Tuesday, 1 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 108 - 121

 ಉಮಾ, ಶಚೀ, ಶಾಮಳೆ ಮತ್ತು ಉಷಾದೇವಿಯರು, ಭಾರತೀದೇವಿಯೊಂದಿಗೆ ಸೇರಿ ಒಂದೇ ದೇಹದಲ್ಲಿ ಅವತರಿಸಿರುವ ಹಿನ್ನೆಲೆಯನ್ನು ಮುಂದೆ ವಿವರಿಸುತ್ತಾರೆ: ]

ಪೂರ್ವಂ ಹ್ಯುಮಾ ಚ ದೇವ್ಯಸ್ತಾಃ ಕದಾಚಿದ್ ಭರ್ತ್ತೃಭಿರ್ಯ್ಯುತಾಃ ।

ವಿಲಾಸಂ ದರ್ಶಯಾಮಾಸುರ್ಬ್ರಹ್ಮಣಃ ಪಶ್ಯತೋsಧಿಕಮ್ ॥೧೮.೧೦೮॥

ಹಿಂದೊಮ್ಮೆ ಉಮಾ, ಶಚೀ, ಶಾಮಳೆ ಮತ್ತು ಉಷಾದೇವಿಯರು ,

ತಮ್ಮ ಪತಿಯರೊಡಗೂಡಿ ಬ್ರಹ್ಮದೇವನೆದುರು ವಿಲಾಸ ತೋರಿದರು .

 

ಶಶಾಪ ತಾಸ್ತದಾ ಬ್ರಹ್ಮಾ ಮಾನುಷೀಂ ಯೋನಿಮಾಪ್ಸ್ಯಥ ।

ತತ್ರಾನ್ಯಗಾಶ್ಚ ಭವತೇತ್ಯೇವಂ ಶಪ್ತಾಃ ಸುರಾಙ್ಗನಾಃ ॥೧೮.೧೦೯॥

ವಿಚಾರ್ಯ್ಯ ಭಾರತೀಮೇತ್ಯ ಸರ್ವಮಸ್ಯೈ ನಿವೇದ್ಯ ಚ ।

ಸಹಸ್ರವತ್ಸರಂ ಚೈನಾಂ ಶುಶ್ರೂಷಿತ್ವಾ ಬಭಾಷಿರೇ ॥೧೮.೧೧೦॥

ಆಗ ಬ್ರಹ್ಮದೇವರಿಂದ ಅವರೆಲ್ಲರಿಗೂ ತಟ್ಟಿದ ಈಥರ  ಶಾಪದ ಬಿಸಿ ,

ಮನುಷ್ಯರಾಗಿ ಅವರ ಪತಿಯರಲ್ಲದೇ ಪರಪುರುಷರ ಸ್ಪರ್ಶದ ಕಸಿವಿಸಿ .

ಶಾಪಕ್ಕೊಳಗಾದ ದೇವಾಂಗನೆಯರೆಲ್ಲರೂ ಒಂದುಗೂಡಿ ವಿಚಾರ ಮಾಡಿ ,

ಭಾರತಿಗೆ ಎಲ್ಲ ಹೇಳಿಕೊಂಡರು ಸಾವಿರವರ್ಷ ಅವಳ ಸೇವೆಯ ಮಾಡಿ.

 

ದೇವೀ ನೋ ಮಾನುಷಂ ಪ್ರಾಪ್ಯಮನ್ಯಗಾತ್ವಂ ಚ ಸರ್ವಥಾ ।

ತಥಾSಪಿ ಮಾರುತಾದನ್ಯಂ ನ ಸ್ಪೃಶೇಮ ಕಥಞ್ಚನ ॥೧೮.೧೧೧॥

ಓ ಭಾರತೀದೇವಿಯೇ ನಮ್ಮ ಮೇಲಿದೆ ಬ್ರಹ್ಮಶಾಪದ ಹೊರೆ ,

ನಮ್ಮ ದೋಷದಿಂದ ಮನುಷ್ಯಜನ್ಮದಲ್ಲಿ ಪರಸಂಗದ ಬರೆ .

ಯಾವ ರೀತಿಯಿಂದಲೂ ಬ್ರಹ್ಮನ ಈ ಶಾಪ ನಮಗೆ ತಪ್ಪದು ,

ಪ್ರಾಣನಬಿಟ್ಟು ಬೇರ್ಯಾರನ್ನೂ ಮುಟ್ಟದ ಮನಸ್ಥಿತಿ ನಮ್ಮದು .

 

[ಬ್ರಹ್ಮದೇವರಿಂದ ಉಮಾ, ಶಚೀ, ಶಾಮಳೆ ಮತ್ತು ಉಷಾದೇವಿಯರು ಜೊತೆಯಾಗಿ ಪಡೆದ ಇನ್ನೊಂದು ಶಾಪವನ್ನು ವಿವರಿಸುತ್ತಾರೆ:]

ಬ್ರಹ್ಮಣೈವ  ಚ ಶಪ್ತಾಃ ಸ್ಮ ಪೂರ್ವಂ ಚಾನ್ಯತ್ರ ಲೀಲಯಾ ।

ಏಕದೇಹತ್ವಮಾಪ್ಯೈನಂ ಯದಾ ವಞ್ಚಯಿತುಂ ಗತಾಃ ॥೧೮.೧೧೨॥

ಹಿಂದೆ ಬೇರೊಂದು ಸಂದರ್ಭದಿ ನಾವು ನಾಲ್ವರೂ ಬಾಲಿಶವಾಗಿ ,

ಒಂದೇ ದೇಹದಲ್ಲಿದ್ದು ಬ್ರಹ್ಮದೇವರನ್ನು ವಂಚಿಸಲು ಮುಂದಾಗಿ ,

ಆ ಸಂಬಂಧಲ್ಲೂ ನಾವಿದ್ದೇವೆ -ಬ್ರಹ್ಮದೇವರಿಂದ ಶಾಪಗ್ರಸ್ತರಾಗಿ .

 

ಏಕದೇಹಾ ಮಾನುಷತ್ವಮಾಪ್ಸ್ಯಥ ತ್ರಿಶ ಉದ್ಧತಾಃ ।

ತ್ರಿಶೋ ಮದ್ವಞ್ಚನಾಯೇತಾ ಇತಿ ತೇನೋದಿತಾ ವಯಮ್ ॥೧೮.೧೧೩॥

 ದೇಹದಲ್ಲಿರುವ ಮಾನುಷ ದೇಹ ಪಡೆಯಿರಿ ,

ನನ್ನನ್ನು ವಂಚಿಸಲು ಬಂದಿರಿ ನೀವು ಮೂರು ಬಾರಿ ,

ಮೂರು ಸಲ ಹುಟ್ಟಿರಿ -ನೀವು ಒಂದೇ ದೇಹ ಸೇರಿ .

ಹೀಗಿತ್ತು ಅದು ಬ್ರಹ್ಮದೇವರು ದೇವಾಂಗನೆಯರಿಗೆ  ನೀಡಿದ ಶಾಪ ,

ಮೂರುಬಾರಿ ಮನುಷ್ಯದೇಹದಿ ಗಂಡಂದಿರಲ್ಲದೇ ಪರಸಂಗದ ತಾಪ .

 

[ಒಟ್ಟಿನಲ್ಲಿ ‘ಮೂರು ಬಾರಿ ಒಂದೇ ದೇಹ(ಮಾನುಷ ದೇಹ) ಬರಲಿ’ ಎನ್ನುವ ಒಂದು ಶಾಪ, ‘ಗಂಡನಲ್ಲದೇ ಬೇರೆಯವರೊಂದಿಗೆ ಸಂಪರ್ಕವಾಗಲಿ’ ಎನ್ನುವ ಇನ್ನೊಂದು ಶಾಪ].

ಅತಸ್ತ್ವಯೈಕದೇಹತ್ವಮಿಚ್ಛಾಮೋ ದೇವಿ ಜನ್ಮಸು।

ಚತುರ್ಷ್ವಪಿ ಯತೋsಸ್ಮಾಕಂ ಶಾಪದ್ವಯನಿಮಿತ್ತತಃ ॥೧೮.೧೧೪॥

ಚತುರ್ಜ್ಜನ್ಮ ಭವೇದ್ ಭೂಮೌ ತ್ವಾಂ ನಾನ್ಯೋ ಮಾರುತಾದ್ ವ್ರಜೇತ್ ।

ನಿಯಮೋsಯಂ ಹರೇರ್ಯ್ಯಸ್ಮಾದನಾದಿರ್ನ್ನಿತ್ಯ ಏವ ಚ ॥೧೮.೧೧೫॥

ನಮಗೆ ಬ್ರಹ್ಮನ ಎರಡು ಶಾಪಗಳಿರುವುದರಿಂದ ,

ನಾಕು ಜನ್ಮ ಭುವಿಯಲ್ಲಿ ಕಳೆಯಬೇಕಾದ್ದರಿಂದ ,

ನಿನ್ನ ದೇಹದೊಳಗಡೆ ಇದ್ದು ನಾವುಗಳು ಬರುವ ಬಯಕೆ ,

ನಿನಗಿದೆ ಮುಖ್ಯಪ್ರಾಣನಲ್ಲದೆ ಬೇರ್ಯಾರೂ ಮುಟ್ಟದ ರಕ್ಷೆ ,

ಬದ್ಧವಾಗಿದೆ ಅದು ನಿತ್ಯಸತ್ಯವಾದ ಅನಾದಿ ದೈವ ನಿಯಮಕ್ಕೆ .

 

ಅತಸ್ತ್ವಯೈಕದೇಹಾನ್ನೋ ನಾನ್ಯ ಆಪ್ನೋತಿ ಮಾರುತಾತ್ ।

ಇತೀರಿತೇ ತಥೇತ್ಯುಕ್ತ್ವಾ ಪಾರ್ವತ್ಯಾದಿಯುತೈವ ಸಾ ॥೧೮.೧೧೬॥

ವಿಪ್ರಕನ್ಯಾsಭವತ್ ತತ್ರ ಚತಸ್ರಃ ಪಾರ್ವತೀಯುತಾಃ ।

ಏಕದೇಹಸ್ಥಿತಾಶ್ಚಕ್ರುರ್ಗ್ಗೀರೀಶಾಯ ತಪೋ ಮಹತ್ ॥೧೮.೧೧೭॥

ಇವೆಲ್ಲಾ ಕಾರಣಗಳಿಂದ ನಾವೆಲ್ಲಾ ನಿನ್ನ ಜೊತೆ ಒಂದೇ ದೇಹವ ಹೊಂದಿದರೆ ,

ಇರುವುದಿಲ್ಲ ಮುಖ್ಯಪ್ರಾಣನ ಬಿಟ್ಟು ಪರಸಂಪರ್ಕ ಪರಸ್ಪರ್ಶದ ತೊಂದರೆ .

ಒಪ್ಪಿದ ಭಾರತೀ, ಪಾರ್ವತಿ ಮೊದಲಾದವರ ಕೂಡಿ ವಿಪ್ರಕನ್ಯೆಯಾಗಿ ಹುಟ್ಟುವ ಆಟ ,

ಪಾರ್ವತಿಯಿಂದ ಕೂಡಿ ಉಳಿದ ನಾಲ್ವರೂ ಒಂದೇ ದೇಹದಲ್ಲಿದ್ದು ರುದ್ರತಪಗೈದ ನೋಟ .

 

ತದ್ದೇಹಸ್ಥಾ ಭಾರತೀ ತು ರುದ್ರದೇಹಸ್ಥಿತಂ ಹರಿಮ್ ।

ತೋಷಯಾಮಾಸ ತಪಸಾ ಕರ್ಮ್ಮೈಕ್ಯಾರ್ತ್ಥಂ ಧೃತವ್ರತಾ ॥೧೮.೧೧೮॥

ಕರ್ಮೈಕ್ಯ ಸಾಧನೆಗಾಗಿ ಆ ದೇಹದಲ್ಲಿದ್ದ ದೇವಿ ಭಾರತೀ ,

ಶಿವಾಂತರ್ಗತ ನೃಸಿಂಹನ ನಿಷ್ಠಳಾಗಿ ಒಲಿಸಿದ ಆ ರೀತಿ .

ಅವಳು ತೊಟ್ಟಿದ್ದಳು ಮಿಕ್ಕೆಲ್ಲರ ಹಿತರಕ್ಷಣೆಯ ದೀಕ್ಷೆ ,

ಆ ಕಾರಣದಿ ಬೇಡಿದಳು ಶಿವಾಂತರ್ಗತ ನೃಸಿಂಹನ ಭಿಕ್ಷೆ.

 

ತಸ್ಯೈ ಸ ರುದ್ರದೇಹಸ್ಥೋ ಹರಿಃ ಪ್ರಾದಾದ್ ವರಂ ಪ್ರಭುಃ ।

ಅನನ್ತತೋಷಣಂ ವಿಷ್ಣೋಃ ಸ್ವಭರ್ತ್ತ್ರಾ ಸಹ ಜನ್ಮಸು ॥೧೮.೧೧೯॥

ರುದ್ರದೇಹಸ್ತನಾದ ಲಕ್ಷ್ಮೀನಾರಸಿಂ

ಹ ಭಾರತೀದೇವಿಗೆ ವರವ ಕೊಟ್ಟ ,

ದೈವಪ್ರೀತಿಯಾಗಿ ಲಭಿಸಲಿ ನಿನಗೆ ಪತಿಯೊಡನೆ ಹರಿಸೇವೆಗೈವ ಪಟ್ಟ .

 

ಸರ್ವೇಶ್ವಪೀತಿ ಚಾನ್ಯಾಸಾಂ ದದೌ ಶಙ್ಕರ ಏವ ಚ ।

ವರಂ ಸ್ವಭರ್ತ್ತೃಸಂಯೋಗಂ ಮಾನುಷೇಷ್ವಪಿ ಜನ್ಮಸು ॥೧೮.೧೨೦॥

ತತಸ್ತದೈವ ದೇಹಂ ತಾ ವಿಸೃಜ್ಯ ನಳನನ್ದಿನೀ ।

ಬಭೂವುರಿನ್ದ್ರಸೇನೇತಿ ದೇಹೈಕ್ಯೇನ ಸುಸಙ್ಗತಾಃ ॥೧೮.೧೨೧॥

ಉಳಿದವರಿಗೆಲ್ಲಾ ಸಾಕ್ಷಾತ್ ರುದ್ರದೇವರಿಂದ ವರದಾನ ,

ಮನುಷ್ಯರಾಗಿದ್ದಾಗ ನಿಮ್ಮ ಗಂಡಂದಿರಿಂದಾಗಲಿ ಮಿಲನ.

ಆನಂತರ ಆ ಕನ್ಯೆಯಿಂದ ನಡೆದದ್ದು ಅವಳ ದೇಹತ್ಯಾಗ ,

ಮುಂದೆ ನಳಪುತ್ರಿ ಇಂದ್ರಸೇನಳಾಗಿ ಏಕದೇಹ ಪಡೆದ ಯೋಗ .

No comments:

Post a Comment

ಗೋ-ಕುಲ Go-Kula