Thursday, 17 August 2017

Śrī Rāghavēndra Stōtra Ślōka -30 ಶ್ರೀ ರಾಘವೇಂದ್ರ ಸ್ತೋತ್ರ ಶ್ಲೋಕ ೩೦

ಶ್ಲೋಕ ೩೦.
Ślōka 30.
ರಾಜ-ಚೋರ-ಮಹಾವ್ಯಾಘ್ರ-ಸರ್ಪ-ನಕ್ರಾದಿ-ಪೀಡನಂ |
ಜಾಯತೇಸ್ಯ ಸ್ತೋತ್ರಸ್ಯ ಪ್ರಭಾವಾನ್ನಾತ್ರ ಸಂಶಯಃ ||೩೦||

राज-चोर-महाव्याघ्र-सर्प-नक्रादि-पीडनम्
जायतेऽस्य स्तोत्रस्य प्रभावान्नात्र संशयः ॥३०॥

Rāja-cōra-mahāvyāghra-sarpa-nakrādi-pīḍanaṁ |
na jāyatēsya stōtrasya prabhāvānnātra sanśayaḥ ||30||

ಪದಚ್ಛೇದ:
ರಾಜಚೋರಮಹಾವ್ಯಾಘ್ರಸರ್ಪನಕ್ರಾದಿಪೀಡನಂ, , ಜಾಯತೇ, ಅಸ್ಯ, ಸ್ತೋತ್ರಸ್ಯ, ಪ್ರಭಾವಾತ್, , ಅತ್ರ, ಸಂಶಯಃ.
padacchēda:
राजचोरमहाव्याघ्रसर्पनक्रादिपीडनम् (Rājacōramahāvyāghrasarpanakrādipīḍanaṁ), (na) जायते(jāyatē) स्य(asya) स्तोत्रस्य(stōtrasya) प्रभावात्(prabhāvāt) (na) त्र(atra) संशयः
(sanśayaḥ)

ಅನ್ವಯಾರ್ಥ
ಅಸ್ಯ ಸ್ತೋತ್ರಸ್ಯ ಶ್ರೀ ರಾಘವೇಂದ್ರಸ್ತೋತ್ರದ, ಪ್ರಭಾವಾತ್ಪ್ರಭಾವದಿಂದ, ರಾಜದುಷ್ಟ ಪ್ರಭುತ್ವದ ದೆಸೆಯಿಂದ, ಚೋರ- ಕಳ್ಳರದೆಸೆಯಿಂದಮಹಾವ್ಯಾಘ್ರಹುಲಿಯೇಮೊದಲಾದ ಕ್ರೂರಪ್ರಾಣಿಗಳ ದೆಸೆಯಿಂದ, ಸರ್ಪಹಾವು ಮೊದಲಾದ ವಿಷಜಂತುಗಳಿಂದ, ನಕ್ರಾದಿಮೊಸಳೆಯಂತಃ ಜಲಚರವೇ ಮೊದಲಾದ ಪ್ರಾಣಿಗಳ ದೆಸೆಯಿಂದ ಉಂಟಾಗುವಪೀಡನಂಬಾಧೆಯು, ಜಾಯತೇಉಂಟಾಗುವುದಿಲ್ಲ,  ಅತ್ರ ವಿಶಯದಲ್ಲಿ, ಸಂಶಯಃಅನುಮಾನವಿಲ್ಲ.

Synonyms:
स्य स्तोत्रस्य(asya stōtrasya) – This Śrī  Rāghavēndra stōtra, प्रभावात्(prabhāvāt) – influences राज(rāja) - from evil rulers, चोर(cōra) – from thieves, महाव्याघ्र(mahāvyāghra) – from cruel animals like tiger etc,  सर्प (sarpa) – poisonous creatures like serpents, नक्रादि(nakrādi) – aquatic creatures like crocodiles etc., पीडनम् (pīḍanaṁ) - troubles, जायते(na jāyatē) – will not happen त्र(atra) – in this matter,   संशयः(na sanśayaḥ) – there is no doubt whatsoever.

ತಾತ್ಪರ್ಯ:
ಒಂದು ಒಳ್ಳೆಯ ಕಾರ್ಯ ಮಾಡುವುದಕ್ಕೆ ನೂರೆಂಟು ವಿಘ್ನಗಳು ಎಂದು ಜನರು ಹೇಳುವುದನ್ನು ಕೇಳಿದ್ದೇವೆ
ನಮ್ಮ ಜೀವನದಲ್ಲಿ ಬರುವಂತಃ, ನಮ್ಮ ಧರ್ಮಮಾರ್ಗಕ್ಕೆ ಕಂಟಕಪ್ರಾಯವಾದ ಕೆಲವು ಸಂಕಟಗಳ ಬಗ್ಗೆ ಶ್ಲೋಕದಲ್ಲಿ ಹೇಳಿದ್ದಾರೆ

ಹಿರಣ್ಯಕಶಿಪುವಿನಂತಃ ರಾಜನ ಪ್ರಭುತ್ವವಿದ್ದರೆ ಯಾವ ಧಾರ್ಮಿಕ ಕಾರ್ಯಗಳಿಗೂ ಅವಕಾಶಗಳಿರುವುದಿಲ್ಲ. ಅಲ್ಲದೇ ಸಜ್ಜನರಿಗೆ ನಾನಾ ರೀತಿಯ ಹಿಂಸೆಗಳನ್ನು ಕೊಟ್ಟು ಅವರನ್ನು ಧರ್ಮಮಾರ್ಗದಿಂದ ದಾರಿತಪ್ಪಿಸುವ ಕಾರ್ಯಕ್ರಮಗಳು ಅವಿರತವಾಗಿ ನಡೆಯುತ್ತಲೇ ಇರುತ್ತವೆ

ಧಾರ್ಮಿಕ ಕ್ರಿಯೆಗಾಗಿ ತೆಗೆದಿರಿಸಿದ್ದ ಸಂಪತ್ತನ್ನು ಕಳ್ಳರು ದೋಚಿಕೊಂಡು ಹೋಗಬಹುದು. ಆಗ ಕೂಡ ನಾವು ಸಂಕಲ್ಪಿಸಿದ ಕಾರ್ಯಕ್ಕೆ ವಿಘ್ನವುಂಟಾಗಬಹುದು

ತೀರ್ಥಕ್ಷೇತ್ರ ಪರ್ಯಟನೆಗೆಂದು ಹೊರಟರೆ ಹುಲಿಯೇ ಮೊದಲಾದ ಕ್ರೂರಪ್ರಾಣಿಗಳು ದಾಳಿಮಾಡಬಹುದು. ಹಾವು ಚೇಳು ಮೊದಲಾದ ವಿಷಜಂತುಗಳಿಂದಲೂ ಪ್ರಾಣಾಪಾಯವಾಗಬಹುದು.

ತೀರ್ಥ ಸ್ನಾನಕ್ಕೆಂದು ನದಿಗೆ ಇಳಿದರೆ ಮೊಸಳೆಯಂತಃ ಕ್ರೂರ ಜಲಚರಗಳ ದಾಳಿಗೆ ತುತ್ತಾಗಬಹುದು

ಅಥವಾ, ಹಿಂದಿನ ಶ್ಲೋಕಗಳಲ್ಲಿ ನೋಡಿದಂತೆ ನಮ್ಮಲ್ಲೇ ಮನೆಮಾಡಿಕೊಂಡಿರುವ, ಮೊಸಳೆಗಳಂತೆ ನಮ್ಮನ್ನು ಹಿಡಿದೆಳೆದು ಮತ್ತೆ ಮತ್ತೆ ಸಂಸಾರವೆಂಬ ಸಾಗರಕ್ಕೆ ಎಳೆಯುವ ನಮ್ಮ ಕಾಮ ಕ್ರೋಧಾದಿ ದೋಷಗಳೆಂಬ ಮೊಸಳೆಗಳು.
ಹೀಗೆ ನಮ್ಮ ಧಾರ್ಮಿಕ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ನಮ್ಮನ್ನು ಕಾಡುವ  ಎಲ್ಲಾ ರೀತಿಯ ಬಾಧೆಗಳು ಸ್ತೋತ್ರದ ಪ್ರಭಾವದಿಂದ ಎಂದೆಂದಿಗೂ ನಮ್ಮ ಜೀವನದಲ್ಲಿ ಉಂಟಾಗುವುದಿಲ್ಲ ಎಂಬುದು ಶ್ಲೋಕದ ತಾತ್ಪರ್ಯ.

Tātparya:
It is a common lament, that there are hundreds of obstacles when we set out to do something good.

This ślōka covers the obstacles that dot our lives, as we try to tread the path of righteousness.

If we have a raja or a ruler like Hiraṇyakaśipu, there would be no space for religious or righteous pursuits. On the contrary, good folks are harassed and lead to activities that make them deviate from the path of righteous deeds.

Money that has been saved for religious activities may get stolen by thieves. Thereby, there would be a disruption in our intended righteous activities.

When we set out on a pilgrimage, we may be attacked by predatory animals like tigers. Poisonous creatures like serpents and scorpions may threaten our very lives.

Stepping into a holy river for a ritualistic bath, we may become prey to insidious aquatic creatures like crocodiles.

Else, like it was stated in the earlier ślōkas, it might be our own weaknesses like desires, anger, lust etc that pull us like crocodiles, to this ocean called the world or worldly living.
In such a way, all problems that stumble us at each step in our religious or righteous pursuits, will cease to exist in our lives, is the purport of this ślōka.
(Original by Śrī Krishna B R in Kannada, translation to English / Devanagari by Śrī Prasad B S)

No comments:

Post a Comment

ಗೋ-ಕುಲ Go-Kula