Thursday, 3 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 122 - 128

 ತದಾssಸೀನ್ಮುದ್ಗಲೋ ನಾಮ ಮುನಿಸ್ತಪಸಿ ಸಂಸ್ಥಿತಃ ।

ಚಕಮೇ ಪುತ್ರಿಕಾಂ ಬ್ರಹ್ಮೇತ್ಯಶೃಣೋತ್ ಸ ಕಥಾನ್ತರೇ ॥೧೮.೧೨೨॥

ಆಗ ಮುದ್ಗಲ ಎಂಬ ಋಷಿ ತಪಸ್ಸು ಮಾಡುತ್ತಿದ್ದ ,

ಉಪನಿಷತ್ತಿನ ಯಾವುದೋ ಒಂದು ಕಥೆಯಿಂದ ,

ಬ್ರಹ್ಮ ತನ್ನ ಮಗಳನ್ನೇ ಬಯಸಿದ ಎಂದು ಕೇಳಿದ .

 

ಅಪಾಹಸತ್ ಸೋsಬ್ಜಯೋನಿಂ ಶಶಾಪೈನಂ ಚತುರ್ಮ್ಮುಖಃ ।

ಭಾರತ್ಯಾದ್ಯಾಃ ಪಞ್ಚ ದೇವೀರ್ಗ್ಗಚ್ಛ ಮಾನಿನ್ನಭೂತಯೇ ॥೧೮.೧೨೩॥

ಮುದ್ಗಲ ಬ್ರಹ್ಮನನ್ನೇ ಅಪಹಾಸ್ಯ ಮಾಡಿದ ,

ಆಗ ಬ್ರಹ್ಮನಿಂದ ಅವನು ಶಾಪಕ್ಕೊಳಗಾದ .

ನಾನೇ ಮಹಾ ಧರ್ಮಿಷ್ಥನೆಂಬ ಭಾರೀ ಗರ್ವ ನಿನ್ನದು ,

ನಿನ್ನ ಪತನಕ್ಕೆ ಭಾರತಿ ಮುಂತಾದ ಪಂಚದೇವಿಯರ ಹೊಂದು.

 

ಇತೀರಿತಸ್ತಂ ತಪಸಾ ತೋಷಯಾಮಾಸ ಮುದ್ಗಲಃ ।

ಶಾಪಾನುಗ್ರಹಮಸ್ಯಾಥ ಚಕ್ರೇ ಕಞ್ಜಸಮುದ್ಭವಃ ॥೧೮.೧೨೪॥

ಮುದ್ಗಲನಿಂದ ಬ್ರಹ್ಮನ ತೃಪ್ತಿಪಡಿಸಲು ತಪ ,

ನಂತರ ಬ್ರಹ್ಮನಿಂದ ಮುದ್ಗಲಗಾಯಿತು ವಿಶಾಪ .

 

ನ ತ್ವಂ ಯಾಸ್ಯಸಿ ತಾ ದೇವೀರ್ಮ್ಮರುತಸ್ತ್ವಚ್ಛರೀರಗಃ ।

ಯಾಸ್ಯತಿ ತ್ವಂ ಸದಾ ಮೂರ್ಚ್ಛಾಂ ಗತೋ ನೈವ ವಿಬುದ್ಧ್ಯಸೇ ॥೧೮.೧೨೫॥

ನಚ ಪಾಪಂ ತತಸ್ತೇ ಸ್ಯಾದಿತ್ಯುಕ್ತೇ ಚೈನಮಾವಿಶತ್ ।

ಮಾರುತೋsಥೇನ್ದ್ರಸೇನಾಂ ಚ ಗೃಹೀತ್ವಾsಥಾಭವದ್ ಗೃಹೀ ॥೧೮.೧೨೬॥

ನಿನ್ನಿಂದ ಆಗುವುದಿಲ್ಲ ಆ ದೇವಿಯರ ಸಂಗ ,

ನಿನ್ನ ದೇಹದಲ್ಲಿದ್ದು ಪ್ರಾಣ ಮಾಡುವ ಅವರ ಸಂಗ .

ನಿನಗೆ ಸದಾ ಇರುತ್ತದೆ ಮೂರ್ಛೆಯ ಸ್ಥಿತಿ ,

ನಿನಗಿರುವುದಿಲ್ಲ ಯಾವ ಪಾಪಲೇಪದ ಭೀತಿ .

ಈ ತೆರನಾಗಿ ಹೇಳಿದಾಗ ಮುಖ್ಯಪ್ರಾಣನಿಂದ ಆಯಿತು ಮುದ್ಗಲನ ದೇಹಪ್ರವೇಶ ,

ಹಾಗೆ ಹೊಕ್ಕವನು ಇಂದ್ರಸೇನೆಯ ಮದುವೆಯಾಗಿ ಧರಿಸಿದ ಗೃಹಸ್ಥನ ವೇಷ .

 

ರೇಮೇ ಚ ಸ ತಯಾ ಸಾರ್ದ್ಧಂ ದೀರ್ಘಕಾಲಂ ಜಗತ್ಪ್ರಭುಃ ।

ತತೋ ಮುದ್ಗಲಮುದ್ಬೋದ್ಧ್ಯ ಯಯೌ ಚ ಸ್ವಂ ನಿಕೇತನಮ್ ॥೧೮.೧೨೭॥

ಮುಖ್ಯಪ್ರಾಣ ಜಗದೊಡೆಯನಾಗಿ ಬಹುಕಾಲ ಅವಳೊಂದಿಗೆ ಕ್ರೀಡಿಸಿದ ,

ಆನಂತರ ಮುದ್ಗಲನ ಎಚ್ಚರಿಸಿ ಆ ದೇಹದಿಂದ ಹೊರ ಹೊರಟು ಹೋದ .

 

ತತೋ ದೇಶಾನ್ತರಂ ಗತ್ವಾ ತಪಶ್ಚಕ್ರೇ ಸ ಮುದ್ಗಲಃ ।

ಸೇನ್ದ್ರಸೇನಾ ವಿಯುಕ್ತಾsಥ ಭರ್ತ್ತ್ರಾ ಚಕ್ರೇ ಮಹತ್ ತಪಃ ॥೧೮.೧೨೮॥

ಮುದ್ಗಲ ದೇಶಾಂತರ ಹೋಗಿ ತಪಸ್ಸನ್ನು ಆಚರಿಸಿದ ,

ಮಹಾತಪದಾಚರಣೆ ಗಂಡ ತೊರೆದ ಇಂದ್ರಸೇನೆಯಿಂದ .

No comments:

Post a Comment

ಗೋ-ಕುಲ Go-Kula