ಪೂರ್ವಂ ಪ್ರಹಸ್ತ ಇತಿ ಯಸ್ತ್ವಭವತ್ ಸುಪಾಪಃ ಸೋsಭ್ಯೇತ್ಯ ಪಾಣ್ಡುತನಯಾನಭವಚ್ಚ ಮನ್ತ್ರೀ ।
ದುರ್ಯ್ಯೋಧನಂ
ಪ್ರತಿವಿಹಾಯ ಭವತ್ಸಕಾಶಮಾಯಾತ ಇತ್ಯವದದೇಷು ಸ ಕೂಟವಾಕ್ಯಮ್ ॥೧೯.೩೩॥
ರಾವಣನ ಸೇನಾಮುಖ್ಯಸ್ತನಾಗಿದ್ದ ಪ್ರಹಸ್ತ ರಾಮಾಯಣ ಕಾಲದಲ್ಲಿ ,
ಆ ಪಾಪಿಯೇ ಪುರೋಚನನಾಗಿ ಹುಟ್ಟಿದ್ದ ಮಹಾಭಾರತ ಕಾಲದಲ್ಲಿ .
ಆ ಪುರೋಚನ ಪಾಂಡವರ ಬಳಿ ಬಂದ ,
ದುರ್ಯೋಧನನ ಬಿಟ್ಟು ಬಂದಿದ್ದೇನೆಂದ .
ನಂಬಿಸಿ ಪಾಂಡವರ ಮಂತ್ರಿಯೂ ಆದ .
ದಿವ್ಯಂ ಗೃಹಂ ಚ ಭವತಾಂ
ಹಿ ಮಯೋಪನೀತಂ ಪ್ರೀತ್ಯೈವ ಪಾಪಮನುಯಾತುಮಹಂ ನ ಶಕ್ತಃ ।
ಯುಷ್ಮಾಸು
ಧರ್ಮ್ಮಧೃತಿಮತ್ಸು ಸದಾ ನಿವತ್ಸ್ಯ ಇತ್ಯೂಚಿವಾಂಸಮಮುಮಾಹುರಹೋ ಸುಭದ್ರಮ್ ॥೧೯.೩೪॥
ನಿಮಗೆಂದೇ ಪ್ರೀತಿಯಿಂದ ಸುಂದರ ಅಲೌಕಿಕ ಮನೆಯೊಂದು ಕಟ್ಟಲ್ಪಟ್ಟಿದೆ,
ಪಾಪಿಷ್ಠ ದುರ್ಯೋಧನನ ಸಂಗ ಬಿಟ್ಟು ನಿಮ್ಮ ಧರ್ಮಸಂಗದಲ್ಲಿ ನನ್ನ
ಮನಸಿದೆ.
ನಿಮ್ಮೊಂದಿಗೆ ಇರುತ್ತೇನೆ ಎಂದ ಕಪಟಿ ಪುರೋಚನ ,
ಆಶ್ಚರ್ಯದಿಂದ ಒಳ್ಳೇದೆಂದರು ಪಾಂಡವರೈದು ಜನ .
ದೃಷ್ಟ್ವೈವ ಜಾತುಷಗೃಹಂ
ವಸಯಾ ಸಮೇತಂ ತದ್ಗನ್ಧತೋ ವೃಷಸುತಃ ಪವಮಾನಜಾತಮ್ ।
ತಂ ಚಾತಿಪಾಪಮವದತ್ ಸುಮುಖೈಷ
ಪಾಪೋ ಹನ್ತುಂ ನ ಇಚ್ಛತಿ ಸದಾ ಭವ ಚ ಪ್ರತೀತಃ ॥೧೯.೩೫॥
ಕೊಬ್ಬಿನ ಪದಾರ್ಥಗಳಿಂದ ತುಂಬಿರುವ ವಿಚಿತ್ರ ಅರಗಿನ ಮನೆ ,
ಧರ್ಮರಾಜ ಭೀಮಗೆ ಹೇಳುತ್ತಾನೆ ಗ್ರಹಿಸುತ್ತಾ ಅದರ ವಾಸನೆ .
ಹೇ ಮಂಗಲಮುಖನಾದ ಭೀಮಸೇನಾ ,
ನಮ್ಮ ಕೊಲ್ಲಬಯಸಿದ್ದಾನೆ ಪುರೋಚನ .
ಇರಲಿ ಯಾವಾಗಲೂ ಎಚ್ಚರಿಕೆಯ ಗಮನ .
ಕ್ಷತ್ತಾsಥ ನೀತಿಬಲತೋsಖಿಲಲೋಕವೃತ್ತಂ ಜಾನನ್ತ್ಸ್ವಚಾರಮುಖತಃ ಖನಕಾಯ ಚೋಚೇ ।
ಉಕ್ತ್ವೈವ ಧರ್ಮ್ಮತನಯಾಯ
ಮದೀಯವಾಕ್ಯಂ ಪೂರ್ವೋಕ್ತಮಾಶು ಕುರು ತತ್ರ ಬಿಲಂ ಸುದೂರಮ್ ॥೧೯.೩೬॥
ಕುಶಾಗ್ರಮತಿಯಾದ ಮತ್ತು ನೀತಿಬಲದ ವಿದುರ ,
ಅರಿತವನಾದ ಎಲ್ಲಾ ಕಾರಸ್ಥಾನದ ಪೂರ್ತಿ ವಿವರ.
ಬಳಸಿ ಧರ್ಮರಾಜನಿಗೆ ಹೇಳಿದ ಒಗಟುಮಾತಿನ ಗುಟ್ಟು ,
ಕಳಿಸಿದನೊಬ್ಬನ ತೋಡಲು ದೂರಸುರಂಗ ಆಜ್ಞೆ ಕೊಟ್ಟು.
ಚಕ್ರೇ ಸ ಚೈವಮಥ ವರ್ತ್ಮ
ವೃತಿಚ್ಛಲೇನ ದ್ವಾರಂ ಚ ತಸ್ಯ ಸ ಪಿಧಾಯ ಯಯೌ ಗೃಹಂ ಸ್ವಮ್ ।
ಭೀಮಃ ಪೂರೋಚನ ಉಭಾವಪಿ
ತೌ ವಧಾಯ ಚ್ಛಿದ್ರಾರ್ತ್ಥಿನೌ ಮಿಥ ಉತೋಷತುರಬ್ದಕಾರ್ದ್ಧಮ್ ॥೧೯.೩೭॥
ಆ ಸುರಂಗ ತೋಡುವವ ಪ್ರಾಕಾರ ಮಾಡುವ ನೆಪನೀಡಿ ,
ವಿದುರ ಹೇಳಿದ ದಾರಿ ನಿರ್ಮಿಸಿದ ಸುರಂಗವ ತೋಡಿ .
ಮನೆಗೆ ಹೊರಟನವ ಸುರಂಗದ್ವಾರವನ್ನು ಭದ್ರಮಾಡಿ .
ಭೀಮಸೇನ ಪುರೋಚನ ಪರಸ್ಪರ ಕಾಯುತ್ತಾ ಸಂಹಾರದ ಅವಕಾಶ ,
No comments:
Post a Comment
ಗೋ-ಕುಲ Go-Kula