[ಇನ್ನು ಪಾಂಡವರನ್ನು ವಾರಣಾವತಕ್ಕೆ ಹೇಗೆ ಕಳುಹಿಸುವುದು ಎನ್ನುವ ಉಪಾಯವನ್ನು ಆಗಲೇ ನಿಶ್ಚಯಿಸಿಕೊಂಡಿದ್ದ ದುರ್ಯೋಧನ, ಅದನ್ನೂ ಧೃತರಾಷ್ಟ್ರನಿಗೆ ವಿವರಿಸುತ್ತಾನೆ].
ಭೇದಃ ಕುಲಸ್ಯ ಭವಿತಾ ಕುಲನಾಶಹೇತುರಸ್ಮಾಭಿರೇಷು ಸಹಿತೇಷು ಪುರೇ ವಸತ್ಸು ।
ತಸ್ಮಾದುಪಾಯಬಲತಃ
ಪ್ರತಿಯಾತನೀಯಾಸ್ತೇ ವಾರಣಾವತಮಿತೇ ವಿಹಿತೋsಪ್ಯುಪಾಯಃ॥೧೯.೨೨॥
ಪಾಂಡವರು ಇಲ್ಲೇ ನಮ್ಮೊಟ್ಟಿಗೇ ವಾಸ ಮಾಡುತ್ತಿದ್ದರೆ ,
ಕುಲದಲ್ಲಿ ಒಡಕಾಗಿ-ಆ ಭೇದದಿಂದ ಕುಲನಾಶದ ಬರೆ .
ಹಾಗಾಗಿ ಯಾವುದಾದರೂ ಒಂದುಪಾಯದ ಬಲದಿಂದ ಕಳಿಸಬೇಕು ,
ಅವರನ್ನು ವಾರಣಾವತಕ್ಕೆ ಅಟ್ಟುವ ಉಪಾಯ ನನ್ನಲ್ಲಿದೆ ತಿಳಿಯಬೇಕು .
ವಿಷ್ಣುರ್ಜ್ಜಯನ್ತ ಇತಿ
ಶಮ್ಭುಸಹಾಯ ಆಸ್ತೇ ದೇವೋತ್ಸವಶ್ಚ ಸುಮಹಾನ್ ಭವಿತಾsತ್ರ ಸುಷ್ಠು ।
ಭಕ್ತಾಶ್ಚ ತೇ ಹಿ
ನಿತರಾಮರಿಶಙ್ಖಪಾಣೌ ತ್ವಚ್ಚೋ. ದಿತಾಃ ಸಮುಪಯಾನ್ತಿ ತಮುತ್ಸವಂ ದ್ರಾಕ್॥೧೯.೨೩॥
ವಾರಣಾವತದಲ್ಲಿ ರುದ್ರ ಸಹಾಯಕನಾಗಿರುವ ಜಯಂತ ಹೆಸರಿನ ನಾರಾಯಣ ,
ಸನ್ನಿಹಿತನಾಗಿದ್ದಾನಲ್ಲಿ -ಜಯಂತೇಶ್ವರನ ಹೆಸರಲ್ಲಿ ಇದೆ ವಿಷ್ಣುವಿನ
ದೇವಸ್ಥಾನ .
ಅಲ್ಲಿ ನಡೆಯುತ್ತದೆ ದೊಡ್ಡದಾದ ಹಬ್ಬ ಜಾತ್ರೆ ಮಹೋತ್ಸವ ,
ಪಾಂಡವರಲ್ಲಿದೆ ಶಂಖ ಚಕ್ರ ಗದಾಪಾಣಿಯಲ್ಲಿ ಭಕ್ತಿಯ ಭಾವ .
ನಿನ್ನಿಂದ ಪ್ರೇರಿಸಲ್ಪಟ್ಟ ಪಾಂಡವರು ,
ಅದನೋಡಲಲ್ಲಿಗೆ ಬೇಗ ತೆರಳುವರು.
[ಇದ್ದಕ್ಕಿದ್ದಂತೆ
ಹೇಳಿದರೆ ಹೇಗೆ ಹೋಗುತ್ತಾರೆ ಎನ್ನುವ ಪ್ರಶ್ನೆಗೂ ತನ್ನ ಪೂರ್ವನಿಯೋಜಿತ ಉಪಾಯವನ್ನು ದುರ್ಯೋಧನ
ಧೃತರಾಷ್ಟ್ರನಿಗೆ ವಿವರಿಸುತ್ತಾನೆ].
ಅಜ್ಞಾಪ್ಯ ಮತ್ಪುರುಷತಾಂ
ಪುರಷೈರ್ಮ್ಮದೀಯೈರ್ಮ್ಮದ್ಧ್ಯಸ್ಥವದ್ ಬಹುಗುಣಾ ಉದಿತಾಶ್ಚ ತತ್ರ ।
ತೇಷಾಂ ಪುರೋsತ್ರ ಗಮನಾಭಿರುಚಿಶ್ಚ ಜಾತಾ ದ್ರಷ್ಟುಂ ಪುರಂ ಬಹುಗುಣಂ ನನು
ಪಾಣ್ಡವಾನಾಮ್ ॥೧೯.೨೪॥
ನನ್ನಕಡೆಯವರೇ ಆದ ಕೆಲಜನ ಬಚ್ಚಿಟ್ಟುಕೊಂಡು ತಮ್ಮತನ ,
ಪರದೇಶದವರಂತೆ ನಟಿಸಿ ಮಾಡಲು ಆ ದೇಶದ ಗುಣಗಾನ ,
ಪಾಂಡವರಲ್ಲಿ ಹುಟ್ಟಿಸಿದೆ ಅಲ್ಲಿಗೆ ಹೋಗಬೇಕೆಂಬ ಅಭಿಮಾನ .
ಇತ್ಯುಕ್ತವತ್ಯಥ ಸುತೇ ಸ
ತಥೇತ್ಯುವಾಚ ಪ್ರಾಪ್ತೇಷು ಪಾಣ್ಡುತನಯೇಷು ತಥೈವ ಚೋಚೇ ।
ಜ್ಞಾತ್ವೈವ ತೇsಪಿ ನೃಪತೇರ್ಹೃದಯಂ ಸಮಸ್ತಂ ಜಗ್ಮುಃ ಪಿತೇತಿ ಪೃಥಯಾ ಸಹ ನೀತಿಹೇತೋಃ
॥೧೯.೨೫॥
ಮಗ ದುರ್ಯೋಧನನ ಎಲ್ಲಾ ಪಿತೂರಿಗೆ ಒಪ್ಪಿದ ತಂದೆ ಧೃತರಾಷ್ಟ್ರ ,
ಪಾಂಡವರಿಗೆ ಹೇಳುತ್ತಾನೆ ಹೋಗಿ ಸೇರಲು ವಾರಣಾವತ ರಾಷ್ಟ್ರ .
ಪಾಂಡವರು ಅನುಸರಿಸಿ ಪಿತೃವಾಕ್ಯ ಪರಿಪಾಲನಾ ನೀತಿ ,
ಕುಂತಿಯೊಡನೆ ವಾರಣಾವತಕ್ಕೆ ಹೊರಡಿಸಿದ ಆ ರೀತಿ .
[ದೊಡ್ಡಪ್ಪನ
ಮಾತನ್ನು ಉಲ್ಲಂಘಿಸಿದರೆ ಮುಂದೆ ಅಪಕೀರ್ತಿ ಬರುತ್ತದೆ ಮತ್ತು ಜನರೂ ಅದನ್ನೇ ಉದಾಹರಣೆಯಾಗಿ
ತೆಗೆದುಕೊಳ್ಳುತ್ತಾರೆ. ಅದು ಆಗಬಾರದು ಎಂದು ಪಾಂಡವರು ವಾರಣಾವತಕ್ಕೆ ತೆರಳಿದರು].
ಭೀಮಸ್ತದಾ ಹ ಭವಿತಾsತ್ರ ಹಿ ಭೈಕ್ಷಚಾರ ಇತ್ಯೇವ ಸಮ್ಯಗನುವಿದ್ಯ ನಿಜಂ ನ ಕರ್ಮ್ಮ ।
ತ್ಯಾಜ್ಯಂ ತ್ವಿತಿ
ಪ್ರತಿಜಗಾದ ನಿಜಾಗ್ರಜಾಯ ಯಾಮೋ ವಯಂ ನತು ಗೃಹಾತ್ ಸ ಹಿ ನ ಸ್ವಧರ್ಮ್ಮಃ ॥೧೯.೨೬॥
ಆಗ ಭೀಮನೆಂದ-ನಾವಲ್ಲಿಗೆ ಹೋದರೆ ಬೇಡಬೇಕಾದೀತು ಭಿಕ್ಷೆ ,
ಆದರೆ ನಾವು ಇರುವುದು ರಾಜ್ಯವಾಳುವಂಥ ಕ್ಷತ್ರಿಯರ ಕಕ್ಷೆ .
ರಾಜ್ಯಪಾಲನೆ ನಮ್ಮ ಕ್ಷತ್ರಿಯ ಧರ್ಮ,
ಭಿಕ್ಷಾಟನೆ ಅಲ್ಲವೆಂದರುಹಿದ ಮರ್ಮ.
ನಿಷ್ಕಾಳಯನ್ತಿ ಯದಿ ನೋ
ನಿಜಧರ್ಮ್ಮಸಂಸ್ಥಾನ್ ಯೋತ್ಸ್ಯಾಮಹೇsತ್ರ ನಹಿ ದಸ್ಯುವಧೋsಪ್ಯಧರ್ಮ್ಮಃ ।
ಇತ್ಯೂಚಿವಾಂಸಮಮುಮಾಹ ಚ
ಧರ್ಮ್ಮಸೂನುಃ ಕೀರ್ತ್ತಿರ್ವಿನಶ್ಯತಿ ಹಿ ನೋ ಗುರುಭಿರ್ವಿರೋಧೇ ॥೧೯.೨೭॥
ಒಂದುವೇಳೆ ಅವರಲ್ಲಿದ್ದರೆ ನಮ್ಮನ್ನು ದಬ್ಬುವ ಮತಿ,
ಕಳ್ಳರ ವಧೆ ತಪ್ಪಲ್ಲ-ಅನುಸರಿಸೋಣ ಯುದ್ಧದ ನೀತಿ .
ಭೀಮನ ಮಾತನೆಲ್ಲ ಕೇಳಿಸಿಕೊಂಡು ನುಡಿದ ಅಣ್ಣ ಯುಧಿಷ್ಠಿರ,
No comments:
Post a Comment
ಗೋ-ಕುಲ Go-Kula