ಪಞ್ಚದೇವೀತನುಸ್ತ್ವೇಷಾ ದ್ರೌಪದೀ ನಾಮ ಚಾಭವತ್ ।
ವೇದೇಷು ಸಪುರಾಣೇಷು
ಭಾರತೇ ಚಾವಗಮ್ಯತೇ ॥೧೮.೧೫೨॥
ಉಕ್ತೋsರ್ತ್ಥಃ ಸರ್ವ ಏವಾಯಂ ತಥಾ ಪೂರ್ವೋದಿತಾಶ್ಚ ಯೇ ।
ಮುಮುದುಃ ಸರ್ವಪಾಞ್ಚಾಲಾ
ಜಾತಯೋಃ ಸುತಯೋಸ್ತಯೋಃ ॥೧೮.೧೫೩॥
ಈ ತೆರನಾಗಿ ಪಂಚ ದೇವಿಯರ ಒಂದು ಶರೀರದ ಆ ಇಂದ್ರಸೇನೆ ,
ದ್ರೌಪದಿ ಹೆಸರಿಂದ ಬಂದಳು ಅಗ್ನಿಕುಂಡದಿಂದ ಪಡೆದು ಜನ್ಮವನ್ನೇ .
ವೇದ ಪುರಾಣ ಭಾರತದಲ್ಲಿ ಭಾರತೀ ಎಂದು ಕರೆವರು ಅವಳನ್ನೇ .
ಇದೆಲ್ಲವೂ ಕೂಡಾ ಹೇಳಲ್ಪಟ್ಟಿದೆ ಶ್ರಿಮನ್ಮಹಾಭಾರತದಲ್ಲಿ ,
ದ್ರೌಪದಿ ಧೃಷ್ಟದ್ಯುಮ್ನರು ಹುಟ್ಟಲು ಹರ್ಷಿಸಿದರು ಪಾಂಚಾಲರಲ್ಲಿ .
ಮಾನುಷಾನ್ನೋಪಭೋಗೇನ
ಸಂಸರ್ಗ್ಗಾನ್ಮಾನುಷೇಷು ಚ ।
ಮನುಷ್ಯಪುತ್ರತಾಯಾಶ್ಚ
ಭಾವೋ ಮಾನುಷ ಏತಯೋಃ ॥೧೮.೧೫೪॥
ಅಭೂನ್ನಾತಿತರಾಮಾಸೀತ್
ತದಯೋನಿತ್ವಹೇತುತಃ ।
ಯಾಜೋಪಯಾಜೌ ತಾವೇವ
ದಯಿತಾ ದ್ರುಪದಸ್ಯ ಸಾ ॥೧೮.೧೫೫॥
ಮಾತೃಸ್ನೇಹಾರ್ತ್ಥಮನಯೋರ್ಯ್ಯಯಾಚೇ
ದದತುಶ್ಚ ತೌ ।
ಜಾತಮಾತ್ಮನಿಹನ್ತಾರಂ
ಭಾರದ್ವಜೋ ನಿಶಮ್ಯ ತಮ್ ॥೧೮.೧೫೬॥
ಯಶೋರ್ತ್ಥಮಸ್ತ್ರಾಣಿ
ದದಾವಗ್ರಹೀತ್ ಸೋsಪಿ ಲೋಭತಃ
।
ರಾಮಾಸ್ತ್ರಾಣಾಂ
ದುರ್ಲ್ಲಭತ್ವಾತ್ ತ್ರಿದಶೇಷ್ವಪಿ ವೀರ್ಯ್ಯವಾನ್ ॥೧೮.೧೫೭॥
ಮಾನುಷಾನ್ನ ,ಮನುಷ್ಯ ಸಂಪರ್ಕ ,ಮನುಷ್ಯ ಪ್ರೇರಣೆಯಿಂದಾದ ಯಾಗ ,
ತಂದುಕೊಟ್ಟಿತ್ತು ಅವರಿಬ್ಬರಲ್ಲಿ ಮನುಷ್ಯಸ್ವಭಾವದ ಒಂದಷ್ಟು ಭಾಗ .
ಆದರೆ ಆಗಿರಲಿಲ್ಲ ಮಾನುಷಯೋನಿಯಿಂದ ಅವರಿಬ್ಬರ ಜನನ ,
ಹಾಗಾಗೇ ಬರಲಿಲ್ಲವರಿಗೆ ದೇಶ , ತಂದೆ ತಾಯಿಯರ ಅಭಿಮಾನ .
ದ್ರುಪದನ ಪತ್ನಿಗೆ ತಾನು ಇವರಿಬ್ಬರಿಗೆ ತಾಯಿಯಾಗಿ ಇರಬೇಕೆಂಬ ವ್ಯಾಮೋಹ
,
ಯಾಜ ಉಪಯಾಜರಲ್ಲಿ ಬೇಡಲು-ಹರಸಿದರವರು ಉದಿಸುವಂತೆ ಅವಳಲ್ಲಿ ಸ್ನೇಹ .
ದ್ರೋಣರಿಗಿದ್ದರೂ ಧೃಷ್ಟದ್ಯುಮ್ನ ತನ್ನನ್ನು ಕೊಲ್ಲಲು ಹುಟ್ಟಿದ್ದಾನೆ
ಎಂಬ ಜ್ಞಾನ ,
ಕೀರ್ತಿಗಾಗಿ ಅವರು ಮಾಡುತ್ತಾರೆ ಅವನಿಗೆ ಅಸ್ತ್ರ ಶಸ್ತ್ರ ವಿದ್ಯಾ
ಪ್ರದಾನ .
ಪರಶುರಾಮರು ಕೊಟ್ಟ ಅಸ್ತ್ರಗಳು ದೇವತೆಗಳಿಗೂ ದುರ್ಲಭ ,
No comments:
Post a Comment
ಗೋ-ಕುಲ Go-Kula