Sunday, 6 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 144 - 151

 ಮದವಜ್ಞಾನಿಮಿತ್ತೇನ ಪತಿತಾ ಇತಿ ತಾನ್ ಸುರಾನ್ ।

ಮಾರುತಾದೀನ್ ಮೃಷಾsವಾದೀರಿತಿ ಬ್ರಹ್ಮಾ ಶಿವಂ ತದಾ ॥೧೮.೧೪೪॥

ಶಶಾಪ ಮಾನುಷೇಷು ತ್ವಂ ಕ್ಷಿಪ್ರಂ ಜಾತಃ ಪರಾಭವಮ್ ।

ಶಕ್ರಾನ್ನರತನೋರ್ಯ್ಯಾಸಿ ಯಸ್ಮೈ ತ್ವಂ ತು ಮೃಷಾsವದಃ ॥೧೮.೧೪೫॥

ಆಗ ಬ್ರಹ್ಮದೇವರು ಸಿಟ್ಟಿನಿಂದ ಶಿವಗೆ ಹೇಳುತ್ತಾರೆ ,

ನೀನು ಇಂದ್ರಗೆ ಸುಳ್ಳು ಹೇಳಿದ್ದರಿಂದ ಶಾಪದ ಹೊರೆ .

ಅವರುಗಳಿಂದ ಆಗಲೇ ಇಲ್ಲ ನಿನ್ನ ತಿರಸ್ಕಾರ ,

ನಡೆದದ್ದು ದೈವನಿಯೋಜಿತ ಆಟದ ವ್ಯಾಪಾರ .

ನೀನು ಶೀಘ್ರದಲ್ಲೇ ಮನುಷ್ಯನಾಗಿ ಹುಟ್ಟಿ ಬರುವವನಾಗುತ್ತೀಯಾ ,

ನೀನು ಸುಳ್ಳು ಹೇಳಿದ ನರಾವೇಶದ ಇಂದ್ರನಿಂದ ನೀನು  ಸೋಲುತ್ತೀಯಾ .

 

ಮಚ್ಛಪ್ತಾನಾಂ ಚ ದೇವೀನಾಮವಿಚಾರ್ಯ್ಯ ಮಯಾ ಯತಃ ।

ಪತಿಯೋಗವರಂ ಪ್ರಾದಾ ನಾವಾಪ್ಸ್ಯಸಿ ತತಃ ಪ್ರಿಯಾಮ್ ॥೧೮.೧೪೬॥

ಮಾನುಷೇಷು ತತಃ ಪಶ್ಚಾದ್ ಭಾರತೀದೇಹನಿರ್ಗ್ಗತಾಮ್ ।

ಸ್ವಲೋಕೇ ಪ್ರಾಪ್ಸ್ಯಸಿ ಸ್ವಾರ್ತ್ಥೇ ವರೋsಯಂ ತೇ ಮೃಷಾ ಭವೇತ್ ॥೧೮.೧೪೭॥

 ನನ್ನಿಂದ ಶಪಿತರಾದ ಆ ದೇವಿಯರಿಗೆಲ್ಲಾ ,

ನನ್ನಾಜ್ಞೆ ಇಲ್ಲದೇ ಪತಿಯೋಗ ವರ ನೀಡಿರುವೆಯಲ್ಲ ,

ಈ ಕಾರಣದಿ ಮನುಷ್ಯಲೋಕದಿ ನಿನ್ನ ಹೆಂಡತಿಯ ಸೇರಲಾರೆ ರುದ್ರ ,

ಭಾರತಿಯಿಂದ ಹೊರಬಂದ ಪಾರ್ವತಿಯ ಕೈಲಾಸದಿ ಸೇರುವೆ ನೀ ಭದ್ರ .

ನೀನೀಡಿರುವ ವರ ನಿನ್ನ ವಿಷಯದಲ್ಲಾಗುವುದು ಮಿಥ್ಯ ,

ಉಳಿದ ನಾಲ್ವರ ವಿಷಯದಲ್ಲಿ ಆಗುವುದು ಅದು ಸತ್ಯ .

(ಇಂದ್ರಸೇನೆಯಲ್ಲಿ ಪಾರ್ವತಿಯೂ ಇದ್ದು ವರವನ್ನು ಪಡೆದಿದ್ದಳು. ಶಿವನೇ ನೀಡಿರುವ ವರದಂತೆ ಪಾರ್ವತಿಗೆ ಮಾನುಷಯೋನಿಯಲ್ಲಿ ಶಿವ ಪತಿಯಾಗಿ ಸಿಗಬೇಕಿತ್ತು. ಆದರೆ ಅದನ್ನು ಬ್ರಹ್ಮದೇವರು ತಡೆದರು)

 

ಏಷಾ ಸಾ ದ್ರೌಪದೀ ನಾಮ ಪಞ್ಚದೇವೀತನುರ್ಭವೇತ್ ।

ಮೃಷಾವಾಗ್ ಯೇಷು ತೇ ಪ್ರೋಕ್ತಾ ಮಾರುತಾದ್ಯಾಸ್ತು ತೇsಖಿಲಾಃ ॥೧೮.೧೪೮॥

ಪಂಚದೇವಿಯರ ಸ್ವರೂಪಭೂತದಳಾದ ಇಂದ್ರಸೇನೆ ದ್ರೌಪದಿಯಾಗುವಳು ,

ನಿನ್ನಿಂದ ಸುಳ್ಳು ಕೇಳಿದ ಮಾರುತಾದಿ ದೇವತೆಗಳಿಗೆ ಸತಿಯಾಗಿ ಸೇರುವಳು .

 

ತಾಸಾಂ ಪತಿತ್ವಮಾಪ್ಸ್ಯನ್ತಿ ಭಾರತ್ಯೈವ ತು ಪಾರ್ವತೀ ।

ಸಂಯುಕ್ತಾ ವ್ಯವಹಾರೇಷು ಪ್ರವರ್ತ್ತೇತ ನಚಾನ್ಯಥಾ ॥೧೮.೧೪೯॥

ಪಾರ್ವತಿ ಭಾರತಿಯೊಂದಿಗೆ ಸಂಯುಕ್ತಳಾಗಿದ್ದು ,

ಎಲ್ಲಾ ವ್ಯವಹಾರದಲ್ಲಿ ಒಟ್ಟಿಗೇ ತಾನು ಜೊತೆಗಿದ್ದು .

ಉಳಿದವರಿಗೆ ಆ ಸೌಲಭ್ಯ ಸಿಗದೆ ಹೋಗಿದ್ದು .

 

ಏತೇ ಹಿ ಮಾರುತಾದ್ಯಾಸ್ತೇ ದೇವಕಾರ್ಯ್ಯಾರ್ತ್ಥಗೌರವಾತ್  ।

ಜಾತಾ ಇತಿ ಶ್ರುತಿಸ್ತತ್ರ ನಾವಜ್ಞಾ ತೇsತ್ರ ಕಾರಣಮ್ ॥೧೮.೧೫೦॥

ವಾಯು ಮೊದಲಾದ ದೇವತೆಗಳಿಂದ ದೇವತಾಕಾರ್ಯಕ್ಕಾಗಿ ಜನನ ,

ಇದು ವೇದೋಕ್ತ ನಿನ್ನ ಅವಮಾನಿಸಿದ್ದು ಆಗುವುದಿಲ್ಲ ಅದಕೆ ಕಾರಣ .

 

ದೀರ್ಘಕಾಲಂ ಮನುಷ್ಯೇಷು ತತಸ್ತ್ವಂ ಸ್ಥಿತಿಮಾಪ್ಸ್ಯಸಿ ।

ಇತ್ಯುಕ್ತ್ವಾ ಪ್ರಯಯೌ ಬ್ರಹ್ಮಾ ಸೋsಶ್ವತ್ಥಾಮಾ ಶಿವೋsಭವತ್ ॥೧೮.೧೫೧॥

ಹಾಗಾಗಿ ನಿನ್ನದು ದೀರ್ಘಕಾಲ ಮನುಷ್ಯಯೋನಿಯಲ್ಲಿ ವಾಸ ,

ಹೀಗೆಂದ ಬ್ರಹ್ಮದೇವರು ತಾವು ಹೊರಟರು ಅಲ್ಲಿಂದ ಪ್ರವಾಸ ,

ಆ ಶಿವನೇ ಭುವಿಯಲ್ಲಿ ಅವತರಿಸಿ ತೊಟ್ಟ ಅಶ್ವತ್ಥಾಮನ ವೇಷ .

No comments:

Post a Comment

ಗೋ-ಕುಲ Go-Kula