Sunday 6 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 18: 129 - 136

 ತದ್ದೇಹಗಾ ಭಾರತೀ ತು ಕೇಶವಂ ಶಙ್ಕರೇ ಸ್ಥಿತಮ್ ।

ತೋಷಯಾಮಾಸ ತಪಸಾ  ಕರ್ಮ್ಮೈಕ್ಯಾರ್ತ್ಥಂ ಹಿ ಪೂರ್ವವತ್ ॥೧೮.೧೨೯॥

ಇಂದ್ರಸೇನೆಯ ದೇಹದಲ್ಲಿರುವ ಭಾರತೀದೇವಿ ಹಿಂದಿನಂತೆ ಕರ್ಮೈಕ್ಯ ಸಾಧನೆಗಾಗಿ ,

ಶಿವಾoತರ್ಗತ ಕೇಶವನನ್ನು ಕುರಿತು ತಪಗೈದಳು ತಾನು ಮೈ ಮನಗಳಿಂದ ಬಾಗಿ .

 

ಉಮಾದ್ಯಾ ರೌದ್ರಮೇವಾತ್ರ ತಪಶ್ಚಕ್ರುರ್ಯ್ಯಥಾ ಪುರಾ ।

ಪ್ರತ್ಯಕ್ಷೇ  ಚ ಶಿವೇ  ಜಾತೇ ತದ್ದೇಹಸ್ಥೇ ಚ ಕೇಶವೇ ॥೧೮.೧೩೦॥

ಪೃಥಕ್ಪೃಥಕ್ ಸ್ವಭರ್ತ್ತ್ರಾಪ್ತ್ಯೈ ತಾಃ ಪಞ್ಚಾಪ್ಯೇಕದೇಹಗಾಃ ।

ಪ್ರಾರ್ತ್ಥಯಾಮಾಸುರಭವತ್ ಪಞ್ಚಕೃತ್ವೋ ವಚೋ ಹಿ ತತ್ ॥೧೮.೧೩೧॥

ಪಾರ್ವತಿ ಮುಂತಾದವರು ಮೊದಲಿನಂತೆ ರುದ್ರಸಂಬಂಧೀ ತಪಗೈದರು ,

ಆಗ ಸದಾಶಿವನೂ ಅಂತರ್ಗತ ಕೇಶವನೂ ಪ್ರತ್ಯಕ್ಷರಾದವರಾಗಿ ನಿಂತರು .

ಎಲ್ಲರೂ ಬೇರೆ ಬೇರೆ ಇದ್ದು ತಮ್ಮ ತಮ್ಮ ಗಂಡಂದಿರಿಗಾಗಿ ಬೇಡಿದರು .

ಕೇಶವನಲ್ಲಿ ಭಾರತಿಯ ಪ್ರಾರ್ಥನೆ ,

ಶಿವನಲ್ಲಿ ಉಳಿದ ನಾಲ್ವರ ಪ್ರಾರ್ಥನೆ .

ಕೇಳಿದ್ದು ಒಮ್ಮೆ , ದೇಹ ಮನಸು ವಾಗಿಂದ್ರಿಯ ಒಂದು ,

ಆದರೆ ಅದರ ಹಿಂದಿನ ಅಭಿಮಾನ ಮಾತ್ರ ಅವು ಐದು .

ಹಾಗಾಗಿ ಒಂದು ದೇಹದಿ ಬಂದಮಾತು ಐದಾಗಿ ಕೇಳಿದ್ದು.

 

ಶಿವದೇಹಸ್ಥಿತೋ ವಿಷ್ಣುರ್ಭಾರತ್ಯೈ ತು ದದೌ ಪತಿಮ್ ।

ಅನ್ಯಾಸಾಂ ಶಿವ ಏವಾಥ ಪ್ರದದೌ ಚತುರಃ ಪತೀನ್ ॥೧೮.೧೩೨॥

ರುದ್ರಾoತರ್ಗತ ವಿಷ್ಣುವಿನಿಂದ ಭಾರತಿಗೆ ವರದಾನ ,

ಉಳಿದವರಿಗೆ ಶಿವನಿಂದ ನಾಕು ಗಂಡಂದಿರ ಪ್ರದಾನ .

 

ದೇವ್ಯಶ್ಚತಸ್ರಸ್ತು ತದಾ ದತ್ತಮಾತ್ರೇ ವರೇsಮುನಾ ।

ದೇವಾನಾಮವತಾರಾರ್ತ್ಥಂ ಪಞ್ಚ ದೇವ್ಯಃ ಸ್ಮ ಇತ್ಯಥ ॥೧೮.೧೩೩॥

ನಾಜಾನನ್ನೇಕದೇಹತ್ವಾಚ್ಚಿದ್ಯೋಗಾತ್ ಕ್ಷೀರನೀರವತ್ ।

ತಾಃ ಶ್ರುತ್ವಾ ಸ್ವಪತಿಂ ದೇವಿ ನಚಿರಾತ್ ಪ್ರಾಪ್ಸ್ಯಸೀತಿ ಚ ॥೧೮.೧೩೪॥

ವಿಷ್ಣೂಕ್ತಂ ಶಙ್ಕರೋಕ್ತಂ ಚ ಚತ್ವಾರಃ ಪತಯಃ ಪೃಥಕ್ ।

ಭವಿಷ್ಯನ್ತೀತ್ಯಥೈಕಸ್ಯಾ ಮೇನಿರೇ ಪಞ್ಚಭರ್ತ್ತೃತಾಮ್ ॥೧೮.೧೩೫॥

ವರ ಪಡೆಯುತ್ತಿದ್ದಂತೆ ಭಾರತಿಯ ಬಿಟ್ಟು ಉಳಿದವರಿಗೆ ಗೊಂದಲದ ಸ್ಥಿತಿ ,

ದೇವತೆಗಳ ಅವತಾರಕ್ಕಾಗಿ ಐದು ಜನರು ಒಟ್ಟಾಗಿದ್ದರ ಬಗೆಗಾದ ವಿಸ್ಮೃತಿ .

ಒಂದೇ ದೇಹದಲ್ಲಿದ್ದದ್ದರಿಂದ ಆಯಿತು ಎಲ್ಲವೂ  ಕಲಸುಮೇಲೋಗರ ,

ಹಾಲು ನೀರು ಬೆರೆತಾಗ ಯಾವುದ್ಯಾವುದು ಎಂದು ತಿಳಿಯದ ವ್ಯಾಪಾರ .

ಒಂದು ಬಾರಿ ವಿಷ್ಣುವಿನಿಂದ ನಾಕು ಬಾರಿ ಶಂಕರನಿಂದ ಬಂದ ಆ ವರದ ಮಾತು ,

ತಂದಿತವರಿಗೆ ತಮ್ಮ ಪತಿಯಲ್ಲದೇ ಇನ್ನು ನಾಲ್ವರು ಸೇರಿ ಐವರು ಪತಿಯೆಂಬ ಭ್ರಾಂತು .

 

ರುರುದುಶ್ಚೈಕದೇಹಸ್ಥಾ ಏಕೈವಾಹಮಿತಿ ಸ್ಥಿತಾಃ ।

ಅಥಾಭ್ಯಾಗಾನ್ಮಹೇನ್ದ್ರೋsತ್ರ ಸೋsಬ್ರವೀತ್ ತಾಂ ವರಸ್ತ್ರಿಯಮ್ ॥೧೮.೧೩೬॥

ಎಲ್ಲಾ ಒಂದೇ ದೇಹದಲ್ಲಿದ್ದರೂ ಕೂಡಾ ಒಬ್ಬಳೇ ಎಂಬ ಭ್ರಮೆ ಆವರಿಸಿತು ,

ಸರ್ವಜ್ಞಳಾದ ಭಾರತಿಯ ಬಿಟ್ಟು ಉಳಿದ ನಾಲ್ವರೂ ದುಃಖಿಸುತ್ತಿದ್ದರು ಅತ್ತು .

ಆಗಾಯಿತು ಅಲ್ಲಿಗೆ ದೇವೇಂದ್ರನ ಆಗಮನ ,

ಅಳುವ ಹೆಣ್ಣುಮಗಳತ್ತ ಹೋಯಿತವನ ಗಮನ .

No comments:

Post a Comment

ಗೋ-ಕುಲ Go-Kula