Monday, 7 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 158 - 169

 ಭೀಮಾರ್ಜ್ಜುನಾಭ್ಯಾಂ ಬದ್ಧಂ ತಂ ಶ್ರುತ್ವಾ ಪಾಞ್ಚಾಲಭೂಪತಿಮ್ ।

ಪ್ರಾಹಿಣೋತ್ ಕೃತವರ್ಮ್ಮಾಣಂ ಪಾಣ್ಡವಾನಾಂ ಜನಾರ್ದ್ದನಃ ॥೧೮.೧೫೮॥

ಪಾಣ್ಡವೇಷ್ವತುಲಾಂ ಪ್ರೀತಿಂ ಲೋಕೇ ಖ್ಯಾಪಯಿತುಂ ಪ್ರಭುಃ ।

ಸಮಾನ್ಯ ಪಾಣ್ಡವಾನ್  ಸೋsಪಿ ಶೂರಾನುಜಸುತಾಸುತಃ ॥೧೮.೧೫೯॥

ತೈರ್ಮ್ಮಾನಿತಃ ಕೃಷ್ಣಭಕ್ತ್ಯಾಭ್ರಾತೃತ್ವಾಚ್ಚ ಹರಿಂ ಯಯೌ ।  

ತತಃ ಪ್ರಭೃತಿ ಸನ್ತ್ಯಜ್ಯ ದೇವಪಕ್ಷಾ ಜರಾಸುತಮ್ ॥೧೮.೧೬೦॥

ಪಾಣ್ಡವಾನಾಶ್ರಿತಾ ಭೂಪಾ ಜ್ಞಾತ್ವಾ ಭೈಮಾರ್ಜ್ಜುನಂ ಬಲಮ್ ।

ವಿಶೇಷತಶ್ಚ ಕೃಷ್ಣಸ್ಯ ವಿಜ್ಞಾಯ ಸ್ನೇಹಮೇಷು ಹಿ ॥೧೮.೧೬೧॥

ಭೀಮಸೇನ ಮತ್ತು ಅರ್ಜುನರಿಂದ ದ್ರುಪದನ ಬಂಧನವಾದದ್ದನ್ನು ಶ್ರೀಕೃಷ್ಣ ಕೇಳಿದ ,

ಪಾಂಡವರಲ್ಲಿ ತನ್ನ ಅಮಿತ ಪ್ರೀತಿಯ ತೋರಲೆಂದೇ ಕೃತವರ್ಮನ ಅವರಲ್ಲಿಗೆ ಕಳಿಸಿದ.

ಶೂರನ ತಮ್ಮನ ಮಗಳ ಮಗನಾದ ಈ ಕೃತವರ್ಮ ಪಾಂಡವರ ಸನ್ಮಾನಿಸಿದ ,

ಕೃಷ್ಣಭಕ್ತಿ , ಮತ್ತೆ ತಾನು ಅಣ್ಣನಾದ್ದರಿಂದ ಸತ್ಕರಿಸಲ್ಪಟ್ಟು ಕೃಷ್ಣನಲ್ಲಿಗೆ ಮರಳಿದ .

ಆಗಿನಿಂದ ದೇವತೆಗಳ ಪರವಿದ್ದ ರಾಜರುಗಳ ಸಮುದಾಯ ,

ಜರಾಸಂಧನ ಬಿಟ್ಟು ಪಾಂಡವರಲ್ಲೇ ತಾವು ಪಡೆದರು ಆಶ್ರಯ .

ಭೀಮಾರ್ಜುನರ ಬಲದ ಅರಿವಿದ್ದ ರಾಜರ ದಂಡು ,

ಸೇರಿತು ಕೃಷ್ಣಸ್ನೇಹ ರಕ್ಷಣೆಯಿದ್ದ ಪಾಂಡವರ ಹಿಂಡು .

 

ಪರಾಜಿತಾಶ್ಚ ಬಹುಶಃ ಕೃಷ್ಣೇನಾಚಿನ್ತ್ಯಕರ್ಮ್ಮಣಾ ।

ಪ್ರತಾಪಾದ್ಧ್ಯೇವ ತೇ ಪೂರ್ವಂ ಜರಾಸನ್ಧವಶಂ ಗತಾಃ ॥೧೮.೧೬೨॥

ನ ಸ್ನೇಹಾತ್ ತದ್ ಬಲಂ ಜ್ಞಾತ್ವಾ ಪಾರ್ತ್ಥಾನಾಂ ಕೇಶವಸ್ಯ ಚ ।

ಜನ್ಮಾನ್ತರಾಭ್ಯಾಸವಶಾತ್ ಸ್ನಿಗ್ಧಾಃ ಕೃಷ್ಣೇ ಚ ಪಾಣ್ಡುಷು  ॥೧೮.೧೬೩॥

ಆ ರಾಜರುಗಳೆಲ್ಲ ಅಚಿಂತ್ಯಕಾರ್ಯಗಳ ಮಾಡುವ ಕೃಷ್ಣನಿಂದಾಗಿದ್ದರು ಪರಾಜಿತ ,

ಜರಾಸಂಧನ ಭಯದಿಂದಾಗಿಯೇ ಅವನ ವಶವಾಗಿ ಪರವಾಗಿದ್ದದ್ದು ಸರ್ವವಿದಿತ .

ನಿಜವಾದ ಸ್ನೇಹವಿದ್ದಿಲ್ಲ ಅಲ್ಲಿ -ಇದ್ದದ್ದು ಭಯದ ಬಂಧನ ,

ಭೀಮಾರ್ಜುನ ಕೃಷ್ಣರ ಬಲ ಮಾಡಿತ್ತು ಭಯ ವಿಮೋಚನ.

ಹೀಗಾಗಿ ರಾಜರುಗಳೆಲ್ಲಾ ಜರಾಸಂಧನಿಂದ ಸರಿದರು ದೂರ,

ಕೃಷ್ಣ ಪಾಂಡವರತ್ತ ಸೆಳೆದಿತ್ತವರ ಜನ್ಮಾಂತರದ ಭಕ್ತಿ ಸಂಸ್ಕಾರ .

 

ಜರಾಸನ್ಧಭಯಂ ತ್ಯಕ್ತ್ವಾ ತಾನೇವ ಚ ಸಮಾಶ್ರಿತಾಃ ।

ಅಪಿ ತಂ ಬಹುಶಃ ಕೃಷ್ಣವಿಜಿತಂ ನೈವ ತತ್ಯಜುಃ ॥೧೮.೧೬೪॥

ಆಸುರಾಃ ಪೂರ್ವಸಂಸ್ಕಾರಾತ್ ಸಂಸ್ಕಾರೋ ಬಲವಾನ್ ಯತಃ ।

ದೇವಾ ಹಿ ಕಾರಣಾದನ್ಯಾನಾಶ್ರಯನ್ತೋsಪಿ ನಾsನ್ತರಮ್ ॥೧೮.೧೬೫॥

ಸ್ನೇಹಂ ತ್ಯಜನ್ತಿ ದೈವೇಷು ತಥಾsನ್ಯೇsನ್ಯೇಷ್ವಪಿ ಸ್ಫುಟಮ್ ।

ಧೃತರಾಷ್ಟ್ರೋ ಬಲಂ ಜ್ಞಾತ್ವಾ ಬಹುಶೋ ಭೀಮಪಾರ್ತ್ಥಯೋಃ ॥೧೮.೧೬೬॥

ದೈವತ್ವಾಚ್ಚ ಸ್ವಭಾವೇನ ಜ್ಯೇಷ್ಠತ್ವಾದ್ ಧರ್ಮ್ಮಜಸ್ಯ ಚ ।

ಸುಪ್ರೀತ ಏವ ತಂ ಚಕ್ರೇ ಯೌವರಾಜ್ಯಾಭಿಷೇಕಿಣಮ್ ॥೧೮.೧೬೭॥

ಹೀಗೆ ಜರಾಸಂಧನ ಭಯವ ಬಿಟ್ಟ ರಾಜರುಗಳ ಕಕ್ಷ ,

ಸೇರಿಕೊಂಡಿತು(ದ್ದು)ಸಹಜ ಶ್ರೀಕೃಷ್ಣ ಪಾಂಡವರ ಪಕ್ಷ .

ಅನೇಕಬಾರಿ ಶ್ರೀಕೃಷ್ಣನಿಂದ ಉಂಡಿದ್ದರೂ ಸೋಲು ,

ಸಹಜವಾಗೇ ಅಸುರರಾಜರೆಲ್ಲ ಜರಾಸಂಧನ ಪಾಲು .

ಪರಿಸ್ಥಿತಿ ಸಂದರ್ಭಗಳ ಅನಿವಾರ್ಯ ಒತ್ತಡಗಳಿಂದ ,

ಆಚೀಚೆ ಆಗುವುದು ಒಮ್ಮೊಮ್ಮೆ ದೇವದಾನವ ಸಂಬಂಧ.

ಆದರೆ ಒಳಗಿರುವ ಅವರವರ ಗಾಢ ಸ್ವಭಾವ ಸಂಸ್ಕಾರ ,

ವಿಂಗಡಿಸಿ ಸೇರಿಸುತ್ತದೆ ತೆರೆದವರವರ ಗುಂಪಿನ ದ್ವಾರ .

ಇತ್ತ ಧೃತರಾಷ್ಟ್ರಗಾಗಿತ್ತು ಅನೇಕ ಬಾರಿ ಭೀಮಾರ್ಜುನರ ಬಲ ಶೌರ್ಯದ ಅರಿವು ,

ಯುವರಾಜನ ಮಾಡಿಸಿತ್ತು ಧರ್ಮರಾಜನ ದೈವಸ್ವಭಾವ ಹಿರಿಯನೆಂಬ ತಿಳಿವು .

 

ಭೀಮಾರ್ಜ್ಜುನಾವಥೋ ಜಿತ್ವಾ ಸರ್ವದಿಕ್ಷು ಚ ಭೂಪತೀನ್ ।

ಚಕ್ರತುಃ ಕರದಾನ್ ಸರ್ವಾನ್ ಧೃತರಾಷ್ಟ್ರಸ್ಯ ದುರ್ಜ್ಜಯೌ ॥೧೮.೧೬೮॥

ಆನಂತರ ಭೀಮಾರ್ಜುನರು ದಿಕ್ಕು ದಿಕ್ಕುಗಳಲ್ಲಿರುವ ರಾಜರ ಗೆದ್ದರು,

ಅವರೆಲ್ಲರನ್ನೂ ಧೃತರಾಷ್ಟ್ರಗೆ ಕಪ್ಪ ಕೊಡುವವರನ್ನಾಗಿ ಮಾಡಿದರು .

 

ತಯೋಃ ಪ್ರೀತೋsಭವತ್ ಸೋsಪಿ ಪೌರಜಾನಪದಾಸ್ತಥಾ ।

ಭೀಷ್ಮದ್ರೋಣಮುಖಾಃ ಸರ್ವೇsಪ್ಯತಿಮಾನುಷಕರ್ಮ್ಮಣಾ ॥೧೮.೧೬೯॥

ಧೃತರಾಷ್ಟ್ರ,ಭೀಷ್ಮ,ದ್ರೋಣ ಪಟ್ಟಣಿಗ ಹಳ್ಳಿಗರಿಗೆಲ್ಲಾ ಆನಂದ ,

ಹರಿದು ಬಂತೆಲ್ಲರಿಗೂ ಮನುಷ್ಯರ ಮೀರಿದ ಭೀಮಾರ್ಜುನರಿಂದ .

 

॥ ॥ ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಭೀಮಾರ್ಜ್ಜುನದಿಗ್ವಿಜಯೋ ನಾಮ ಅಷ್ಟಾದಶೋsಧ್ಯಾಯಃ ll

 

ಹೀಗೆ ಶ್ರೀಮದಾನಂದತೀರ್ಥಭಗವತ್ಪಾದರಿಂದ ರಚಿತವಾದ ,

ಶ್ರಿಮನ್ಮಹಾಭಾರತತಾತ್ಪರ್ಯನಿರ್ಣಯದ ಭಾವಾನುವಾದ ,

ಭೀಮಾರ್ಜುನದಿಗ್ವಿಜಯ ಹೆಸರಿನ ಹದಿನೆಂಟನೇ ಅಧ್ಯಾಯ ,

                                                ಅಂತರ್ಯಾಮಿಯಾದ ಶ್ರೀಕೃಷ್ಣಗೆ ಅರ್ಪಿಸಿದ ಧನ್ಯತಾ ಭಾವ .

No comments:

Post a Comment

ಗೋ-ಕುಲ Go-Kula