ಉಕ್ತ್ವೈವಮೇತ್ಯ ನಿಖಿಲಂ ಚ ಜಗಾದ ಭೀಮ ಉದ್ಧರ್ಶ ಆಸ ಸ ನಿಶಮ್ಯ ಮಹಾಸ್ವಧರ್ಮ್ಮಮ್ ।
ಪ್ರಾಪ್ತಂ ವಿಲೋಕ್ಯ
ತಮತೀವ ವಿಘೂರ್ಣ್ಣನೇತ್ರಂ ದೃಷ್ಟ್ವಾ ಜಗಾದ ಯಮಸೂನುರುಪೇತ್ಯ ಚಾನ್ಯೈಃ ॥೧೯.೮೩॥
ಕುಂತಿ ವಿಪ್ರನಿಗೆ ಇಷ್ಟು ಹೇಳಿ , ಭೀಮನ ಬಳಿ ಬಂದು ಎಲ್ಲವನ್ನೂ ಹೇಳಲು ,
ಸ್ವಧರ್ಮ ಪಾಲನಾವಕಾಶ ಸಿಕ್ಕಿತೆಂದು ಭೀಮನ ಮೊಗದಿ ಹರ್ಷದ ಹೊನಲು .
ಆ ಸಮಯಕ್ಕೆ ಅರ್ಜುನಾದಿಗಳೊಡನೆ ಧರ್ಮರಾಜ ಬಂದ ,
ಭೀಮನ ಹಿಗ್ಗಿನ ಬಗ್ಗೆ ತಾಯಿ ಕುಂತಿಯಲ್ಲಿ ಪ್ರಶ್ನೆ ಮಾಡಿದ .
ಮಾತಃ ಕಿಮೇಷ ಮುದಿತೋsತಿತರಾಮಿತಿ ಸ್ಮ ತಸ್ಮೈ ಚ ಸಾ ನಿಖಿಲಮಾಹ ಸ ಚಾಬ್ರವೀತ್ ತಾಮ್ ।
ಕಷ್ಟಂ ತ್ವಯಾ ಕೃತಮಹೋ
ಬಲಮೇವ ಯಸ್ಯ ಸರ್ವೇ ಶ್ರಿತಾ ವಯಮಮುಂ ಚ ನಿಹನ್ಸಿ ಭೀಮಮ್ ॥೧೯.೮೪॥
ಅಮ್ಮಾ , ಭೀಮ ಯಾಕೆ
ಇಷ್ಟೊಂದು ಹಿಗ್ಗಿದ್ದಾನೆ ,
ಆಗ ಕುಂತಿಯಿಂದ ಎಲ್ಲಾ ವಿಷಯದ ವಿವರಣೆ .
ಅಮ್ಮಾ , ಏನಿದು ನಿನ್ನ
ಅವಿವೇಕದ ಕಾರ್ಯ ,
ಅಪಾಯಕಾರಿ ಕೆಲಸಕ್ಕಿಳಿದಿರುವುದು ಆಶ್ಚರ್ಯ .
ನಾವೆಲ್ಲಾ ನಂಬಿರುವೆವೋ ಯಾರ ತೋಳ ಬಲ ,
ಆ ಭೀಮಸೇನನನ್ನೇ ಸಾವಿಗೆ ತಳ್ಳುತ್ತಿರುವೆಯಲ್ಲ .
ಯದ್ಬಾಹುವೀರ್ಯ್ಯಪರಮಾಶ್ರಯತೋ
ಹಿ ರಾಜ್ಯಮಿಚ್ಛಾಮ ಏವ ನಿಖಿಲಾರಿವಧಂ ಸ್ವಧರ್ಮ್ಮಮ್ ।
ಸೋsಯಂ ತ್ವಯಾsದ್ಯ ನಿಶಿಚಾರಿಮುಖಾಯ ಮಾತಃ ಪ್ರಸ್ಥಾಪ್ಯತೇ ವದ ಮಮಾsಶು ಕಯೈವ ಬುದ್ಧ್ಯಾ॥೧೯.೮೫॥
ಯಾರ ಬಾಹುಬಲದ ಮೇಲಿದೆಯೋ ನಮ್ಮೆಲ್ಲರ ಅವಲಂಬನೆ ,
ಯಾರಿಂದಾಗಬೇಕಿದೆಯೋ ಶತ್ರುನಾಶ ಮತ್ತು ಸ್ವಧರ್ಮದ ರಕ್ಷಣೆ .
ಆ ಭೀಮಸೇನನನ್ನು ರಾಕ್ಷಸನ ಬಾಯಿಗೆ ತಳ್ಳುತ್ತಿರುವೆ ,
ಯಾವ ಕಾರಣಕ್ಕಾಗಿ ನೀನು ಈ ಕೆಲಸ ಮಾಡುತ್ತಿರುವೆ .
ಇತ್ಯುಕ್ತವನ್ತಮಮುಮಾಹ
ಸುಧೀರಬುದ್ಧಿಃ ಕುನ್ತೀ ನ ಪುತ್ರಕ ನಿಹನ್ತುಮಯಂ ಹಿ ಶಕ್ಯಃ ।
ಸರ್ವೈಃ
ಸುರೈರಸುರಯೋಗಿಭಿರಪ್ಯನೇನ ಚೂರ್ಣ್ಣೀಕೃತೋ ಹಿ ಶತಶೃಙ್ಗಗಿರಿಃ ಪ್ರಸೂತ್ಯಾಮ್ ॥೧೯.೮೬॥
ಧರ್ಮರಾಜ ಹೀಗೆ ಹೇಳಲು , ಹೇಳುತ್ತಾಳೆ ಧೈರ್ಯದೆದೆಯ ಕುಂತಿ ,
ಭೀಮಸೇನನ ಕೊಲ್ಲಲು ಯಾವ ದೇವಾಸುರರಿಗೂ ಇಲ್ಲವದು ಶಕ್ತಿ .
ಹುಟ್ಟಿದಾಗಲೇ ಅವನು ತೋರಿದ್ದ ಶತಶೃoಗಕ್ಕೆ ಪುಡಿಯಾಗುವ ಗತಿ .
ಏಷ ಸ್ವಯಂ ಹಿ ಮರುದೇವ
ನರಾತ್ಮಕೋsಭೂತ್ ಕೋ
ನಾಮ ಹನ್ತುಮಿಮಮಾಪ್ತಬಲೋ ಜಗತ್ಸು ।
ಇತ್ಯೇವಮಸ್ತ್ವಿತಿ ಸ
ತಾಮವದತ್ ಪರೇದ್ಯುರ್ಭೀಮೋ ಜಗಾಮ ಶಕಟೇನ ಕೃತೋರುಭೋಗಃ ॥೧೯.೮೭॥
ಸಾಕ್ಷಾತ್ ವಾಯುದೇವನೇ ಮಾನವ ಶರೀರಿಯಾದ ಭೀಮನಾಗಿ ಹುಟ್ಟಿದ್ದಾನೆ,
ಅವನನ್ನು ಕೊಲ್ಲುವ ಶಕ್ತಿಯುಳ್ಳವ ಪ್ರಪಂಚದಲ್ಲಿ ಯಾವನು ತಾನೇ
ಇದ್ದಾನೆ .
ಹಾಗಿದ್ದರೆ ಸರಿಯೆಂದು ಧರ್ಮರಾಜ ಸೂಚಿಸುತ್ತಾನೆ ಒಪ್ಪಿಗೆ ,
No comments:
Post a Comment
ಗೋ-ಕುಲ Go-Kula