Monday, 14 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 11 - 15

 ಏವಂ ಬ್ರುವತ್ಯಪಿ ನೃಪೇ ಪುನರಾಹ ಪಾಪ ಆಶ್ರಿತ್ಯ ಸೌಬಲಮತಂ ಯದಿ ನೈವ ಪಾರ್ತ್ಥಾನ್ ।

ಅನ್ಯತ್ರ ಯಾಪಯಸಿ ನಾಗಪುರಾತ್ ಪರೇತಾನ್ ದೃಷ್ಟ್ವಾsಖಿಲಾನಾಪಿ ಹಿ ನೋ ಮುದಮೇಹಿ ಪಾರ್ತ್ಥೈಃ ॥೧೯.೧೧॥

ಹೀಗೆ ಧೃತರಾಷ್ಟ್ರ ತನ್ನ ಮಗ ದುರ್ಯೋಧನನಿಗೆ ಹೇಳಿದರೂ ಬುದ್ಧಿವಾದ ,

ಪಾಪಿಷ್ಥ ದುರ್ಯೋಧನ ಇಡುವ ಶಕುನಿಅಭಿಪ್ರಾಯದ ತನ್ನ ವಾದ .

ಒಂದುವೇಳೆ ಪಾಂಡವರ ಹಸ್ತಿನಾವತಿಯಿಂದ ಬೇರೆಡೆ ಕಳಿಸದಿರೆ ನೀನು ,

ನಮ್ಮ ಸಾವನ್ನು ನೋಡಿ ಪಾಂಡವರೊಡನೆ ಅನುಭವಿಸುಸಂತಸದ ಜೇನು.

 

ಏವಂ ನಿಶಮ್ಯ ಗದಿತಂ ಸುತಹಾರ್ದ್ದಪಾಶೈರಾಕೃಷ್ಯತಾsಶು ಸ ನೃಪೋsರಿಧರೇಚ್ಛಯೈವ ।

ಪ್ರೋವಾಚ ಪುತ್ರಮಪಿ ತೇ ಬಲಿನೋ ನ ಪಾರ್ತ್ಥಾಃ ಶಕ್ಯಾಃ ಪುರಾತ್ ತನಯ ಯಾಪಯಿತುಂ ಕಥಞ್ಚಿತ್॥೧೯.೧೨॥

ಈ ರೀತಿ ದುರ್ಯೋಧನನ ಮಾತ ಕೇಳಿದ ಧೃತರಾಷ್ಟ್ರನ ಮನ ,

ಪುತ್ರವ್ಯಾಮೋಹದಿ ಬಂಧಿತನಾಗಿ ಆದ ತಾನೂ ಮಗನ ಅಧೀನ .

ಧೃತರಾಷ್ಟ್ರ ಹೇಳುವ -ಪಾಂಡವರು ಬಲು ಬಲಾಢ್ಯ ,

ನಗರದಿಂದವರನ್ನು ಹೊರಗಟ್ಟುವುದು ಹೇಗೆ ಸಾಧ್ಯ .

 

ಇತ್ಯುಕ್ತ ಆಹ ಪಿತರಂ ಶಕುನಿಂ ನಿರೀಕ್ಷ್ಯ ಸೃಷ್ಟೋ ಮಯಾ ವಿಧಿರಿಹಾದ್ಯ ಶೃಣುಷ್ವ ತಂ ಚ ।

ಆಸಂಸ್ತ್ರಯೋದಶ ಸಮಾ ನಗರಂ ಪ್ರವಿಷ್ಟೇಷ್ವೇತೇಷು ತಾವದಯಮೇವ ವಿಧಿರ್ಮ್ಮಯೇಷ್ಟಃ॥೧೯.೧೩ ॥

ಈ ತೆರನಾಗಿ ಧೃತರಾಷ್ಟ್ರನ ಮಾತ ಕೇಳಿದ ದುರ್ಯೋಧನ ಶಕುನಿಯ ನೋಡುತ್ತಾ ಹೇಳುವ ,

ಅವರು ಬಂದ ಹದಿಮೂರು ವರ್ಷಗಳಿಂದಲೂ ನನ್ನಲ್ಲಿದೆ ಪಾಂಡವರ ಹೊರಹಾಕುವ ಉಪಾಯ .

 

ದ್ರೌಣೇರ್ಹಿ ನಾಸ್ತಿ ಸದೃಶೋ ಬಲವಾನ್ ಪ್ರತಾಪೀ ಸೋsಯಂ ಮಯಾ ಬಹುವಿಧೈಃ ಪರಮೈರುಪಾಯೈಃ ।

ನೀತೋ ವಶಂ ವಶಗತೋsಸ್ಯ ಚ ಮಾತುಲೇನ ಸಾಕಂ ಪಿತಾ ತಮನು ಚೈಷ ನದೀಪ್ರಸೂತಃ ॥೧೯.೧೪॥

ಅಶ್ವತ್ಥಾಮ ಭಾರೀ ಪರಾಕ್ರಮಿ ಸಾಟಿಯಿರದ ವೀರ ,

ಅವನ ಸೋದರಮಾವ ಕೃಪ ನನ್ನ ವಶ ಅವನ ದ್ವಾರ .

ಅವರನ್ನನುಸರಿಸಿ ಬರುತ್ತಾರೆ ದ್ರೋಣಾಚಾರ್ಯ ,

ದ್ರೋಣರನುಸರಿಸಿ ಬರುತ್ತಾರೆ ಭೀಷ್ಮಾಚಾರ್ಯ .

 

ಏವಂ ಹಿ ಸೈನಿಕಗಣಾ ಅಪಿ ದಾನಮಾನೈಃ ಪ್ರಾಯೋ ವಶಂ ಮಮ ಗತಾ ಅಪಿ ಚೈಷ ಕರ್ಣ್ಣಃ ।

ಅಸ್ತ್ರೇ ಬಲೇsಪ್ಯಧಿಕ ಏವ ಸುರೇನ್ದ್ರಸೂನೋರ್ಜ್ಜ್ಯೇಷ್ಯೇ ಚ ಮನ್ತ್ರಬಲತಸ್ತ್ವಹಮೇವ ಭೀಮಮ್॥೧೯.೧೫॥

ಸೈನಿಕರ ವಶಪಡಿಸಿಕೊಂಡಿದ್ದೇನೆ ಇತ್ತವರಿಗೆ ವಿಶೇಷ ಅನುದಾನ ,

ಅಸ್ತ್ರ ಬಲದಲ್ಲಿ ಅರ್ಜುನನನ್ನು ಮೀರಿಸಿ ನಿಲ್ಲುತ್ತಾನೆ ಅವ ಕರ್ಣ .

ಕರ್ಣನಿಂದ ಸೋಲಲ್ಪಡುತ್ತಾನೆ ಅರ್ಜುನ ,

ಮಂತ್ರಬಲದಿ ಸೋಲಿಸುವೆ ನಾ ಭೀಮನನ್ನ .

[Contributed by Shri Govind Magal]

No comments:

Post a Comment

ಗೋ-ಕುಲ Go-Kula