ತ್ರಿಂಶಚ್ಛತಂ ಪರಮಕಾಃ ಸುರದುರ್ಲ್ಲಭಾಶ್ಚ ದುರ್ವಾಸಸೋ ಹಿ ಮನವೋsದ್ಯ ಮಯಾ ಗೃಹೀತಾಃ ।
ಅನ್ಯತ್ರ ತೇ ಪ್ರವಿಹಿತಾ
ನಹಿ ವೀರ್ಯ್ಯವನ್ತಃ ಸ್ಯುರ್ಭೀಮ ಇತ್ಯಹಮಮೂನ್ ನ ನಿಯೋಜಯಾಮಿ ॥೧೯.೧೬॥
ದೇವತೆಗಳಿಗೂ ಲಭ್ಯವಲ್ಲದ ಶ್ರೇಷ್ಠ ಮೂವತ್ತುನೂರು ಆ ಮಂತ್ರಗಳು ,
ನನ್ನಿಂದ ಗ್ರಹಿಸಲ್ಪಟ್ಟು ಅವುಗಳ ವೀರ್ಯ ಕುಂದದಂತೆ
ಕಾಪಾಡಲ್ಪಟ್ಟವುಗಳು .
ಭೀಮನಲ್ಲಿಯೇ ಆಗಬೇಕೆಂದು ಅವುಗಳ ಪೂರ್ಣ ವಿನಿಯೋಗ ,
ನಾನವುಗಳ ಬೇರೆಲ್ಲೂ ಬಳಸದೇ ಇಟ್ಟೀನಿ ಮಾಡದೇ ಉಪಯೋಗ .
ತೇ ವೀರ್ಯ್ಯದಾ ವಿಜಯದಾ
ಅಪಿ ವಹ್ನಿವಾರಿಸ್ತಮ್ಭಾದಿದಾಃ ಸಕಲದೇವನಿಕಾಯರೋಧಾಃ ।
ವೃಷ್ಟ್ಯಾದ್ಯಭೀಪ್ಸಿತಸಮಸ್ತಕರಾ
ಅಮೂಭಿರ್ಜ್ಜ್ಯೇಷ್ಯಾಮಿ ಭೀಮಮಮುಮೇಕಮಯಾತಯಾಮೈಃ ॥೧೯.೧೭॥
ಆ ವೀರ್ಯವತ್ತ ಮಂತ್ರಗಳು ವಿಶೇಷ ವಿಜಯ ಕೊಡುವಂಥವುಗಳು ,
ಬೆಂಕಿ ನೀರನ್ನೂ ತಡೆಯಬಲ್ಲ ಶಕ್ತಿ ಇರುವಂಥ ಅಪೂರ್ವಮಂತ್ರಗಳು .
ಈ ಮಂತ್ರಗಳು ಎಲ್ಲಾ ದೇವತೆಗಳನ್ನೂ ಎದುರಿಸಬಲ್ಲವು,
ಬೇಕಾದಾಗ ಮಳೆ,ಇನ್ಯಾವುದೇ
ಅಭೀಷ್ಟಗಳ ನೀಡಬಲ್ಲವು.
ಬಹಳ ಕಾಲಾನಂತರ ಬಳಸಿದರೆ ಅದು ಫಲ ನೀಡದು ,
ಈ ಸಿದ್ಧ ಮಂತ್ರಗಳಿಂದ ಭೀಮನಮೇಲೆ ಗೆಲುವು ನನ್ನದು.
ಸೌಹಾರ್ದ್ದಮೇಷು ಯದಿವಾsತಿತರಾಂ ಕರೋಷಿ ತತ್ರಾಪಿ ನೈವ ಹಿ ಮಯಾ ಕ್ರಿಯತೇ ವಿರೋಧಃ ।
ವತ್ಸ್ಯನ್ತು ವಾರಣವತೇ
ಭವತು ಸ್ಮ ರಾಷ್ಟ್ರಂ ತೇಷಾಂ ತದೇವ ಮಮ ನಾಗಪುರಂ ತ್ವದರ್ತ್ಥೇ ॥೧೯.೧೮॥
ಒಂದುವೇಳೆ ನೀನು ನಿನ್ನ ತಮ್ಮನ ಮಕ್ಕಳಲ್ಲಿ ತೋರಿದರೆ ಬಹಳ ಸ್ನೇಹ,
ಅದಕ್ಕಿರುವುದಿಲ್ಲ ನನ್ನ ಕಡೆಯಿಂದ ಯಾವುದೇ ತೆರನಾದ ವಿರೋಧಿಭಾವ .
ಅವರು ವಾರಣವತದಲ್ಲಿ ಮಾಡಲಿ ವಾಸ ,
ಆದರೆ ನಮ್ಮದಾಗಿರಲಿ ಹಸ್ತಿನಾವತಿ ದೇಶ .
ಏವಂ
ಸ್ವಪುತ್ರಪರಿಪಾಲನತೋ ಯಶಸ್ತೇ ಭೂಯಾದ್ ವಿನಶ್ಯತಿ ಪರಪ್ರಸವಾತಿಪುಷ್ಟೌ ।
ಜಾತೇ ಬಲೇ ತವ
ವಿರೋಧಕೃತಶ್ಚ ತೇ ಸ್ಯುಃ ಸ್ವಾರ್ತ್ಥಂ ಹಿ ತಾವದನುಯಾನ್ತ್ಯಪಿ ಕೇವಲಂ ತ್ವಾಮ್ ॥೧೯.೧೯॥
ಹೀಗೆ ನಿನ್ನ ಮಕ್ಕಳ ಗೌರವಿಸಿ ನೋಡು ,
ದೊರಕುತ್ತದೆ ನಿನಗೆ ಯಶಸ್ಸಿನ ಜಾಡು .
ಬೇರೊಬ್ಬರ ಮಕ್ಕಳ ನೀ ಗೌರವಿಸಿದರೆ ನಿನ್ನ ಯಶಸ್ಸು ನಾಶ ,
ಈಗ ಬಲವಿರದ ಪಾಂಡವರು ನಿನಗೆ ತಗ್ಗಿಬಗ್ಗುವುದದು ವೇಷ .
ಬಲವಂತರಾದಮೇಲೆ ಅವರದು ಎದುರು ಬೀಳುವ ನೀತಿ ,
ತಮ್ಮ ಸ್ವಾರ್ಥಸಾಧನೆವರೆಗೆ ಮೃದುನಿಲುವು ಅವರ ರೀತಿ .
ಕ್ಷತ್ತೈಕ ಏವ ಸತತಂ
ಪರಿಪೋಷಕೋsಲಂ ತೇಷಾಂ
ಮಮ ದ್ವಿಡಥ ಮನ್ತ್ರಬಲಾದಮುಷ್ಯ ।
ಪೌರಾಶ್ಚ ಜಾನಪದಕಾಃ
ಸತತಂ ದ್ವಿಷನ್ತಿ ಮಾಂ ತೇಷ್ವತೀವ ದೃಢಸೌಹೃದಚೇತಸಶ್ಚ ॥೧೯.೨೦॥
ನನ್ನ ವಶವಾಗದ ಒಬ್ಬನೇ ಒಬ್ಬನೆಂದರೆ ಅವನು ವಿದುರ ,
ಅವನು ಮಾಡುತ್ತಾನೆ ಪಾಂಡವರ ಪೋಷಣೆ ಮತ್ತಾದರ .
ಅವನಿಗೆ ನನ್ನಲ್ಲಿದೆ ದ್ವೇಷ ,
ಶಕ್ತಿಯುತ ಅವನ ಮಂತ್ರಪಾಶ .
ಅವನ ಮಂತ್ರಶಕ್ತಿಯಿಂದ ಪಟ್ಟಣಿಗರು ಹಳ್ಳಿಗರಿಗೆ ದ್ವೇಷ ನನ್ನಲ್ಲಿ ,
ತದ್ವಿರುದ್ಧ ಅತ್ಯಂತ ಭದ್ರವಾದ ಸ್ನೇಹ ಇಟ್ಟಿದ್ದಾರೆ ಪಾಂಡವರಲ್ಲಿ.
ತೇ ತೇಷು ದೂರಗಮಿತೇಷು
ನಿರಾಶ್ರಯತ್ವಾನ್ಮಾಮೇವ ದುರ್ಬಲತಯಾ ಪರಿತಃ ಶ್ರಯನ್ತೇ ।
ಭೀಷ್ಮಾದಯಶ್ಚ ನಹಿ
ತನ್ನಿಕಟೇ ವಿರೋಧಂ ಕುರ್ಯ್ಯುರ್ವಿನಶ್ಯತಿ ಗತೇಷು ಹಿ ಸೌಹೃದಂ ತತ್ ॥೧೯.೨೧॥
ಅವರೆಲ್ಲರಿಂದಲೂ ಪಾಂಡವರಾದಮೇಲೆ ದೂರ ,
ನಿಶ್ಯಕ್ತರಾದವರಿಗೆ ನನ್ನಾಶ್ರಯವು ಅನಿವಾರ್ಯ .
ಪಾಂಡವರು ಇಲ್ಲಿದ್ದಾಗ ಭೀಷ್ಮಾದಿಗಳಿಂದ ನನ್ನ ವಿರೋಧ ,
No comments:
Post a Comment
ಗೋ-ಕುಲ Go-Kula