Thursday 17 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 28 - 32

 ಇತ್ಯುಕ್ತವಾಕ್ಯಮಮುಮಗ್ರಜಮನ್ವಗಾತ್ ಸ ಭೀಮಃ ಪ್ರದರ್ಶ್ಯ ನಿಜಧರ್ಮ್ಮಮಥಾನುವೃತ್ಯೈ ।

ದೋಷೋ ಭವೇದುಭಯತೋ ಯತ ಏವ ತೇನ ವಾಚ್ಯಃ ಸ್ವಧರ್ಮ್ಮ ಉತ ನ ಸ್ಥಿತಿರತ್ರ ಕಾರ್ಯ್ಯಾ ॥೧೯.೨೮॥

ಕೀರ್ತ್ತ್ಯರ್ತ್ಥಮೇವ ನಿಜಧರ್ಮ್ಮಪರಿಪ್ರಹಾಣೇ ಪ್ರಾಪ್ತೇsಗ್ರಜಸ್ಯ ವಚನಾತ್ ಪ್ರವಿಹಾತುಮೇವ ।

ಭೀಮಸ್ಯ ದೋಷಮುಭಯಂ ಪ್ರತಿಹನ್ತುಮೀಶೋ ಜ್ಯೇಷ್ಠಂ ಚಕಾರ ಹರಿರತ್ರ ಸುತಂ ವೃಷಸ್ಯ ॥೧೯.೨೯॥

ಹನ್ತವ್ಯತಾಮುಪಗತೇಷು ಸುಯೋಧನಾದಿಷ್ವನ್ಯೋಪಧಾನ್ನಹಿ ಭವೇನ್ನಿಜಧರ್ಮ್ಮ ಏವ ।

ಪೂರ್ವಂ ವಧೇ ನಹಿ ಸಮಸ್ತಶ ಏವ ದೋಷಾಸ್ತೇಷಾಂ ಪ್ರಯಾನ್ತಿ ವಿವೃತಿಂ ಚ ತದರ್ತ್ಥತೋsಪಿ ॥೧೯.೩೦ ॥

ಹೀಗೆ ನುಡಿದ ಅಣ್ಣ ಧರ್ಮರಾಜನಿಗೆ ತಮ್ಮ ಭೀಮಸೇನ ,

ತೋರುತ್ತಾನೆ ಧರ್ಮಸೂಕ್ಷ್ಮದನುಸರಣೆಯ ಪ್ರದರ್ಶನ .

ಎರಡೂ ಕಡೆಯೂ ದೋಷ,ಸಂದಿಗ್ಧತೆಯ ಪಾಶ- ಆಗ ಭೀಮ ,

ಸತ್ಯ ಬಿಡದೇ ನಿಭಾಯಿಸಿದ ತಾನು ವಾಯು ಜೀವೋತ್ತಮ .

ಧರ್ಮಸೂಕ್ಷ್ಮದ ಪೋಷಣೆ ಪಾಲನೆ ಮತ್ತು ದೋಷ ನಿವಾರಣೆಗಾಗಿ ,

ಭೀಮನ ತಮ್ಮನಾಗಿಸಿ ಯಮನ ಮಾಡಿದ್ದ ಶ್ರೀಹರಿ ಹಿರಿಯಣ್ಣನಾಗಿ .

ಹಿರಿಯರ ತಪ್ಪು ಎತ್ತಿ ಹೇಳಿದರೂ ಆಗದಂತೆ ಹಿರಿತನದ ತಿರಸ್ಕಾರ ,

ಲೋಕದೃಷ್ಟಿಯಿಂದ ಬಂತು ಅಣ್ಣನ ಮಾತ ಕೇಳಿ ನಡೆದ ಪುರಸ್ಕಾರ .

ಇದರಲ್ಲಿದೆ ಇನ್ನೂ ಒಂದು ಪ್ರಮುಖವಾದ ಕಾರಣ ,

ಸರಿ ಸಮಯ ದಿಕ್ಕಲ್ಲಿ ಬಿಡಬೇಕು ಸಂದೇಶದ ಬಾಣ .

ಒಂದುವೇಳೆ ಪ್ರಾರಂಭದಲ್ಲೇ ನಡೆದುಹೋಗಿಬಿಟ್ಟಿದ್ದರೆ ಕೌರವನಾಶ ,

ಪಾಪಿಗಳ ದೋಷ ಮೆರೆದು ಬಯಲಾಗುವುದು ಹೇಗೆ ಅವರ ವೇಷ .

ಪಾಪಗಳು ತುಂಬಿ ನಿಶ್ಚಿತವಾಗಬೇಕು ಅಂಧಂತಮಸ್ಸಿನ ದಾರಿ ,

ಅಂತೆಯೇ ಧರ್ಮನ ಅಣ್ಣನ, ಭೀಮನ ತಮ್ಮನಾಗಿ ಇಟ್ಟ ಶೌರಿ .

 

ಕ್ಷತ್ತಾsಥ ಚಾsಹ ಸುವಚೋsನ್ತ್ಯಜಭಾಷಯೈವ ಧರ್ಮ್ಮಾತ್ಮಜಂ ವಿಷಹುತಾಶಭಯಾತ್ ಪ್ರತೀತಾಃ ।

ಆಧ್ವಂ ತ್ವಿತಿ ಸ್ಮ ಸ ತಥೇತಿ ವಚೋsಪ್ಯುದೀರ್ಯ್ಯ ಪ್ರಾಯಾಚ್ಚ ವಾರಣವತಂ ಪೃಥಯಾsನುಜೈಶ್ಚ ॥೧೯.೩೧॥

ಇರಲಿ ವಿಷ ಹಾಗೂ ಅಗ್ನಿಬಾಧೆಗಳ ಬಗ್ಗೆ ಎಚ್ಚರ ,

ಧರ್ಮಜಗೆ ಗುಟ್ಟುಭಾಷೆಯ ಸಂದೇಶ ಕೊಟ್ಟ ವಿದುರ .

ಒಪ್ಪಿದ ಧರ್ಮರಾಯ ತಾಯಿ ತಮ್ಮಂದಿರ ಜೊತೆಯಾಗಿ ,

ವಾರಣಾವತದತ್ತ ಹೊರಟ ದೈವನಿರ್ಣಯಕ್ಕೆ ತಲೆಬಾಗಿ .

 

ತಾನ್ ಹನ್ತುಮೇವ ಚ ತದಾ ಧೃತರಾಷ್ಟ್ರಸೂನುರ್ಲ್ಲಾಕ್ಷಾಗೃಹಂ ಸಪದಿ ಕಾಞ್ಚನರತ್ನಗೂಢಮ್ ।

ಕೃತ್ವಾsಭ್ಯಯಾತಯದಮುತ್ರ ಹಿ ವಿಷ್ಣುಪದ್ಯಾ ಸ್ವಾಮಾತ್ಯಮೇವ ಚ ಪುರೋಚನನಾಮಧೇಯಮ್ ॥೧೯.೩೨॥

ದುರ್ಯೋಧನ ಸಿದ್ಧಪಡಿಸಿದ ಪಾಂಡವರ ವಧೆಯ ಯೋಜನೆ ,

ಮಾಡಿಸಿದ ಬಂಗಾರ ರತ್ನಗಳಿಂದ ತುಂಬಿದ ಅರಗಿನ ಅರಮನೆ .

ಗಂಗಾನದಿ ಮಾರ್ಗದಿಂದ ವಾರಣಾವತದತ್ತ ಪಾಂಡವರನ್ನ ,

ಜೊತೆಗೆ ಕಳುಹಿಸಿದ ಮಂತ್ರಿಯ ಹೆಸರಾಗಿತ್ತದು ಪುರೋಚನ .

No comments:

Post a Comment

ಗೋ-ಕುಲ Go-Kula