Wednesday 23 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 57 62

 ಹತ್ವೈವ ಶರ್ವವರರಕ್ಷಿತರಾಕ್ಷಸಂ ತಂ ಸರ್ವೈರವದ್ಧ್ಯಮಪಿ ಸೋದರಮಾತೃಯುಕ್ತಃ ।

ಭೀಮೋ ಯಯೌ ತಮನು ಸಾ ಪ್ರಯಯೌ ಹಿಡಿಮ್ಬೀ ಕುನ್ತೀಂ ಯುಧಿಷ್ಠಿರಮಥಾಸ್ಯ ಕೃತೇ ಯಯಾಚೇ ॥೧೯.೫೭॥

ರುದ್ರವರಬಲದಿಂದ ರಕ್ಷಿತ ಎಲ್ಲರಿಂದ ಅವಧ್ಯನಾಗಿದ್ದ ಆ ರಕ್ಕಸ ಹಿಡಿಂಬಾಸುರ ,

ಭೀಮ ತನ್ನ ಸೋದರರು ತಾಯಿಯೊಡನೆ ಮುನ್ನಡೆದ ಮುಗಿಸಿ ಅವನ ಸಂಹಾರ .

ತಂಗಿ ಹಿಡಿಂಬಿಯಿಂದ ಭೀಮಸೇನನ ಹಿಂಬಾಲಿಸುವಿಕೆ,

ಕುಂತಿ ಧರ್ಮರಾಜರಲ್ಲಿ ಭೀಮಗಾಗಿ ಇಟ್ಟಳು ಬೇಡಿಕೆ .

 

ತಾಭ್ಯಾಮನೂಕ್ತಮಪಿ  ಯನ್ನ ಕರೋತಿ ಭೀಮಃ ಪ್ರಾದುರ್ಬಭೂವ ನಿಖಿಲೋರುಗುಣಭಿಪೂರ್ಣ್ಣಃ ।

ವ್ಯಾಸಾತ್ಮಕೋ ಹರಿರನನ್ತಸುಖಾಮ್ಬುರಾಶಿರ್ವಿದ್ಯಾಮರೀಚಿವಿತತಃ ಸಕಲೋತ್ತಮೋsಲಮ್॥೧೯.೫೮॥

ಧರ್ಮರಾಜ ಮತ್ತು ಕುಂತಿ ಪದೇಪದೇ ಭೀಮಸೇನಗೆ ಆ ಮಾತನ್ನು ಹೇಳಿದರು ,

ಅವನು ಕೇಳದಾದಾಗ ಗುಣಭರಿತ ಸುಖಸಾಗರ ವಿದ್ಯಾಪುಂಜ ವೇದವ್ಯಾಸರು ,

ಸರ್ವೋತ್ತಮ ನಾರಾಯಣ ಸರ್ವಾಂತರ್ಯಾಮಿ ಆದವರು ಅಲ್ಲಿ ಕಾಣಿಸಿಕೊಂಡರು.

 

ದೃಷ್ಟ್ವೈವ ತಂ ಪರಮಮೋದಿನ ಆಶು ಪಾರ್ತ್ಥಾ ಮಾತ್ರಾ ಸಹೈವ ಪರಿಪೂಜ್ಯ ಗುರುಂ ವಿರಿಞ್ಚೇಃ।

ಉಲ್ಲಾಳಿತಾಶ್ಚ  ಹರಿಣಾ ಪರಮಾತಿಹಾರ್ದ್ದಪ್ರೋತ್ಪುಲ್ಲಪದ್ಮನಯನೇನ ತದೋಪವಿಷ್ಟಾಃ ॥೧೯.೫೯॥

ತಾಯಿ ಕುಂತಿಯ ಜೊತೆಗೆ ಭಗವಂತನ ಕಂಡು ಸಂತಸಪಟ್ಟ ಪಾಂಡವರು,

ಬ್ರಹ್ಮೋಪದೇಶಕನ ಅರ್ಚಿಸಿ ಪ್ರೀತಿ ಸ್ನೇಹದ ದೃಷ್ಟಿಬೀರಿದವನ ಬಳಿ ಕೂತರು.

 

ತಾನ್ ಭಕ್ತಿತನಮ್ರಶಿರಸಃ ಸಮುದೀಕ್ಷ್ಯ ಕೃಷ್ಣೋ ಭೀಮಂ ಜಗಾದ ನತ ಆಶು ಹಿಡಿಮ್ಬಯಾ ಚ ।

ಏತಾಂ ಗೃಹಾಣ ಯುವತೀಂ  ಸುರಸದ್ಮಶೋಭಾಂ ಜಾತೇ ಸುತೇ ಸಹಸುತಾ ಪ್ರತಿ ಯಾತು ಚೈಷಾ ॥೧೯.೬೦॥

ಅವರ ಭಕ್ತಿನಮಸ್ಕಾರ ಸ್ವೀಕರಿಸಿದ ವೇದವ್ಯಾಸರು ,

ಹಿಡಿಂಬಿಯಿಂದಲೂ ವಂದಿಸಲ್ಪಟ್ಟು ಭೀಮಗ್ಹೇಳಿದರು.

ದೇವತೆಯಂತೆ ಕಾಣುವ ಇವಳ ಮದುವೆಯಾಗು ಭೀಮ ,

ಮಗುವಾದಮೇಲೆ ಇವಳು ನಿನ್ನಿಂದ ಹೊರಡುವದು ನೇಮ .

 

ಏವಂ ಬ್ರುವತ್ಯಗಣಿತೋರುಗುಣೇ ರಮೇಶ ಓಮಿತ್ಯುದೀರ್ಯ್ಯ ಕೃತವಾಂಶ್ಚ  ತಥೈವ ಭೀಮಃ ।

ಸ್ಕನ್ಧೇನ ಚೋಹ್ಯ ವಿಬುಧಾಚರಿತಪ್ರದೇಶಾನ್ ಭೀಮಂ ಪ್ರಯಾತ್ಯುದಯ ಏವ ರವೇರ್ಹಿಡಿಮ್ಬೀ ॥೧೯.೬೧॥

ಹೀಗೆ ಗುಣಸಾಗರ ರಮೇಶ ಭೀಮಸೇನಗೆ ಹೇಳಿದ ,

ಭೀಮ ಆಯಿತೆಂದು ಹೇಳಿ ಅದರಂತೆಯೇ ಮಾಡಿದ .

ಸೂರ್ಯೋದಯವಾಗುತ್ತಿದ್ದಂತೆ ಗಂಡ ಭೀಮನ ಹೆಗಲೇರಿದವಳು ,

ದೇವತೆಗಳು ಓಡಾಡುವ ಪ್ರದೇಶಗಳಲ್ಲೆಲ್ಲಾ ವಿಹರಿಸುತ್ತಿದ್ದಳು .

 

ಸ ನನ್ದನಾದಿಷು ವನೇಷು ವಿಹೃತ್ಯ ತೇನ ಸಾಯಂ ಪ್ರಯಾತಿ ಪೃಥಯಾ ಸಹಿತಾಂಶ್ಚ ಪಾರ್ತ್ಥಾನ್ ।

ಏವಂ ಯಯಾವಪಿ ತಯೋರಿಹ ವತ್ಸರಾರ್ದ್ಧೋ ಜಾತಶ್ಚ ಸೂನುರತಿವೀರ್ಯ್ಯಬಲೋಪಪನ್ನಃ ॥೧೯.೬೨॥

ಹಿಡಿಂಬಿ, ದೇವಉದ್ಯಾನವಾದ ನಂದನವನ ಮುಂತಾದೆಡೆ ಮಾಡಿ ವಿಹಾರ ,

ಬಂದುಸೇರುತ್ತಿದ್ದಳು ಸಂಜೆಯಾಗುತ್ತಿದ್ದoತೆ ಕುಂತಿ ಪಾಂಡವರಿದ್ದ ಆ ಬಿಡಾರ .

ಹೀಗೆ ಕಳೆಯಿತು ಅವರಿಬ್ಬರಲ್ಲಿ ಆರು ತಿಂಗಳ ದಾಂಪತ್ಯ ,

ಮುಂದೆ ಹುಟ್ಟಿದ ಮಗನಾಗಿದ್ದ ಅತಿವೀರ್ಯ ಬಲವಂತ.

No comments:

Post a Comment

ಗೋ-ಕುಲ Go-Kula