಃ, ಭವೇತ್, ಏವ, ಗುರುರಾಜಪ್ರಸಾದತಃ.
padacchēda:
यत्(yat), वृंदावनम्(vr̥ndāvanam), आसाद्य(āsādya), पंगुः(paṅguḥ), कंजः(kan̄jaḥ), अपि(api), वा(vā), जनः(janaḥ), स्तोत्रेण(stōtrēṇa), अनेन(anēna), यः(yaḥ), कुर्यात्(kuryāt), प्रदक्षिणनमस्कृती (pradakṣiṇanamaskr̥tīḥ), सः(saḥ), जंघालः(jaṅghālaḥ), भवेत्(bhavēt), एव(ēva), गुरुराजप्रसादतः (gururājaprasādataḥ).
यत्(yat), वृंदावनम्(vr̥ndāvanam), आसाद्य(āsādya), पंगुः(paṅguḥ), कंजः(kan̄jaḥ), अपि(api), वा(vā), जनः(janaḥ), स्तोत्रेण(stōtrēṇa), अनेन(anēna), यः(yaḥ), कुर्यात्(kuryāt), प्रदक्षिणनमस्कृती (pradakṣiṇanamaskr̥tīḥ), सः(saḥ), जंघालः(jaṅghālaḥ), भवेत्(bhavēt), एव(ēva), गुरुराजप्रसादतः (gururājaprasādataḥ).
ಅನ್ವಯಾರ್ಥ:
ಪಂಗುಃ ವಾ - ಕುಂಠನಾಗಲಿ ಅಥವಾ,
ಕಂಜಃ ಅಪಿ – ಹೆಳವನೇ ಆಗಲಿ,
ಯಃ ಜನಃ – ಯಾರು,
ಯತ್ – ಯಾವ ಶ್ರೀ ರಾಘವೇಂದ್ರ ಸ್ವಾಮಿಗಳ,
ವೃಂದಾವನಂ – ವೃಂದಾವನವನ್ನು,
ಅಸಾದ್ಯ – ಭಕ್ತಿಯಿಂದ ಬಳಿಸಾರಿ,
ಅನೇನ ಸ್ತೋತ್ರೇಣ – ಈ ಸ್ತೋತ್ರದಿಂದ (ಸ್ತೋತ್ರಪಾರಾಯಣದೊಂದಿಗೆ) ಪ್ರದಕ್ಷಿಣ – ವೃಂದಾವನಕ್ಕೆ ಸುತ್ತಿಬಂದು,
ನಮಸ್ಕೃತೀಃ – ನಮಸ್ಕಾರಗಳನ್ನು,
ಕುರ್ಯಾತ್ – ಮಾಡುತ್ತಾನೆ,
ಸಃ – ಅವನು,
ಗುರುರಾಜ ಪ್ರಸಾದತಃ – ಶ್ರೀ ಗುರುರಾಘವೇಂದ್ರರ ಅನುಗ್ರಹದಿಂದ, ಜಂಘಾಲಃ – ಉತ್ತಮ ನಡಿಗೆಯುಳ್ಳವನು, ಭವೇತ್ ಏವ – ಆಗೇ ಆಗುತ್ತಾನೆ.
Synonyms:
पंगुः वा(paṅguḥ vā) – Lame or कंजः अपि(kan̄jaḥ api)- limbless or with dysfunctional limbs too, यः जनः (yaḥ janaḥ) – those who, यत्(yat) – Śrī Rāghavēndraswāmi’s, वृंदावनम्(vr̥ndāvanam) - vr̥ndāvana, आसाद्य(āsādya) – goes around with devotion, अनेन स्तोत्रेण(anēna stōtrēṇa) – of this stōtra(reciting this stōtra), प्रदक्षिण(pradakṣiṇa) –
circumambulate, नमस्कृतीः(namaskr̥tīḥ) – namaskāras (salutations), कुर्यात्(kuryāt) - performs, सः(saḥ) - he, गुरुराज प्रसादतः (gururāja prasādataḥ) – by the grace of Śrī Guru Rāghavēndra, जंघालः(jaṅghālaḥ) – excellent in legs or limbs, भवेत् एव(bhavēt ēva) – will certainly become.
ತಾತ್ಪರ್ಯ:
ಒಬ್ಬ ಭಕ್ತ ಅವನು ಕುಂಟನೇ ಆಗಲಿ ಅಥವಾ ಹೆಳವನೇ ಆಗಲಿ ಅತ್ಯಂತ ಭಕ್ತಿಯಿಂದ ರಾಯರ ವೃಂದಾವನವನ್ನು ಸಮೀಪಿಸಿ ಶ್ರೀ ರಾಘವೇಂದ್ರ ಸ್ತೋತ್ರಪಾರಾಯಣ ಸಹಿತವಾಗಿ ವೃಂದಾವನಕ್ಕೆ ತನ್ನ ಕೈಲಾದಷ್ಟು ಸುತ್ತುಬಂದು ಭಕ್ತಿಯಿಂದ ನಮಸ್ಕಾರಗಳನ್ನು ಮಾಡಿದರೆ ಅಂಥವನು ರಾಯರ ಅನುಗ್ರಹದಿಂದ ಕೈ ಕಾಲುಗಳಲ್ಲಿ ಶಕ್ತಿ ಬಂದು ಇನ್ನೂ ಹೆಚ್ಚಿನ ತೀರ್ಥ ಯಾತ್ರೆ ಮಾಡುವಹಾಗಾಗುತ್ತಾನೆ.
ವಾಸ್ತವವಾಗಿ ನಾವು ಆಗತಾನೆ ಹುಟ್ಟಿದ ಮಗುವಿನಹಾಗೆ. ಹುಟ್ಟಿನಿಂದಲೇ ಕುಂಟರೂ ಹೆಳವರೂ ಆಗಿ ನಾವೇ ನಾವಾಗಿ ಏನನ್ನೂ ಮಾಡಲಾರದ ಸ್ಥಿತಿಯಲ್ಲಿದ್ದೇವೆ. ಏಕೆಂದರೆ ನಮ್ಮ ನಡೆ ನುಡಿ ಚಿಂತನೆ ಮತ್ತು ಕಾರ್ಯಗಳೆಲ್ಲವೂ ಕೂಡ ಭಗವಂತನ ಇಚ್ಚೆಯಂತೆ ನಡೆಯುವಂಥದೆ ಹೊರತು ನಮ್ಮ ಇಚ್ಚೆಯಂತೆ ಏನೂ ನಡೆಯಲಾರದು. ಅಷ್ಟೆ ಏಕೆ, ನಾವು ಯೋಚನೆ ಮಾಡುವುದೂ ಕೂಡ ಭಗವಂತನ ಇಚ್ಚೆಗೆ ಒಳಪಟ್ಟು.
ಅದನ್ನೇ ದ್ವಾದಶ ಸ್ತೋತ್ರದಲ್ಲಿ ಶ್ರೀಮದಾಚಾರ್ಯರು ಹೇಳಿದ್ದು –
ಯದಿನಾಮಪರೋ ನಭವೇತ ಹರಿಃ ಕಥಮಸ್ಯ ವಶೇ ಜಗದೇತದಭೂತ್ ?
ಯದಿ ನಾಮ ನ ತಸ್ಯ ವಶೇ ಸಕಲಂ ಕಥಮೇವ ತು ನಿತ್ಯಸುಖಂ ನ ಭವೇತ್ ?
ಭಗವಂತ ಸರ್ವೋತ್ತಮನಾಗಿಲ್ಲದಿದ್ದಲ್ಲಿ ಎಲ್ಲವೂ ಅವನ ಅಧೀನದಲ್ಲಿ ಹೇಗೆ ಇದೆ ? ಎಲ್ಲವೂ ಅವನ ವಶದಲ್ಲಿ ಇಲ್ಲದಿದ್ದರೆ ಎಲ್ಲರೂ ಯಾವಗಲೂ ಸುಖವಾಗಿ ಏಕೆ ಇಲ್ಲ ? ಆದ ಕಾರಣ, ತೇನ ವಿನಾ ತೃಣಮಪಿ ನ ಚಲತಿ ಎನ್ನುವಂತೆ ಭಗವಂತನ ಆಜ್ಞೆಯ ವಿನಾ ಏನೂ ಮಾಡಲಾರದ ನಮಗೆ, ಭಗವಂತನ ಆಜ್ಞಾರಾಧಕರೂ ಭಗವಂತನ ಇಚ್ಚೆಗೆ ತಕ್ಕಂತೆ ನಡೆವವರೂ ಆದ ರಾಯರು ತಮ್ಮ ವೃಂದಾವನದ ಬಳಿಗೆ ಹೋಗುವ, ಸ್ತೋತ್ರಮಾಡುವ ಪ್ರದಕ್ಷಿಣೆ ಹಾಕುವ ಶಕ್ತಿಯನ್ನೂ ಕೊಟ್ಟು, ನಮ್ಮಿಂದ ಸತ್ಕಾರ್ಯಗಳನ್ನೂ ಮಾಡಿಸಲಿ ಎಂಬುದು ಈ ಶ್ಲೋಕದ ತಾತ್ಪರ್ಯ.
Tātparya:
A devotee, whether he be lame or
one with dysfunctional limbs, should he with utmost devotion get to the
proximity of Rayaru’s vr̥ndāvana, chant
this Stōtra
as he circumabulates the vr̥ndāvana to the best of his
ability, offer his devotion filled namaskāras, he would, with Rayaru’s grace, get full functionality in his limbs to perform
greater pilgrimages.
In a
true sense, we are all like toddlers or weak limbed, in our lives. Right from
birth, we do nothing worthwhile with our limbs; they are as good as being
dysfunctional or do not carry us with the vigour necessary to reach the places
we wish to reach. All our actions, utterances etc., are directed by the will of
God and not as per our wishes. Not just that, our thought process moves within
the bounds of God’s will.
This
is what Ācārya Madhva has said in the Dwādaśa stōtra:
यदिनामपरो नभवेत हरिः कथमस्य वशे जगदेतदभूत्?
यदि नाम न तस्य वशे सकलं कथमेव तु नित्यसुखं न भवेत्?
(yadināmaparō nabhavēta hariḥ kathamasya vaśē jagadētadabhūt?
yadi nāma na tasya vaśē sakalaṁ kathamēva tu nityasukhaṁ na bhavēt?)
yadi nāma na tasya vaśē sakalaṁ kathamēva tu nityasukhaṁ na bhavēt?)
If God
is not supreme, how is it that everything is subordinated to Him? If everything is not under His control, how
is it that everyone is not happy, at all times? For this reason, as is said, ‘तृणमपि न चलति (tr̥ṇamapi na calati)’ - to us who
cannot do anything without his will, Rayaru, who worships His will, acts as per
His will, grants the necessary strength to those who go to his vr̥ndāvana, chant this stōtra as they circumambulate it with devotion, to perform
all rightful acts, is the essence of this ślōka.
(Original by Śrī Krishna
B R in Kannada, translation to English / Devanagari by Śrī Prasad B S)
No comments:
Post a Comment
ಗೋ-ಕುಲ Go-Kula