Tuesday, 22 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 49 - 56

[ಯಾರು ಈ ಹಿಡಿಮ್ಬೀ? ಅವಳ ಹಿನ್ನೆಲೆಯ ಕುರಿತು ವಿವರಿಸುತ್ತಾರೆ]

ಸಾ ರಾಕ್ಷಸೀತನುಮವಾಪ ಸುರೇನ್ದ್ರಲೋಕಶ್ರೀರೇವ ಶಕ್ರದಯಿತಾ ತ್ವಪರೈವ ಶಚ್ಯಾಃ ।

ಶಾಪಾತ್ ಸ್ಪೃಧಾ ಪತಿಮವಾಪ್ಯ ಚ ಮಾರುತಂ ಸಾ ಪ್ರಾಪ್ತುಂ ನಿಜಾಂ ತನುಮಯಾಚತ ಭೀಮಸೇನಮ್ ॥೧೯.೪೯ ॥

ಅವಳು ಇಂದ್ರಲೋಕ ಅಮರಾವತಿಯ ಸಂಪತ್ತಿನ ಅಭಿಮಾನಿ ದೇವತೆ ,

ಶ್ರೀ ಹೆಸರಿಂದ ಇಂದ್ರಪತ್ನಿಯಾಗಿ ಶಚಿಯಿಂದ ಶಪಿಸಲ್ಪಟ್ಟ ಶಾಪಗ್ರಸ್ತೆ .

ಶಚಿಯ ಮೇಲೆ ಸ್ಪರ್ಧೆ ಮಾಡಿ ಅವಳ ಶಾಪದಿಂದ ಆಗಿದ್ದ ರಾಕ್ಷಸಿ ,

ವಾಯುಪತ್ನಿಯಾಗಿ ಸೇರಲು ಭೀಮನ ಬೇಡಿದಳು ಬಿಡುಗಡೆ ಬಯಸಿ .

 

ತಾಂ ಭೀಮ ಆಹ ಕಮನೀಯತನುಂ ನ ಪೂರ್ವಂ ಜ್ಯೇಷ್ಠಾದುಪೈಮಿ ವನಿತಾಂ ನಹಿ ಧರ್ಮ್ಮ ಏಷಃ ।

ಸಾ ಚಾsಹ ಕಾಮವಶಗಾ ಪುನರೇತದೇವ ಸ್ವಾವೇಶಯುಗ್ಘಿ  ಮರುದಗ್ರ್ಯಪರಿಗ್ರಹಸ್ಯ ॥೧೯.೫೦॥

ಅತ್ಯಂತ ಚೆಲುವೆಯಾದ ಅವಳಿಗೆ ಭೀಮಸೇನ ಹೇಳುತ್ತಾನೆ ,

ಅಣ್ಣನಿಗಿಂತ ಮೊದಲು ತನ್ನ ಮದುವೆ ಧರ್ಮವಲ್ಲ ಎನ್ನುತ್ತಾನೆ .

ಮತ್ತೆ ಮತ್ತೆ ಭೀಮನ ಬೇಡಿದವಳಾಗಿದ್ದಳು ಕಾಮಪೀಡಿತ ,

ಮರೆಯುವಂತಿಲ್ಲ ಅವಳು ಭಾರತೀದೇವಿಯ ಆವೇಶಯುಕ್ತ .

 

ಸಾ ಭಾರತೀ ವರಮಿಮಂ ಪ್ರದದಾವಮುಷ್ಯೈ ಸ್ವಾವೇಶಮಾತ್ಮದಯಿತಸ್ಯ ಚ ಸಙ್ಗಮೇನ ।

ಶಾಪಾದ್ ವಿಮುಕ್ತಿಮತಿತೀವ್ರತಪಃಪ್ರಸನ್ನಾ ತೇನಾsಹ ಸಾ ನಿಜತನುಂ ಪವಮಾನಸೂನೋಃ ॥೧೯.೫೧॥

ಭಾರತೀದೇವಿಯಿಂದ ಅವಳು ಪಡೆದಿದ್ದಳು ಈ ಕೆಳಗಿನ ವರ ,

ನನ್ನಾವೇಶ ನಿನ್ನಲ್ಲಿದ್ದು ನಿನ್ನ ವಿಶಾಪವದು ನನ್ನ ಗಂಡನ ದ್ವಾರ .

ಆಗಲೇಬೇಕಿತ್ತು ಅವಳಿಗೆ ಭೀಮಸೇನನ ಸಂಗ ,

ಅದಕ್ಕೆಂದೇ ಮುಖ್ಯಪ್ರಾಣಾವತಾರಿಯ ಬೇಡಿದಳಾಗ.

 

ಜ್ಞಾನಂ ಚ ನೈಜಮಭಿದರ್ಶಯಿತುಂ ಪುನಶ್ಚ ಪ್ರಾಹೇಶ್ವರೋsಖಿಲಜಗದ್ಗುರುರಿನ್ದಿರೇಶಃ ।

ವ್ಯಾಸಸ್ವರೂಪ ಇಹ ಚೇತ್ಯ ಪರಶ್ವ ಏವ ಮಾಂ ತೇ ಪ್ರದಾಸ್ಯತಿ ತದಾ ಪ್ರಕರೋಷಿ      ಮೇsರ್ತ್ಥ್ಯಮ್ ॥೧೯.೫೨॥

ಹಿಡಿಂಬಿ ತೋರುತ್ತಾಳೆ ತನ್ನ ಸ್ವಾಭಾವಿಕ ಭವಿಷ್ಯತ್ ಜ್ಞಾನ ,

ನಾಡಿದ್ದೇ ವ್ಯಾಸರೂಪೀ ಭಗವಂತ ಕೊಡುತ್ತಾನೆ ನಿನಗೆ ನನ್ನನ್ನ .

ಆಗ ಈಡೇರಿಸುತ್ತೀರಿ ನೀವು ನಾನು ನಿಮ್ಮಲ್ಲಿಟ್ಟ ಆ ಬೇಡಿಕೆಯನ್ನ.

 

ಕಾಲೇ ತದೈವ ಕುಪಿತಃ ಪ್ರಯಯೌ ಹಿಡಿಮ್ಬೋ ಭೀಮಂ ನಿಹನ್ತುಮಪಿ ತಾಂ ಚ ನಿಜಸ್ವಸಾರಮ್ ।

ಭಕ್ಷಾರ್ತ್ಥಮೇವ ಹಿ ಪುರಾ ಸ ತು ತಾಂ ನ್ಯಯುಙ್ಕ್ತ ನೇತುಂ ಚ ತಾನಥ ಸಮಾಸದದಾಶು ಭೀಮಮ್ ॥೧೯.೫೩॥

ತಿನ್ನಲು 'ಅವರನ್ನು ತಾ' ಎಂದು ತಂಗಿಯ ಹಿಡಿಂಬ ಕಳಿಸಿದ್ದ ,

ತಂಗಿ ಮರಳದಿರಲು ತಾನೇ ಕೋಪದಿಂದ ಅಲ್ಲಿಗೆ ಧಾವಿಸಿದ .

ತಂಗಿಯ ಮತ್ತು ಭೀಮನ ಕೊಲ್ಲಲು ಅವನು ನುಗ್ಗಿದ ,

ಆನಂತರದಿ ಬೇಗ ಅವನು ಭೀಮಸೇನನ ಹೊಂದಿದ .

 

ಸಾ ಭೀಮಮೇವ ಶರಣಂ ಪ್ರಜಗಾಮ ತಾಂ ಚ ಭ್ರಾತೄಂಶ್ಚ ಮಾತರಮಥಾವಿತುಮಭ್ಯಯಾತ್ ತಮ್।

ಭೀಮಃ ಸುದೂರಮಪಕೃಷ್ಯ ಸಹೋದರಾಣಾಂ ನಿದ್ರಾಪ್ರಭಙ್ಗಭಯತೋ ಯುಯುಧೇsಮುನಾ ಚ ॥೧೯.೫೪॥

ಆಗ ಹಿಡಿಂಬಿ ಬಯಕೆಯಂತೆ ಭೀಮಸೇನನೇ ಅವಳ ರಕ್ಷಕನಾದ ,

ಅವಳ, ಸೋದರರ, ತಾಯಿಯ ರಕ್ಷಿಸಲು ರಕ್ಕಸಗವ ಎದುರಾದ .

ಮಲಗಿದ್ದ ತನ್ನವರಿಗೆ ಆಗದಿರಲಿ ಎಂದು ನಿದ್ರಾಭಂಗ ,

ಹಿಡಿಂಬನ ಸೆಳೆದೊಯ್ದು ಯುದ್ಧ ಮಾಡಿದ ಪ್ರಸಂಗ .

 

ತೌ ಮುಷ್ಟಿಭಿಸ್ತರುಭಿರಶ್ಮಭಿರದ್ರಿಭಿಶ್ಚ ಯುಧ್ವಾ ನಿತಾನ್ತರವತಃ  ಪ್ರತಿಬೋಧಿತಾಂಸ್ತಾನ್ ।

ಸಞ್ಚಕ್ರತುಸ್ತದನು ಸೋದರಸಮ್ಭ್ರಮಂ ತಂ ದೃಷ್ಟ್ವೈವ ಮಾರುತಿರಹನ್ನುರಸಿ ಸ್ಮ ರಕ್ಷಃ ॥೧೯.೫೫॥

ಮುಷ್ಟಿ, ಮರ, ಬಂಡೆ, ಗುಡ್ಡಗಳಿಂದ ಅವರಿಬ್ಬರ ಯುದ್ಧ ,

ಮಲಗಿದವರೆಲ್ಲಾ ಎಚ್ಚರಗೊಂಡರು ಆ ಭಾರೀ ಶಬ್ದದಿಂದ .

ಭೀಮ ಗಮನಿಸುತ್ತಾ ತನ್ನ ಸೋದರರ ಉದ್ವೇಗ ,

ರಕ್ಕಸನ ಎದೆಯಮೇಲೆ ಪ್ರಹಾರ ಮಾಡಿದನಾಗ .

 

ತದ್ ಭೀಮಬಾಹುಬಲತಾಡಿತಮೀಶವಾಕ್ಯಾತ್ ಸರ್ವೈರಜೇಯಮಪಿ ಭೂಮಿತಳೇ ಪಪಾತ ।

ವಕ್ತ್ರಸ್ರವದ್ಬಹುಲಶೋಣಿತಮಾಪ ಮೃತ್ಯುಂ ಪ್ರಾಯಾತ್ ತಮೋsನ್ಧಮಪಿ ನಿತ್ಯಮಥಕ್ರಮೇಣ ॥೧೯.೫೬॥

ಅಜೇಯನ ಮಾಡಿತ್ತು ಹಿಡಿಂಬ ರಕ್ಕಸನ ರುದ್ರನ ವರಬಲ ,

ರಕ್ತ ಕಕ್ಕಿಸಿ ಸಾವನಪ್ಪಿಸಿತ್ತು (ವಾಯು )ಭೀಮನ ತೋಳ್ಬಲ ,

ನಂತರ ಅಂಧಂತಮಸ್ಸಿಗೆ ಒಯ್ದು ಸೇರಿಸಿತವನ ಆ ಕಾಲ .

[Contributed by Shri Govind Magal]

No comments:

Post a Comment

ಗೋ-ಕುಲ Go-Kula