ಜ್ಯೇಷ್ಠಸ್ಯ ತೇsಪಿ ಹಿ ವಯಂ ಹೃದಯಪ್ರಜಾತಾ ನಾರ್ಹತ್ವಮೇವ ಗಮಿತಾ ಭವತೈವ ರಾಜ್ಯೇ ।
ಭ್ರಾತುಃ ಕನೀಯಸ ಉತಾಪಿ
ಹಿ ದಾರಜಾತಾ ಅನ್ಯೈಶ್ಚ ರಾಜ್ಯಪದವೀಂ ಭವತೈವ ನೀತಾಃ ॥೧೯.೦೬॥
ಅಪ್ಪಾ , ಕುಲಕ್ಕೆ ಹಿರಿಯನಾದ
ನಿನ್ನಿಂದಲೇ ಹುಟ್ಟಿದವರು ನಾವು ,
ಹಾಗಿದ್ದರೂ ನಮಗೆ ರಾಜ್ಯಾಭಿಷೇಕ ಆಗಲಿಲ್ಲವೆಂಬುದೇ ನೋವು .
ಆದರೆ ಪರಪುರುಷರಿಂದ ನಿನ್ನ ತಮ್ಮನ ಹೆಂಡತಿಯಲ್ಲಿ ,
ಹುಟ್ಟಿದವರು ಪದವಿಯೇರಿ ಆಳ್ವಿಕೆ ಮಾಡುತ್ತಿದ್ದಾರಿಲ್ಲಿ.
ರಾಜ್ಯಂ ಮಹಚ್ಚ
ಸಮವಾಪ್ಸ್ಯತಿ ಧರ್ಮ್ಮಸೂನುಸ್ತ್ವತ್ತೋsಥವಾsನುಜಬಲಾತ್
ಪ್ರಸಭಂ ವಯಂ ತು ।
ದಾಸಾ ಭವೇಮ
ನಿಜತನ್ತುಭಿರೇವ ಸಾಕಂ ಕುನ್ತೀಸುತಸ್ಯ ಪರತೋsಪಿ ತದನ್ವಯಸ್ಯ ॥೧೯.೦೭॥
ಧರ್ಮರಾಜ ನಿನ್ನನುಗ್ರಹ ಮತ್ತು ತಮ್ಮಂದಿರ ಬಲದ ದ್ವಾರ ,
ಪಡೆಯುವ ಬಲದಿಂದ ಸಂಪೂರ್ಣ ಸಾಮ್ರಾಜ್ಯದ ಅಧಿಕಾರ .
ನಿನ್ನ ಸಂತತಿಯವರೆಲ್ಲಾ ಅನುಭವಿಸಬೇಕು ಧರ್ಮರಾಜನ ದಾಸ್ಯ ,
ಕುಂತೀಪುತ್ರನ ಸಂತತಿಯ ಅಡಿಗೆ ನಮ್ಮ ಸಂತತಿಯ ಭವಿಷ್ಯ .
ನಾsತ್ಮಾರ್ತ್ಥಮಸ್ತಿ ಮಮ ದುಃಖಮಥಾತಿಶುದ್ಧಲೋಕಪ್ರಸಿದ್ಧಯಶಸಸ್ತವ
ಕೀರ್ತ್ತಿನಾಶಃ ।
ಅಸ್ಮನ್ನಿಮಿತ್ತ ಇತಿ
ದುಃಖಮತೋ ಹಿ ಸರ್ವೇsಪೀಚ್ಛಾಮ
ಮರ್ತ್ತುಮಥ ನಃ ಕುರು ಚಾಪ್ಯನುಜ್ಞಾಮ್ ॥೧೯.೦೮॥
ಈ ಸಂದರ್ಭದಲ್ಲಿ ನನಗಾಗಿ ನಾನಿಲ್ಲಿ ದುಃಖಪಡುತ್ತಿಲ್ಲ ,
ಲೋಕದಿ ನಮ್ಮಿಂದ ನಿನ್ನ ಕೀರ್ತಿನಾಶ ಆಗುತ್ತಿದೆಯಲ್ಲ .
ನಮ್ಮನ್ನು ಸಾವಿಗೆಳಸುತ್ತಿದೆ ಆ ಪಾಪಪ್ರಜ್ಞೆ ,
ನಾವು ಸಾಯಲು ಬೇಗ ಕೊಡು ನಿನ್ನ ಆಜ್ಞೆ .
ಏವಂ ಸ್ವಪುತ್ರವಚನಂ ಸ
ನಿಶಮ್ಯ ರಾಜಾ ಪ್ರೋವಾಚ ನಾನುಗುಣಮೇತದಹೋ ಮನಸ್ತೇ ।
ಕೋ ನಾಮ ಪಾಣ್ಡುತನಯೇಷು
ಗುಣೋತ್ತಮೇಷು ಪ್ರೀತಿಂ ನ ಯಾತಿ ನಿಜವೀರ್ಯ್ಯಭವೋಚ್ಚಯೇಷು ॥೧೯.೦೯॥
ಧೃತರಾಷ್ಟ್ರ ತನ್ನ ಮಗನ ಮಾತ ಕೇಳಿಸಿಕೊಂಡ ,
ಆನಂತರ ಕುರುಡರಾಜ ಅವನಿಗೆ ಹೀಗೆ ಹೇಳಿದ .
ಇಲ್ಲ , ಸರಿಯಾಗಿಲ್ಲ ನಿನ್ನ
ಮನದ ಯೋಚನೆಯ ಈ ರೀತಿ ,
ಉತ್ತಮ ಸ್ವಸಾಮರ್ಥ್ಯದ ಪಾಂಡವರಲ್ಲಿ ಯಾರಿಗಿರದು ಪ್ರೀತಿ .
ತೇ ಹಿ ಸ್ವಭಾಹುಲತೋsಖಿಲಭೂಪಭೂತಿಂ ಮಯ್ಯಾಕೃಷನ್ತಿ ನಚ ವಃ ಪ್ರತಿಷೇಧಕಾಸ್ತೇ ।
ತಸ್ಮಾಚ್ಛಮಂ ವ್ರಜ
ಶುಭಾಯ ಕುಲಸ್ಯ ತಾತ ಕ್ಷೇಮಾಯ ನೋ ಭವತಿ ವೋ ಬಲವದ್ವಿರೋಧಃ॥೧೯.೧೦॥
ಪಾಂಡವರು ತಮ್ಮ ತೋಳ್ಬಲದಿಂದ ನನಗೆ ತಂದೊಪ್ಪಿಸುತ್ತಿರುವ ರಾಜರ
ಸಂಪತ್ತು ,
ನಿಮ್ಮ ವಿರೋಧಿಗಳಲ್ಲವರು,ಅವರನ್ನು ನೀವು ಒಪ್ಪಿಕೊಳ್ಳುವುದರಲ್ಲಿದೆ ಕುಲದ ಒಳಿತು .
ಬಲಿಷ್ಠರಾದ ಅವರೊಂದಿಗೆ ವಿರೋಧ ಕಟ್ಟಿಕೊಳ್ಳುವುದು ಒಳ್ಳೆಯದಲ್ಲ
ಒಂದಿನಿತು .
No comments:
Post a Comment
ಗೋ-ಕುಲ Go-Kula