Tuesday, 1 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 97 - 107

ಯಾಜೋಪಯಾಜಾವಾನೀಯಾಥಾರ್ಬುದೇನ ಗವಾಂ ನೃಪಃ ।

ಚಕಾರೇಷ್ಟಿಂ ತು ತದ್ಭಾರ್ಯ್ಯಾ ದ್ವಿಜಾಭ್ಯಾಮತ್ರ ಚಾsಹುತಾ ॥೧೮.೯೭ ॥

ದ್ರುಪದರಾಜ ಯಾಜ ಉಪಯಾಜರ ಕರೆತಂದ ,

ಯಾಗ ಮಾಡಿದ ಹತ್ತುಕೋಟಿ ಗೋದಾನಗಳಿಂದ .

ದ್ರುಪದಪತ್ನಿ ಕರೆಯಲ್ಪಟ್ಟಳು ಯಾಜ ಉಪಯಾಜರಿಂದ .

 

ದ್ರುಪದಾತ್ ಸುತಲಬ್ದ್ಯರ್ತ್ಥಂ ಸಾsಹಙ್ಕಾರಾದ್ ವ್ಯಳಮ್ಬಯತ್ ।

ಕಿಮೇತಯೇತ್ಯವಜ್ಞಾಯ ತಾವುಭೌ ವಿಪ್ರಸತ್ತಮೌ ॥೧೮.೯೮ ॥

ಅಜುಹ್ವತಾಂ ತತ್ ಪುತ್ರಾರ್ತ್ಥಂ ಪತ್ನ್ಯಾಃ ಪ್ರಾಶ್ಯಂ ಹವಿಸ್ತದಾ ।

ಹುತೇ ಹವಿಷಿ ಮನ್ತ್ರಾಭ್ಯಾಂ ವೈಷ್ಣವಾಭ್ಯಾಂ ತದೈವ ಹಿ ॥೧೮.೯೯ ॥

ದೀಪ್ತಾಙ್ಗಾರನಿಭೋ ವಹ್ನಿಃ ಕುಣ್ಡಮದ್ಧ್ಯಾತ್ ಸಮುತ್ಥಿತಃ ।

ಕಿರೀಟೀ ಕುಣ್ಡಲೀ ದೀಪ್ತೋ ಹೇಮಮಾಲೀ ವರಾಸಿಮಾನ್ ॥೧೮.೧೦೦ ॥

ರಥೇನಾsದಿತ್ಯವರ್ಣ್ಣೇನ ನದನ್ ದ್ರುಪದಮಾದ್ರವತ್ ।

ಧೃಷ್ಟತ್ವಾದ್ ದ್ಯೋತನತ್ವಾಚ್ಚ ಧೃಷ್ಟದ್ಯುಮ್ನ ಇತೀರಿತಃ ॥೧೮.೧೦೧ ॥

ಮುನಿಭಿರ್ದ್ದ್ರುಪದೇನಾಪಿ ಸರ್ವವೇದಾರ್ತ್ಥತತ್ವವಿತ್ ।

ಅನ್ವೇನಂ ಭಾರತೀ ಸಾಕ್ಷಾದ್ ವೇದಿಮದ್ಧ್ಯಾತ್ ಸಮುತ್ಥಿತಾ  ॥೧೮.೧೦೨ ॥

ದ್ರುಪದಪತ್ನಿಯಿಂದ ವಿಳಂಬ ಮಾಡಿಸಿತು ಅವಳ ಅಹಂಕಾರ ,

ಇವಳಿಂದೇನೆಂಬ ನಿರ್ಲಕ್ಷ್ಯದಿ ಹವಿಸ್ಸ ಮಾಡಿದರು ಅಗ್ನಿಗಾಹಾರ .

ವೈಷ್ಣವ ಮಂತ್ರಗಳಿಂದ ಹವಿಸ್ಸು ಹೋಮದ ಬೆಂಕಿಗೆ ಬಿದ್ದಾಗ ,

ಬೆಂಕಿಮೈಕಾಂತಿಯ ಅಗ್ನಿ ಕುಂಡಮಧ್ಯದಿಂದ ಎದ್ದು ಬಂದನಾಗ .

ಕಿರೀಟ ಕುಂಡಲ ಧರಿಸಿದವ ಸ್ವರ್ಣಮಾಲೆಯಿಂದ ಒಪ್ಪಿದ ,

ಕತ್ತಿಹಿಡಿದು ರಥವೇರಿ ಘರ್ಜಿಸುತ್ತ ದ್ರುಪದನ ಬಳಿಗೆ ಬಂದ .

ಅವನಾಗಿದ್ದ ಸಕಲ ವೇದತತ್ವಗಳ ತಿಳಿದ ಪಂಡಿತ ,

ಮುನಿ,ದ್ರುಪದರಿಂದ 'ದೃಷ್ಟದ್ಯುಮ್ನ' ಎಂದು ಕರೆಯಲ್ಪಟ್ಟಾತ.

ಆನಂತರ ಕುಂಡದಿಂದ ಬಂದದ್ದು ಸಾಕ್ಷಾತ್ ಭಾರತೀಮಾತ .

 

ಪ್ರಾಣೋ ಹಿ ಭರತೋ ನಾಮ ಸರ್ವಸ್ಯ ಭರಣಾಚ್ಛ್ರುತಃ ।

ತದ್ಭಾರ್ಯ್ಯಾ ಭಾರತೀ ನಾಮ ವೇದರೂಪಾ ಸರಸ್ವತೀ ॥೧೮.೧೦೩ ॥

ಎಲ್ಲರನ್ನೂ ಹೊತ್ತದ್ದರಿಂದ ಮುಖ್ಯಪ್ರಾಣಗೆ ಅನ್ನುತ್ತಾರೆ ಭರತ ,

ಭರತನ ಹೆಂಡತಿಯಾಗಿ ಕರೆಯಲ್ಪಡುತ್ತಾಳೆ ಭಾರತೀ -ಅಂತ .

ವೇದಮೈದಾಳಿ ಬಂದವಳಾದ್ದರಿಂದ ಅವಳು ಸರಸ್ವತೀ ಮಾತ .

 

ಶಂರೂಪಮಾಶ್ರಿತಾ ವಾಯುಂ ಶ್ರೀರಿತ್ಯೇವ ಚ ಕೀರ್ತ್ತಿತಾ ।

ಅವೇಶಯುಕ್ತಾ ಶಚ್ಯಾಶ್ಚ ಶ್ಯಾಮಳಾಯಾಸ್ತಥೋಷಸಃ  ॥೧೮.೧೦೪ ॥

ಆನಂದ ಮೈದಾಳಿಬಂದ, ಮುಖ್ಯಪ್ರಾಣಾಶ್ರಿತ -ಶ್ರೀ:- ಹೆಸರಿನವಳು ,

ಶಚಿದೇವಿ ಶ್ಯಾಮಳಾದೇವಿ ಉಷೆಯ ಆವೇಶದಿಂದ ಕೂಡಿದವಳು .

 

ತಾಶ್ಚೇನ್ದ್ರಧರ್ಮ್ಮನಾಸತ್ಯಸಂಶ್ರಯಾಚ್ಛ್ರಿಯ ಈರಿತಾಃ ।

ಸಾ ಕೃಷ್ಣಾ ನಾಮತಶ್ಚಾsಸೀದುತ್ಕೃಷ್ಟತ್ವಾದ್ಧಿ ಯೋಷಿತಾಮ್ ॥೧೮.೧೦೫ ॥

ಈ ಶಚಿ ಶ್ಯಾಮಳೆ ಉಷೆಯರು ,

ಇಂದ್ರ ಯಮ ಅಶ್ವಿದೇವತೆಗಳ ಆಶ್ರಿತರು.

ಅವರೂ ಶ್ರೀಯ: ಎಂದು ಕರೆಯಲ್ಪಡುವವರು.

ದ್ರುಪದನ ಯಜ್ಞಕುಂಡದಿಂದ ಎದ್ದು ಬಂದವಳು ,

ಶ್ರೇಷ್ಠ ಹೆಣ್ಣುಮಗಳಾದ ಕೃಷ್ಣಾ ಹೆಸರಿನವಳು .

 

ಕೃಷ್ಣಾ ಸಾ ವರ್ಣ್ಣತಶ್ಚಾsಸೀದುತ್ಕೃಷ್ಟಾನನ್ದಿನೀ ಚ ಸಾ ।

ಉತ್ಪತ್ತಿಶ್ಚ ಸರ್ವಜ್ಞಾ ಸರ್ವಾಭರಣಭೂಷಿತಾ ॥೧೮.೧೦೬ ॥

ಆ ತಾಯಿ ಬಣ್ಣದಿಂದಲೂ ಕೂಡಾ ಕೃಷ್ಣಾ ,

ಆನಂದಪ್ರದಾಯಕಳಾದ್ದರಿಂದ ಅವಳು ಕೃಷ್ಣಾ ,

ಎಲ್ಲ ಬಲ್ಲವಳು, ಹುಟ್ಟುವಾಗ ಧರಿಸಿದ್ದಳು ಸರ್ವಾಭರಣ.

 

ಸಮ್ಪ್ರಾಪ್ತಯೌವನೈವಾsಸೀದಜರಾ ಲೋಕಸುನ್ದರೀ ।

ಉಮಾಂಶಯುಕ್ತಾsತಿತರಾಂ ಸರ್ವಲಕ್ಷಣಸಂಯುತಾ ॥೧೮.೧೦೭ ॥

ಬಾಲ್ಯವಿರದ ಪೂರ್ಣಯುವತಿಯಾಗಿ ಬಂದವಳು ,

ಮುಪ್ಪಿರದ ಲೋಕಸುಂದರಿಯಾಗಿ ಇದ್ದವಳು ,

ಪಾರ್ವತಿ ಅಂಶ ಎಲ್ಲ ಸಲ್ಲಕ್ಷಣಗಳಿಂದ ಕೂಡಿದವಳು .

No comments:

Post a Comment

ಗೋ-ಕುಲ Go-Kula