[ಭೀಮ-ಹಿಡಿಮ್ಬೀ ಪುತ್ರ ಯಾರೆಂದು ವಿವರಿಸುತ್ತಾರೆ]
ದೇವೋsಪಿ ರಾಕ್ಷಸತನುರ್ನ್ನಿರೃತಿಃ ಪುರಾ ಯ ಆವೇಶಯುಕ್ ಚ ಗಿರಿಶಸ್ಯ
ಘಟೋತ್ಕಚಾಖ್ಯಃ ।
ಪೂರ್ವಂ ಘಟೋಪಮಮಮುಷ್ಯ
ಶಿರೋ ಬಭೂವ ಕೇಶಾ ನಿಮೇಷತ ಉದಾಸುರತೋ ಹಿ ನಾಮ ॥೧೯.೬೩॥
ಸ್ವಭಾವದಿಂದ ದೇವತೆಯಾದರೂ, ರಾಕ್ಷಸದೇಹ ಬಂದ ಕಾರಣ ನಿರ್ಋತಿ ,
ರುದ್ರಾವೇಶದಿಂದ ಘಟೋತ್ಕಚ ಎಂಬ ಹೆಸರಿನವನಾಗಿ ಹುಟ್ಟಿಬಂದ ಗತಿ .
ಹುಟ್ಟಿದಾಗ ಅವನ ತಲೆ ಕೂದಲಿರದೆ ಮಡಕೆ(ಘಟ )ಯಂತಿದ್ದ ನೋಟ ,
ನಂತರ ನಿಮಿಷದಲ್ಲೇ ಕೂದಲು ಬಂದೂ ಬಂತು ಘಟೋತ್ಕಚ ಎಂಬ ಪಟ್ಟ .
ಜಾತೇ ಸುತೇ ಸಮಯತೋ
ಭಗವತ್ಕೃತಾತ್ ಸ ಭೀಮೋ ಜಗಾದ ಸಸುತಾಂ ಗಮನಾಯ ತಾಂ ಚ ।
ಸ್ಮೃತ್ಯಾsಭಿಯಾನ ಉಭಯೋರಪಿ ಸಾ ಪ್ರತಿಜ್ಞಾಂ ತೇಷಾಂ ವಿಧಾಯ ಚ ಯಯೌ ಸುರಲೋಕಮೇವ
॥೧೯.೬೪॥
ಹೀಗೆ ಮಗ ಹುಟ್ಟಿದಮೇಲೆ ವ್ಯಾಸರು ಹೇಳಿದಂತೆ ಮಗನೊಂದಿಗೆ ಹೊರಡಲು
ಹಿಡಿಂಬಿಗೆ ಹೇಳುತ್ತಾನೆ ಭೀಮಸೇನ ,
ನೀವುಗಳು ನೆನೆಸಿಕೊಂಡ ಕೂಡಲೇ ನಾವುಗಳು ಬರುತ್ತೇವೆ ಎಂದ ಹಿಡಿಂಬಿ
ಮಾಡಿದಳು ಸುರಲೋಕ ಯಾನ .
ವ್ಯಾಸೋsಪಿ ಪಾಣ್ಡುತನಯೈಃ
ಸಹಿತೋ ಬಕಸ್ಯ ರೌದ್ರಾದ್ ವರಾಜ್ಜಯವಧಾಪಗತಸ್ಯ ನಿತ್ಯಮ್ ।
ಯಾತೋ ವಧಾಯ
ಪರಮಾಗಣಿತೋರುಧಾಮಾ ಪೂರ್ಣ್ಣಾಕ್ಷಯೋರುಸುಖ ಆಶು ತದೈಕಚಕ್ರಾಮ್ ॥೧೯.೬೫॥
ಎಣಿಸಲಾಗದ ಗುಣಗಳ ದೀಪ, ಪರಿಪೂರ್ಣ, ನಾಶವಿರದ ಸುಖದ ವೇದವ್ಯಾಸದೇವರು
,
ರುದ್ರಬಲದಿ ಸೋಲು ಸಾವಿರದ ಬಕನ ಕೊಲ್ಲಲು ಏಕಚಕ್ರನಗರಕ್ಕೆ
ಪಾಂಡವರೊಂದಿಗೆ ಹೊರಟರು.
ತಾನ್ ಬ್ರಾಹ್ಮಣಸ್ಯ ಚ
ಗೃಹೇ ಪ್ರಣಿಧಾಯ ಕೃಷ್ಣಃ ಶಿಷ್ಯಾ ಮಮೈತ ಇತಿ ವಿಪ್ರಕುಮಾರರೂಪಾನ್ ।
ಆಯಾಮಿ ಕಾಲ ಇತಿ
ತಾನನುಶಾಸ್ಯ ಚಾಯಾತ್ ತೇ ತತ್ರ ವಾಸಮಥ ಚಕ್ರುರನೂಚ್ಯ ವೇದಾನ್ ॥೧೯.೬೬॥
ಬ್ರಾಹ್ಮಣವೇಷ ಧರಿಸಿದ ಅವರನ್ನು ವೇದವ್ಯಾಸರು,
ಏಕಚಕ್ರನಗರದ ವಿಪ್ರನೊಬ್ಬನ ಮನೆಯಲ್ಲಿ ಬಿಟ್ಟರು .
ನನ್ನ ಶಿಷ್ಯರಿವರು, ನಾನು ಮುಂದೆ
ಬರುವೆನೆಂದು ಅಲ್ಲಿಂದ ಹೊರಟರು ,
ಪಾಂಡವರು ವೇದಚಿಂತನೆ ಮಾಡುತ್ತಾ ಅಲ್ಲಿಯೇ ವಾಸಮಾಡಿಕೊಂಡಿದ್ದರು.
ಭಿಕ್ಷಾಮಟತ್ಸು ಸತತಂ
ಪ್ರತಿಹುಙ್ಕೃತೇನ ಭೀಮೇ ವಿಶಾಂ ಸದನ ಏವ ಗೃಹಪ್ರಮಾಣಮ್ ।
ಭಾಣ್ಡಂ ಕುಲಾಲವಿಹಿತಂ ಪ್ರತಿಗೃಹ್ಯ ಗಚ್ಛತ್ಯಾಶಙ್ಕಯಾsವಗಮನಸ್ಯ ತಮಾಹ ಧಾರ್ಮ್ಮಃ ॥೧೯.೬೭॥
ಸ್ಥೂಲಂ ಹಿ ಸದ್ಮ
ಪೃಥಿವೀಸಹಿತಂ ತ್ವರಕ್ಷ ಉದ್ಧೃತ್ಯ
ವಹ್ನಿಮುಖತಸ್ತದು ಚೈಕದೋಷ್ಣಾ ।
ಭಾಣ್ಡಂ ತದರ್ತ್ಥಮುರು
ಕುಮ್ಭಕರೇಣ ದತ್ತಂ ಭಿಕ್ಷಾಂ ಚ ತೇನ ಚರಸಿ ಪ್ರತಿಹುಙ್ಕೃತೇನ ॥೧೯.೬೮॥
ಬ್ರಾಹ್ಮಣವೇಷದ ಪಾಂಡವರು ಐವರು ಅಲ್ಲಿ ಭಿಕ್ಷೆ ಬೇಡುತ್ತಿರಲು ,
ಭೀಮ ಕುಂಬಾರ ಮಾಡಿದ ದೊಡ್ಡ ಮಡಕೆ ಹಿಡಿದು ಭಿಕ್ಷೆಗೆ ಹೊರಟಿರಲು ,
ಧರ್ಮಜ ಹೇಳುವನಾಗ ಭೀಮನ ಗುರುತಾದೀತೆಂಬ ಭಯವು ಕಾಡಿರಲು .
ಭೂಮಿಯಿಂದ ಕೂಡಿದ ಬಹಳ ದೊಡ್ಡದಾದ ಕುಂಬಾರನ ಮನೆ ,
ಒಂದೇ ಕೈಯಿಂದ ಎತ್ತಿ ಬೆಂಕಿಯಿಂದ ರಕ್ಷಿಸಿದ ಉಪಕಾರ ಸ್ಮರಣೆ .
ಅದರ ನೆನಪಿಗಾಗಿ ನಿನಗೆ ಕುಂಬಾರ ಮಡಕೆ ಮಾಡಿ ಕೊಟ್ಟ ಭೀಮ ,
ಅದನ್ನೇ ಹಿಡಿದು ಹುಂಕಾರದಿಂದ ಭಿಕ್ಷಾಟನೆ ಆಗಿದೆ ನಿನ್ನ ನೇಮ.
ಧರ್ಮ್ಮಸ್ಯ ತೇ
ಸುನಿಯತೇರ್ಬಲತಶ್ಚ ಬೋಧೋ ಭೂಯಾತ್ ಸುಯೋಧನಜನಸ್ಯ ತತೋ ಭಯಂ ಮೇ ।
ಮಾತ್ರಾ ಸಹೈವ ವಸ
ಫಲ್ಗುನಪೂರ್ವಕೈಸ್ತ್ವಮಾನೀತಮೇವ ಪರಿಭುಙ್ಕ್ಷ್ವನತು ವ್ರಜೇಥಾಃ ॥೧೯.೬೯॥
ನಿನ್ನ ಧರ್ಮನಿಷ್ಠೆ ಮತ್ತು ನಿನ್ನ ಈ ಅಪರಿಮಿತ ಬಲದಿಂದ ,
ದುರ್ಯೋಧನನ ದೂತರಿಗಾದೀತು ಮೇಲಿನ ಸುಳಿವುಗಳಿಂದ .
ಆ ಭಯದಿಂದ ಹೇಳುತ್ತಿದ್ದೇನೆ ನೀನು ಅಮ್ಮನೊಡನೆ ಮನೆಯಲ್ಲಿರು,
ಅರ್ಜುನಾದಿಗಳು ತಂದದ್ದು ಉಂಡು ಮನೆಯಾಚೆಗೆ ಹೋಗದಿರು .
ಇತ್ಯುಕ್ತ ಆಶು ಸ ಚಕಾರ
ತಥೈವ ಭೀಮಸ್ತೇsಪಿ
ಸ್ವಧರ್ಮ್ಮಪರಿರಕ್ಷಣಹೇತುಮೌನಾಃ ।
ಭಿಕ್ಷಾಂ ಚರನ್ತ್ಯಥ
ಚತುರ್ಷ್ವಪಿ ತೇಷು ಯಾತೇಷ್ವೇಕತ್ರ ಮಾತೃಸಹಿತಃ ಸ ಕದಾಚಿದಾಸ್ತೇ ॥೧೯.೭೦॥
ಇದನ್ನೆಲ್ಲ ಕೇಳಿಸಿಕೊಂಡ ಭೀಮ ಆಯಿತೆಂದು ಒಪ್ಪಿ ಹಾಗೇ ಮಾಡಿದ ,
ಹೀಗೆ ಪಾಂಡವರು ಅಲ್ಲಿ ಭಿಕ್ಷಾಟನೆ ಮಾಡುತ್ತಿದ್ದರು ಧರ್ಮಮಾರ್ಗದಿಂದ
.
ಒಮ್ಮೆ ನಾಲ್ವರು ಭಿಕ್ಷೆಗೆ ಹೋಗಿರಲು ಭೀಮ ಅಮ್ಮನೊಡನೆ ಮನೆಯಲ್ಲಿದ್ದ
.
ತತ್ಕಾಲ ಏವ ರುದಿತಂ
ನಿಜವಾಸಹೇತೋರ್ವಿಪ್ರಸ್ಯ ದಾರಸಹಿತಸ್ಯ ನಿಶಮ್ಯ ಭೀಮಃ ।
ಸ್ತ್ರೀಬಾಲಸಂಯುತಗೃಹೇ
ಶಿಶುಲಾಳನಾದೌ ಲಜ್ಜೇದಿತಿ ಸ್ಮ ಜನನೀಮವದನ್ನಚಾಗಾತ್ ॥೧೯.೭೧॥
ಆ ಸಮಯದಲ್ಲಿ ಕೇಳಿಸುತ್ತದೆ ತಾವಿದ್ದ ಮನೆಯ ಬ್ರಾಹ್ಮಣ ದಂಪತಿಗಳ ಅಳು ,
ಹೆಂಗಸರು ಮಕ್ಕಳ ಚಟುವಟಿಕೆ ಎಲ್ಲಾ ಮನೆಯಲ್ಲಿ ತುಂಬಿಕೊಂಡಿರಲು ,
No comments:
Post a Comment
ಗೋ-ಕುಲ Go-Kula