Friday, 31 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 138 - 143

ಉಕ್ತಂ ಲಕ್ಷಣಶಾಸ್ತ್ರೇ ಚ ಕೃಷ್ಣದ್ವೈಪಾಯನೋದಿತೇ ।
ತ್ರಿಭಾಷಾ ಯೋ ನ ಜಾನಾತಿ ರೀತೀನಾಂ ಶತಮೇವ ಚ  ॥ ೯.೧೩೮ ॥

ವ್ಯತ್ಯಾಸಾದೀನ್ ಸಪ್ತ ಭೇದಾನ್ ವೇದಾದ್ಯರ್ತ್ಥಂ ತಥಾ ವದೇತ್ ।
ಸ ಯಾತಿ ನಿರಯಂ ಘೋರಮನ್ಯಥಾಜ್ಞಾನಸಮ್ಭವಮ್’ ॥೯.೧೩೯ ॥

(ವೇದವ್ಯಾಸರೇ ರಚಿಸಿದಂಥ ಲಕ್ಷಣ ಗ್ರಂಥ,
ಇದರಲ್ಲಿದೆ ಮಹಾಭಾರತಕ್ಹೇಗೆ ಹಚ್ಚಬೇಕು ಅರ್ಥ.
ಅದರಲ್ಲಿದೆ ಯಾವ್ಯಾವ ವಾಕ್ಯ ಘಟನೆ ಶೈಲಿಗಳ ಸೂತ್ರ,
ಅದನ್ನ ತಿಳಿಸಿ ಹೇಳಿ ಸತ್ಯ ತತ್ವ ತಿಳಿಸುವ ಲಕ್ಷಣ ಶಾಸ್ತ್ರ)
ಲಕ್ಷಣ ಗ್ರಂಥದಲ್ಲೇ ಹೇಳಿರುವಂತೆ ಬಳಕೆಯಾಗಿರುವ ಮೂರು ಭಾಷೆ,
ಮಹಾಭಾರತದಲ್ಲಿ ಬರುವ ಸಮಾಧಿ ದರ್ಶನ ಮತ್ತು ಗುಹ್ಯ ಭಾಷೆ.
ಮೂರು ಭಾಷೆ ,ನೂರು ರೀತಿ ,ಅನೇಕ ವ್ಯತ್ಯಾಸ, ಏಳು ಭೇದ,
ತಿಳಿಯದೇ ವೇದಪುರಾಣಗಳ ವ್ಯಾಖ್ಯಾನಿಸುವವರಿಗೆ ನರಕ ಬಾಧ.

ಇತ್ಯನ್ಯೇಷು ಚ ಶಾಸ್ತ್ರೇಷು ತತ್ರತತ್ರೋದಿತಂ ಬಹು ।
ವ್ಯತ್ಯಾಸಃ ಪ್ರಾತಿಲೋಮ್ಯಂ ಚ ಗೋಮೂತ್ರೀ ಪ್ರಘಸಸ್ತಥಾ ॥೯.೧೪೦॥

ಉಕ್ಷಣಃ ಸುಧುರಃ ಸಾಧು ಸಪ್ತ ಭೇದಾಃ ಪ್ರಕೀರ್ತ್ತಿತಾಃ’
ಇತ್ಯಾದಿ ಲಕ್ಷಣಾನ್ಯತ್ರ ನೋಚ್ಯನ್ತೇsನ್ಯಪ್ರಸಙ್ಗತಃ  ॥೯.೧೪೧॥

ವ್ಯತ್ಯಾಸ ,ಪ್ರಾತಿಲೋಮ್ಯ ,ಗೋಮೂತ್ರೀ ,ಪ್ರಘಸ ,ಉಕ್ಷಣ ,ಸುಧುರ ,ಸಾಧು ಇವೇಳು ಕಥಾಭೇದ,
ಅದರದು ಬೇರೆಯೇ ಪ್ರಸಂಗವಾದ್ದರಿಂದ ಅದನ್ನ ತಾವಿಲ್ಲಿ ವಿವರಿಸುತ್ತಿಲ್ಲವೆಂಬುದು ಆಚಾರ್ಯವಾದ.

ಅನುಸಾರೇಣ ತೇಷಾಂ ತು ನಿರ್ಣ್ಣಯಃ ಕ್ರಿಯತೇ ಮಯಾ ।
ತಸ್ಮಾನ್ನಿರ್ಣ್ಣಯಶಾಸ್ತ್ರತ್ವಾದ್ ಗ್ರಾಹ್ಯಮೇತದ್ ಬುಭೂಷುಭಿಃ ॥೯.೧೪೨ ॥

ಆ ಎಲ್ಲಾ ಪ್ರಮಾಣ ಗ್ರಂಥಗಳ ಅನುಸಾರ,
ಆಚಾರ್ಯರು ಕೊಟ್ಟಿರುವ ನಿರ್ಣಯದ ಸಾರ.
ಆ ಕಾರಣದಿಂದ ನಿರ್ಣಯಶಾಸ್ತ್ರವಾದ ಇದು ಅತ್ಯಂತ ಗ್ರಾಹ್ಯ,
ಮಧ್ವರ ಮಾತಷ್ಟಲ್ಲದೆ ವೇದವ್ಯಾಸರ ಇಚ್ಛೆಯಂತೆ ಸ್ವೀಕಾರಾರ್ಹ.

ಇತೀರಿತಾ ರಾಮಕಥಾ ಪರಾ ಮಯಾ ಸಮಸ್ತಶಾಸ್ತ್ರಾನುಸೃತೇರ್ಭವಾಪಹಾ ।
ಪಠೇದಿಮಾಂ ಯಃ ಶೃಣುಯಾದಥಾಪಿ ವಾ ವಿಮುಕ್ತಬನ್ಧಶ್ಚರಣಂ ಹರೇರ್ವ್ರಜೇತ್ ॥೯.೧೪೩ ॥

ಹೇಳುತ್ತಾರೆ ಆಚಾರ್ಯರು ಮಾಡುತ್ತಾ ಉಪಸಂಹಾರ,
ಖಚಿತ ಇದರಿಂದ ಸಂಸಾರ ಬಂಧನದದಿಂದ ಪರಿಹಾರ.
ಉತ್ಕೃಷ್ಟವಾದ ಶ್ರೀರಾಮಕಥೆಯದು ಶಾಸ್ತ್ರಾಧಾರ,
ಮಥಿಸಿದ ಸತ್ಯ ತತ್ವ ಕೊಡಲ್ಪಟ್ಟಿದೆ ನನ್ನಯ ದ್ವಾರ.
ಇದನ್ನ ಓದಿದವ ಕೇಳಿದವ ಅಂತರಾರ್ಥ ತಿಳಿದವ,
ಬಂಧನದಿಂದ ಮುಕ್ತನಾಗಿ ದೇವರ ಪಾದ ಸೇರುವ.

ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಶ್ರೀರಾಮಚರಿತೇ  ಶ್ರೀರಾಮಸ್ವಧಾಮಪ್ರವೇಶೋ ನಾಮ ನವಮೋsಧ್ಯಾಯಃ ॥

ಶ್ರೀಮದಾನಂದತೀರ್ಥಭಗವತ್ಪಾದರಿಂದ,
ಮಹಾಭಾರತ ತಾತ್ಪರ್ಯ ನಿರ್ಣಯ ವಾದ,
ಶ್ರೀರಾಮಚರಿತೇ ಶ್ರೀರಾಮಸ್ವಧಾಮಪ್ರವೇಶೋ ನಾಮ ಒಂಬತ್ತನೇ ಅಧ್ಯಾಯ,
ಗುರ್ವಾಂತರ್ಗತ ಭಗವದ್ ಅನುಗ್ರಹದಿಂದಾದ ಪದಕುಸುಮ ಹರಿಗರ್ಪಿಸಿದ ಭಾವ.
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 130 - 137

ಪುಂವ್ಯತ್ಯಾಸೇನ ಚೋಕ್ತಿಃ ಸ್ಯಾತ್ ಪುರಾಣಾದಿಷು ಕುತ್ರಚಿತ್ ।
ಕೃಷ್ಣಾಮಾಹ ಯಥಾ ಕೃಷ್ಣೋ ಧನಞ್ಜಯಶರೈರ್ಹತಾನ್  ॥ ೧೩೦॥

ಶತಂ ದುರ್ಯ್ಯೋಧನಾದೀಂಸ್ತೇ ದರ್ಶಯಿಷ್ಯ ಇತಿ ಪ್ರಭುಃ ।
ಭೀಮಸೇನಹತಾಸ್ತೇ ಹಿ ಜ್ಞಾಯನ್ತೇ ಬಹುವಾಕ್ಯತಃ  ॥ ೧೩೧॥

ಪುರಾಣಗಳಲ್ಲಿ ಕಾಣುವುದುಂಟು ಕೆಲವೊಂದು ಪುರುಷವ್ಯತ್ಯಾಸದ ಪ್ರಸಂಗ,
ಕೃಷ್ಣ ದ್ರೌಪದಿಗ್ಹೇಳುವುದು ಅರ್ಜುನನಿಂದ ನೂರು ದುರ್ಯೋಧನಾದಿಗಳ ಪ್ರಾಣಭಂಗ.
ಇದು ಭಾರತದಲ್ಲಿ ಕಂಡುಬರುವ ವಾಕ್ಯವದು ಸಂಕ್ಷಿಪ್ತ,
ಬಹುವಾಕ್ಯದಂತೆ ಕೌರವಾದಿಗಳಾದದ್ದು ಭೀಮನಿಂದ ಹತ.

ವಿಸ್ತಾರೇ ಭೀಮನಿಹತಾಃ ಸಙ್ಕ್ಷೇಪೇsರ್ಜ್ಜನಪಾತಿತಾಃ ।
ಉಚ್ಯನ್ತೇ ಬಹವಶ್ಚಾನ್ಯೇ ಪುಂವ್ಯತ್ಯಾಸಸಮಾಶ್ರಯಾತ್  ॥೯.೧೩೨ ॥

ವಿಸ್ತಾರೇ ಕೃಷ್ಣನಿಹತಾ ಬಲಭದ್ರಹತಾ ಇತಿ ।
ಉಚ್ಯನ್ತೇ ಚ ಕ್ವಚಿತ್ ಕಾಲವ್ಯತ್ಯಾಸೋsಪಿ ಕ್ವಚಿದ್ ಭವೇತ್ ॥೯.೧೩೩॥

ವಿಸ್ತಾರದಲ್ಲಿ ಹೇಳಲ್ಪಟ್ಟಿದೆ ಭೀಮನಿಂದಾಗಿದೆ ದುರ್ಯೋಧನಾದಿಗಳ ಮರಣ,
ಸಂಕ್ಷೇಪದಲ್ಲಿ ಹೇಳಲ್ಪಟ್ಟಿದೆ ಅರ್ಜುನನಾದ ಕೌರವಾದಿಗಳ ಮರಣಕ್ಕೆ ಕಾರಣ.
ಈ ಪುರುಷ ವ್ಯತ್ಯಾಸವ ತಿಳಿಸುವುದು ಎರಡರ ಅಧ್ಯಯನದ ಹೂರಣ.
ವಿಸ್ತಾರದಲ್ಲಿ ಕೃಷ್ಣನಿಂದ ಹತರಾದರೆಂದು ನಿರೂಪಣೆ,
ಸಂಕ್ಷೇಪದಲ್ಲಿ ಬಲರಾಮನಿಂದ ಹತರೆಂದು ವಿವರಣೆ.
ಬೇಕದಕೆ ಬಹುವಾಕ್ಯಗಳ ಸಮೀಕರಣದನುಸರಣೆ.

ಯಥಾ ಸುಯೋಧನಂ ಭೀಮಃ ಪ್ರಾಹಸತ್ ಕೃಷ್ಣಸನ್ನಿಧೌ c
ಇತಿ ವಾಕ್ಯೇಷು ಬಹುಷು ಜ್ಞಾಯತೇ ನಿರ್ಣ್ಣಯಾದಪಿ  ॥೯.೧೩೪ ॥

ಅನಿರ್ಣ್ಣಯೇ ತು ಕೃಷ್ಣಸ್ಯ ಪೂರ್ವಮುಕ್ತಾ ಗತಿಸ್ತತಃ ।
ವ್ಯತ್ಯಾಸಾಸ್ತ್ವೇವಮಾದ್ಯಾಶ್ಚ ಪ್ರಾತಿಲೋಮ್ಯಾದಯಸ್ತಥಾ  ॥೯.೧೩೫॥

ದೃಶ್ಯನ್ತೇ ಭಾರತಾದ್ಯೇಷು ಲಕ್ಷಣಗ್ರನ್ಥತಶ್ಚ ತೇ ।
ಜ್ಞಾಯನ್ತೇ ಬಹುಭಿರ್ವಾಕ್ಯೈರ್ನ್ನಿರ್ಣ್ಣಯಗ್ರನ್ಥತಸ್ತಥಾ ॥೯.೧೩೬॥

ತಸ್ಮಾದ್ ವಿನಿರ್ಣ್ಣಯಗ್ರನ್ಥಾನಾಶ್ರಿತ್ಯೈವ ಚ ಲಕ್ಷಣಮ್ ।
ಬಹುವಾಕ್ಯಾನುಸಾರೇಣ ನಿರ್ಣ್ಣಯೋsಯಂ ಮಯಾ ಕೃತಃ ॥೯.೧೩೭॥

ಇಂದ್ರಪ್ರಸ್ಥದಲ್ಲಿ ಜಾರಿಬಿದ್ದ ದುರ್ಯೋಧನನ ಭೀಮ ಅಪಹಾಸ್ಯ ಮಾಡಿದ ನಿರೂಪಣೆ,
ಕೃಷ್ಣಸಾನ್ನಿಧ್ಯದಲ್ಲಿ ಭೀಮ ಇದ ಮಾಡಿದ್ದು ಎಂದು ಬಹುವಾಕ್ಯಗಳ ವಿಶೇಷ ವಿವರಣೆ.
ನಿರ್ಣಯವಿರದಿದ್ದರೆ ಕೃಷ್ಣ ಇಂದ್ರಪ್ರಸ್ಥದಲ್ಲಿರಲಿಲ್ಲ ಎಂಬ ಅರ್ಥ,
ಲಕ್ಷಣಗ್ರಂಥ ಬಹುವಾಕ್ಯ ನಿರ್ಣಯಗಳ ಮಥಿಸಿಟ್ಟರು ಆನಂದತೀರ್ಥ.
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 125 - 129

ಇತ್ಯಶೇಷಪುರಾಣೇಭ್ಯಃ ಪಞ್ಚರಾತ್ರೇಭ್ಯ ಏವ ಚ ।
ಭಾರತಾಚ್ಚೈವ ವೇದೇಭ್ಯೋ ಮಹಾರಾಮಾಯಣಾದಪಿ ॥೯.೧೨೫॥

ಪರಸ್ಪರವಿರೋಧಸ್ಯ ಹಾನಾನ್ನಿರ್ಣ್ಣೀಯ ತತ್ತ್ವತಃ ।
ಯುಕ್ತ್ಯಾ ಬುದ್ಧಿಬಲಾಚ್ಚೈವ ವಿಷ್ಣೋರೇವ ಪ್ರಸಾದತಃ ॥೯.೧೨೬॥

ಬಹುಕಲ್ಪಾನುಸಾರೇಣ ಮಯೇಯಂ ಸತ್ಕಥೋದಿತಾ ।
ನೈಕಗ್ರನ್ಥಾಶ್ರಯಾತ್ ತಸ್ಮಾನ್ನಾSಶಙ್ಕ್ಯಾSತ್ರ ವಿರುದ್ಧತಾ ॥೯.೧೨೭॥

(ಆಚಾರ್ಯರು ತಾವು ಪ್ರಸ್ತುತಪಡಿಸಿದ ರಾಮಾಯಣ,
ನಿರ್ಣಯಕ್ಕೆ ತೋರಿಸಿ ಕೊಟ್ಟಿದ್ದಾರೆ ಯಾವ್ಯಾವ್ದು ಪ್ರಮಾಣ)
ಸಕಲ ಪುರಾಣ ,ಪಂಚರಾತ್ರ ಮಹಾಭಾರತದಲ್ಲಿ,
ವೇದ ಮೂಲರಾಮಾಯಣದಲ್ಲಿ ಸೇರಿದ್ದ ಕಸ ತೆಗೆದಿಲ್ಲಿ.
ನಿವಾರಿಸಿ ಪರಸ್ಪರ ವಿರೋಧ ; ಶಾಸ್ತ್ರ  ಯುಕ್ತಿ ಪ್ರಜ್ಞಾಬಲದಿಂದ,
ನಿರ್ಣಯಿಸಿ ತತ್ವಕ್ಕಾಗದಂತೆ ಬಾಧ; ಭಗವಂತನ ಅನುಗ್ರಹದಿಂದ.
ಆಗಿದೆಯಿಲ್ಲಿ ಕಲ್ಪಕ್ಕನುಗುಣವಾಗಿ ರಾಮಾಯಣದ ಪ್ರಸ್ತುತಿ,
ಒಂದಲ್ಲದೆ ಅನೇಕ ಗ್ರಂಥಗಳಾಶ್ರಯವಾದಿದಕೆ ಬೇಡ ಅಸಮ್ಮತಿ.

ಕ್ವಚಿನ್ಮೋಹಾಯಾಸುರಾಣಾಂ ವ್ಯತ್ಯಾಸಃ ಪ್ರತಿಲೋಮತಾ ।
ಉಕ್ತಾ ಗ್ರನ್ಥೇಷು ತಸ್ಮಾದ್ಧಿ ನಿರ್ಣ್ಣಯೋSಯಂ ಕೃತೋ ಮಯಾ ॥೯.೧೨೮॥

ಅಸುರಮೋಹನಕ್ಕಾಗಿ ಗ್ರಂಥಗಳಲ್ಲಿ ವ್ಯತ್ಯಾಸ ಪ್ರತಿಲೋಮ,
ಅವೆಲ್ಲದರ ನಿವಾರಣೆಗಾಗಿ ಕೊಟ್ಟಿದ್ದೇನೆ ನಿರ್ಣಯ ಎಂಬ ಸುಮ.

ಏವಂ ಚ ವಕ್ಷ್ಯಮಾಣೇಷು ನೈವಾsಶಙ್ಕ್ಯಾ ವಿರುದ್ಧತಾ ।
ಸರ್ವಕಲ್ಪಸಮಶ್ಚಾಯಂ ಪಾರಾವರ್ಯ್ಯಕ್ರಮಃ ಸದಾ ॥೯.೧೨೯॥

ಹೇಳಿದ ಈ ಕಥೆಗಳಲ್ಲಿ ಬಾರದಿರಲಿ ಶಂಕೆ ವಿರೋಧ,
ಈ ಕ್ರಮ ಎಲ್ಲಾ ಕಲ್ಪದಲ್ಲೂ ಸರಿಸಾಧಾರಣ ಅಬಾಧ.
[Contributed by Shri Govind Magal]

Thursday, 23 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 113 - 118

ಅಙ್ಗದಃ ಕಾಲತಸ್ತ್ಯಕ್ತ್ವಾ ದೇಹಮಾಪ ನಿಜಾಂ ತನುಮ್ ।
ರಾಮಾಜ್ಞಯೈವ ಕುರ್ವಾಣೋ ರಾಜ್ಯಂ ಕುಶಸಮನ್ವಿತಃ ॥೯.೧೧೩॥

ಅಂಗದ ಮತ್ತು ಕುಶ ರಾಮಾಜ್ಞೆಯಿಂದ ಮಾಡಿದರು ರಾಜ್ಯಭಾರ,
ಕಾಲಾಂತರದಲ್ಲಿ ದೇಹಬಿಟ್ಟು ಮೂಲರೂಪ ಸೇರಿದ ವ್ಯಾಪಾರ.

ವಿಭೀಷಣಶ್ಚ ಧರ್ಮ್ಮಾತ್ಮಾ ರಾಘವಾಜ್ಞಾಪುರಸ್ಕೃತಃ ।
ಸೇನಾಪತಿರ್ದ್ಧನೇಶಸ್ಯ ಕಲ್ಪಮಾವೀತ್ ಸ ರಾಕ್ಷಸಾನ್ ॥೯.೧೧೪॥

ವಿಭೀಷಣ ರಾಮಾಜ್ಞೆಯಂತೆ ಕುಬೇರನಿಗಾಗಿದ್ದ ವಿನೀತ,
ಸೇನಾಪತಿಯಾಗಿ ರಾಕ್ಷಸರ ರಕ್ಷಿಸಿದ ಕಲ್ಪಕಾಲ ಪರ್ಯಂತ

ರಾಮಾಜ್ಞಯಾ ಜಾಮ್ಬವಾಂಶ್ಚ ನ್ಯವಸತ್ ಪೃಥಿವೀತಳೇ ।
ಉತ್ಪತ್ತ್ಯರ್ತ್ಥಂ ಜಾಮ್ಬವತ್ಯಾಸ್ತದರ್ತ್ಥಂ ಸುತಪಶ್ಚರನ್ ॥೯.೧೧೫॥

ರಾಮಾಜ್ಞೆಯಂತೆ ಜಾಂಬವಂತ ಕಾಯುತ್ತಿದ್ದ ಜಾಂಬವತಿಯ ಉತ್ಪತ್ತಿ,
ಭೂಮಿಯಲ್ಲಿ ಬಹುಕಾಲ ಅನುಸರಿಸಿಕೊಂಡಿದ್ದ ತಪಸ್ಸಿನ ಪ್ರವೃತ್ತಿ.

ಅಥೋ ರಘೂಣಾಂ ಪ್ರವರಃ ಸುರಾರ್ಚ್ಚಿತಃ ಸ್ವಯೈಕತನ್ವಾ ನ್ಯವಸತ್ ಸುರಾಲಯೇ ।
ದ್ವಿತೀಯಯಾ ಬ್ರಹ್ಮಸದಸ್ಯಧೀಶ್ವರಸ್ತೇನಾರ್ಚ್ಚಿತೋsಥಾಪರಾಯಾ ನಿಜಾಲಯೇ ॥೯.೧೧೬॥

ತದನಂತರ ರಘುಕುಲೋತ್ತಮ ಶ್ರೀರಾಮ,
ತೋರಿದ ತನ್ನ ಪ್ರಿಯರೊಂದಿಗಿರುವ ನೇಮ.
ದೇವತೆಗಳಿಂದ ಪೂಜಿತನಾಗುತ್ತ ದೇವತೆಗಳೊಂದಿಗೆ ಒಂದು ರೂಪದಿಂದ,
ಸತ್ಯಲೋಕದಿ ಬ್ರಹ್ಮನಿಂದ ಪೂಜಿತನಾಗುತ್ತ ಇನ್ನೊಂದು ರೂಪದಿಂದ,
ವಿಷ್ಣುಲೋಕದೆಡೆಗೆ ಸಾಗಿದನಂತೆ ರಾಮಚಂದ್ರ ಮತ್ತೊಂದು ರೂಪದಿಂದ.

ತೃತೀಯರೂಪೇಣ ನಿಜಂ ಪದಂ ಪ್ರಭುಂ ವ್ರಜನ್ತಮುಚ್ಚೈರನುಗಮ್ಯ ದೇವತಾಃ ।
ಅಗಮ್ಯಮರ್ಯ್ಯಾದಮುಪೇತ್ಯ ಚ ಕ್ರಮಾದ್ ವಿಲೋಕಯನ್ತೋsತಿವಿದೂರತೋsಸ್ತುವನ್ ॥೯.೧೧೭ ॥

ಮೂರನೆಯ ರೂಪದಿಂದ ವಿಷ್ಣುಲೋಕದತ್ತ ಹೊರಟ ನಾರಾಯಣ,
ಅನುಸರಿಸಿದ ದೇವತೆಗಳಿಗೆ ಕಂಡ ಇದ್ದಂತವರ ಯೋಗ್ಯತಾ ಹೂರಣ.
ದೂರದಿಂದಲೇ ತೋರಿದರು ಉತ್ಕೃಷ್ಟವಾದ ಭಕ್ತಿ,
ಜಗಜ್ಜನಕಗೆ ನಮಿಸುತ್ತಾ ಸ್ತೋತ್ರ ಮಾಡಿದ ಆ ರೀತಿ.

ಬ್ರಹ್ಮಾ ಮರುನ್ಮಾರುತಸೂನುರೀಶಃ ಶೇಷೋ ಗರುತ್ಮಾನ್ ಹರಿಜಃ ಶಕ್ರಕಾದ್ಯಾಃ ।
ಕ್ರಮಾದನುವ್ರಜ್ಯ ತು ರಾಘವಸ್ಯ ಶಿರಸ್ಯಥಾsಜ್ಞಾಂ ಪ್ರಣಿಧಾಯ ನಿರ್ಯ್ಯಯುಃ ॥೯.೧೧೮॥

ಬ್ರಹ್ಮ, ಮುಖ್ಯಪ್ರಾಣ, ಹನುಮಂತ, ಸದಾಶಿವ, ಶೇಷ, ಗರುಡ, ಕಾಮ, ಇಂದ್ರ,
ಯೋಗ್ಯತಾನುಸಾರ ಅನುಸರಿಸಿದವರು ಮರಳಿದರು ಆಜ್ಞಾಪಿಸಲು ರಾಮಚಂದ್ರ.
[Contributed by Shri Govind Magal]

Wednesday, 22 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 108 - 112

ಯೇ ತು ದೇವಾ ಇಹೋದ್ಭೂತಾ ನೃವಾನರಶರೀರಿಣಃ ।
ತೇ ಸರ್ವೇ ಸ್ವಾಂಶಿತಾಮಾಪುಸ್ತನ್ಮೈನ್ದವಿವಿದಾವೃತೇ   ॥೯.೧೦೮॥

ಶ್ರೀರಾಮನೊಂದಿಗೆ ಭುವಿಯಲ್ಲಿ ಅವತರಿಸಿದ್ದ ದೇವತಾಗಣ,
ಮೈಂದ ವಿವಿದರ ಬಿಟ್ಟು ಮೂಲರೂಪ ಹೊಂದಿದರು ಆ ಕ್ಷಣ.

ಅಸುರಾವೇಶತಸ್ತೌ ತು ನ ರಾಮಮನುಜಗ್ಮತುಃ ।
ಪೀತಾಮೃತೌ ಪುರಾ ಯಸ್ಮಾನ್ಮಮ್ರತುರ್ನ್ನಚ ತೌ ತದಾ   ॥೯.೧೦೯॥

ಮೈಂದ ವಿವಿದರಲ್ಲಿದ್ದ ಅಸುರಾವೇಶ,
ಶ್ರೀರಾಮನ ಅನುಸರಿಸಲಾಗದ ಪಾಶ.
ಸಮುದ್ರ ಮಥನ ಕಾಲದಲ್ಲಿ ಸೇವಿಸಿಯಾಗಿತ್ತು ಅಮೃತ,
ಆ ಕಾರಣದಿಂದಾಗಿಯೇ ಅವರಿಬ್ಬರು ಆಗಲಿಲ್ಲ ಮೃತ.

ತಯೋಶ್ಚ ತಪಸಾ ತುಷ್ಟಶ್ಚಕ್ರೇ ತಾವಜರಾಮರೌ ।
ಪುರಾ ಸ್ವಯಮ್ಭುಸ್ತೇನೋಭೌ ದರ್ಪ್ಪಾದಮೃತಮನ್ಥನೇ  ॥೯.೧೧೦॥
ಪ್ರಸ̐ಹ್ಯಾಪಿಬತಾಂ ದೇವೈರ್ದ್ದೇವಾಂಶತ್ವಾದುಪೇಕ್ಷಿತೌ
ಪೀತಾಮೃತೇಷು ದೇವೇಷು ಯುದ್ಧ್ಯಮಾನೇಷು ದಾನವೈಃ  ॥೯.೧೧೧॥
ತೈರ್ದ್ದತ್ತಮಾತ್ಮಹಸ್ತೇ ತು ರಕ್ಷಾಯೈ ಪೀತಮಾಶು ತತ್ ।
ತಸ್ಮಾದ್ ದೋಷಾದಾಪತುಸ್ತಾವಾಸುರಂ ಭಾವಮೂರ್ಜ್ಜಿತಮ್  ॥೯.೧೧೨ ॥

ಆಶ್ವೀದೇವತೆಗಳ ಅವತಾರವಾದ ಮೈಂದ ವಿವಿದ,
ತಪದಿ ಬ್ರಹ್ಮನಿಂದ ಪಡೆದ ಅವಧ್ಯತ್ವದ ವರಪ್ರಸಾದ.
ಅವರದಿರದಿದ್ದರೂ ಪಾಲು ಸೇವಿಸಿದ್ದರು ಅಮೃತವ ಬಲಾತ್ಕಾರದಿಂದ,
ದೇವತೆಗಳೂ ಸುಮ್ಮನಿದ್ದರಂತೆ  ದೇವತಾರೂಪ ಅವರಾಗಿದ್ದರಿಂದ.
ದೇವತೆಗಳಾದರು ಅಮೃತ ಸೇವಿಸಿ ಸಿದ್ಧ,
ಎದುರಿಸಿದರು ದೈತ್ಯರ ಮುಂದಾಗಿ ಯುದ್ಧ.
ಆ ಸಮಯ ಅಮೃತಪಾತ್ರೆಯ ಮೈಂದ ವಿವಿದರಿಗಿತ್ತ ದೇವತೆಗಳ ಕೂಟ,
ಭಗವದಾಜ್ಞೆ ಇರದೇ ಅವರಿಬ್ಬರದನು ಉದ್ಧಟತನದಿ ಸೇವಿಸಿದ ಆಟ.
[Contributed by Shri Govind Magal]

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 101 - 107

ಅಥ ಯೇ ತ್ವತ್ಪದಾಮ್ಭೋಜಮಕರನ್ದೈಕಲಿಪ್ಸವಃ ।
ತ್ವಯಾ ಸಹಾsಗತಸ್ತೇಷಾಂ ವಿಧೇಹಿ ಸ್ಥಾನಮುತ್ತಮಮ್ ॥೯.೧೦೧॥

ನಿನ್ನ ಪಾದಕಮಲಗಳ ದುಂಬಿಗಳಾಗಿ ಬಯಸಿ ಮಕರಂದ,
ಅದನ್ನ ನೆಚ್ಚಿಕೊಂಡು ಬಂದಿರುವ ಅನೇಕಾನೇಕ ಜೀವವೃಂದ.
ಅವರಿಗ್ಯಾವ್ಯಾವ ಸ್ಥಾನ ಮಾನ,
ಆಜ್ಞಾಪಿಸು ತಂದೆ ರಘುನಂದನ.

ಅಹಂ ಭವಃ ಸುರೇಶಾದ್ಯಾಃ ಕಿಙ್ಕರಾಃ ಸ್ಮ ತವೇಶ್ವರ ।
ಯಚ್ಚ ಕಾರ್ಯ್ಯಮಿಹಾಸ್ಮಾಭಿಸ್ತದಪ್ಯಾಜ್ಞಾಪಯಾsಶು ನಃ ॥೯.೧೦೨॥

ನಾನು ಸದಾಶಿವ ಇಂದ್ರ ಮೊದಲಾದವರೆಲ್ಲ ನಿನ್ನ ಸೇವಕ ಪಡೆ,
ನಿನ್ನಿಚ್ಛೆಯ ಆಜ್ಞೆಗೆ ಕಾಯುತ್ತಿದ್ದೇವೆ ಹೇಗಿರಬೇಕು ನಮ್ಮ ನಡೆ.

ಇತ್ಯುದೀರಿತಮಾಕರ್ಣ್ಣ್ಯ ಶತಾನನ್ದೇನ ರಾಘವಃ ।
ಜಗಾದ ಭಾವಗಮ್ಭೀರಸುಸ್ಮಿತಾಧರಪಲ್ಲವಃ ॥೯.೧೦೩ ॥

ಹೀಗೆ ಜೀವರಲ್ಲಿ ಎಣೆಯಿರದ ಆನಂದದ ಬ್ರಹ್ಮದೇವರ ಮಾತ,
ಕೇಳಿ ಗಂಭೀರ ಮುಗುಳ್ನಗೆಯಿಂದ ನುಡಿದ ರಾಮಚಂದ್ರನಾತ.

ಜಗದ್ಗುರುತ್ವಮಾದಿಷ್ಟಂ ಮಯಾ ತೇ ಕಮಲೋದ್ಭವ ।
ಗುರ್ವಾದೇಶಾನುಸಾರೇಣ ಮಯಾssದಿಷ್ಟಾ ಚ ಸದ್ಗತಿಃ ॥೯.೧೦೪॥
ಅತಸ್ತ್ವಯಾ ಪ್ರದೇಯಾ ಹಿ ಲೋಕಾ ಏಷಾಂ ಮದಾಜ್ಞಯಾ ।
ಹೃದಿ ಸ್ಥಿತಂ ಚ ಜಾನಾಸಿ ತ್ವಮೇವೈಕಃ ಸದಾ ಮಮ ॥೯.೧೦೫॥

ಹೇ ಕಮಲಸಂಜಾತ ಬ್ರಹ್ಮನೇ,
ಕೊಟ್ಟಿದೆ ನಿನಗೆ ಜಗದ್ಗುರುತ್ವವನ್ನೇ.
ನಿನ್ನ ಗುರುವಾದ ನನ್ನಿಂದ ಇದೋ ಆಣತಿ,
ನನ್ನ ಪಾದಕಮಲ ದಾಸರಿಗೆಲ್ಲ ಆಗಲಿ ಸದ್ಗತಿ.
ಅವರಿಗೆಲ್ಲಾ ಅರ್ಹಲೋಕ ಪಾಲಿಸಬೇಕು ನೀನು,
ನನ್ನ ಪ್ರಿಯ ಮಗನಾಗಿ ನನ್ನೆದೆಯ ಇಂಗಿತಬಲ್ಲವನು.

ಇತೀರಿತೋ ಹರೇರ್ಭಾವವಿಜ್ಞಾನೀ ಕಞ್ಜಸಮ್ಭವಃ ।
ಪಿಪೀಲಿಕಾತೃಣಾನ್ತಾನಾಂ ದದೌ ಲೋಕಾನನುತ್ತಮಾನ್ ।
ವೈಷ್ಣವಾನ್ ಸನ್ತತತ್ವಾಚ್ಚ ನಾಮ್ನಾ ಸಾನ್ತಾನಿಕಾನ್ ವಿಭುಃ ॥೯.೧೦೬॥

ತೇ ಜರಾಮೃತಿಹೀನಾಶ್ಚ ಸರ್ವದುಃಖವಿವರ್ಜ್ಜಿತಾಃ ।
ಸಂಸಾರಮುಕ್ತಾ ನ್ಯವಸಂಸ್ತತ್ರ ನಿತ್ಯಸುಖಾಧಿಕಾಃ ॥೯.೧೦೭॥

ಹೀಗೆ ಪರಮಾತ್ಮನ ಭಾವವ ಅರಿತವನಾದ ಚತುರ್ಮುಖ,
ಎಲ್ಲಾ ಜೀವರಿಗೂ ಕೊಡಮಾಡಿದ ಲೋಕ ಸಾಂತಾನಿಕ.
ಇರುವೆ ಕಡ್ಡಿ ಸದೃಶವಾದ ಸಾತ್ವಿಕ ಜೀವಿಗಳೆಲ್ಲ,
ಯೋಗ್ಯತೆಯ ಉತ್ತಮ ಲೋಕಗಳ ಪಡೆದರೆಲ್ಲ.
ಮುಕ್ತರಾದವರು ಅವರು ಸಂಸಾರ ಬಂಧದಿಂದ,
ಇದ್ದರಲ್ಲಿ ,ಮುಪ್ಪು ಸಾವಿಲ್ಲದ ನಿತ್ಯ ಸುಖದಿಂದ.
[Contributed by Shri Govind Magal]

Monday, 20 August 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 9: 94 - 100

ಅಥ ಬ್ರಹ್ಮಾ ಹರಿಂ ಸ್ತುತ್ವಾ ಜಗಾದೇದಂ ವಚೋ ವಿಭುಮ್ ।
ತ್ವದಾಜ್ಞಯಾ ಮಯಾ ದತ್ತಂ ಸ್ಥಾನಂ ದಶರಥಸ್ಯ ಹಿ ॥೯.೯೪ ॥
ಮಾತೄಣಾಂ ಚಾಪಿ ತಲ್ಲೋಕಸ್ತ್ವಯುತಾಬ್ದಾದಿತೋsಗ್ರತಃ ।
ಅನರ್ಹಾಯಾಸ್ತ್ವಯಾssಜ್ಞಪ್ತಾ ಕೈಕೇಯ್ಯಾ ಅಪಿ ಸದ್ಗತಿಃ ॥೯.೯೫ ॥
ಸೂತ್ವಾ ತು ಭರತಂ ನೈಷಾ ಗಚ್ಛೇತ ನಿರಯಾನಿತಿ ।
ತಥಾsಪಿ ಸಾ ಯದಾವೇಶಾಚ್ಚಕಾರ ತ್ವಯ್ಯಶೋಭನಮ್ ॥೯.೯೬ ॥

ತದನಂತರ, ಭಗವಂತ ಸ್ವಧಾಮವನ್ನು ಸೇರಿಯಾದ ಮೇಲೆ,
ಬಾಗಿದ ಬ್ರಹ್ಮನಿಂದಾಯಿತು ತಾ ದೈವಾಜ್ಞೆ ಪಾಲಿಸಿದ ಲೀಲೆ.
ನಿನ್ನಾಜ್ಞೆಯಂತೆ ದಶರಥಗೆ ಕೊಡಲಾಗಿದೆ ಮುಕ್ತಿ,
ಕೌಸಲ್ಯಾದಿ ನಿನ್ನ ತಾಯಂದಿರಿಗೂ ಉತ್ತಮ ಗತಿ.
ಕೈಕೇಯಿ ಸದ್ಗತಿ ಹೊಂದಲು ಅಲ್ಲವಾದರೂ ಅರ್ಹ,
ನಿನ್ನಾಜ್ಞೆಯಂತೆ ಸದ್ಗತಿಯಾಗಿದೆ ಅವಳಿಗೆ ಓ ಆರ್ಯ.
ಭರತನಂಥಾ ಮಗನನ್ನು ಹೆತ್ತ  ಆ ಮಹಾತಾಯಿ,
ನರಕವಾಗಬಾರದವಳಿಗೆನ್ನುವ ನೀ ಕರುಣಾಮಯಿ.
ನಿನ್ನ ಸಂಕಲ್ಪವದು-ಭರತನ ಮೇಲಿನ ಅನುಗ್ರಹದ ಧಾರ,
ಕೈಕೇಯಿಗೂ ತೆರೆಯಲ್ಪಟ್ಟಿದೆ ಉತ್ತಮ ಲೋಕದ ಆ ದ್ವಾರ.




ನಿಕೃತಿರ್ನ್ನಾಮ ಸಾ ಕ್ಷಿಪ್ತಾ ಮಯಾ ತಮಸಿ ಶಾಶ್ವತೇ ।
ಕೈಕಯಿ ತು ಚಲಾನ್ ಲೋಕಾನ್ ಪ್ರಾಪ್ತಾ ನೈವಾಚಲಾನ್ ಕ್ವಚಿತ್ ॥೯.೯೭ ॥
ಪಶ್ಚಾದ್ ಭಕ್ತಿಮತೀ ಯಸ್ಮಾತ್ ತ್ವಯೀ ಸಾ ಯುಕ್ತಮೇವ ತತ್ ।
ಮನ್ಥರಾ ತು ತಮಸ್ಯನ್ಧೇ ಪಾತಿತಾ ದುಷ್ಟಚಾರಿಣೀ ॥೯.೯೮ ॥

ಕೈಕೇಯಿ ಯಾರ ಆವೇಶದಿಂದ ನಿನ್ನಲಿ ಕೆಟ್ಟದಾಗಿ ನಡೆದುಕೊಂಡ; ಆ ನಿಕೃತಿ,
ಅಂತಹಾ ತಾಮಸಿಗೆ ಕೊಡಲ್ಪಟ್ಟಿದೆ ಶಾಶ್ವತವಾದ ಅಂಧಂತಮಸ್ಸಿನ ಗತಿ.
ಕೈಕೇಯಿಗಾಗಿದೆ ಸದ್ಯಕ್ಕೆ ಅಸ್ಥಿರವಾದ ಸ್ವರ್ಗಾದಿ ಲೋಕ,
ನಿನ್ನ ಭಕ್ತಳಾದ ಆಕೆಗೆ ಸಾಧನಾನಂತರ ಅಚಲವಾದ ನಾಕ.
ಮಂಥರೆಗೆ ದೊರಕಿರುವುದು ಅಂಧಂತಮಸ್ಸಿನ ಆ ಪಾಕ.

ಸೀತಾರ್ತ್ಥಂ ಯೇsಪ್ಯನಿನ್ದಮ್ಸ್ತ್ವಾಂ ತೇsಪಿ ಯಾತಾ ಮಹತ್ ತಮಃ ।
ಪ್ರಾಯಶೋ ರಾಕ್ಷಸಾಸ್ಚೈವ ತ್ವಯಿ ಕೃಷ್ಣತ್ವಮಾಗತೇ ॥೯.೯೯॥
ಶೇಷಾ ಯಾಸ್ಯನ್ತಿ ತಚ್ಛೇಷಾ ಅಷ್ಟಾವಿಂಶೇ ಕಲೌ ಯುಗೇ ।
ಗತೇ ಚತುಸ್ಸಹಸ್ರಾಬ್ದೇ ತಮೋಗಾಸ್ತ್ರಿಶತೋತ್ತರೇ ॥೯.೧೦೦ ॥

ಸೀತೆ ವಿಚಾರದಲ್ಲಿ ನಿನ್ನ ನಿಂದಿಸಿದ ಸುರಾಣಕ ದೈತ್ಯ ವೃಂದ,
ಅಸುರರಾದ ಅವರಿಗೆ ಆಗಿದೆ ಅಂಧಂತಮಸ್ಸಿನದೇ  ಬಂಧ.
ನಿನ್ನಿಂದ ಹತರಾದ ಬಹುತೇಕ ರಾಕ್ಷಸರೆಲ್ಲ ಸೇರಿದ್ದಾರೆ ತಮಸ್ಸಿಗೆ,
ಉಳಿದವರದು ನಿನ್ನ ಕೃಷ್ಣಾವತಾರದಲ್ಲಿ ತಮಸ್ಸಿನೆಡೆಗೆ ನಡಿಗೆ.
ಕೃಷ್ಣಾವತಾರದಲ್ಲೂ ತಮಸ್ಸು ಹೊಂದದೇ ಉಳಿದ ದೈತ್ಯವೃಂದ,
ಇಪ್ಪತ್ತೆಂಟನೇ ಕಲಿಯುಗದಲ್ಲಾಗುತ್ತದೆ ಅವರ ಮೀಸಲು ಕಾರ್ಯದಿಂದ.
[Contributed by Shri Govind Magal]