Tuesday, 22 September 2020

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 19: 43 - 48

 ಭೀಮೋsಭಯೋsಪಿ ಗುರುಭಿಃ ಸ್ವಮುಖೇನ ಯುದ್ಧಮಪ್ರೀಯಮಾಣ ಉತ ಧರ್ಮ್ಮಜವಾಕ್ಯಹೇತೋಃ ।

ಉಹ್ಯೈವ ತಾನಪಿ ಯಯೌ ದ್ಯುನದೀಂ ಚ ತೀರ್ತ್ತ್ವಾ ಕ್ಷತ್ತ್ರಾsತಿಸೃಷ್ಟಮಧಿರುಹ್ಯ ಜಲಪ್ರಯಾಣಮ್ ॥೧೯.೪೩॥

ವಿಶ್ವಾಸಿತಾ ವಿದುರಪೂರ್ವವಚೋಭಿರೇವ ದಾಶೋದಿತಾಭಿರಧಿರುಹ್ಯ ಚ ಭೀಮಪೃಷ್ಠಮ್ ।

ಸರ್ವೇ ಯಯುರ್ವನಮಥಾಭ್ಯುದಿತೇ ಚ ಸೂರ್ಯ್ಯೇ ದೃಷ್ಟ್ವೈವ ಸಪ್ತ ಮೃತಕಾನರುದಂಶ್ಚ ಪೌರಾಃ ॥೧೯.೪೪॥

ಭಯವೇ ಇರದ ಭೀಮಸೇನ ಗುರುಹಿರಿಯರೊಂದಿಗೆ ಯುದ್ಧ ಬಯಸಲಿಲ್ಲ ,

ಧರ್ಮರಾಜನ ಮಾತಂತೆ ತನ್ನವರನ್ನೆಲ್ಲಾ ಹೊತ್ತುಕೊಂಡೇ  ನಡೆದನವ ಮಲ್ಲ .

ಅಷ್ಟೊತ್ತಿಗಾಗಲೇ ವಿದುರ ಅಲ್ಲಿ ಸಿದ್ಧ ಪಡಿಸಿದ್ದ ದೋಣಿ ,

ಅದನ್ನೇರಿ ಎಲ್ಲರೊಡನೆ ಗಂಗಾನದಿ ದಾಟಿದ ವೀರಾಗ್ರಣಿ.

ವಿದುರ ಮೊದಲೇ ಹೇಳಿದ್ದ ಸಾಂಕೇತಿಕ ಮಾತುಗಳನ್ನೇ ,

ಅಂಬಿಗನೂ ಹೇಳುತ್ತ ಮಾಡಲದರ ಪುನರಾವರ್ತನೆ .

ನಂಬಿಕೆಯಿಂದ ದೋಣಿ ಹತ್ತಿ ಗಂಗಾನದಿಯ ದಾಟಿ ಕಾಡಲ್ಲಿ ಮುಂದೆ ನಡೆದರು ,

ಇತ್ತ ಬೆಳಗಾಗಲು ಅರಗಿನಮನೆಯಲ್ಲಿ ಏಳುಜನ ಸತ್ತದ್ದ ಕಂಡವರು ಮರುಗಿದರು .

 

ಹಾ ಪಾಣ್ಡವಾನದಹದೇಷ ಹಿ ಧಾರ್ತ್ತರಾಷ್ಟ್ರೋ ಧರ್ಮ್ಮಸ್ಥಿತಾನ್ ಕುಮತಿರೇವ ಪುರೋಚನೇನ ।

ಸೋsಪ್ಯೇಷ ದಗ್ಧ ಇಹ ದೈವವಶಾತ್ ಸುಪಾಪಃ ಕೋ ನಾಮ ಸತ್ಸು ವಿಷಮಃ ಪ್ರಭವೇತ್ ಸುಖಾಯ ॥೧೯.೪೫॥

ಪರಮ ದುಷ್ಟಬುದ್ಧಿಯವನಾದ ಆ ದುರ್ಯೋಧನ ,

ಪಾಂಡವರ ಕೊಲ್ಲಲುಪಯೋಗಿಸಿದ ಪುರೋಚನನನ್ನ.

ಪಾಪಿ ಪುರೋಚನನೂ ತಾನು ಸುಟ್ಟು ಸತ್ತಿದ್ದಾನೆ ,

ಸಜ್ಜನರಲ್ಲಿ ದ್ರೋಹವೆಸಗಿದವನ್ಯಾವ ಸುಖದಿಂದ್ದಾನೆ.

ಪ್ರಜೆಗಳಾಡಿಕೊಂಡರು ಅಲ್ಲಿ ಮೇಲಿನ ಮಾತುಗಳನ್ನೆ .

 

ಪೌರೇಭ್ಯ ಏವ ನಿಖಿಲೇನ ಚ ಭೀಷ್ಮಮುಖ್ಯಾ ವೈಚಿತ್ರವೀರ್ಯ್ಯಸಹಿತಾಸ್ತು ನಿಶಮ್ಯ ಹೇತಿ ।

ಉಚುಃ ಸುದುಃಖಿತಧಿಯೋsಥ ಸುಯೋಧನಾದ್ಯಾಃ ಕ್ಷತ್ತಾ ಮೃಷೈವ ರುರುದುರ್ಯ್ಯುಯುಜುಶ್ಚ ಕರ್ಮ್ಮ ॥೧೯.೪೬॥

ಪ್ರಜೆಗಳಿಂದ ಸುದ್ದಿ ತಿಳಿದ ಧೃತರಾಷ್ಟ್ರ ಭೀಷ್ಮಾದಿಗಳು ,

ಕುಲದ ಹಿರಿಯರೊಡನೆ ಅನುಭವಿಸಿದ್ದು ದುಃಖಗೋಳು .

ದುರ್ಯೋಧನಾದಿಗಳದು ತೋರಿಕೆಯ ಕಪಟ ,

ಸತ್ಯವರಿತ ವಿದುರನದೂ ಮರುಗುವಿಕೆಯ ಆಟ .

ನಂತರ ನಡೆಯಿತು ಅಲ್ಲಿ ಉತ್ತರಕ್ರಿಯೆಗಳ ನೋಟ .

 

ಭೀಮೋsಪ್ಯುದೂಹ್ಯ ವನಮಾಪ ಹಿಡಿಮ್ಬಕಸ್ಯ ಭ್ರಾತೄನ್ ಪೃಥಾಂ ಚ ತೃಷಿತೈರಭಿಯಾಚಿತಶ್ಚ ।

ಪಾನೀಯಮುತ್ತರಪಟೇsಮ್ಬುಜಪತ್ರನದ್ಧಂ ದೂರಾದುದೂಹ್ಯ ದದೃಶೇ ಸ್ವಪತೋsಥ ತಾಂಶ್ಚ ॥೧೯.೪೭॥

ಇತ್ತ ಭೀಮ ತಾಯಿ ಸೋದರರ ಹೊತ್ತು ನಡೆದ ,

ಹಿಡಿಂಬಕನೆಂಬ ರಕ್ಕಸನಿರುವ ಕಾಡನ್ನು ಸೇರಿದ .

ಬಾಯಾರಿದ ಅವರೆಲ್ಲರಿಂದ ಭೀಮನಲ್ಲಿ ನೀರಿಗಾಗಿ ಇಟ್ಟ  ಬೇಡಿಕೆ ,

ತಾವರೆಎಲೆ ಬಳಸಿ ಉತ್ತರೀಯ ಕಟ್ಟಿ ಭೀಮನಿಂದ ನೀರು ತರುವಿಕೆ.

ಬಳಲಿ ಮಲಗಿದ ತನ್ನವರನ್ನು ದೂರದಿಂದ ಭೀಮಸೇನನ ನೋಡುವಿಕೆ.

 

ರಕ್ಷಾರ್ತ್ಥಮೇವ ಪರಿ ಜಾಗ್ರತಿ ಭೀಮಸೇನೇ ರಕ್ಷಃ ಸ್ವಸಾರಮಭಿಯಾಪಯತೇ ಹಿಡಿಮ್ಬೀಮ್ ।

ಸಾ ರೂಪಮೇತ್ಯ ಶುಭಮೇವ ದದರ್ಶ ಭೀಮಂ ಸಾಕ್ಷಾತ್ ಸಮಸ್ತಶುಭಲಕ್ಷಣಸಾರಭೂತಮ್ ॥೧೯.೪೮॥

ಅವರೆಲ್ಲರ ರಕ್ಷಣೆಗಾಗಿಯೇ ಭೀಮಸೇನನಿದ್ದ ಎಚ್ಚರ ,

ತಂಗಿ ಹಿಡಿಂಬಿಯ ನೋಡಲು ಕಳಿಸಿದ್ದ ಹಿಡಿಂಬಾಸುರ .

ಸುಂದರ ರೂಪ ಧರಿಸಿದ ಹಿಡಿಂಬಿ ಅಲ್ಲಿಗೆ ಬಂದಳು ,

ಸಮಸ್ತ ಶುಭಲಕ್ಷಣಸಾರಭೂತನಾದ ಭೀಮನ ಕಂಡಳು .

No comments:

Post a Comment

ಗೋ-ಕುಲ Go-Kula