॥ ಓಂ ॥
ಮಹಾಭಾರತ ತಾತ್ಪರ್ಯ ನಿರ್ಣಯ - ಏಕೋನವಿಂಶೋsಧ್ಯಾಯಃ ಪಾಣ್ಡವರಾಜ್ಯಲಾಭಃ]
ಪಾಣ್ಡವರಾಜ್ಯಲಾಭಃ
ಏವಂ ಶುಭೋಚ್ಚಗುಣವತ್ಸು
ಜನಾರ್ದ್ದನೇನ ಯುಕ್ತೇಷು ಪಾಣ್ಡುಷು ಚರತ್ಸ್ವಧಿಕಂ ಶುಭಾನಿ ।
ನಾಸ್ತಿಕ್ಯನೀತಿಮಖಿಲಾಂ
ಗುರುದೇವತಾದಿಸತ್ಸ್ವಞ್ಜಸೈವ ಜಗೃಹುರ್ದ್ಧೃತರಾಷ್ಟ್ರಪುತ್ರಾಃ ॥೧೯.೦೧॥
ಹೀಗೆ ಶ್ರೀಕೃಷ್ಣ ಸಮೇತರಾದ ಉತ್ತಮ ಮಂಗಳ ಗುಣಗಳ ಪಾಂಡವರು,
ಆತ್ಯoತಿಕವಾದ
ಪುಣ್ಯಕಾರ್ಯಗಳ ಮಾಡುತ್ತಾ ಧರ್ಮದ ಹಾದಿಯಲ್ಲಿದ್ದರು.
ಇತ್ತ ಧೃತರಾಷ್ಟ್ರನ ಮಕ್ಕಳಾದ ಕೌರವರು ಒಳ್ಳೆಯದ್ಯಾವುದನ್ನೂ
ನಂಬದಾದರು,
ಗುರು, ದೇವತೆಗಳ , ಸತ್ಕರ್ಮಗಳ ನಿರಾಕರಿಸುತ್ತಾ ನಾಸ್ತಿಕ್ಯನೀತಿಯನ್ನು
ಹಿಡಿದರು.
[ಧೃತರಾಷ್ಟ್ರಪುತ್ರರಿಗೆ ನಾಸ್ತಿಕ್ಯನೀತಿ ಬೋಧಿಸಿದ ಗುರು ಯಾರು? ]
ನಾಮ್ನಾ ಕಣಿಙ್ಕ ಇತಿ ಚಾsಸುರಕೋ ದ್ವಿಜೋsಭೂಚ್ಛಿಷ್ಯಃ ಸುರೇತರಗುರೋಃ ಶಕುನೇರ್ಗ್ಗುರುಃ ಸಃ ।
ನೀತಿಂ ಸ ಕುತ್ಸಿತತಮಾಂ
ಧೃತರಾಷ್ಟ್ರಪುತ್ರೇಷ್ವಾಧಾದ್ ರಹೋ ವಚನತಃ ಶಕುನೇಃ ಸಮಸ್ತಾಮ್ ॥೧೯.೦೨॥
ಕಣಿoಕ ಎಂಬ ಹೆಸರಿನ
ಒಬ್ಬ ಅಸುರ ,
ಶುಕ್ರಾಚಾರ್ಯರ ಶಿಷ್ಯ, ಶಕುನಿಗಾಚಾರ್ಯ .
ಶಕುನಿಯಿಂದ ಕಣಿoಕನಿಗೆ ಬಂತು ಸಂದೇಶ
,
ಕೌರವರಿಗಾಯಿತು ಕೆಟ್ಟನೀತಿಯ ಉಪದೇಶ .
ಛದ್ಮೈವ ಯತ್ರ ಪರಮಂ ನ
ಸುರಾಶ್ಚ ಪೂಜ್ಯಾಃ ಸ್ವಾರ್ತ್ಥೇನ ವಞ್ಚನಕೃತೇ ಜಗತೋsಖಿಲಂ ಚ ।
ಧರ್ಮ್ಮಾದಿ ಕಾರ್ಯ್ಯಮಪಿ
ಯಸ್ಯ ಮಹೋಪಧಿಃ ಸ್ಯಾಚ್ಛ್ರೇಷ್ಠಃ ಸ ಏವ ನಿಖಿಲಾಸುರದೈತ್ಯಸಙ್ಘಾತ್ ॥೧೯.೦೩॥
ಯಾವ ಶಾಸ್ತ್ರದಲ್ಲಿ ಮೋಸದಾಟವಿದೆಯೋ ಮುಂದು ,
ಎಲ್ಲಿ ದೇವತೆಗಳ ಶ್ರೇಷ್ಠತೆ ಪೂಜ್ಯತೆಗಳಿಗೆ ಇದೆ ಕುಂದು ,
ಅದೇ ಅನುಕೂಲಸಿಂಧು ಸ್ವಾರ್ಥಸಾಧಕ ಕುಟಿಲ ನೀತಿಶಾಸ್ತ್ರ ,
ಧರ್ಮ ಧರ್ಮಾಚರಣೆಗಳು ಜಗವ ವಂಚಿಸುವ ನೆಪದ ಅಸ್ತ್ರ .
ಯಾವ ದೈತ್ಯ ಪರಮೋಚ್ಛ ಪಳಗಿದ ಮೋಸಗಾರ ,
ಅವನೇ ಪರಮೋತ್ಕೃಷ್ಟವೆಂದು ಈ ಶಾಸ್ತ್ರದ ಸಾರ .
ಇತ್ಯಾದಿ ಕುತ್ಸಿತತಮಾಂ
ಜಗೃಹುಃ ಸ್ಮ ವಿದ್ಯಾಮಜ್ಞಾತ ಏವ ಧೃತರಾಷ್ಟ್ರಮುಖೈಃ ಸಮಸ್ತೈಃ ।
ತೇಷಾಂ ಸ್ವಭಾವಬಲತೋ
ರುಚಿತಾ ಚ ಸೈವ ವಿಸ್ತಾರಿತಾ ಚ ನಿಜಬುದ್ಧಿಬಲಾದತೋsಪಿ ॥೧೯.೦೪॥
ಕೌರವರಿಂದ ಗೌಪ್ಯವಾಗಿ ಈ ಕುತ್ಸಿತ ವಿದ್ಯೆಯ ಸ್ವೀಕಾರ ,
ಅವರ ಸ್ವಭಾವದಂತೆ ಹಿಡಿಸಿ ಬಳಸಿ ಆಗಲ್ಪಟ್ಟಿತು ವಿಸ್ತಾರ.
ಸಮ್ಪೂರ್ಣ್ಣದುರ್ಮ್ಮತಿರಥೋ
ಧೃತರಾಷ್ಟ್ರಸೂನುಸ್ತಾತಪ್ಯಮಾನಹೃದಯೋ ನಿಖಿಲಾನ್ಯಹಾನಿ ।
ದೃಷ್ಟ್ವಾ ಶ್ರಿಯಂ
ಪರಮಿಕಾಂ ವಿಜಯಂ ಚ ಪಾರ್ತ್ಥೇಷ್ವಾಹೇದಮೇತ್ಯ ಪಿತರಂ ಸಹ ಸೌಬಲೇನ॥೧೯.೦೫॥
ಹೀಗಿರಲು ದುರ್ಮತಿಯಾದ ಧೃತರಾಷ್ಟ್ರಪುತ್ರ ದುರ್ಯೋಧನ ,
ಪಾಂಡವರ ಸಂಪತ್ತು ವಿಜಯವ ಕಂಡು ಉರಿಯುತ್ತಿತ್ತವನ ಮನ .
ಅತಿ ಸಂಕಟವುಳ್ಳವನಾಗಿ ಶಕುನಿಯೊಡನೆ ಬಂದ ,
No comments:
Post a Comment
ಗೋ-ಕುಲ Go-Kula